Homeಅಂಕಣಗಳುನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

ನೀವು ತಿಳಿದುಕೊಳ್ಳಲೇಬೇಕಾದ ಡಿಸ್‍ಫೋರಿಯಾ

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು, ಪ್ರಾಧ್ಯಾಪಕರು, ಅಶೋಕ ವಿಶ್ವವಿದ್ಯಾಲಯ, ಹರಿಯಾಣ
ಅನು: ರಾಜಶೇಖರ್ ಅಕ್ಕಿ

ಡಿಸ್‍ಫೋರಿಯಾ ಅಂದರೆ ಒಬ್ಬ ವ್ಯಕ್ತಿಗೆ ತನಗೆ ಹುಟ್ಟಿನಿಂದ ಆರೋಪಿಸಲಾದ ಜೆಂಡರ್‍ನೊಂದಿಗಿರುವ ಅಸಂತುಷ್ಟತೆ ಮತ್ತು ಬೇರ್ಪಡಿಕೆ. ಡಿಸ್‍ಫೋರಿಯಾ ಅನೇಕ ಸ್ವರೂಪಗಳನ್ನು ಪಡೆದುಕೊಳ್ಳಬಹುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಯ ಜೀವನಾನುಭವವನ್ನು ರೂಪಿಸುವುದೇ ಈ ಡಿಸ್‍ಫೋರಿಯಾ. ಆದರೆ ನಮ್ಮ ಸಮಾಜ ಆ ಅಸಂತುಷ್ಟತೆಯನ್ನು ಹೋಗಲಾಡಿಸುವಲ್ಲಿ ಸಹಾಯಕ ಪಾತ್ರ ವಹಿಸಲು ಸಾಧ್ಯ. ಆದರೆ ಅದರ ಬದಲಿಗೆ ಅವರ ಅಸಂತುಷ್ಟತೆಯನ್ನು ಉಲ್ಬಣಗೊಳಿಸುವುದೇ ಹೆಚ್ಚು. ಟ್ರಾನ್ಸ್‍ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸದೇ, ಅವರ ಜೀವನವನ್ನು ನರಕಯಾತನೆಯನ್ನಾಗಿಸಿದ್ದೇ ನಮ್ಮ ಸಮಾಜ ಅವರಿಗೆ ಪೂರಕವಾಗಿ, ಅವರ ಸಂತುಷ್ಟಿಗೆ ನೆಲೆ ಹೇಗೆ ಆಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಯೋಚಿಸಬೇಕಿದೆ. ಹಾಗಾದರೆ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಪೂರಕವಾಗಬಲ್ಲ ವಾತಾವರಣವನ್ನು ಸೃಷ್ಟಿಸಲು ನಾವೇನು ಮಾಡಬಹುದು?
ಪ್ರತಿಯೊಬ್ಬರೂ ಮಾಡಬಲ್ಲ ಒಂದು ಸರಳ ವಿಷಯವೇನೆಂದರೆ, ಆ ವ್ಯಕ್ತಿಗಳು ಯಾವ ಜೆಂಡರ್‍ನೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎಂದು ಕೇಳುವುದು ಹಾಗೂ ಅವರು ಗುರುತಿಸಿಕೊಳ್ಳುವ ಜೆಂಡರ್‍ಗೆ ಗೌರವ ನೀಡಿ ಅವರೊಂದಿಗೆ ವ್ಯವಹರಿಸುವುದು. ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿಗೆ ಪೂರಕವಾಗುವಂತಹ/ ಸ್ನೇಹಿಯಾಗುವಂತಹ ಜಗತ್ತನ್ನು ಸೃಷ್ಟಿಸಲು ಇಷ್ಟು ಮಾಡಿದರೂ ಸಾಕು.
