Homeದಿಟನಾಗರಫ್ಯಾಕ್ ಚೆಕ್: ಈ ಮಗು CRPF ಸೈನಿಕರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿತೆ?

ಫ್ಯಾಕ್ ಚೆಕ್: ಈ ಮಗು CRPF ಸೈನಿಕರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿತೆ?

ಚಿತ್ರದ ಹಿನ್ನೆಲೆಯಲ್ಲಿ ಕಂಡುಬರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಹುಡುಗ ಕಲ್ಲು ಎತ್ತಿಕೊಂಡಿದ್ದಾನೆ ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

- Advertisement -
- Advertisement -

ಜುಲೈ 1 ರಂದು ಕಾಶ್ಮೀರದಲ್ಲಿ ಉಗ್ರರು ಮತ್ತು CRPF (ಭಾರತೀಯ ಭದ್ರತಾ ಸಿಬ್ಬಂದಿಗಳ) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ತನ್ನ ಅಜ್ಜನ ಸಾವನ್ನು ಕಣ್ಣಾರೆ ಕಂಡ ಮೂರು ವರ್ಷದ ಮಗುವಿನ ಮನಕಲಕುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಚಿತ್ರದ ಹಿನ್ನೆಲೆಯಲ್ಲಿ ಕಂಡುಬರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಹುಡುಗ ಕಲ್ಲು ಎತ್ತಿಕೊಂಡಿದ್ದಾನೆ ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಈ ವೈರಲ್ ಚಿತ್ರದಲ್ಲಿ ಮಗುವಿನ ಅಜ್ಜನ ಮೃತದೇಹ ಬೀದಿಯಲ್ಲಿ ಬಿದ್ದಿರುವುದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ, ಸಿಆರ್‌ಪಿಎಫ್ ಸಿಬ್ಬಂದಿ ಅವನನ್ನು ದೂರ ಹೋಗುವಂತೆ ಸಂಕೇತಿಸುತ್ತಿರುವುದನ್ನು ಕಾಣಬಹುದು. ಚಿತ್ರದಲ್ಲಿರುವ ಮಗುವಿನ ಬಲಗೈಯನ್ನು ವೃತ್ತ ಹಾಕಿ ವಿಷೇಶವಾಗಿ ಗುರುತಿಸಲಾಗಿದೆ.

ಈ ವೈರಲ್ ಚಿತ್ರದ ಶೀರ್ಷಿಕೆ ಹೀಗಿದೆ ‘ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ತನ್ನ ಅಜ್ಜ ಕೊಲ್ಲಲ್ಪಟ್ಟ ನಂತರ ಈ ಪುಟ್ಟ ಹುಡುಗ ತನ್ನ ಕೈಯ್ಯಲ್ಲಿ ಕಲ್ಲು ಹಿಡಿದಿದ್ದಾನೆ…. ಯಾರು ಮತ್ತು ಯಾಕೆ ಕಲ್ಲು ಎತ್ತಿಕೊಂಡಿದ್ದಾನೆ, ಯಾರು ಅವನ ಟಾರ್ಗೆಟ್ ಆಗಲಿದ್ದಾರೆ ಎಂದು ಯಾರಾದರೂ ಊಹಿಸಬಹುದೇ? ಅನಿವಾರ್ಯ ಪ್ರಶ್ನೆಯೇ? ಅದಕ್ಕೆ ಉತ್ತರಿಸಲು ಅಗತ್ಯವಿದೆ’..

ಅಲ್ಲಿಗೆ ಆ ಮಗು ಸೈನಿಕನಿಗೆ ಕಲ್ಲು ಹೊಡೆಯಲು ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ನೀವು ಪೋಸ್ಟ್ ಅನ್ನು ಇಲ್ಲಿ ವೀಕ್ಷಿಸಬಹುದು.

ಅಷ್ಟೇ ಅಲ್ಲದೆ ಹಲವಾರು ಟ್ವಿಟರ್ ಹ್ಯಾಂಡಲ್‌ಗಳಿಂದ ಕೂಡಾ ಈ ಚಿತ್ರ ವೈರಲ್ ಆಗಿದೆ.

ಫ್ಯಾಕ್ಟ್ ಚೆಕ್:

ಎಲ್ಲಾ ಕಡೆ ಹರಿದಾಡುತ್ತಿರುವ ಈ ಚಿತ್ರವನ್ನು ಬೇರೆ ಬೇರೆ ಕೋನದಿಂದ ಸರಿಯಾಗಿ ಗಮನಿಸಿದರೆ ಅದು ಮಗುವಿನ ಕೈಯಲ್ಲಿರುವುದು ಕಲ್ಲಲ್ಲ ಎಂದು ಸ್ಪಷ್ಟವಾಗಿದೆ. ಆತನ ಕೈಯಲ್ಲಿ ಏನು ಇಲ್ಲ, ಬದಲಿಗೆ  ಮುಂದೆ ಇರುವ ಬಂಡೆಯಿಂದಾಗಿ ಕೈಯಲ್ಲಿ ಕಲ್ಲು ಹಿಡಿದಿರುವುಂತೆ ಭಾಸವಾಗುತ್ತದೆ ಅಷ್ಟೇ.

ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚಿತ್ರ ಕೂಡಾ ಹರಿದಾಡುತ್ತಿದ್ದು, ಅದರಲ್ಲಿ ಹುಡುಗ ತನ್ನ ಅಜ್ಜನ ಮೃತದೇಹದ ಮೇಲೆ ಕುಳಿತು ಅವನನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ. ಅದೇ ಚಿತ್ರದ ಹಿನ್ನಲೆಯಲ್ಲಿಯೂ ಮೂರು ಬಂಡೆಗಳನ್ನು ಕಾಣಬಹುದಾಗಿದೆ.

CRPF ಸಿಬ್ಬಂದಿಯ ಕಡೆಗೆ ಹುಡುಗ ನಡೆದುಕೊಂಡು ಹೋಗುತ್ತಿರುವ ವೈರಲ್ ವಿಡಿಯೋ ಪರಿಶೀಲಿಸಿದರೆ, ಬಾಲಕನ ಕೈಗಳು ತೂಗಾಡುತ್ತಿವೆ. ಎಡಗೈ ಮುಂದಿದ್ದರೆ ಬಲಗೈ ಅವನ ದೇಹಕ್ಕೆ ಸಮಾನಾಂತರವಾಗಿದೆ.

ಹುಡುಗನ ಮುಷ್ಟಿಯು ಅವನ ಮುಂದೆ ಇರುವ ಬಂಡೆಗಳ ಅಂಚುಗಳೊಂದಿಗೆ ಬೆರೆತು ಚಿತ್ರವೂ ಕಲ್ಲಿನ ಭ್ರಮೆಯನ್ನು ಸೃಷ್ಟಿಸುತ್ತದೆ. ಇದನ್ನು ಸರಿಯಾಗಿ ಗಮನಿಸಿದರೆ ಅದನ್ನು ಗುರುತಿಸಬಹುದಾಗಿದೆ.

ಇಂಡಿಯಾ ಟುಡೇ ಪತ್ರಿಕೆಯಲ್ಲಿ ಕೂಡಾ ಅದೇ ಚಿತ್ರವಿದೆ ಆದರೆ ವರದಿಯಲ್ಲಿ ಬಾಲಕನ ಕೈಯ್ಯಲ್ಲಿ ಕಲ್ಲುಗಳು ಇದೆ ಎಂದು ವರದಿ ಮಾಡಿಲ್ಲ. ಹಾಗಾಗಿ ಬಾಲಕ CRPF ಸೈನಿಕರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿದ ಎಂಬುದು ಸುಳ್ಳು ಸುದ್ದಿಯಾಗಿದೆ.

ಸುದ್ದಿ ವರದಿಗಳ ಪ್ರಕಾರ, 60 ವರ್ಷದ ನಾಗರಿಕ ತನ್ನ ಮೊಮ್ಮಗನೊಂದಿಗೆ ಕಾರಿನಲ್ಲಿ ಆ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ಗುಂಡಿನ ಚಕಮಕಿಯ ನಡುವೆ ಸಿಲುಕಿಕೊಂಡರು. ಈ ಸಂಧರ್ಭದಲ್ಲಿ ಎರಡು ಗುಂಡುಗಳು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಗುಂಡು ಪೊಲೀಸರಿಂದ ಬಂದ ಗುಂಡುಗಳಾಗಿದ್ದು, ಉಗ್ರಗಾಮಿಗಳದ್ದು ಅಲ್ಲ ಎಂದು ಹೇಳುತ್ತಿದ್ದಾರೆ.

ಪಾಯಿಂಟ್-ಬ್ಲಾಂಕ್ ವ್ಯಾಪ್ತಿಯಲ್ಲಿ ಗುಂಡು ಹಾರಿಸಿರುವ ಪೊಲೀಸರು ಅದಕ್ಕೂ ಮುದಲು ವೃದ್ದನನ್ನು ಅವರ ಕಾರಿನಿಂದ ಹೊರಗೆ ಎಳೆದೊಯ್ಯಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಈಗ ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಆದರೆ ಅದನ್ನು ಪರಿಶೀಲಿಸಲಾಗಿಲ್ಲ.


ಓದಿ: ಜಮ್ಮುಕಾಶ್ಮೀರದ ಹೈಕೋರ್ಟ್‌ನಲ್ಲಿ 99% ಹೇಬಿಯಸ್ ಕಾರ್ಪಸ್ ಅರ್ಜಿಗಳು ಇನ್ನೂ ಬಾಕಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...