Homeನಿಜವೋ ಸುಳ್ಳೋಕಾಲುಭಾಗ ಸತ್ಯ, ಮುಕ್ಕಾಲು ಪಾಲು ಮಿಥ್ಯ: ಚೌಕಿದಾರ್ ಚೋರ್ ಹೈ ಮತ್ತು ಸುಪ್ರಿಂಗೆ ರಾಹುಲ್ ಉತ್ತರ!

ಕಾಲುಭಾಗ ಸತ್ಯ, ಮುಕ್ಕಾಲು ಪಾಲು ಮಿಥ್ಯ: ಚೌಕಿದಾರ್ ಚೋರ್ ಹೈ ಮತ್ತು ಸುಪ್ರಿಂಗೆ ರಾಹುಲ್ ಉತ್ತರ!

- Advertisement -
- Advertisement -

ಒಂದು ಫೇಕ್ ನ್ಯೂಸ್ ಅನ್ನು ಅತ್ಯಂತ ತ್ವರಿತಗತವಾಗಿ ಬಿಜೆಪಿ ಐಟಿ ಸೆಲ್ ಹರಿಬಿಟ್ಟಿದೆ. ಅದು ದೇಶದ ಬಹುಭಾಷೆಗಳಲ್ಲಿ ಈಗ ಹರಿದಾಡುತ್ತಿದೆ. ಅದರ ಪ್ರಕಾರ, ‘ಸುಳ್ಳು ಹೇಳಿ ಸುಪ್ರಿಂ ಮುಂದೆ ಬೆತ್ತಲಾದ ರಾಹುಲ್ ಗಾಂಧಿ..’

ಇದರಲ್ಲಿ ಕಾಲುಭಾಗ ಸತ್ವವಷ್ಟೇ ಇದೆ. ಬಿಜೆಪಿ ಹಬ್ಬಿಸಿರುವ ಸುದ್ದಿ ಪ್ರಕಾರ, ‘ಸುಪ್ರಿಂಕೋರ್ಟೆ ಚೌಕಿದಾರ್ ಚೋರ್ ಹೈ ಎಂದಿದೆಯೆಂದು ಹೇಳಿದ್ದ ರಾಹುಲ್ ಸುಪ್ರಿಂಕೋರ್ಟಿಗೆ ಇವತ್ತು ಸಲ್ಲಿಸಿದ ಅಫಿಡವೆಟ್‍ನಲ್ಲಿ ತಮ್ಮ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ. ಇದರಿಂದ ರಫೆಲ್‍ನಲ್ಲಿ ಮೋದಿ ತಪ್ಪು ಮಾಡಿಲ್ಲ. ರಾಹುಲ್ ಬರೀ ಸುಳ್ಳಲ್ಲೇ ಪ್ರಚಾರ ಮಾಡುತ್ತಿದ್ದಾರೆ’ ಎಂದೆಲ್ಲ ವಿವರಿಸಲಾಗಿದೆ.


ಇದರಲ್ಲಿ ಕಾಲುಭಾಗ ಮಾತ್ರ ಸತ್ವವಷ್ಟೇ. ಬಿಜೆಪಿ ನಾಯಕಿ ಮೀನಾಕ್ಷಿ ಲೇಣಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ರಫೆಲ್ ವಿಚಾರ ಇನ್ನೂ ಸಂಪೂರ್ಣ ಇತ್ಯರ್ಥವಾಗುವ ಮೊದಲೇ ರಾಹುಲ್ ಅವರು ‘ಸುಪ್ರಿಂಕೋರ್ಟೆ ಮೋದಿಯವರನ್ನು ಚೋರ್’ ಎಂದಿದೆ ಎಂಬರ್ಥದಲ್ಲಿ ಮಾತಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಏ. 22ರೊಳಗೆ ಇದಕ್ಕೆ ಉತ್ತರ ನೀಡಲು ಸುಪ್ರಿಂ ರಾಹುಲ್‍ಗೆ ನೋಟಿಸ್ ನೀಡಿತ್ತು.
ಇಂದು (ಏ 22) ರಾಹುಲ್ ಸುಪ್ರಿಂಗೆ ನೀಡಿದ ಉತ್ತರ/ವಿವರಣೆಯಲ್ಲಿ, ‘ಚುನಾವಣಾ ಭಾಷಣ ಮಾಡುವಾಗ ಮಾತಿನ ಭರಾಟೆ ಮತ್ತು ಜೋಶ್‍ನಲ್ಲಿ ಹಾಗೆ ತಪ್ಪಾಗಿ ಹೇಳಿದ್ದೇನೆ. ಆದರೆ ನನ್ನ ಬಹುತೇಕ ಚುನಾವಣಾ ಭಾಷಣಗಳಲ್ಲಿ ‘ಬಡವರ ದುಡ್ಡನ್ನು ಹೊಡೆದು ಶ್ರೀಮಂತರನ್ನು ಉದ್ಧಾರ ಮಾಡುವ ಚೌಕಿದಾರ್ ಚೋರ್’ ಎಂದು ಹೇಳುತ್ತಲೇ ಬಂದಿದ್ದೇನೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆಯೇ ಹೊರತು ಅವರೆಲ್ಲೂ ಕ್ಷಮೆ ಯಾಚನೆ ಮಾಡಿಲ್ಲ.

ಬಿಜೆಪಿಗೊಂದು ಪ್ರಶ್ನೆ: ರಾಹುಲ್ ತಪ್ಪಾಗಿ ನುಡಿದಿದ್ದನ್ನು ಒಪ್ಪಿಕೊಂಡ ಕೂಡಲೇ ಮೋದಿ ರಫೆಲ್ ಹಗರಣದಿಂದ ಮುಕ್ತರಾಗುವುದಿಲ್ಲ. ಚೌಕಿದಾರ್ ಚೋರ್ ಹೈ ಎಂಬುದು ಬರೀ ರಫೆಲ್‍ಗೆ ಸಂಬಂಧಿಸಿದ್ದಲ್ಲ, ಒಟ್ಟೂ ಐದು ವರ್ಷಗಳ ಆಡಳಿತ ನಿರ್ವಹಣೆಯಲ್ಲಿ ಈ ಚೌಕಿದಾರ್ ಚೋರ್ ಆಗಿಯೇ ಕೆಲಸ ಮಾಡಿದ್ದಾರೆ ಎಂಬ ಅಪಾದನೆಗಳು ಈಗಲೂ ಚಾಲ್ತಿಯಲ್ಲಿವೆ. ಈ ಕುರಿತಾಗಿ ಮೀನಾಕ್ಷಿ ಲೇಣಿ ಮತ್ತು ಬಿಜೆಪಿ ಐಟಿ ಸೆಲ್ ಸುಪ್ರಿಂಕೋರ್ಟ್ ಮೊರೆ ಹೋಗುತ್ತಾರೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...