ಒಬ್ಬ ಟ್ರಾನ್ಸ್ ವ್ಯಕ್ತಿ ಡಿಸ್‍ಫೋರಿಯಾದ ಭಾವನೆಯಿಂದ ಬಳಲುತ್ತಿರುವುದನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಸಂಭಾಷಣೆಗಳಲ್ಲಿ ಅವರನ್ನು ಉದ್ದೇಶಿಸುವುದಕ್ಕಿಂತ ಮುಂಚೆ ಒಬ್ಬ ವ್ಯಕ್ತಿಯ ದೇಹದ ಆಧಾರದ ಮೇಲೆ ಇರುವ ಸಾಮಾಜಿಕ ಅವಧಾರಣೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಕಡಿಮೆ ಮಾಡುವ ಒಂದು ಸಮಾಜವನ್ನು ಸೃಷ್ಟಿಸಬೇಕಿದೆ. ಅವರು ತಮ್ಮ ದೇಹದೊಂದಿಗೆ ಸಾಮರಸ್ಯ ಸ್ಥಾಪಿಸಲು ಯಾವುದೇ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.
ಇದನ್ನು ಎಲ್ಲರಿಗಿಂತ ಮೊದಲು ಮಾಡಬೇಕಾದವರು ಆ ವ್ಯಕ್ತಿಯ ಪೋಷಕರು. ಆದರೆ ಪೋಷಕರಿಗೆ ತಮ್ಮ ಮಗುವಿಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ಬಲವಾದ, ಸಮಸ್ಯಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಇದುವೆ ಹೆಚ್ಚಿನ ಟ್ರಾನ್ಸ್‍ಜೆಂಡರ್ ಮಕ್ಕಳು ಅನುಭವಿಸುವ ಮೊದಲ ನೋವು. ಮಕ್ಕಳು ತಮ್ಮ ಜೆಂಡರ್ ಅನ್ನು ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದರೂ ತಂದೆತಾಯಿಗಳು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಜೆಂಡರ್ ಬಗ್ಗೆಯ ಮಕ್ಕಳ ಭಾವನೆಗಳನ್ನು ಗೌರವಿಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೂ, ತಮ್ಮ ಮಗು ತನ್ನ ದೇಹ ಬೇರೆಯಾಗಿರಬೇಕಾಗಿತ್ತು ಎಂದು ಹೇಳಿದಾಗ ನಕ್ಕುಬಿಡುವ ಪೋಷಕರೇ ಹಚ್ಚು. ಇದಕ್ಕೆ ಕಾರಣ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳೆಂದರೆ ಏನು ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದು. ಆ ಕಾರಣಕ್ಕಾಗಿಯೇ ನಾನಿದನ್ನು ಬರೆಯುತ್ತಿದ್ದೇನೆ, ಇದನ್ನು ಓದಿ, ಒಬ್ಬ ಟ್ರಾನ್ಸ್‍ಜೆಂಡರ್ ಮಗುವನ್ನು ಬೆಳೆಸುವುದು ಹೇಗೆ, ಎನ್ನುವುದರ ಬಗ್ಗೆ ಪರಸ್ಪರ ಚರ್ಚಿಸಿ, ಟ್ರಾನ್ಸ್‍ಜೆಂಡರ್ ಮಕ್ಕಳಿಗೆ ಅನುಕೂಲವಾಗುವಂತಹ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲಿರಿ ಎನ್ನುವುದು ನನ್ನ ಅಪೇಕ್ಷೆ.
