Homeಅಂತರಾಷ್ಟ್ರೀಯಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಇಮ್ಯಾನುಯೆಲ್ ಮ್ಯಾಕ್ರಾನ್ ಪುನಾರಾಯ್ಕೆ - ತೀವ್ರ ಬಲಪಂಥೀಯ ಲಿ ಪೆನ್‌ಗೆ ಸೋಲು

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಇಮ್ಯಾನುಯೆಲ್ ಮ್ಯಾಕ್ರಾನ್ ಪುನಾರಾಯ್ಕೆ – ತೀವ್ರ ಬಲಪಂಥೀಯ ಲಿ ಪೆನ್‌ಗೆ ಸೋಲು

"ನಮ್ಮ ಅನೇಕ ದೇಶವಾಸಿಗಳು ತೀವ್ರ ಬಲಪಂಥಕ್ಕೆ ಮತ ಹಾಕಲು ಕಾರಣ ಮತ್ತು ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಹಿಡಿಯುವುದು ನನ್ನ ಮತ್ತು ನನ್ನ ಸುತ್ತಲಿನವರ ಜವಾಬ್ದಾರಿಯಾಗಿದೆ." - ಮ್ಯಾಕ್ರಾನ್

- Advertisement -
- Advertisement -

ತೀವ್ರ ಕುತೂಹಲ ಮತ್ತು ಜಿದ್ದಾಜಿದ್ದಿನಿಂದ ಕೂಡಿದ್ದ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಮ್ಯಾನುಯೆಲ್ ಮ್ಯಾಕ್ರಾನ್ ಪುನಾರಾಯ್ಕೆಯಾಗಿದ್ದಾರೆ. ತೀವ್ರ ಬಲಪಂಥೀಯ ನಾಯಕಿಯಾದ ಮರೀನ್ ಲಿ ಪೆನ್ ಪೈಪೋಟಿ ನೀಡಿದರೂ ಸೋಲು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಇಮ್ಯಾನುಯೆಲ್ ಮ್ಯಾಕ್ರಾನ್ ಶೇ.58.6 ರಷ್ಟು ಮತಗಳನ್ನು ಪಡೆದರೆ ಕನ್ಸರ್ವೇಟಿವ್ ಪಾರ್ಟಿಯ ಲಿ ಪೆನ್ ಶೇ.41.4 ಮತಗಳಿಗೆ ತೃಪ್ತಿಪಟ್ಟುಕೊಂಡರು. ಕಳೆದ 20 ವರ್ಷದ ಫ್ರಾನ್ಸ್ ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಕೀರ್ತಿಗೆ ಮ್ಯಾಕ್ರಾನ್ ಭಾಜನರಾಗಿದ್ದಾರೆ.

ಮತದಾರರಿಗೆ ಕೃತಜ್ಞತೆ ಅರ್ಪಿಸಿರುವ ಮ್ಯಾಕ್ರಾನ್, “ನಮ್ಮ ಅನೇಕ ದೇಶವಾಸಿಗಳು ತೀವ್ರ ಬಲಪಂಥಕ್ಕೆ ಮತ ಹಾಕಲು ಕಾರಣ ಮತ್ತು ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಹಿಡಿಯುವುದು ನನ್ನ ಮತ್ತು ನನ್ನ ಸುತ್ತಲಿನವರ ಜವಾಬ್ದಾರಿಯಾಗಿದೆ” ಎಂದಿದ್ದಾರೆ.

ಐಫೆಲ್ ಟವರ್‌ನ ಬುಡದಲ್ಲಿರುವ ಸೆಂಟ್ರಲ್ ಪ್ಯಾರಿಸ್‌ನ ಚಾಂಪ್ ಡಿ ಮಾರ್ಸ್‌ನಲ್ಲಿ ವಿಜಯ ಭಾಷಣ ಮಾಡಿದ ಅವರು, “ಹಿಂದಿನ ಆಡಳಿತದಂತೆಯೇ ಮುಂದುವರೆಯುತ್ತೇನೆ, ಇದು ಹೊಸ ಯುಗವಾಗಿದೆ” ಎಂದಿದ್ದಾರೆ.

