Homeಮುಖಪುಟರಾಮದಾಸ್‌ v/s ಪ್ರತಾಪ್‌ಸಿಂಹ ಒಳಜಗಳದಲ್ಲಿ ‘ಗುಂಬಜ್‌’ ವಿವಾದ ಹುಟ್ಟಿತೇ?

ರಾಮದಾಸ್‌ v/s ಪ್ರತಾಪ್‌ಸಿಂಹ ಒಳಜಗಳದಲ್ಲಿ ‘ಗುಂಬಜ್‌’ ವಿವಾದ ಹುಟ್ಟಿತೇ?

“ಮೈಸೂರಿನ ಬಿಜೆಪಿ ಮುಖಂಡರ ನಡುವಿನ ಒಳಸಮರ ಗುಂಬಜ್‌ ಮಾದರಿ ಬಸ್‌ ನಿಲ್ದಾಣದ ನೆಪದಲ್ಲಿ ಮತ್ತೆ ಸ್ಫೋಟಗೊಂಡಿದೆ”

- Advertisement -
- Advertisement -

ಮೈಸೂರು ನಗರದ ಊಟಿ‌ ರಸ್ತೆಯ‌ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವನ್ನು ಕೆಡವುತ್ತೇನೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಂಗಾಯಣದಲ್ಲಿ ಭಾನುವಾರ ನಡೆದ ‘ಟಿಪ್ಪು ನಿಜಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರತಾಪ್‌ ಸಿಂಹ, “ಗುತ್ತಿಗೆದಾರರೊಬ್ಬರು ಮಸೀದಿ ಗುಂಬಜ್‌ ಹೋಲುವ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಇದನ್ನು ಬದಲಿಸಲು 3 ದಿನಗಳ ಗಡುವು ನೀಡಿದ್ದೇನೆ. ಬದಲಿಸದಿದ್ದರೆ, ಜೆಸಿಬಿ ತರಿಸಿ ಕೆಡವಿಸುತ್ತೇನೆ” ಎಂದಿದ್ದರು.

“ತದನಂತರ ರಾತ್ರೋರಾತ್ರಿ ಗುಮ್ಮಟದ ವಿನ್ಯಾಸದ ಮೇಲೆ ಕಳಶಗಳನ್ನು ಜೋಡಿಸಿ, ಹಿಂದೂ ಧಾರ್ಮಿಕತೆ ಪ್ರದರ್ಶಿಸಲಾಗಿದೆ. ತಂಗುದಾಣದ ಒಳಗೆ ಅರಮನೆ ಚಿತ್ರ, ಶಾಸಕ ಎಸ್‌.ಎ.ರಾಮದಾಸ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಫೋಟೋಗಳನ್ನು ಹಾಕಲಾಗಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಗುಂಬಜ್‌ ಮಾದರಿಯ ಕಟ್ಟಡವಲ್ಲ, ಅರಮನೆ ಶೈಲಿಯ ಕಟ್ಟಡ” ಎಂಬ ಸಮರ್ಥನೆಗಳನ್ನು ರಾಮದಾಸ್ ಬೆಂಬಲಿಗರು ನೀಡುತ್ತಿದ್ದಾರೆ. “ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ನಿರ್ಮಿಸಿರುವುದು ಅರಮನೆಯ ಮಾದರಿಯ ಗೋಪುರವೇ ಹೊರತು, ಗುಂಬಜ್ ಅಲ್ಲ‌. ಶಾಸಕರೇ ಮುತುವರ್ಜಿ ವಹಿಸಿ ಈ ಮಾದರಿ ನಿರ್ಮಾಣಕ್ಕೆ ಕ್ರಮ ವಹಿಸಿದ್ದಾರೆ” ಎಂದು ಬಸ್‌ ನಿಲ್ದಾಣ ನಿರ್ಮಿಸಿದ ಕೆಆರ್‌ಡಿಎಲ್‌ ಎಂಜಿನಿಯರ್ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

“ಶಾಸಕರ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೂಲ ವಿನ್ಯಾಸದಲ್ಲಿ ಚಾವಣಿಯ ಮೇಲೆ ಯಾವುದೇ ಆಕೃತಿ ರಚಿಸುವ ಯೋಜನೆ ಇರಲಿಲ್ಲ. ಶಾಸಕರು ಪರಿಚಿತ ಗುತ್ತಿಗೆದಾರರಿಂದ ಅರಮನೆಯಂತೆ ಗೋಪುರ ನಿರ್ಮಿಸಿದ್ದಾರೆ. ಇದಕ್ಕೂ‌ ನಮಗೂ ಸಂಬಂಧವಿಲ್ಲ” ಎಂದಿದ್ದಾರೆ.

