ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಲೇಹ್‌ಗೆ ಭೇಟಿ ನೀಡಿ, ಜೂನ್ 15 ರಂದು ಚೀನಿ ಸೈನಿಕರೊಂದಿಗಿನ ಮುಖಾಮುಖಿಯಲ್ಲಿ ಗಾಯಗೊಂಡ ಭಾರತೀಯ ಗಾಯಾಳು ಸೈನಿಕರನ್ನು ಭೇಟಿಯಾಗಿದ್ದಾರೆ. ಆದರೆ ಅವರ ಈ ಭೇಟಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಜೂನ್ 19 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಮೋದಿಯವರು ಯಾರೂ ನಮ್ಮ ದೇಶದ ಗಡಿಯೊಳಗೆ ಕಾಲಿಟ್ಟಿಲ್ಲ ಎಂದಿದ್ದರು. ಅಂದ ಮೇಲೆ ಇಷ್ಟೊಂದು ಸೈನಿಕರು ಗಾಯಾಳುಗಳಾಗಲು ಕಾರಣವೇನೆಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ ಮೋದಿಯವರು ಸೈನಿಕರನ್ನು 17 ದಿನಗಳ ನಂತರ ಭೇಟಿ ಮಾಡಿದ್ದಾರೆ. ಇದು ಒಳ್ಳೇಯದು. ಆದರೆ ಆ ಫೋಟೊಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಾದ ಅಗತ್ಯವೇನಿದೆ ಎಂಬ ಪ್ರಶ್ನೆ ಎದ್ದಿದೆ.
ಚೇತರಿಸುತ್ತಿದ್ದ ಸೈನಿಕರ ವಾರ್ಡಿಗೆ ಹೋಗಿ, ಅವರ ಬಳಿ ನಿಂತು, ಅವರ ಫೊಟೋ ತೆಗೆದು ಇಡೀ ಜಗತ್ತಿಗೆ ತೋರಿಸುತ್ತಿದ್ದೀರಲ್ಲಾ, ಗಡಿ ರಕ್ಷಣೆ ಮಾಡುತ್ತಾ ಚೀನೀ ಸೈನಿಕರ ವಿರುದ್ಧ ಹೋರಾಡಿದ ಈ ಸೈನಿಕರ ಮುಖಚರ್ಯೆಯನ್ನು ವಿರೋಧಿ ದೇಶದ ಸೈನಿಕರು ನೋಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಇದು ತೀರಾ ಅಪಾಯಕಾರಿ ಎನ್ನುವ ಕನಿಷ್ಟ ಪ್ರಜ್ಞೆಯೂ ಈ ದೇಶದ ಪ್ರಧಾನಿಯವರಿಗಿಲ್ವಾ? ಎಂದು ಕನ್ನಡದ ಯುವ ಬರಹಗಾರ ಅಲ್ಮೆಡಾ ಗ್ಲಾಡ್‌ಸನ್ ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ಮೋದಿಯವರು ರಾಜಕೀಯ ಪ್ರಚಾರಕ್ಕಾಗಿ ಸೈನಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸೈನಿಕರನ್ನು ಮೋದಿ ಭೇಟಿ ಮಾಡಿದ್ದು ಆಸ್ಪತ್ರೆಯಲ್ಲಲ್ಲ, ಅದು ಪಾರ್ಟಿ ಹಾಲ್. ಹಾಗಾಗಿ ಮೋದಿ ನಡೆಸಿದ್ದು ಇವೆಂಟ್ ಮ್ಯಾನೆಜ್ಮೆಂಟ್ ಎಂಬ ಟೀಕೆ ಕೇಳಿಬಂದಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಯವರು ಲೇಹ್ ಗೆ ಭೇಟಿ ನೀಡಿದಾಗ ಅದೇ ಹಾಲ್‌ನಲ್ಲಿ ಸೈನಿಕರು ಅವರಿಗೆ ಔತಣ ನೀಡಿದ್ದರು. ಈಗ ಅದೇ ಹಾಲ್‌ನಲ್ಲಿ ಸೈನಿಕರನ್ನು ಕೂರಿಸಲಾಗಿದೆ ಎಂದು ಎರಡೂ ಫೋಟೊಗಳನ್ನು ಪೋಸ್ಟ್ ಮಾಡಿ ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಆರೋಪಿಸಿದ್ದಾರೆ.
#ಜಗವೇ_ನಾಟಕರಂಗ_ಅದರಲ್ಲಿ_ಮೋದಿಯವರು_ಒಬ್ಬ_ಮಹಾನ್_ಪಾತ್ರಧಾರಿ ದೋನಿ ಹೋದಾಗ ಪಾರ್ಟಿ ಹಾಲ್, ಮೋದಿ ಹೋದರೆ ಆಸ್ಪತ್ರೆ.