ಮ್ಯಾಕ್ರಾನ್ ಕುರಿತು

2017ರಲ್ಲಿ ಲಿ ಪೆನ್ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದ 46 ವರ್ಷದ ಮ್ಯಾಕ್ರಾನ್, ಈ ಬಾರಿ ಗೆಲ್ಲಲು ತೀವ್ರ ಬೆವರು ಹರಿಸಿದ್ದರು. 2017ರಲ್ಲಿ ಮ್ಯಾಕ್ರಾನ್ ಹೊಸ ಮುಖವಾಗಿದ್ದರು ಮತ್ತು ಉದಾರವಾದಿ ಪ್ರಗತಿಪರ ಎಂದು ಬಿಂಬಿಸಿಕೊಂಡಿದ್ದರು. ಹಾಗಾಗಿ ಅಲ್ಲಿನ ಎಡಪಕ್ಷಗಳು, ಅಲ್ಪ ಸಂಖ್ಯಾತರರು ಸಹ ಅವರನ್ನು ಬೆಂಬಲಿಸಿದ್ದರು. ಆದರೆ ನಂತರದ ಆಡಳಿತದಲ್ಲಿ ಅವರ ವ್ಯಾಪಾರೋದ್ಯಮ ಪರವಾದ ನೀತಿ ನಿರ್ಧಾರಗಳು ಎಡಪಂಥೀಯರಿಂದ ಟೀಕೆಗೆ ಗುರಿಯಾಗಿದ್ದವು. ಧಾರ್ಮಿಕ ಸಂಘಟನೆಗಳ ಮೇಲೆ ಕಠಿಣ ಕ್ರಮ ಜರುಗಿಸಿದ ಮ್ಯಾಕ್ರಾನ್ ತೀರ್ಮಾನಗಳು ಅಲ್ಪಸಂಖ್ಯಾತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದವು. ಆದರೆ ಈ ಎಲ್ಲದರ ನಡುವೆಯು ಅವರು ಗೆಲ್ಲಲು ಸಾಧ್ಯವಾಗಿದ್ದು ಎದುರಾಳಿ ಲಿ ಪೆನ್‌ರವರ ಉಗ್ರ ರಾಷ್ಟ್ರೀಯತೆ ಮತ್ತು ಬಲಪಂಥೀಯತೆಯಿಂದ.

ಯಾರಿದು ಮರೀನ್ ಲಿ ಪೆನ್

ವಲಸೆ ವಿರೋಧಿಯಾದ ಮತ್ತು ತೀವ್ರ ಬಲಪಂಥೀಯ ಸಿದ್ದಾಂತ ಪ್ರತಿಪಾದಿಸುವ 53 ವರ್ಷದ ಲಿ ಪೆನ್ 2017 ರಲ್ಲಿ ಹೀನಾಯವಾಗಿ ಸೋತಿದ್ದರು. ಅವರ ಅಪಾಯಕಾರಿ ರಾಜಕಾರಣ ಪ್ರೆಂಚ್ ಗಣರಾಜ್ಯಕ್ಕೆ ಮಾರಕ ಎಂದು ಹೇಳಲಾಗಿತ್ತು. ಆದರೆ ನಂತರ ಅವರು ಉಗ್ರ ರಾಷ್ಟ್ರೀಯತೆ ಮತ್ತು ವ್ಯವಸ್ಥೆಯ ವಿರೋಧಿ ರಾಜಕಾರಣದ ಮತ್ತೇರಿಸುವ ಮಿಶ್ರಪೇಯವನ್ನು ಮತದಾರರ ಮುಂದೆ ಇಟ್ಟು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ತೀವ್ರ ಬಲಪಂಥೀಯ ಬೆಂಬಲ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡು ಬೆಲೆ ಏರಿಕೆ, ಹಣದುಬ್ಬರ ಕುರಿತು ಅಸಮಾಧಾನ ಹೆಚ್ಚಿದ ಅಸಮಾಧಾನವನ್ನು ಬಳಸಿ ಮ್ಯಾಕ್ರಾನ್ ಆಡಳಿತದ ಕುರಿತು ಭ್ರಮನಿರಸನ ಹೊಂದಿದ ಮತದಾರರನ್ನೂ ತಮ್ಮತ್ತ ಸೆಳೆದುಕೊಂಡಿದ್ದಾರೆ. ಹಾಗಾಗಿ ಅವರು ಈ ಬಾರಿ ತೀವ್ರ ಪೈಪೋಟಿ ನೀಡಲು ಸಾಧ್ಯವಾಯಿತು ಎನ್ನಲಾಗಿದೆ.

ಮರೀನ್ ಲಿ ಪೆನ್

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಫ್ರಾನ್ಸ್‌ನ ಮಸೀದಿಯಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿದೆಯೇ?

ಉಕ್ರೇನ್ ವಿರುದ್ಧದ ಯುದ್ಧವನ್ನು ಲಿ ಪೆನ್ ವಿರೋಧಿಸುವ ಜೊತೆಗೆ ರಷ್ಯಾದ ಮೇಲೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಸಾರಿರುವ ನಿರ್ಬಂಧಗಳನ್ನೂ ಟೀಕಿಸಿದ್ದರು. ಈ ನಿರ್ಬಂಧಗಳು ಫ್ರೆಂಚ್ ಗ್ರಾಹಕರ ಹಿತಗಳನ್ನು ಬಾಧಿಸುತ್ತಿವೆ ಎಂದು ವಾದಿಸಿದ್ದರು. ನ್ಯಾಟೋ ಕಮಾಂಡ್ ನಿಂದ ಫ್ರೆಂಚ್ ಪಡೆಗಳನ್ನು ವಾಪಸು ಕರೆಸಿಕೊಳ್ಳಬೇಕೆಂಬುದು ಮಾತನಾಡಿದ್ದರು. ಇವೆಲ್ಲವೂ ಯೂರೋಪ್ ಒಕ್ಕೂಟಕ್ಕೆ ಭಾರೀ ತಲೆನೋವಾಗಿದ್ದವು. ಸದ್ಯದ ಅವರ ಸೋಲಿನಿಂದ ಯೂರೋಪಿಯನ್ ಒಕ್ಕೂಟ ನಿಟ್ಟುಸಿರಿ ಬಿಟ್ಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...