ಇಂಟರ್‍ಸೆಕ್ಸ್ ಆಗಿರುವುದು ಹಾಗೂ ಟ್ರಾನ್ಸ್‍ಜೆಂಡರ್ ಆಗಿರುವುದು, ಇವರೆಡರ ಮಧ್ಯೆ ಇರುವ ಸಾಮಾಜಿಕ ಗೊಂದಲದಿಂದಲೇ ಮೊಟ್ಟಮೊದಲ ಅರಿವಿನ ಕೊರತೆ ಬರುವುದು. ಒಂದು ವೇಳೆ ಮಗುವಿನ ದೇಹ ಗಂಡು ಅಥವಾ ಹೆಣ್ಣಿನಂತಿದ್ದು ಅದರಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೆ, ಆ ಮಗುವಿನ ಪೋಷಕರು ಮಗುವಿನ ಜೆಂಡರ್ ತಮಗೆ ಸ್ಪಷ್ಟವಾಗಿ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಆ ಮಗುವಿಗೆ ನೀಡಿದ ಜೆಂಡರ್‍ನೊಂದಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಹೇರುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ, ಅದೂ ತುಂಬಾ ಚಿಕ್ಕ ವಯಸ್ಸಿನಿಂದಲೇ. ಒಬ್ಬ ಮಗುವಿಗೆ ಆ ಜೆಂಡರ್‍ಗೆ ಸಂಬಂಧಿಸಿದ ಅತ್ಯಂತ ಸಂಕುಚಿತವಾದ ನಿರ್ಬಂಧನೆಗಳನ್ನು ಮೀರಿ ಹಲವಾರು ಆಸಕ್ತಿ ಮತ್ತು ವರ್ತನೆಗಳನ್ನು ಹೊಂದಿದ್ದರೆ, ಆ ಮಗುವಿನ ಮೇಲೆ ಹಾಕುವ ನಿರ್ಬಂಧನೆಗಳು ಮಾನಸಿಕ ಹಿಂಸೆಯ ಒಂದು ಸ್ವರೂಪವಾಗಿಬಿಡುತ್ತವೆ. ತಮ್ಮ ಸುತ್ತಮುತ್ತಲಿನ ಚಟುವಟಿಕೆಗಳಿಗಾಗಿ ಸಹಜವಾಗಿಯೇ ಮಕ್ಕಳು ಒಂದು ಸುಂದರವಾದ ಕುತೂಹಲ ಹೊಂದಿರುತ್ತಾರೆ ಆದರೆ ಪೋಷಕರು ಸಿನೆಮಾ ಹೀರೋಯಿನ್ ತರಹ ಡಾನ್ಸ್ ಮಾಡಲು ಇಚ್ಛಿಸುವ, ಮೇಕ್-ಅಪ್ ಜೊತೆಗೆ ಆಟವಾಡಲು ಇಚ್ಛಿಸುವ ಗಂಡುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಹೀಗೆ ಮಾಡುವುದರಿಂದ ಆ ಮಕ್ಕಳನ್ನು ಪೋಷಕರು ಕುಂಠಿತಗೊಳಿಸುತ್ತಾರೆ – ಆ ಮಕ್ಕಳು ಟ್ರಾನ್ಸ್‍ಜೆಂಡರ್ ಆಗದಿದ್ದರೂ ಅವರ ಮೇಲೆ ಪರಿಣಾಮ ಅದೇ ಆಗುವುದು.
ಹೆಚ್ಚಿನ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಕಥಾನಕಗಳು ಇದರ ಬಗ್ಗೆಯೇ ಆಗಿರುತ್ತವೆ; ಅವರು ಆಡಬಯಸುವ ಆಟಗಳು, ಅಂತಹ ಆಟವನ್ನಾಡಲು ಬಿಡದ ಪೋಷಕರು ಇತ್ಯಾದಿ. ಆದರೆ ಇದು ಟ್ರಾನ್ಸ್‍ಜೆಂಡರ್ ಆಗಿರುವುದರ ಸಾಮಾಜಿಕ ಆಯಾಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಡಿಸ್‍ಫೋರಿಯಾವನ್ನು ತಿಳಿದುಕೊಳ್ಳುವಾಗ ಅದಕ್ಕೆ ಸಾಮಾಜಿಕ ಮತ್ತು ದೈಹಿಕ ಅಂಶಗಳು ಎರಡೂ ಇರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ, ಹಾಗೂ ಈ ಎರಡೂ ಅಂಶಗಳು ಆ ವ್ಯಕ್ತಿಯ ಮಿದುಳಿನಿಂದ ಕಾರ್ಯನಿರ್ವಹಿಸಿ ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಸಮಾಜವು ಮಿದುಳಿನ ರಚನೆಯಲ್ಲಿ ಬದಲಾವಣೆ ತಂದು ವ್ಯಕ್ತಿಗಳ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.
