ಅರುಣಾಚಲದ ಗಡಿಯಲ್ಲಿ ಸಂಪೂರ್ಣ‌ ವಿದ್ಯುತ್‌ ಚಾಲಿತ ‘ಬುಲೆಟ್‌‌ ಟ್ರೈನ್‌‌’ ಪ್ರಾರಂಭಿಸಿದ ಚೀನಾ! | Naanu gauri

ಟಿಬೆಟ್‌‌‌ ಸ್ವಾಯತ್ತ ಪ್ರದೇಶದ ರಾಜಧಾನಿ ಲಾಸಾ ಮತ್ತು ಗಡಿ ಪಟ್ಟಣ ನಿಯಿಂಗ್ಚಿಯನ್ನು ಸಂಪರ್ಕಿಸುವ, ಮೊಟ್ಟ ಮೊದಲ ಸಂಪೂರ್ಣ ವಿದ್ಯುತ್‌ ಚಾಲಿತ ಬುಲೆಟ್ ಟ್ರೈನನ್ನು ಚೀನಾ ಲೋಕಾರ್ಪಣೆ ಮಾಡಿದೆ. ರೈಲಿನ ಮಾರ್ಗವು 435.5 ಕಿ.ಮೀ. ಇದ್ದು, ರೈಲು ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲಿರುವ ಟಿಬೆಟ್‌ನ ಹಿಮಾಲಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ.

ಗಡಿ ಸ್ಥಿರತೆಯನ್ನು ಕಾಪಾಡುವಲ್ಲಿ ಹೊಸ ರೈಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘೋಷಿಸಿದ್ದಾರೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾವು ಅರುಣಾಚಲವನ್ನು ದಕ್ಷಿಣ ಟಿಬೆಟ್‌ ಭಾಗವೆಂದು ಭಾರತದೊಂದಿಗೆ ತಕರಾರು ಮಾಡುತ್ತಲೆ ಇದೆ. ಪ್ರಸ್ತುತ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಗೆ ಸಂಬಂಧಿಸಿದೆ. ಆದರೆ ಚೀನಾದ ಪ್ರತಿಪಾದನೆಯನ್ನು ಭಾರತವು ನಿರಾಕರಿಸುತ್ತಲೆ ಬರುತ್ತಿದೆ.

ಇದನ್ನೂ ಓದಿ: 10 ಲಕ್ಷ ಹಣದ ಕಟ್ಟಿನೊಂದಿಗೆ ಪತ್ರಿಕಾಗೋಷ್ಠಿಗೆ ಆಗಮಿಸಿದ ಹೆಚ್‌.ಡಿ ರೇವಣ್ಣ ಆರೋಪ

ಚೀನಾ-ಭಾರತ ಗಡಿಯಲ್ಲಿ ಬಿಕ್ಕಟ್ಟು ಉಂಟಾದರೆ, ಹೊಸ ರೈಲು ಚೀನಾದ ಕಾರ್ಯಾಚರಣೆಗೆ ಸಹಾಯವಾಗುತ್ತದೆ ಎಂದು ಸಿಂಗ್ಹುವಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾರ್ಯತಂತ್ರ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕ ಕಿಯಾನ್ ಫೆಂಗ್ ತಿಳಿಸಿದ್ದಾರೆಂದು ಗ್ಲೋಬಲ್ ಟೈಮ್ಸ್‌‌ ಉಲ್ಲೇಖಿಸಿದೆ.

ಸಿಚುವಾನ್-ಟಿಬೆಟ್ ರೈಲ್ವೆಯು ಕಿಂಗ್ಹೈ-ಟಿಬೆಟ್ ಪ್ರಸ್ಥಭೂಮಿಯ ಆಗ್ನೇಯ ದಿಕ್ಕಿನಲ್ಲಿ ಹಾದುಹೋಗುತ್ತದೆ. ಇದು ವಿಶ್ವದ ಅತ್ಯಂತ ಭೌಗೋಳಿಕವಾಗಿ ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹೊಸ ರೈಲ್ವೆಯು ಪ್ರಯಾಣದ ಸಮಯವನ್ನು 48 ಗಂಟೆಗಳಿಂದ 13 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ಸಿಚುವಾನ್‌ನ ರಾಜಧಾನಿ ಚೆಂಗ್ಡುವಿನಿಂದ ಪ್ರಾರಂಭವಾಗಿ ಯಾನ್ ಮತ್ತು ಕಾಮ್ಡೋ ಮೂಲಕ ಮೂಲಕ ಟಿಬೆಟ್‌ಗೆ ಪ್ರವೇಶಿಸುತ್ತದೆ.