ಅಕ್ಟೋಬರ್‌ನಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೆ ಈ ವಿವಾದದ ಸುತ್ತ ಬೇರೆಯೇ ರಾಜಕೀಯ ಕೆಲಸ ಮಾಡುತ್ತಿದೆ. ಮೈಸೂರು ಭಾಗದ ಬಿಜೆಪಿಯೊಳಗಿನ ನಾಯಕತ್ವ ಸಮರವೇ ಈ ವಿವಾದದ ಕೇಂದ್ರಬಿಂದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

“ಈ ಪ್ರಕರಣವನ್ನು ಮೇಲುನೋಟಕ್ಕೆ ನೋಡಿದರೆ- ಹಿಂದೂ ಮುಸ್ಲಿಂ ಕೇಂದ್ರಿತ ರಾಜಕಾರಣವಾಗಿ ಕಾಣುತ್ತದೆ. ಅದಕ್ಕಿಂತ ಮುಖ್ಯವಾಗಿ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮದಾಸ್‌ ಮತ್ತು ಸಂಸದ ಪ್ರತಾಪಸಿಂಹ ನಡುವಿನ ಜಟಾಪಟಿಯೇ ಈ ವಿವಾದಕ್ಕೆ ಕಾರಣ” ಎನ್ನುತ್ತಾರೆ ಸ್ಥಳೀಯರು.

ಈ ಇಬ್ಬರ ನಡುವೆ ಮೈಸೂರು ಭಾಗದಲ್ಲಿ ಆಗಾಗ್ಗೆ ವೈಮಸ್ಸುಗಳು ತಲೆದೋರಿವೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ, ಈ ಭಾಗದಲ್ಲಿ ಬಿಜೆಪಿಯೊಳಗೆ ನಿರಂತರ ಸಮರ ನಡೆಯುತ್ತಿದೆ.

ಪ್ರತಾಪ್‌ಸಿಂಹ ಹಾಗೂ ರಾಮದಾಸ್ ನಡುವಿನ ಜಟಾಪಟಿ ಇತಿಹಾಸವು ಸುಯೇಜ್ ಫಾರಂ ವಿವಾದದಲ್ಲಿ ಸ್ಫೋಟಗೊಳ್ಳುತ್ತದೆ. ಎರಡು ವರ್ಷಗಳ ಹಿಂದೆ ಸೂಯೇಜ್‌ ಫಾರಂ ವಿಚಾರಕ್ಕೆ ಪ್ರತಾಪ್ ಸಿಂಹ ಕೈಹಾಕಿದ್ದಕ್ಕೆ ರಾಮದಾಸ್ ಸಿಡಿಮಿಡಿಗೊಂಡಿದ್ದರು. ತನ್ನ ಕ್ಷೇತ್ರದ ವಿಚಾರದಲ್ಲಿ ಸಂಸದರು ತಲೆಹಾಕುತ್ತಿರುವುದು ಶಾಸಕರಿಗೆ ಇರಸುಮುರುಸು ಉಂಟು ಮಾಡಿತು.

ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಅಧ್ಯಕ್ಷತೆಯಲ್ಲಿ 2020ರ ಮೇನಲ್ಲಿ ನಡೆದಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಸಂಸದ ಮತ್ತು ಶಾಸಕರ ನಡುವಿನ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವ ಎಸ್.ಟಿ.ಸೋಮಶೇಖರ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು.

