Homeಅಂತರಾಷ್ಟ್ರೀಯಫ್ಯಾಕ್ಟ್‌ಚೆಕ್: ಫ್ರಾನ್ಸ್‌ನ ಮಸೀದಿಯಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿದೆಯೇ?

ಫ್ಯಾಕ್ಟ್‌ಚೆಕ್: ಫ್ರಾನ್ಸ್‌ನ ಮಸೀದಿಯಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿದೆಯೇ?

ಅರೇಬಿಕ್ ಶೀರ್ಷಿಕೆ ಹೊಂದಿರುವ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದು, "ಫ್ರಾನ್ಸ್ ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿದೆ" ಎಂದು ಬರೆದುಕೊಂಡಿದ್ದಾರೆ.

- Advertisement -
- Advertisement -

ಫ್ರಾನ್ಸ್‌ನ ಮಸೀದಿಯಲ್ಲಿ ಮುಸ್ಲಿಮರ ಮೇಲೆ ದಾಳಿಯಾಗಿದೆ ಎನ್ನುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅಕ್ಟೋಬರ್ 29 ರಂದು ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ದಾಳಿಯ ಅಕ್ರೋಶದ ನಡುವೆ ಈ ವೀಡಿಯೋ ಹರಿದಾಡುತ್ತಿದೆ.

“ಮ್ಯಾಕ್ರಾನ್ 100 ಕ್ಕೂ ಹೆಚ್ಚು ಮಸೀದಿಗಳನ್ನು ಫ್ರಾನ್ಸ್‌ನಾದ್ಯಂತ ಮುಚ್ಚುತ್ತಲೇ ಇದೆ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈ ಲೇಖನವನ್ನು ಬರೆಯುವ ಸಮಯದಲ್ಲಿ 48,700 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1,100 ಲೈಕ್‌ಗಳು ದಾಖಲಾಗಿವೆ.

ಇದನ್ನೂ ಓದಿ: ಫ್ರಾನ್ಸ್ ಚರ್ಚ್‌ ದಾಳಿಯಲ್ಲಿ 3 ಸಾವು: ’ಅಲ್ಲಾಹು ಅಕ್ಬರ್‌’ ಎನ್ನುತ್ತಾ ಮಹಿಳೆಯ ಶಿರಚ್ಚೇದ!

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ತನಿಷ್ಕ್ ಜಾಹೀರಾತಿನ ವಿರುದ್ಧ ದೆಹಲಿಯ ಜಾಮಾ ಮಸೀದಿ ಫತ್ವಾ ಹೊರಡಿಸಿದೆಯೇ?

ಇದರ ಆರ್ಕೈವ್ ಆವತ್ತಿಯನ್ನು ಇಲ್ಲಿ ನೋಡಬಹುದು.

ಅರೇಬಿಕ್ ಶೀರ್ಷಿಕೆ ಹೊಂದಿರುವ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಫ್ರಾನ್ಸ್ ಮುಸ್ಲಿಮರ ವಿರುದ್ಧ ಯುದ್ಧ ಘೋಷಿಸಿದೆ” ಎಂದು ಬರೆದುಕೊಂಡಿದ್ದಾರೆ.

ಇದರ ಆರ್ಕೈವ್ ಆವತ್ತಿಯನ್ನು ಇಲ್ಲಿ ನೋಡಬಹುದು. ಇದೇ ಹೆಳಿಕೆಯೊಂದಿಗೆ ನೂರಾರು ಜನ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬಿಹಾರ ಚುನಾವಣೆಗಾಗಿ ಪ್ರಿಯಾಂಕಾ ಇಂದಿರಾ ಗಾಂಧಿಯವರ ಸೀರೆ ಧರಿಸಿದ್ದಾರೆಯೇ?

