Homeಎಕಾನಮಿಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ....

ಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ….

- Advertisement -
- Advertisement -

ಏನಿಲ್ಲಾ, ಈ ನಮ್ಮ ಕರುನಾಡಿನ ಸಚಿವ ಸಂಪುಷ್ಟದ ಸನ್ಮಾನ್ಯ ಸದಸ್ಯರೆಲ್ಲಾ ʻNDRF NDRF’ ಅನ್ನಾಕ ಹತ್ಯಾರೆಲ್ಲಾ, ಏನದು?

ಅಷ್ಟ ಅಲ್ಲಾ, ಇದು ಒಂದಲ್ಲ. ಎರಡು. ಬದಲಾದ ರಾಜಕೀಯ ಪರಿಸ್ಥಿತಿಯೊಳಗ ಎಲ್ಲದಕ್ಕೂ ಎರಡೆರಡು ರೂಪ ಇರತಾವಲ್ಲಾ, ನಾಯಕರದು ರಾಜ್ಯಮಟ್ಟದೊಳಗ ಒಂದು, ತಮ್ಮ ಕ್ಷೇತ್ರದೊಳಗ ಇನ್ನೊಂದು ರೂಪ ಇರ್ತದಲ್ಲಾ, ಹಂಗ, ಇದರದೂ ಎರಡು ರೂಪ ಅದಾವು.

ದೇಶದ ಯಾವುದೇ ಮೂಲಿಯೊಳಗ ನೆರೆ, ಬರ, ಭೂಕಂಪ, ಸುಂಟರಗಾಳಿ ಅಥವಾ ಇತರ ಪ್ರಕೃತಿ ವಿಕೋಪಗಳು ಆದರ ಅಲ್ಲಿಗೆ ಸಹಾಯ ಮಾಡಲಿಕ್ಕೆ ಅಂತ ಇರೋದು ಭಾರತೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ. ಇದು ಕೇಂದ್ರ ಗೃಹ ಇಲಾಖೆಯ ಪ್ರಕೃತಿ ವಿಕೋಪ ವಿಭಾಗದ ಒಂದು ಭಾಗ. ಈ ಸಂಸ್ಥೆಯ ಕೆಳಗಡೆ ಇರೋವು ವಿವಿಧ ರಾಜ್ಯಗಳ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಗಳು. ಸನ್ 2005 ರಲ್ಲಿ ಜಾರಿಯಾದ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯ ಕೆಳಗ ಈ ಸಂಸ್ಥೆಗಳು ಆರಂಭವಾದವು.

ಇಂಥಾ ಎಜೆನ್ಸಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕೃತಿ ವಿಕೋಪಗಳು ಎಲ್ಲೆಲ್ಲಿ ಆಗತಾವೋ ಅಲ್ಲಲ್ಲಿ ತನು ಮನ ಧನ ಸಹಾಯ ಮಾಡಬೇಕು ಅಥವಾ ಹಾಗೇಂತ ನಮ್ಮ ಆಶಾ ಇರಬಹುದೇನೋ.

ಈಗ ನಮ್ಮಲ್ಲೆ ತನುವಿಗೊಂದು ಎನ್‍ಡಿಆರ್‌ಎಫ್ ಹಾಗೂ ಧನಕ್ಕೆ ಇನ್ನೊಂದು ಎನ್‍ಡಿಆರ್‌ಎಫ್ ಅವ. ಆದರ ಮನಕ್ಕ ಅಂತ ಮಾತ್ರ ಪ್ರತ್ಯೇಕ ಸಂಸ್ಥೆ ಇಲ್ಲ. ಅದು ಕೇಂದ್ರ ಸರಕಾರದ ಮನದಲ್ಲಿ ಇರಬಹುದೇನೋ, ಹೋಗಲಿ ಬಿಡರಿ.

ಒಂದನೇ ಎನ್‍ಡಿಆರ್‌ಎಫ್ ಅಂದರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ದಳ. (NDRF national disaster response force) ದೆಹಲಿಯ ಮುಖ್ಯ ಕಚೇರಿ ಬಿಟ್ಟರ ಇದಕ್ಕ ಬ್ಯಾರೆ ಬ್ಯಾರೆ ರಾಜ್ಯದೊಳಗ 17 ಉಪವಿಭಾಗ ಅವ.

