ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಅಯೋಧ್ಯೆಯ ರಾಮಮಂದಿರ ಇರುವ ಉತ್ತರ ಪ್ರದೇಶದ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿರುವ ಕುರಿತು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಫೈಝಾಬಾದ್‌ನಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) ಅವಧೇಶ್ ಪ್ರಸಾದ್ 5,54,289 ಮತಗಳನ್ನು ಪಡೆದರೆ, ಬಿಜೆಪಿಯ ಲಲ್ಲು ಸಿಂಗ್ 4,99,722 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಅವಧೇಶ್ ಪ್ರಸಾದ್ 54,567 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
ಭಾರತದ ಹಿಂದೂಗಳ ಐನೂರು ವರ್ಷಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣದ ಬಳಿಕವೂ ಬಿಜೆಪಿ ಅಯೋಧ್ಯೆಯಲ್ಲಿ ಹೇಗೆ ಸೋತಿತು? ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಮೋದಿಯ ಕೆಲ ಸಾಮಾಜಿಕ ಜಾಲತಾಣ ಅಭಿಮಾನಿಗಳು ಅಯೋಧ್ಯೆಯ ಜನರಿಗೆ ಹಿಂದೂ ವಿರೋಧಿಗಳ ಪಟ್ಟ ಕಟ್ಟಿಯೂ ಆಗಿದೆ.
ಬಿಜೆಪಿ ಕೇವಲ ಧರ್ಮ ರಾಜಕಾರಣ ಮಾಡಿರುವುದು. ಅಭಿವೃದ್ದಿಯ ಕೊರತೆ ಮತ್ತು ಯುವಜನರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ವಿಫಲವಾಗಿರುವುದು ಸೋಲಿಗೆ ಕಾರಣ ಎಂದು ಕೆಲ ಮಾಧ್ಯಮಗಳು ಹೇಳಿವೆ. ಇನ್ನೂ ಕೆಲ ಮಾಧ್ಯಮಗಳು ದಲಿತ ಮತಗಳು ಕೆಲಸ ಮಾಡಿವೆ ಎಂದಿವೆ.
ಆದರೆ, ಧರ್ಮ ರಾಜಕಾರಣ, ಅಭಿವೃದ್ದಿಯ ಕೊರತೆಗಿಂತಲೂ ಮುಖ್ಯವಾಗಿ ಅಯೋಧ್ಯೆಯಲ್ಲಿ ಬಡ ಜನರ ಮನೆಗಳನ್ನು ಸರ್ಕಾರ ಕೆಡವಿರುವುದೇ ಬಿಜೆಪಿಯ ಸೋಲಿಗೆ ಕಾರಣ. ಇದು ತಳಮಟ್ಟದಲ್ಲಿ ಬಿಜೆಪಿಗೆ ಪೆಟ್ಟು ಕೊಟ್ಟಿದೆ ಎಂದು ಅನೇಕ ಜನರು ಹೇಳುತ್ತಿದ್ದಾರೆ.
Go to Ayodhya. Talk to the people. Ask them how they feel about Modi's Ram Path project for which their small businesses, shops, old temples, and homes were demolished. Did they listen to the protests and follow due process? Was Ayodhya being developed for the locals? https://t.co/M8PNZuwgDG pic.twitter.com/p4K6Td3GWd
— Alishan Jafri (@alishan_jafri) June 5, 2024
ರಾಮಮಂದಿರಕ್ಕೆ ಬರುವ ಜನರ ಉಪಯೋಗಕ್ಕೆಂದು ಅಭಿವೃದ್ದಿಯ ಹೆಸರಿನಲ್ಲಿ ಯೋಗಿ ಸರ್ಕಾರ ಬಡ ಜನರ ಮನೆ, ಅಂಗಡಿಗಳ ಮೇಲೆ ಬೇಕಾಬಿಟ್ಟಿ ಬುಲ್ಡೋಝರ್ ಹತ್ತಿಸಿದ್ದಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ.