ಫ್ಯಾಕ್ಟ್‌ಚೆಕ್: 

ಪ್ಯಾರಿಸ್ ಉಪನಗರ ಕ್ಲಿಚಿಯಲ್ಲಿನ ಮಸೀದಿಯ ಮೇಲೆ ‘ದಾಳಿ ಮಾಡಲಾಗಿದೆ’ ಎಂಬ ಪದವನ್ನು ಬಳಸಿ ಫ್ರೆಂಚ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ಮಾಡಲಾಯಿತು. ಆಗ ಮಾರ್ಚ್ 2017 ರಲ್ಲಿ ಅಪ್‌ಲೋಡ್ ಮಾಡಲಾದ ಹಲವಾರು ಯೂಟ್ಯೂಬ್ ವೀಡಿಯೊಗಳು ಕಂಡುಬಂದವು. ಈ ವೀಡಿಯೋದಲ್ಲಿ “ಡೌನ್‌ಟೌನ್‌ ಕ್ಲಿಚಿ-ಲಾ-ಗರೆನ್ನೆಯಲ್ಲಿರುವ ಮಸೀದಿಯನ್ನು ಸ್ಥಳಾಂತರಿಸುವುದು” ಮತ್ತು “ಸಿಆರ್‌ಎಸ್ ಪ್ಯಾರಿಸ್‌ ಮುಚ್ಚಿದ ಕ್ಲಿಚಿ ಮಸೀದಿ” ಎಂದು ವಿವರಿಸಲಾಗಿದೆ.

ಪೊಲೀಸ್ ಅಧಿಕಾರಿಗಳು ಎಳೆದಾಡುತ್ತಿರುವ ಕೆಂಪು ಬಣ್ಣದ ಉಡುಪಿನ ವ್ಯಕ್ತಿಯಿರುವ ದೃಶ್ಯಗಳು ಕಂಡುಬಂದಿದೆ.

ಇದನ್ನೂ ಓದಿ: ಬಿಜೆಪಿ ಸೇರಿರುವ ಈ ಶೂಟರ್‌‌ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪುತ್ರಿ ಅಲ್ಲ; ಯಾರಿವರು?

ಇಷ್ಟೆ ಅಲ್ಲದೆ ಫ್ರೆಂಚ್ ದೈನಂದಿನ ಸುದ್ದಿ ಪತ್ರಿಕೆ ‘20 ಮಿನಿಟ್ಸ್‌’ ಇದೇ ರೀತಿಯ ದೃಶ್ಯಗಳನ್ನು ಹೊಂದಿದೆ.

ಇದರಲ್ಲಿ, ಫ್ರೆಂಚ್ ರಾಷ್ಟ್ರೀಯ ಪೊಲೀಸರ ಸಾಮಾನ್ಯ ಮೀಸಲು “ಕಂಪ್ಯಾಗ್ನೀಸ್ ರಿಪಬ್ಲಿಕನ್ಸ್ ಡಿ ಸೆಕುರಿಟಾ(CRS)” ಕ್ಲಿಚಿಯ ಟೌನ್ ಹಾಲ್‌ನಲ್ಲಿರುವ ‘ಪ್ರಾರ್ಥನಾ ಕೊಠಡಿಯಿಂದ’ ಮುಸ್ಲಿಮರನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಟೌನ್ ಹಾಲ್ ಬದಲಿಗೆ ಮುಸ್ಲಿಂ ಸಮುದಾಯವು ತಮ್ಮ ಪ್ರಾರ್ಥನೆಗಾಗಿ ಆಕ್ರಮಿಸಿಕೊಂಡಿರುವ ಕೋಣೆಯಲ್ಲಿ ಮಾಧ್ಯಮ ಗ್ರಂಥಾಲಯವನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಹಾಗಾಗಿ ಈ ವರದಿಗಳಿಂದ ತಿಳಿದುಬರುವುದೇನೆಂದರೆ, “2017ರ ಹಳೆಯ ವೀಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ” ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಕೆಲವು ವರದಿಗಳ ಪ್ರಕಾರ ಪೊಲೀಸರು ಪ್ರಾರ್ಥನಾ ಕೊಠಡಿಯನ್ನಷ್ಟೆ ಸ್ಥಳಾಂತರಿಸಿದ್ದಾರೆ ಎಂಬುದು ತಿಳಿದುಬಂದಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...