Homeಕರೋನಾ ತಲ್ಲಣಆಂಬುಲೆನ್ಸ್‌ಗಾಗಿ 2 ಗಂಟೆ ಕಾಯುವಿಕೆ: ಮನೆ ಮುಂದೆ ಪ್ರಾಣಬಿಟ್ಟ ಬೆಂಗಳೂರಿನ ಕೊರೊನಾ ಸೋಂಕಿತ!

ಆಂಬುಲೆನ್ಸ್‌ಗಾಗಿ 2 ಗಂಟೆ ಕಾಯುವಿಕೆ: ಮನೆ ಮುಂದೆ ಪ್ರಾಣಬಿಟ್ಟ ಬೆಂಗಳೂರಿನ ಕೊರೊನಾ ಸೋಂಕಿತ!

- Advertisement -
- Advertisement -

ಕೊರೊನಾ ರೋಗಿಯೊಬ್ಬರು ಬೆಂಗಳೂರಿನಲ್ಲಿರುವ ತಮ್ಮ ಮನೆ ಮುಂದೆ ಆಂಬುಲೆನ್ಸ್‌ಗಾಗಿ ಸುಮಾರು ಎರಡು ಗಂಟೆಗಳ ಕಾಲ ಕಾಯಬೇಕಾಗಿದ್ದು, ಕೊನೆಗೆ ಅಲ್ಲೆ ಪ್ರಾಣ ಬಿಟ್ಟ ದುರ್ಘಟನೆ ನಿನ್ನೆ ಜರುಗಿದೆ.

55 ವರ್ಷದ ವ್ಯಕ್ತಿಯ ಶವವನ್ನು ಅವರ ಮನೆಯ ಹೊರಗಿನ ಬೀದಿಯಲ್ಲಿ ಮಲಗಿಸಿದ್ದು, ಅವರ ಸಂಬಂಧಿಕರು ಮೃತದೇಹದ ಪಕ್ಕದಲ್ಲಿ ನಿಂತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.

ಆ ವ್ಯಕ್ತಿಯು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಅವರ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ವರದಿ ಬರುತ್ತಿದ್ದಂತಯೇ ಅವರ ಪತ್ನಿ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬುಲೆನ್ಸ್‌ಗಾಗಿ ಮನವಿ ಮಾಡಿದ್ದರು ಎನ್ನಲಾಗಿದೆ.

ಆಂಬ್ಯುಲೆನ್ಸ್ ಬರುವುದು ತಡವಾಗುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಅವರನ್ನು ಆಟೋರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅವರು ಮನೆಯಿಂದ ಹೊರಬಂದ ಕೂಡಲೇ ಬೀದಿಯಲ್ಲಿ ಕುಸಿದುಬಿದ್ದಿದ್ದಾರೆ. ಅವರನ್ನು ಮಲಗಿಸಿ ಅವರ ಸಂಬಂಧಿಗಳು ಕಾಯುತ್ತಿರುವಾಗ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ. ಎರಡು ಗಂಟೆಗಳ ವಿಳಂಬದ ನಂತರ ಆಂಬ್ಯುಲೆನ್ಸ್ ಅಲ್ಲಿಗೆ ತಲುಪಿತು ಎನ್ನಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಕೊರೊನಾ ನಿರ್ವಹಣೆ ಉಸ್ತುವಾರಿ, ಸಚಿವ ಆರ್.ಅಶೋಕ್, ಈ ದುರ್ಘಟನೆಗೆ ಕಾರಣರಾದವರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ತನಿಖೆಗೆ ಆದೇಶಿಸಲಾಗುವುದು. ಆರೋಗ್ಯ ಸೇವೆಗಳ ಮೇಲೆ ಭಾರಿ ಒತ್ತಡವಿದ್ದರೂ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬೆಂಗಳೂರು ನಾಗರಿಕ ಸಂಸ್ಥೆಯ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ 994 ಹೊಸ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ ಇದುವರೆಗೆ 19,710 ಸಕಾರಾತ್ಮಕ ಪ್ರಕರಣಗಳು ದಾಖಲಾಗಿದ್ದು, 293 ಸಾವುಗಳು ಸಂಭವಿಸಿವೆ.


ಇದನ್ನೂ ಓದಿ: ಪಿಎಂ ಕೇರ್ಸ್‌ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...