लोग अयोध्या वासियों को गाली दे रहे हैं, लेकिन किसी ने उनका दर्द नहीं समझा…।
लोगों का घर तोड़ दिया, खेत खलिहान जबरन ले लिए गए। मुआवजे के नाम पर सिर्फ खानापूर्ति की गई…।
एक एक व्यक्ति का आंसू वोट में तब्दील हो गया, लोकतंत्र की यही खूबसूरती है…।#अयोध्या #Ayodhya pic.twitter.com/iuTegzwv3R
— Dilip Singh (@dileepsinghlive) June 5, 2024
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ, ಅಗಲವಾದ ರಸ್ತೆ, ಸುಂದರ ವೃತ್ತ ನಿರ್ಮಾಣವಾಗಿದೆ. ವಿಶಿಷ್ಟ ದಾರಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಸರಣಿ ವರದಿ ಮಾಡಿದ್ದ ಮುಖ್ಯವಾಹಿನಿ ಮಾಧ್ಯಮಗಳು, ಅಲ್ಲಿ ಇವೆಲ್ಲದಕ್ಕೆ ಕೆಡವಿದ್ದ ಬಡವರ ಜೀವನದ ಕುರಿತು ಎಂದೂ ಮಾತೆತ್ತಿಲ್ಲ. ಆದರೆ, ಕೆಲ ಜನಪರ ಮಾಧ್ಯಮಗಳು ಅಭಿವೃದ್ದಿಯ ಇನ್ನೊಂದು ಮುಖವನ್ನು ತೆರದಿಟ್ಟಿತ್ತು. ಇದೀಗ ಮತದಾರರು ಅದನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಿದ್ದಾರೆ.
Want to know why Ayodhya did not vote BJP despite Ram Mandir ?
Bulldozer Politics gone Too Far !! pic.twitter.com/9u8uwsWyDJ
— Gss🇮🇳 (@Gss_Views) June 5, 2024
ರಾಮ ಮಂದಿರಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಮನೆ ಕೆಡವುವಾಗ ಕಣ್ಣೀರು ಹಾಕಿದ ತಾಯಂದಿರಿಗೆ ಲೆಕ್ಕವಿಲ್ಲ. ಆದರೆ, ಅಂಧ ಸರ್ಕಾರಕ್ಕೆ ಅದು ಕಾಣಿಸಿರಲಿಲ್ಲ. ಈಗ ತಮ್ಮ ಅಭ್ಯರ್ಥಿ ಸೋತಾಗ ಬಿಜೆಪಿಗೆ ಮನವರಿಕೆಯಾಗಿರಬಹುದು.
millenniumpost.in ವರದಿಯ ಪ್ರಕಾರ, ಅಯೋಧ್ಯೆಯ ರಾಮಮಂದಿರಕ್ಕೆ ತೆರಳುವ ರಸ್ತೆ ಅಗಲೀಕರಣ ಸೇರಿದಂತೆ ಇತರ ಅಭಿವೃದ್ದಿ ಕಾರ್ಯಗಳಿಗೆ, ಅಲ್ಲಿನ ಬಡ ಜನರ ಸುಮಾರು 4 ಸಾವಿರ ಮನೆಗಳು ಮತ್ತು ಅಂಗಡಿಗಳನ್ನು ಕೆಡವಲಾಗಿದೆ. ಜನರು ರಾಮಮಂದಿರಕ್ಕೆಂದು ತಮ್ಮ ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಏಕೆಂದರೆ, ಅವರಿಗೆ ಹಿಂದೂ ವಿರೋಧಿಗಳು ಎಂದೆನಿಸಿಕೊಳ್ಳುವ ಆತಂಕವಿತ್ತು.
