Homeಕರ್ನಾಟಕಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ - ದೇವನೂರು

ಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ – ದೇವನೂರು

- Advertisement -
- Advertisement -

ಸಂದರ್ಶನ
| ಡಾ.ಎಸ್ ತುಕಾರಾಂ |

ಪರ್ಯಾಯ ರಾಜಕಾರಣದ ಪ್ರಯತ್ನಗಳನ್ನು ನಡೆಸುತ್ತಾ ಸಕ್ರಿಯವಾಗಿರುವ ಕನ್ನಡದ ಮಹತ್ವದ ಲೇಖಕ ದೇವನೂರ ಮಹಾದೇವ ಅವರನ್ನು ತುಕಾರಾಂ ಅವರು ಸಂಯುಕ್ತ ಕರ್ನಾಟಕಕ್ಕಾಗಿ ಸಂದರ್ಶಿಸಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದನ್ನು ಪ್ರಕಟಿಸಲು ಅನುಮತಿ ಕೊಟ್ಟ ದೇವನೂರ ಮಹಾದೇವ, ತುಕಾರಾಂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ಅವರಿಗೆ ಧನ್ಯವಾದಗಳು ತಿಳಿಸಲು ಬಯಸುತ್ತೇವೆ.

ನಿಮ್ಮ ಸ್ವರಾಜ್ ಇಂಡಿಯಾ ಪಕ್ಷ ಲೋಕಸಭೆಗೆ ರಾಜ್ಯದಲ್ಲಿ ಯಾವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿಲ್ಲವಲ್ಲ, ಯಾಕೆ?
ರೈತ ಮತ್ತು ದಲಿತ ಸಂಘಟನೆಗಳ ಕೂಡಿಕೆಯ ಸ್ವರಾಜ್ ಇಂಡಿಯಾದ ನೆಲೆ ಇರುವುದು ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ್ ಕ್ಷೇತ್ರಗಳಲ್ಲಿ. ಹಾಗಾಗಿ ನಿಲ್ಲಿಸಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಿದ್ದೇವೆ.

• ಹಾಗದರೆ ಉಳಿದೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಏನು?
ಸ್ವರಾಜ್ ಇಂಡಿಯಾ “ದೇಶಕ್ಕಾಗಿ ನಾವು” ಎಂಬ ಜಾಗೃತಿಯ ಆಂದೋಲನದ ಭಾಗವಾಗಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ತತ್ತರಿಸುತ್ತಿರುವ ಕೃಷಿ ಇತ್ಯಾದಿ ವಿಷಯಗಳನ್ನು ಮುನ್ನೆಲೆಗೆ ತಂದು ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುವಂತೆ ವಾತಾವರಣ ಉಂಟುಮಾಡಿದ್ದೇವೆ. ಇದೇನು ಕಮ್ಮಿ ರಾಜಕಾರಣವಲ್ಲ!

• ನೀವು “ದೇಶಕ್ಕಾಗಿ ನಾವು” ಅನ್ನುತ್ತಿದ್ದರೆ ಬಿಜೆಪಿಯವರು “ದೇಶಕ್ಕಾಗಿ ಮೋದಿ” ಅನ್ನುತ್ತಿದ್ದಾರಲ್ಲ!
ಅವರು ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿ ದಿಕ್ಕೆಟ್ಟು ‘ಮೋದಿ ಮೋದಿ’ ಎಂದು ಕಿರುಚುತ್ತಿದ್ದಾರೆ. ಹೀಗೆ ಕಿರುಚುತ್ತಿರುವವರು ಬಹುತೇಕ ನಿರುದ್ಯೋಗ ಯುವಕರು. ನಿರುದ್ಯೋಗ ಕಳೆದ ನಲವತ್ತೈದು ವರ್ಷಗಳಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ವಚನ ನೀಡಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ನೀಡುವುದಿರಲಿ, ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಉದ್ಯೋಗ ನಷ್ಟ ಮಾಡಿಬಿಟ್ಟ. ವಚನಪಾಲಕ ರಾಮನನ್ನು ಈ ವಚನ ಭ್ರಷ್ಟರು ಹೇಗೆ ಉಚ್ಚಾರಣೆ ಮಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಆತ್ಮಸಾಕ್ಷಿ ಅಳುಕು ಇಲ್ಲದವರಿಗೆ ಇದು ಸಾಧ್ಯವಾಗಬಹುದು. ಅದಕ್ಕೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಅಧಿಕಾರಕ್ಕೆ ತಂದ ತಮ್ಮ ಪ್ರಣಾಳಿಕೆಯ ಚುನಾವಣಾ ಭರವಸೆಗಳನ್ನು `ಚುನಾವಣಾ ಜುಮ್ಲಾ (ಸುಳ್ಳು)’ ಎಂದು ಹೇಳುತ್ತಾರೆ. ಇದು ನಿರ್ಲಜ್ಜತೆಯ ತುಟ್ಟತುದಿ.

