ರಾಜಸ್ಥಾನದ ಜಲೋರ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನವವಿವಾಹಿತ ದಲಿತ ದಂಪತಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದ ಆರೋಪದ ಮೇಲೆ ಪೊಲೀಸರು ಅರ್ಚಕನನ್ನು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಅಹೋರ್ ಉಪವಿಭಾಗದ ನೀಲಕಂಠ ಗ್ರಾಮದ ದೇವಸ್ಥಾನದ ಗೇಟ್‌ನಲ್ಲಿ ಆರೋಪಿ ವೇಲಾ ಭಾರತಿ ದಂಪತಿಗಳನ್ನು ನಿಲ್ಲಿಸುತ್ತಿರುವ ಘಟನೆಯ ವೀಡಿಯೊ ಶನಿವಾರದಂದು ವೈರಲ್ ಆಗಿತ್ತು. ಜೊತೆಗೆ ನಂತರ ನಡೆದ ವಾಗ್ವಾದವನ್ನೂ ವಿಡಿಯೋ ಸೆರೆ ಹಿಡಿದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆಯಿಂದ ನೊಂದ ಸಂತ್ರಸ್ತ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ, ಅರ್ಚಕನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅರ್ಚಕನ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಜಲೋರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್‌ವಾಲಾ ಭಾನುವಾರ ತಿಳಿಸಿದ್ದಾರೆ.
In RJ's Jalore, a SC married couple was stopped by the priest from entering the temple. Folks, the message is clear;
SC are not Hindu. So don't go to their temples. Build your own Buddhist vihara.pic.twitter.com/xEu7WFcdqz
— Mission Ambedkar (@MissionAmbedkar) April 24, 2022
ಇದನ್ನೂ ಓದಿ: ಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಲಿಂಗಾಯತ ಜಾತಿಯ ಆರೋಪಿ ಸೇರಿ ಕೆಲವರ ಬಂಧನ
“ಮದುವೆಯ ಮೆರವಣಿಗೆ ಶನಿವಾರ ನೀಲಕಂಠ ಗ್ರಾಮಕ್ಕೆ ತಲುಪಿತ್ತು. ನವವಿವಾಹಿತ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಅರ್ಪಿಸಲು ಬಯಸಿದ್ದರು. ಆದರೆ ಅರ್ಚಕರು ನಮ್ಮನ್ನು ಗೇಟ್‌ನಲ್ಲಿ ನಿಲ್ಲಿಸಿ ತೆಂಗಿನಕಾಯಿಯನ್ನು ಹೊರಗೆ ನೀಡುವಂತೆ ಹೇಳಿದರು. ನಾವು ದಲಿತ ಸಮುದಾಯದವರಾಗಿರುವುದರಿಂದ ದೇವಸ್ಥಾನಕ್ಕೆ ಪ್ರವೇಶಿಸಬೇಡಿ ಎಂದು ಅವರು ಹೇಳಿದ್ದಾರೆ” ಎಂದು ವಧುವಿನ ಸೋದರ ಸಂಬಂಧಿ ತಾರಾ ರಾಮ್ ದೂರು ನೀಡಿದ್ದಾರೆ.
#Jalore #आहोर के नीलकंठ मंदिर में दलित नव दम्पति को मंदिर में जाने से रोकने का प्रकरण..!!
मंदिर पुजारी व नव दंपती के परिजनों के बीच नोकझोंक का विडियो सोशल मीडिया पर हो रहा है वायरल, भाद्राजून पुलिस ने एसीएसटी एक्ट में मामला किया दर्ज, मामले की जालोर Dysp कर रहे अनुसंधान pic.twitter.com/Q3xsCDVEyj
— JALORE NEWS NATION'S – ML DARA (@Jalore_News_Net) April 23, 2022
ಕೆಲವು ಗ್ರಾಮಸ್ಥರು ಕೂಡಾ ಅರ್ಚಕನ ವಾದಕ್ಕೆ ದನಿಗೂಡಿಸಿ, ಆರೋಪಿಯನ್ನು ಬೆಂಬಲಿಸಿದ್ದಾರೆ ಎಂದು ದೂರಲಾಗಿದ್ದು, “ಇದು ಗ್ರಾಮದ ನಿರ್ಧಾರ ಮತ್ತು ಅರ್ಚಕನೊಂದಿಗೆ ವಾದ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಅವರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
Thread #Rajasthan police lodges case under SC/ST Act & arrests a priest for allegedly not allowing a newlywed Dalit couple to offer prayers at a temple in Jalore
"The priest stopped us from entering the temple & said only upper caste are allowed to enter", says the Dalit Groom pic.twitter.com/7wWhiD8zdh
— Tabeenah Anjum (@TabeenahAnjum) April 24, 2022
ಇದನ್ನೂ ಓದಿ: ದಲಿತ ಇತಿಹಾಸ ತಿಂಗಳು; ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಮಿತಿಮೀರಿದ ಅಸಹನೆ; ಸಂವಿಧಾನವೇ ಉತ್ತರ
“ನಾವು ಅರ್ಚಕನ ಬಳಿ ಸಾಕಷ್ಟು ಮನವಿ ಮಾಡಿಕೊಂಡೆವು. ಆದರೆ ಅವರು ನಮಗೆ ಅವಕಾಶ ನೀಡಲಿಲ್ಲ. ನಂತರ ನಾವು ಅರ್ಚಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ತಾರಾ ರಾಮ್ ಹೇಳಿದ್ದಾರೆ ಎಂದು ಎನ್‌ಡಿಟವಿ ವರದಿ ಮಾಡಿದೆ.