Posted by ನಾಗೇಗೌಡ ಕೀಲಾರ ಶಿವಲಿಂಗಯ್ಯ on Friday, July 3, 2020
ಇದು ಆಸ್ಪತ್ರೆಯೇ? ಇದು ಕಾನ್ಫರೆನ್ಸ್ ಹಾಲ್‌ನಂತಿದೆ. ವೈಟ್‌ಬೋರ್ಡ್, ಪ್ರೊಜೆಕ್ಟರ್ ಎಲ್ಲಾ ಇವೆ! ಗಾಯಗೊಂಡ ಸೈನಿಕರಿಗೆ ಪಾಠ ಮಾಡುತ್ತಾರೆಯೆ? ಯಾವುದೇ ಆಸ್ಪತ್ರೆಯ ಬೆಡ್‌ಗಳ ಪಕ್ಕ ಔಷಧಿ ಇಡುವ ಚಿಕ್ಕ ಟೇಬಲ್ ಇರುತ್ತದೆ. ಇಲ್ಲಿ ಎಲ್ಲಿದೆ? ಬೆಡ್‌ಶೀಟ್ ಇಲ್ಲ, ಯಾರೂ ಮಲಗಿರದಂತೆ ಒಂದು ಸುಕ್ಕು ಕೂಡಾ ಇಲ್ಲದಂತೆ ನೀಟಾಗಿದೆ. “ಗಾಯ ಗೊಂಡ” ಸೈನಿಕರು ಮಲಗಿರದೆ ಒಂದೇ ಪೋಸಿನಲ್ಲಿ ಯೋಗ ಮಾಡುವ ಗೊಂಬೆಗಳಂತೆ ಕುಳಿತಿದ್ದಾರೆ. ಇದು ಮೋದಿಯವರ ಮಾರ್ಕೆಂಟಿಗ್ ತಂತ್ರವೇ ಎಂದು ಹಲವಾರು ಜನ ಪ್ರಶ್ನಿಸಿದ್ದಾರೆ.
A hospital with no equipment, just beds? None of the soldiers look injured. All bed sheets clean and nicely tucked in.
Looks like the PM's set director & marketing team over-scripted this? Or have these theatrics just become the norm now?#Shame pic.twitter.com/IiJ0x6U22J
— Ishaan Sethi (@isethi03) July 3, 2020
ಟ್ವಿಟ್ಟರ್‌ನಲ್ಲಿಯೂ ಸಹ ಹಲವಾರು ಜನ ಮೋದಿ ಭೇಟಿಯನ್ನು ವಿರೋಧಿಸಿದ್ದಾರೆ. ಕಾನ್ಫರೆನ್ಸ್ ಹಾಲ್ ಅನ್ನು ಮೋದಿಯವರು ತಮ್ಮ ಫೋಟೊ ಶೂಟ್‌ಗಾಗಿ ಆಸ್ಪತ್ರೆಯನ್ನಾಗಿ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
देश से इतना बड़ा धोखा ?
Conference room converted into a Hospital for a Photoop of PM Modi's Visit to Leh ? #MunnaBhaiMBBS pic.twitter.com/Zuec8WhCf3— Aarti ? (@aartic02) July 4, 2020
Let's put some doubts to rest.
MSD had visited the army hospital in Leh last year. Pics from from his visit shows the same wall and windows as shown in the Modi's pics, which at least confirms the fact that PM visited the army hospital. ? https://t.co/jJCJTyhBr5 pic.twitter.com/OMJdYuOYYS
— Zaid (@pindropviolence) July 3, 2020
ಈ ಹಿಂದೆಯು ಹಲವಾರು ಪ್ರಧಾನಿಗಳು ಗಡಿಗೆ ಭೇಟಿ ಕೊಟ್ಟು ನಮ್ಮ ಸೈನಿಕರನ್ನು ಮಾತನಾಡಿಸಿ ಧೈರ್ಯ ತುಂಬಿದ್ದರು. ಆದರೆ ಅವರ್ಯಾರು ಈ ರೀತಿ ಫೋಟೊ ತೆಗೆಸಿಕೊಂಡು ಸಾರ್ವಜನಿಕವಾಗಿ ಪ್ರದರ್ಶನ ಮಾಡಿರಲಿಲ್ಲ ಎಂದು ಹಲವಾರು ನೆಟ್ಟಿಗರು ಟೀಕಿಸಿದ್ದರೆ.
ಇದನ್ನೂ ಓದಿ: ಫ್ಯಾಕ್ ಚೆಕ್: ಈ ಮಗು CRPF ಸೈನಿಕರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿತೆ?



https://twitter.com/dilliwalanerd/status/1279111152551596032?s=12
This is a week back video when army chief visited. Stop propaganda