ನಿಯಿಂಗ್ಚಿ ಪಟ್ಟಣದಲ್ಲಿ ವಿಮಾನ ನಿಲ್ದಾಣವೂ ಇದೆ. ಚೀನಾವು ಹಿಮಾಲಯನ್ ಪ್ರದೇಶದಲ್ಲಿ ನಿರ್ಮಿಸಿದ ಐದು ವಿಮಾನ ನಿಲ್ದಾಣಗಳಲ್ಲಿ ಇದು ಕೂಡಾ ಒಂದು.

ಇದನ್ನೂ ಓದಿ: ಕಾನೂನು ಉಲ್ಲಂಘನೆ: ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟರ್‌ ಅಕೌಂಟ್‌ಗೆ ಒಂದು ಗಂಟೆ ನಿರ್ಬಂಧ

ಹೊಸ ರೈಲ್ವೆ ಮಾರ್ಗವು ಟಿಬೆಟ್ ಅನ್ನು ಚೀನಾದ ಮುಖ್ಯ ಭೂಭಾಗದೊಂದಿಗೆ ಪ್ರಮುಖವಾಗಿ ಸಂಪರ್ಕ ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಫುಡಾನ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ಉಪನಿರ್ದೇಶಕ ಲಿನ್ ಮಿನ್ವಾಂಗ್ ಹೇಳಿದ್ದಾರೆ. ಈ ಪ್ರದೇಶವು ವಸ್ತು ಸಾಗಣೆ ಮತ್ತು ಲಾಜಿಸ್ಟಿಕ್ ಸರಬರಾಜಿನಲ್ಲಿ ಹೆಚ್ಚು ಸಾಮರ್ಥ್ಯಗಳನ್ನು ಹೊಂದಿರುತ್ತದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಹೊಸ ರೈಲ್ವೆ ಮಾರ್ಗವು ಟಿಬರ್ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಲಾಸಾದ ಟಿಬೆಟ್ ವಿಶ್ವವಿದ್ಯಾಲಯದ ಜನಾಂಗೀಯ ಅಧ್ಯಯನ ಪ್ರಾಧ್ಯಾಪಕ ಕ್ಸಿಯಾಂಗ್ ಕುನ್ಕ್ಸಿನ್ ಗ್ಲೋಬಲ್ ಟೈಮ್ಸ್ಗೆ ತಿಳಿಸಿದ್ದಾರೆ. ಟಿಬೆಟ್ ಖನಿಜ ನಿಕ್ಷೇಪಗಳು ಮತ್ತು ಔಷಧೀಯ ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿದೆ. ಸಿಚುವಾನ್-ಟಿಬೆಟ್ ರೈಲ್ವೆಯು ಸ್ಥಳೀಯ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಜುಲೈ 1 ರಂದು ನಡೆಯಲಿರುವ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ದ ನೂರನೇ ವಾರ್ಷಿಕೋತ್ಸವದ ಮುನ್ನ, ಸಿಚುವಾನ್-ಟಿಬೆಟ್ ರೈಲ್ವೆಯ ಲಾಸಾ-ನಿಯಿಂಗ್ಚಿ ರೈಲ್ವೇ ಮಾರ್ಗವನ್ನು ಇಂದು ಉದ್ಘಾಟಿಸಲಾಯಿತು.

ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ಎಮರ್ಜೆನ್ಸಿ ಬಗ್ಗೆ ಮಾತನಾಡುವುದು ಸೋಗಲಾಡಿತನದ ಪರಮಾವಧಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here