“ಸುಯೇಜ್‌ ಫಾರಂ ಕಸ ವಿಲೇವಾರಿ ಸಂಬಂಧ ವರ್ಕ್ ಆರ್ಡರ್‌ ನೀಡಲಾಗಿದೆ” ಎಂದು ಪ್ರತಾಪ ಸಿಂಹ ಹೇಳಿದರೆ, “ಈ ಬಗ್ಗೆ ತಮಗೇನೂ ಮಾಹಿತಿಯೇ ಇಲ್ಲ” ಎಂದು ರಾಮದಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

“ಈ ಯೋಜನೆ ನನ್ನ ಗಮನಕ್ಕೂ ಬಂದಿಲ್ಲ. ಆದರೂ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ. ಕತ್ತಲಿನಲ್ಲಿ ಕೆಲಸ ಮಾಡುವಂತೆ ಮಾಡಿದ್ದಾರೆ. ನಾಗ್ಪುರ ಮಾದರಿಯಲ್ಲಿಯೇ ಕಸ ವಿಂಗಡಣೆ ಮಾಡಿ. ಆದರೆ ಸುಯೇಜ್ ಫಾರಂನಲ್ಲಿ ಮಾಡುವುದಕ್ಕಿಂತ ರಾಯನಕೆರೆಯಲ್ಲಿ ನಿಗದಿಪಡಿಸಿರುವ 110 ಎಕರೆ ಪ್ರದೇಶದಲ್ಲಿ ಮಾಡಬೇಕು” ಎಂದು ಆಗ್ರಹಿಸಿದ್ದರು.

“ಸುಯೇಜ್ ಫಾರಂನಲ್ಲಿ 5 ಘಟಕಗಳನ್ನು ಸ್ಥಾಪಿಸಿ, 15 ಯಂತ್ರಗಳಿಂದ ಗೊಬ್ಬರ ತಯಾರಿಕೆ ಯೋಜನೆ ಮಾಡುವುದಕ್ಕೆ ನನ್ನ ವಿರೋಧವಿದೆ. ಇದಕ್ಕೆ ರೂಪುರೇಷೆಗಳನ್ನು ರಚಿಸಿ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. 25 ವರ್ಷದಿಂದ ಇಲ್ಲಿನ ಸಾರ್ವಜನಿಕರು ಅನಾರೋಗ್ಯಕ್ಕೊಳಗಾಗಿದ್ದಾರೆ. ಇದನ್ನು ಮೊದಲು ಕೊನೆಗಾಣಿಸಿ. ಸಂಸದ ಪ್ರತಾಪ್ ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷ, ಭಿನ್ನಾಭಿಪ್ರಾಯ ಇಲ್ಲ. ಅವರು ರಾಷ್ಟ್ರೀಯ ನಾಯಕರು. ನಾನು ಸ್ಥಳೀಯ ಕಾರ್ಯಕರ್ತ. 25 ವರ್ಷದಿಂದ ಮೈಸೂರು ಜಿಲ್ಲೆಯಲ್ಲಿ ಯಾವುದೇ ಉಸ್ತುವಾರಿ ಸಚಿವರು ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ದೂರದೃಷ್ಟಿತ್ವದ ಬಗ್ಗೆ ನಾನು ಹೇಳುತ್ತಿದ್ದೇನೆ ಅಷ್ಟೇ” ಎಂದು ರಾಮದಾಸ್ ತಿರುಗೇಟು ನೀಡಿದ್ದರು.

ramdas tweet

ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಪೈಪೋಟಿ ಮತ್ತೆ ಮುನ್ನೆಲೆಗೆ ಬಂದಿತು. ನಗರದಲ್ಲಿ ರಸ್ತೆಗಳನ್ನು ಅಗೆದು ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕುವ ಯೋಜನೆಯನ್ನು ರಾಮದಾಸ್‌ ಕೆಲವು ತಿಂಗಳ ಹಿಂದಷ್ಟೇ ವಿರೋಧಿಸಿದ್ದರು. ಇದಕ್ಕೆ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್‌.ನಾಗೇಂದ್ರ ಅವರೂ ರಾಮದಾಸ್‌ ನಿಲುವನ್ನು ಬೆಂಬಲಿಸಿದ್ದರು.

ರಸ್ತೆಯನ್ನು ಅಗೆಯುವ ಯೋಜನೆಯನ್ನು ಬೆಂಬಲಿಸಬಾರದು ಎಂದು ಮೈಸೂರು ಪಾಲಿಕೆಗೆ ರಾಮದಾಸ್ ಕೋರಿದ್ದರು. ಅದಕ್ಕೆ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿ, “ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿದೆ” ಎಂದಿದ್ದರು. ಈ ಭಿನ್ನಮತವು ಯೋಗ ದಿನಾಚರಣೆಯ ಹೊಸ್ತಿಲಲ್ಲೂ ತಲೆದೋರಿತ್ತು.