ಕೇವಲ ಮನೆ, ಅಂಗಡಿಗಳು ಮಾತ್ರವಲ್ಲದೆ, ದೊಡ್ಡ ಮಂದಿರಕ್ಕಾಗಿ ನೂರಾರು ವರ್ಷ ಹಳೆಯ ಸಣ್ಣ ಮಂದಿರಗಳನ್ನು ಕೆಡವಲಾಗಿದೆ. ಇದೂ ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಮಮಂದಿರದ ಸಂಪೂರ್ಣ ಉಸ್ತುವಾರಿಯನ್ನು ರಾಮಂದಿರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ವಹಿಸಿಕೊಂಡಿತ್ತು. ಅಲ್ಲಿ ಸ್ಥಳೀಯರಿಗೆ, ಹಿಂದೂ ಸನ್ಯಾಸಿಗಳಿಗೆ ಯಾವುದೇ ಮರ್ಯಾದೆ ಇರಲಿಲ್ಲ.
ರಾಮಮಂದಿರ ಉದ್ಘಾಟನೆಯಾದ ಬಳಿಕ ವಾಹನ ಸಂಚಾರಕ್ಕೆ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದ ಸ್ಥಳೀಯ ಜನರು ಈ ಹಿಂದಿನಂತೆ ಓಡಾಡಲು ಆಗುತ್ತಿಲ್ಲ. ಇವೆಲ್ಲವೂ ಜನರು ಬಿಜೆಪಿ ವಿರುದ್ದ ಅಸಮಾಧಾನಗೊಳ್ಳಲು ಕಾರಣ ಎಂದು millenniumpost.in ಹೇಳಿದೆ.
ರಾಮ ಮಂದಿರ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ದಿಯಾಗಿದೆ. ಸಣ್ಣ ಪಟ್ಟಣ ಅಯೋಧ್ಯೆಗೆ 5 ಸ್ಟಾರ್ ಹೋಟೆಲ್, ಹೈಟೆಕ್ ವಿಮಾನ, ರೈಲು ನಿಲ್ದಾಣಗಳು ಬಂದಿವೆ ಎಂದು ಹೊರಗಿನವರು ಕೊಂಡಾಡುತ್ತಿದ್ದಾರೆ. ಆದರೆ, ಇವುಗಳಿಂದ ಅಯೋಧ್ಯೆಯ ಸುಮಾರು 40 ಸಾವಿರ ಜನರು ತಮ್ಮ ಮನೆ, ಮಠ ಜೀವನ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
The poor give their answer through their vote, this power has been given by Babasaheb Ambedkar.#Ayodhya pic.twitter.com/degQIKdZDw
— The Dalit Voice (@ambedkariteIND) June 6, 2024
ಊಟ, ವಸತಿ, ವಸ್ತ್ರ ಒಬ್ಬ ಮನುಷ್ಯನ ಮೂಲಭೂತ ಅವಶ್ಯಕತೆಗಳು. ಇವುಗಳನ್ನು ದೊರಕಿಸಿಕೊಡುವುದೇ ನಿಜವಾದ ಅಭಿವೃದ್ದಿ. ಕೇವಲ ಮೆಟ್ರೋ ರೈಲುಗಳು, ಸೇತುವೆಗಳು, ಎಕ್ಸ್‌ಪ್ರೆಸ್ ವೇಗಳು ಜನರ ಹೊಟ್ಟೆ ತುಂಬಿಸದು. ಅಯೋಧ್ಯೆಯ ಜನರಿಗೆ ಏನು ಬೇಕಿತ್ತು, ನಾವು ಏನು ಕೊಟ್ಟಿದ್ದೇವೆ ಎಂದು ಈ ಚುನಾವಣೆಯ ಬಳಿಕ ಬಿಜೆಪಿಗೆ ಅರ್ಥವಾಗಿರಬಹುದು.
ಇದನ್ನೂ ಓದಿ : ವಿದೇಶಿಗರ ಆಕ್ರೋಶಕ್ಕೆ ಕಾರಣವಾದ ಅಂಬಾನಿ ಮಗನ ‘ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ’