• ಆದರೆ ಬಿಜೆಪಿಯವರು ‘ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ’ ಅನ್ನುತ್ತಾರಲ್ಲ?
ಅವರ ನುಡಿ ನೋಡಬೇಡಿ, ನಡೆ ನೋಡಿ. ದೇಶದ ಸಾರ್ವಜನಿಕ ಸಂಪತ್ತನ್ನು ಮಾರುತ್ತಿರುವವರು ಯಾವ ನಾಲಿಗೆಯಲ್ಲಿ ದೇಶ ಮೊದಲು ಅನ್ನುತ್ತಿದ್ದಾರೆ? ಇದು ದೇಶವನ್ನೇ ಮಾರಿದಂತಾಗುವುದಿಲ್ಲವೇ? ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ಮಾತುಗಾರಿಕೆಯ ಏರಿಳಿತ, ಹಾವಭಾವ ನೋಡಿದರೆ ಏನನ್ನಿಸುತ್ತದೆ? ಇದು ಹಾರಾಜು ಹಾಕುವವರ ಹಾವಭಾವ, ಮಾತುಗಾರಿಕೆಯಂತೆ ಕಾಣುವುದಿಲ್ಲವೆ? ಇನ್ನು ಪಕ್ಷಕ್ಕೆ ಬಂದರೆ ಬಿಜೆಪಿ ಪಕ್ಷ ಎಲ್ಲಿದೆ? ಅದೊಂದು ಕೂಗುಮಾರಿ ಗುಂಪುಮಂದೆಯಾಗಿದೆ. ಅಲ್ಲಿರುವುದು ಇಬ್ಬರೆ. ಮೂರನೆಯವರಿಗೆ ಸ್ಥಾನವಿಲ್ಲ. ಜೊತೆಗೆ ಕೇಂದ್ರ ಸಚಿವ ಸಂಪುಟವನ್ನೇ ನೋಡಿ- ಅಲ್ಲಿರುವುದು ಒಬ್ಬರೆ! ಉಳಿದ ಸಚಿವರು ಪ್ರಧಾನಮಂತ್ರಿಗಳ ಪರಿಚಾರಕರು. ಬಿಜೆಪಿಯವರು ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಅಂತಾರಲ್ಲ ಅದನ್ನು ಮೋದಿಯವರು ತಲೆಕೆಳಗೆ ಮಾಡಿಬಿಟ್ಟರು. ಈ ಸಲದ ಚುನಾವಣಾ ಪ್ರಣಾಳಿಕೆ ನೋಡಿ- ಅಲ್ಲಿ ಮೋದಿಯವರೊಬ್ಬರ ಫೋಟೋ ಮಾತ್ರವಿದೆ.

• ಅಂದರೆ ಮೋದಿಯವರು ಏಕವ್ಯಕ್ತಿ ಅಧಿಕಾರ ಕೇಂದ್ರದತ್ತ ನಡೆಯುತ್ತಿದ್ದಾರೆ ಎನ್ನುವುದು ನಿಮ್ಮ ಆರೋಪವೇ?
ಶಾಸ್ತ್ರ ಕೇಳಲೇಬೇಕಾಗಿಲ್ಲ. ಮೋದಿಯವರದು ಏಕವ್ಯಕ್ತಿ ಕೇಂದ್ರಿತ ಅಧಿಕಾರ ಅನ್ನುವ ಮಾತು ಬಿಜೆಪಿ ಪಕ್ಷದ ನಾಯಕರ ಅಸಹಾಯಕ ಪಿಸುನುಡಿಗಳು.

• ಹಾಗಾದರೆ ಈ ಹಿಂದೆ ಇಂದಿರಾಗಾಂಧಿಯವರಿಗೂ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಎಂಬ ಆರೋಪ ಇತ್ತಲ್ಲ?
ಹೌದು ಇತ್ತು. ಆದರೆ ಈ ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಇಂದಿರಾ ಅವರ ಆಡಳಿತದಲ್ಲಿ- ಬಡವರು, ಧ್ವನಿ ಇಲ್ಲದವರು, ಅಸಹಾಯಕರು ಉಸಿರಾಡುವಂತಹ ಸುಧಾರಣೆಗಳನ್ನು ತಂದರು. ಆದರೆ ಮೋದಿಯವರ ಆಡಳಿತದಲ್ಲಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಬೆಳವಣಿಗೆಯಾಗುವುದಕ್ಕೆ ದೇಶದ ಪ್ರಧಾನಿ ಮೋದಿಯವರು ಒಬ್ಬ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸಿಬಿಟ್ಟರು. ಅದಕ್ಕಾಗೇ, ಮೋದಿಯವರ ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

• ನೀವು ವಿದ್ಯಾರ್ಥಿದೆಸೆಯಲ್ಲಿ ಲೋಹಿಯಾ ವಿಚಾರಧಾರೆಯ ಸಮಾಜವಾದಿ ಯುವಜನ ಸಭಾದಲ್ಲಿ ಇದ್ದವರು. ಲೋಹಿಯಾ ಅವರ ‘ಕಾಂಗ್ರೆಸ್ ವಿರೋಧಿ’ (Anti-Congress) ನಿಲುವಿಗೆ ಈಗ ನಿಮ್ಮ ಅಭಿಪ್ರಾಯ?
ಅಕ್ಷರ, ಪದಕ್ಕೆ ಅರ್ಥ ನೀಡಬಾರದು. ಅದರ ಆಂತರ್ಯ (Spirit) ನೋಡಬೇಕು. ಆ ಕಾಲಘಟ್ಟದಲ್ಲಿ ಲೋಹಿಯಾ ಹಾಗೂ ಅಂಬೇಡ್ಕರ್ ಅವರ ‘ಕಾಂಗ್ರೆಸ್ ವಿರೋಧಿ’ ಎಂದರೆ ಅದು ಆಂತರ್ಯದಲ್ಲಿ `ವ್ಯವಸ್ಥೆ ವಿರೋಧಿ’ (Anti- establishment) ಎಂದೇ ಅರ್ಥ. ಈ ಅರ್ಥದಲ್ಲಿ ಇಂದು ‘ವ್ಯವಸ್ಥೆ ವಿರೋಧಿ’ ನಿಲುವು ಎಂದರೆ ಏನು? ಇಂದು ಬಿಜೆಪಿ ದೇಶವನ್ನು ಆಳುತ್ತಿದೆ. ಈಗ ವ್ಯವಸ್ಥೆ ವಿರೋಧಿ ನಿಲುವು ಎಂದರೆ ಅದು ಬಿಜೆಪಿ ವಿರೋಧಿ ನಿಲುವು ಎಂದೇ ಆಗುತ್ತದೆ. ಸಮಾಜದ ಸಾಮರಸ್ಯ ಮತ್ತು ಸಮಾನತೆಗಾಗಿ ಅಂದರೆ ಮುಂಚಲನೆಗಾಗಿ ಬದಲಾವಣೆ ಬೇಕೆಂದಿದ್ದರೆ ಸಮುದಾಯ ಪ್ರಜ್ಞೆ ಯಾವಾಗಲೂ ವ್ಯವಸ್ಥೆ ವಿರೋಧಿ ನಿಲುವನ್ನು ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...