ಪ್ರಧಾನಿ ಮೋದಿಯವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರಲಿದ್ದರು. ಇದರಲ್ಲಿ ಮೈಲೇಜ್‌ ಪಡೆಯುವುದಕ್ಕಾಗಿ ಸಂಸದರು, ಶಾಸಕರು ಪ್ರಯತ್ನಿಸಿದ್ದರು. ಎಷ್ಟು ಜನರನ್ನು ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ ಎಂಬ ವಿಚಾರವಾಗಿಯೂ ಮಾಧ್ಯಮಗಳೆದುರು ಈ ಇಬ್ಬರು ಬಿಜೆಪಿಗರು ಕಿತಾಪತಿ ಮಾಡಿಕೊಂಡಿದ್ದರು.

ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಪ್ರತಾಪ್‌ ಸಿಂಹ, “ಮೈಸೂರು ಅರಮನೆ ಮೈದಾನದಲ್ಲಿ ಒಬ್ಬರು ಯೋಗ ಮಾಡಬೇಕಾದರೆ 6*6 ಜಾಗಬೇಕಾಗುತ್ತದೆ. ಅದರನ್ವಯ ಅರಮನೆ ಮೈದಾನದಲ್ಲಿ ಏಳರಿಂದ ಎಂಟು ಸಾವಿರ ಜನ ಸೇರಬಹುದು” ಎಂದು ಹೇಳಿದ್ದರು. ಸಂಸದರು ಮಾತನಾಡುತ್ತಿರುವಾಗಲೇ ರಾಮದಾಸ್‌ ಮಾತಿಗೆ ಮುಂದಾಗಿ, “ಹದಿನೈದು ಸಾವಿರ ಜನ ಈಗಾಗಲೇ ಆರ್ಡರ್‌ ಮಾಡಿದ್ದಾರೆ” ಎಂದಿದ್ದರು. ಅದಕ್ಕೆ ಪ್ರತಾಪ್‌, “ನಾನು ಮಾತನಾಡುತ್ತಿದ್ದೇನೆ. ರಾಮದಾಸ್ ಅವರು ಸಮಾಧಾನದಿಂದ ಇರಬೇಕು” ಎಂದಿದ್ದು ವಿಡಿಯೊದಲ್ಲಿ ರೆಕಾರ್ಡ್ ಆಗಿತ್ತು. ನಂತರ ಪ್ರತಿಕ್ರಿಯಿಸಿದ್ದ ರಾಮದಾಸ್‌, “ಸಂಸದರಿಗೆ ಮಾಹಿತಿ ಇರಲಿಲ್ಲ. ಅದಕ್ಕಾಗಿ ಮಾತನಾಡಿದೆ. ಈಗಾಗಲೇ ನಮಗೆ ಕ್ಲಿಯರೆನ್ಸ್ ಮಾಡಿಕೊಟ್ಟಿರುವುದು ಸಂಸದರಿಗೆ ಗೊತ್ತಿರಲಿಲ್ಲ. ನಿಮಗೆ ಗೊಂದಲವಾಗಬಾರದು ಎಂದು ಮಾತಿನ ಮಧ್ಯೆ ಸ್ಪಷ್ಟನೆ ನೀಡಿದೆ” ಎಂದು ಸಮರ್ಥಿಸಿದ್ದರು.

ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ‘ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ಈಗ ‘ಗುಂಬಜ್‌’ ವಿವಾದ…