ಇದರಾಗ ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ಅರೆಸೇನಾ ದಳದ ಅಧಿಕಾರಿಗಳು ಮತ್ತ ಬ್ಯಾರೆ ಬ್ಯಾರೆ ಸಿಬ್ಬಂದಿ ಇದ್ದಾರ. ಈ ಹಿಂದಿನ 15 ವರ್ಷದೊಳಗ ಇವರೆಲ್ಲಾ ಕೂಡಿ ಸುಮಾರು 17 ಲಕ್ಷ ಜನರ ಜೀವಾ ಉಳಿಸ್ಯಾರ. ಇಂಥವರ ಕೆಲಸದ ಬಗ್ಗೆ ಯಾರಿಗೂ ತಕರಾರು ಇಲ್ಲ. ಇರಲಿಕ್ಕೆ ಸಾಧ್ಯನೂ ಇಲ್ಲ. ಇದರಾಗೇನು ರಾಜಕೀಯ ಇದ್ದಂತಿಲ್ಲ. ಹೋದವರ್ಷ ಮಹಾರಾಷ್ಟ್ರದ ಕೊಲ್ಹಾಪುರದ ಪ್ರವಾಹದಾಗ ಉಳದ ಹೆಣಮಗಳೊಬ್ಬಳು ಆ ಸಿಬ್ಬಂದಿ ಕಾಲಿಗೆ ಬಿದ್ದು ‘ನೀನೇ ನಮ್ಮ ಪಾಂಡುರಂಗೋ ಯಪ್ಪಾ’ ಅಂತ ಹೇಳಿದ್ದ ವಿಡಿಯೋ ನಿಮ್ಮ ಫೋನಿನ ವಾಟ್ಸಪ್ಪಿಗೆ ಬಂದಿತ್ತಲ್ಲ, ಅಕೀ ಭಾವನೆಯೇ ಉಳಿದೆ ಎಲ್ಲಾರ ಭಾವನೆ.

ಆದರ ಎಲ್ಲಾರ ತಕರಾರು ಇರುವುದು ಆ ಇನ್ನೊಂದು ಎನ್‍ಡಿಆರ್‌ಎಫ್‍ನ ಬಗ್ಗೆ. ಇದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (NDRF national disaster response force).

ಇವರು ರಾಜ್ಯಗಳೊಳಗ ವಿಕೋಪ ನಡೆದಾಗ ಅವರಿಗೆ ದುಡ್ಡು ಕೊಡುವವರು. (ಕೇಂದ್ರಕ್ಕಂತೂ ಪ್ರಕೃತಿ ವಿಕೋಪ ಬರಂಗಿಲ್ಲಲ್ಲಾ. ಅಲ್ಲಿ ಬರೋ ವಿಕೋಪ ಅಂದರ ಬರೇ ಎಲೆಕ್ಷನ್ ಒಂದ)

ಇವರು ಯಾವಾಗ ಯಾರಿಗೆ ಏನು ಕೊಡುತ್ತಾರೆ ಅನ್ನೋದು ಮಾತ್ರ ಭಾರತೀಯ ಮತದಾರನ ಮನಸ್ಸಿಗಿಂತಾ ನಿಗೂಢ. ಯಾವಾಗರ ಹಿಂದೀ ಝೀ ಟಿವಿಯೊಳಗ ನಿಗೂಢ ರಹಸ್ಯ ಅಂತ ಇದರದ್ದೂ ಒಂದು ಎಪಿಸೋಡು ಬರಬಹುದು.