ಕೆಲವು ಮಕ್ಕಳು ತಮಗೆ ನೀಡಿದ ಜೆಂಡರ್‍ನಿಂದ ಅಪೇಕ್ಷಿಸಲಾಗುವ ವರ್ತನೆಗಳಿಗಿಂತ ಭಿನ್ನವಾಗಿ ವರ್ತಿಸದೇ ಇರಬಹುದು. ಹಾಗಿದ್ದರೂ ತಮ್ಮ ದೇಹದೊಂದಿಗೆ ಆಳವಾದ ಅಸಹನೆ, ಅಸಂತುಷ್ಟಿಯನ್ನಿಟ್ಟುಕೊಂಡು ಬೆಳೆಯಬಹುದಾಗಿದೆ. ನಾವು ಮೊದಲು ಚರ್ಚಿಸಿದಂತೆ, ಜೆಂಡರ್‍ನ ವಿಷಯದಲ್ಲಿ ತಮ್ಮ ದೈಹಿಕ ಬೆಳವಣಿಗೆಗೆ ಅನುಗುಣವಾಗದೇ, ಬೇರೆ ರೀತಿಯಲ್ಲಿ ಮಿದುಳಿನ ಬೆಳವಣಿಗೆ ಆಗುವ ಮಕ್ಕಳನ್ನು ಟ್ರಾನ್ಸ್‍ಜೆಂಡರ್ ಅನ್ನಬಹುದು.
ಒಬ್ಬ ಟ್ರಾನ್ಸ್‍ಜೆಂಡರ್ ಮಗು ತನ್ನ ವಯಸ್ಕ ಜೀವನಕ್ಕೆ ಹೋಗುವಾಗ, ಯಾವ್ಯಾವ ಅನುಭವಗಳಿಂದ ಹಾದುಹೋಗಬೇಕಾಗುತ್ತದೆ ಎಂದು ತಿಳಿಯಲು ನಾವು ಈ ಡಿಸ್‍ಫೋರಿಯಾ ಅನ್ನು ಇನ್ನಷ್ಟೂ ಕೂಲಂಕಷವಾಗಿ ತಿಳಿದುಕೊಳ್ಳೋಣ. ಹರೆಯಕ್ಕೆ ಪ್ರವೇಶಿಸುವ ಸಮಯದಲ್ಲಂತೂ ಈ ಡಿಸ್‍ಫೋರಿಯಾ ಅತ್ಯಂತ ಕೆಟ್ಟಹಂತದಲ್ಲಿರುತ್ತದೆ. ಪ್ರೌಢಾವಸ್ಥೆ (ಪ್ಯೂಬರ್ಟಿ) ಹಂತಕ್ಕೆ ತಲುಪುವ ತನಕ ಭಾರತೀಯ ಸಂಸ್ಕøತಿಯಲ್ಲಿ ಹೆಚ್ಚಿನ ಮಕ್ಕಳನ್ನು ಒಂದೇ ತೆರನಾಗಿ ನೋಡಿಕೊಳ್ಳಲಾಗುತ್ತದೆ. ಹಾಗೂ ಸಾಮಾನ್ಯವಾಗಿ ಹಾಕಿಕೊಳ್ಳುವ ಬಟ್ಟೆಗಳನ್ನು ಧರಿಸಿದ ಮಕ್ಕಳಿಗೆ ಇತರ ಮಕ್ಕಳ ಜೆಂಡರ್‍ಗೆ ಇರುವ ವ್ಯತ್ಯಾಸವೂ ಕೆಲವೊಮ್ಮೆ ತಿಳಿಯುವುದಿಲ್ಲ. ಜನನಾಂಗವೊಂದನ್ನು ಬಿಟ್ಟರೆ ಚಿಕ್ಕಮಕ್ಕಳ ದೇಹದಲ್ಲಿ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ ಪ್ರೌಢಾವಸ್ಥೆಯ ಸಮಯದಲ್ಲಿ, ಅವರ ಮಿದುಳು ಅಪೇಕ್ಷಿಸದ ರೀತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ದೇಹಗಳು ಬದಲಾಗುತ್ತವೆ. ಇದೂ ಹೇಗೂ ತುಂಬಾ ಸಂಕಷ್ಟದ ಸಮಯವೇ ಆಗಿರುತ್ತದೆ. ಅದರೊಂದಿಗೆ, ಅಲ್ಲಿಯವರೆಗೆ ಯಾವ ಜೆಂಡರ್ ಜೊತೆಗೂ ಆಟವಾಡಬಹುದಾದ ಮಕ್ಕಳು ಮೀಸೆ ಅಥವಾ ಎದೆಯನ್ನು ಬೆಳೆಸಿ ಭಿನ್ನವಾಗಿ ಕಾಣಿಸತೊಡಗುತ್ತಾರೆ. ಇದರೊಂದಿಗೆ, ಸಮಾಜವೂ ಇದೇ ಸಮಯದಲ್ಲಿ ಇವರ ಜೀವನದಲ್ಲಿ ಪ್ರವೇಶಿಸಿ, ಮಕ್ಕಳ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನ ನಿರ್ಬಂಧನೆಗಳನ್ನು ಹಾಕತೊಡಗುತ್ತದೆ. ಪ್ರೌಢಾವಸ್ಥೆಯ ನಂತರ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಬೆರೆಯಬಾರದು ಇತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗುತ್ತದೆ ಹಾಗು ಇವೆಲ್ಲ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ಇನ್ನಷ್ಟು ನಿರ್ಬಂಧಿಸಿ ಅವರನ್ನು ತಾವು ಗುರುತಿಸಿಕೊಳ್ಳಲಾಗದ ಸಾಮಾಜಿಕ ಜೆಂಡರ್‍ನೊಂದಿಗೆ ಸೇರಿಸಲಾಗುತ್ತದೆ.
ಬಹುತೇಕ ಟ್ರಾನ್ಸ್‍ಜೆಂಡರ್ ಕಥಾನಕಗಳು ಅವರೆದುರಿಸುವ ಸಮಸ್ಯೆಯ ಸಾಮಾಜಿಕ ಆಯಾಮದ ಬಗ್ಗೆ ಹೇಳುತ್ತವೆ ಹಾಗೂ ತನ್ನ ದೇಹದೊಂದಿಗೆ ಇರುವ ಅಸಂತುಷ್ಟತೆಯ ದೈಹಿಕ ಆಯಾಮದ ಬಗ್ಗೆ ಹೇಳುವುದಿಲ್ಲ. ಅದಕ್ಕಿರುವ ಒಂದು ಕಾರಣವೆಂದರೆ, ಸಾಮಾಜಿಕ ಅಸಂತುಷ್ಟತೆ ಸುಲಭವಾಗಿ ಗೋಚರಿಸುತ್ತವೆ ಆದರೆ ದೈಹಿಕ ಅಂಶ ಯಾವಾಗಲೂ ಖಾಸಗಿಯಾಗಿರುತ್ತದೆ. ಹಾಗೂ ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ತಮ್ಮ ದೇಹದೊಂದಿಗೆ ಅತ್ಯಂತ ತೀವ್ರವಾದ ಮುಜುಗರವನ್ನು ಬೆಳೆಸಿಕೊಂಡಿರುತ್ತಾರೆ. ಅನೇಕ ಟ್ರಾನ್ಸ್‍ಜೆಂಡರ್ ಮಕ್ಕಳು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ. ಆದರೂ ಆ ಮಕ್ಕಳ ಪೋಷಕರಿಗೆ ಮಕ್ಕಳು ತಮ್ಮ ಭಾವನೆಗಳನ್ನು ಅವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂದು ಅರ್ಥವಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...