ರಾಮದಾಸ್ ಕ್ಷೇತ್ರದಲ್ಲಿನ ಬಸ್ ನಿಲ್ದಾಣದ ಕುರಿತು ಪ್ರತಾಪ್ ಸಿಂಹ ಬೇಕಂತಲೇ ಕಿತಾಪತಿ ಮಾಡಿದ್ದಾರೆಂದು ಸ್ಥಳೀಯ ಮೂಲಗಳು ಹೇಳುತ್ತವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸ್ಥಳೀಯ ಪತ್ರಕರ್ತರೊಬ್ಬರು, “ಮೈಸೂರನ್ನು ಯಾರು ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಪೈಪೋಟಿಯ ಭಾಗವೇ ಈ ಗುಂಬಜ್‌ ವಿವಾದ. ಕಾಮಗಾರಿ ಮುಗಿಯುವ ಹಂತದಲ್ಲಿದೆ. ಅಷ್ಟರಲ್ಲಿಯೇ ಈ ಜಟಾಪಟಿ ನಡೆಸಿದ್ದಾರೆ. ಕಾಮಗಾರಿ ಮಾಡುತ್ತಿರುವುದು ಸರ್ಕಾರಿ ಹಣದಲ್ಲಿ, ರೂಪುರೇಷೆ ಮಾಡಿದ್ದು ಬಿಜೆಪಿ ಎಂಎಲ್‌ಎ ರಾಮದಾಸ್. ಅವರದ್ದೇ ಸರ್ಕಾರದ ಶಾಸಕರು ಕಟ್ಟಿಸಿದ್ದನ್ನು ಒಡೆದು ಹಾಕುವುದಾಗಿ ಪ್ರತಾಪ್‌ ಹೇಳುತ್ತಿದ್ದಾರೆ” ಎಂದು ವಿವರಿಸಿದರು.

“ಮೈಸೂರು ಅರಮನೆ ಮೇಲೆ ಗೊಮ್ಮಟಗಳಿವೆ. ಕಾರಂಜಿ ಮಹಲ್‌, ಜಗನ್ಮೋಹನ ಪಾಲೇಸ್‌, ಲಲಿತ ಮಹಲ್‌, ಮೈಸೂರು ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಗುಂಬಜ್‌ಗಳಿವೆ. ಆ ಎಲ್ಲವೂ ಮಸೀದಿ ರೀತಿ ಕಾಣುವುದಾದರೆ, ಪ್ರತಾಪ್‌ಸಿಂಹ ಅಲ್ಲಿಗೆ ಕಾಲಿಡುವುದಿಲ್ಲವೇ? ಅವುಗಳನ್ನು ಒಡೆದು ಹಾಕುತ್ತಾರೆಯೇ?” ಎಂದು ಮುಖಂಡರೊಬ್ಬರು ಪ್ರಶ್ನಿಸಿದರು.

“ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್ ತಪ್ಪಿಸಬೇಕೆಂದು ರಾಮದಾಸ್‌ ಪ್ರಯತ್ನಪಡುತ್ತಿದ್ದರೆ, ರಾಮದಾಸ್‌ಗೆ ಟಿಕೆಟ್ ತಪ್ಪಿಸಬೇಕೆಂದು ಪ್ರತಾಪ್‌ಸಿಂಹ ಯತ್ನಿಸುತ್ತಿದ್ದಾರೆ” ಎಂದು ಸ್ಥಳೀಯ ಪತ್ರಕರ್ತರು ಮಾತಾಡಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಾರೋ ಫಿಟ್ಟಿಂಗ್ ಇಟ್ಟಿರ್ಬೇಕು, ಕೋಮುಗಲಭೆ ಸ್ಟಾರ್ಟ್ ಆಗ್ಲಿ ಅಂತ ಆದರೆ ಇವರಿಗೆ ಸ್ವಂತಿಕೆ ಬುದ್ಧಿಯೇ ಇಲ್ಲ ಎಂಬಂತೆ ಕಾಣುತ್ತಿದೆ ಆದರೆ ಈ ಕೊಳಕು ಕೋಮುವಾದ ಇಷ್ಟೊಂದು ರೀತಿಯಲ್ಲಿ ಕಿಚ್ಚು ಮನಸ್ಸಿಂದ ಕಕ್ಕಬಾರದು ರಾಜಕೀಯದವರಿಗೆ ಯಾವಾಗಲೂ ಪ್ರಾಮಾಣಿಕತೆ ಸಹನೆ ಸಹಬಾಳುವೆ ಪ್ರೀತಿ ಮನೋಭಾವ ಇರಬೇಕು ……ಸ್ಥಳದಲ್ಲಿ ಜಡ್ಜ್ಮೆಂಟ್ ಕೊಡುವಂತಹ ನಾಯ ಕತ್ವ ಇರಬೇಕು

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...