ಉದಾಹರಣೆಗೆ, ಈ ಸತೆ, ಕರ್ನಾಟಕಕ್ಕ 1,872 ಕೋಟಿ ಕೊಟ್ಟಾರ (ಕೇಂದ್ರ ಹಾಗೂ ರಾಜ್ಯ ನಿಧಿಗಳ ಲೆಕ್ಕದಲ್ಲಿ) ಮಹಾರಾಷ್ಟ್ರಕ್ಕ 3,150 ಕೋಟಿ, ಓಡಿಶಾಗೆ 3,666 ಕೋಟಿ . ರಾಜಸ್ತಾನಕ್ಕೆ 1,666 ಕೋಟಿ, ಆಂಧ್ರ 770 ಕೋಟಿ, ಮತ್ತ ಉತ್ತರ ಪ್ರದೇಶಕ್ಕೆ 541 ಕೋಟಿ . ಹಿಮಾಚಲ ಪ್ರದೇಶಕ್ಕೆ 434 ಕೋಟಿ, ಗೋವಾ ಮಿಜೋರಾಮಿಗೆ ಏನಿಲ್ಲಾ. ನಾಗಾಲ್ಯಾಂಡಿಗೆ 5 ಕೋಟಿ ಹಾಗೂ ಮಣಿಪುರಕ್ಕೆ 9.9 ಕೋಟಿ ಬಿಡುಗಡೆ ಆಗೇದ.

ಇದಲ್ಲಾಗಿಂತ ಮಜಾ ಏನೆಂದರ ನಾವು ಆರಿಸಿ ಕಳಿಸಿದ ಘನ ಸರಕಾರದವರು ನಾವು ಕಟ್ಟಿದ ಸುಂಕದ ರೊಕ್ಕದಾಗ ಈ ಸಂಸ್ಥಾದ ತಿಜೋರಿಯೊಳಗ ಒಂದು ವರ್ಷಕ್ಕೆ ಇಟ್ಟಿರೋದು ಬರೇ 23,465 ಕೋಟಿ ರೂಪಾಯಿ.

ಕರ್ನಾಟಕದ ಜನಾ ಒಂದು ವರ್ಷಕ್ಕ ಸುಮಾರು 29,000 ಕೋಟಿ ರೂಪಾಯಿ ಬರೇ ಜಿಎಸ್‍ಟಿ ಅಂದರ ಗಬ್ಬರ ಸಿಂಗ್ ಟ್ಯಾಕ್ಸ ಕಟ್ಟತಾರ. ಬ್ಯಾರೆ ಟ್ಯಾಕ್ಸಿನ ಲೆಕ್ಕಾ ಬ್ಯಾರೆ ಮತ್ತ. ಇದರಿಂದ ಸೆಂಟರಿನವರ ಹಾರ್ಟು ಎಷ್ಟು ದೊಡ್ಡದು ಅಂತ ತಿಳಕೋಬಹುದು.

ಅದರಾಗೂನು, ಎಲ್ಲಾ ರಾಜ್ಯಗಳ ಎಲ್ಲಾ ಥರದ ವಿಕೋಪಗಳಿಗೆ ಅವರು ಬಿಡುಗಡೆ ಮಾಡಿರುವುದು ಬರೇ 6,614 ಕೋಟಿ. ಅವರ ತಿಜೋರಿಯೊಳಗ ಇನ್ನೂ 51 ಶೇಕಡಾ ಹಣದ ಶಿಲ್ಕು ಹಂಗ ಬಾಕಿ ಉಳಿದದ.

ನಮ್ ಸೀಎಮ್ ಬಿ.ಎಸ್ ಯಡಿಯೂರಪ್ಪನವರು ಮನ್ನೆ ನೆರೆ ಪರಿಹಾರಕ್ಕೆ 38,000 ಕೋಟಿ ರೂಪಾಯಿ ಕೇಳಿದಾಗ ಮ್ಯಾಲಿನವರು ನಿಮ್ಮ ನಷ್ಟದ ಅಂದಾಜೇ ಸರಿ ಇಲ್ಲ ಎಂದು ಬೈದು ಕಳಿಸಿದ್ದು ಯಾಕ ಅಂತ ಗೊತ್ತಾತಲ್ಲಾ ? ನೋಡ್ರಿ, ಹೆಂಗದ ಮಜಾ!

ಹೆಚ್ಚಿನ ವಿವರಗಳಿಗೆ –

www.ndrf.gov.in

https://www.ndmindia.nic.in/images/allocation.PDF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...