ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ತಮಗೆ ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆಯ ಮೇಲೆ ದರ್ಪ ತೊರಿದ್ದಲ್ಲದೆ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತನ್ನ ನಡೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾದ ನಂತರ ಅದರ ಖಾಸಗಿ ಚಾನೆಲ್ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಮಹಿಳೆಯನ್ನು ನಾನು ರೇಪ್ ಮಾಡಿದ್ದೇನೆಯೆ?” ಎಂದು ಪ್ರಶ್ನಿಸಿ ಮತ್ತೆ ತನ್ನ ನಾಲಗೆ ಹರಿಬಿಟ್ಟಿದ್ದಾರೆ.
ಮಹಿಳೆಯೊಂದಿಗೆ ಲಿಂಬಾವಳಿ ಅವರು ಕಿರುಚಾಡಿ, ಮಹಿಳೆ ಎಂಬುವುದನ್ನು ನೋಡದೆ ಕೆಟ್ಟದಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿತ್ತು. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ದೇಶದಾದ್ಯಂತ ಅಕ್ರೋಶವೂ ವ್ಯಕ್ತವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆಯ ನಂತರ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡುವ ವೇಳೆ ಲಿಂಬಾವಳಿ ಅವರು ಮತ್ತೆ ತನ್ನ ನಾಲಗೆಯನ್ನು ಹರಿ ಬಿಟ್ಟಿದ್ದಾರೆ. ಚಾನೆಲ್‌ನ ಪತ್ರಕರ್ತನೊಂದಿಗೆ ಮಾಡನಾಡುತ್ತಾ,“ಜನರ ಪರ ಮಾತನಾಡ್ರಿ, ಅವರು ಒತ್ತುವರಿ ಮಾಡಿದ್ದಾರೆ. ಅದನ್ನು ಬಿಟ್ಟು ಮಹಿಳೆಗೆ ಹಾಗೆ ಮಾಡಿದ್ದೀರಿ ಅಂತಿದ್ದೀರಿ. ಏನು ಮಾಡಿದ್ದೇನೆ ನಾನು, ರೇಪ್ ಮಾಡಿದ್ದೀನಾ ಅವಳಿಗೆ? ಏನ್ರಿ ಮಾತನಾಡುತ್ತಿದ್ದೀರಾ ನೀವು? ಮಹಿಳೆ ಪರವಾಗಿ ಮಾತನಾಡಲು ಕರೆಸಿದ್ದೇನಾ?” ಎಂದು ಕೇಳಿದ್ದಾರೆ.
ಇದನ್ನೂ ಓದಿ: ಅಹವಾಲು ಸಲ್ಲಿಸಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
ಮಾಜಿ ಸಚಿವ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತಷ್ಟು ಆಕ್ರೋಶ ಉಂಟಾಗಿದೆ. ರಾಜ್ಯ ಕಾಂಗ್ರೆಸ್, “ಮಾಧ್ಯಮಗಳು ಮಹಿಳೆಯರ ಘನತೆಯ ಪರ ಮಾತಾಡಬಾರದೇ? ಮಹಿಳೆಯರು ತಮ್ಮ ಅಹವಾಲು ಹೇಳಬಾರದೇ? ಮಹಿಳೆಯರ ಮೇಲಷ್ಟೇ ಅಲ್ಲ, ಮಾಧ್ಯಮಗಳ ಮೇಲೂ ದಬ್ಬಾಳಿಕೆ ನಡೆಸಿದ್ದಾರೆ ಅರವಿಂದ್ ಲಿಂಬಾವಳಿ. ಇಂತಹ ದರ್ಪ ದೌರ್ಜನ್ಯಕ್ಕೆ, ಕೀಳು ವರ್ತನೆಗೆ ರಾಜ್ಯದ ಜನರು ಪಾಠ ಕಲಿಸುವುದು ನಿಶ್ಚಿತ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಈ ವರ್ತನೆಗೆ, ಕೀಳು ಮಾತಿಗೆ ನಿಮ್ಮ ಬೆಂಬಲವಿದೆಯೇ?” ಎಂದು ಪ್ರಶ್ನಿಸಿದೆ.
ಮಾಧ್ಯಮಗಳು ಮಹಿಳೆಯರ ಘನತೆಯ ಪರ ಮಾತಾಡಬಾರದೇ?
ಮಹಿಳೆಯರು ತಮ್ಮ ಅಹವಾಲು ಹೇಳಬಾರದೇ?ಮಹಿಳೆಯರ ಮೇಲಷ್ಟೇ ಅಲ್ಲ, ಮಾಧ್ಯಮಗಳ ಮೇಲೂ ದಬ್ಬಾಳಿಕೆ ನಡೆಸಿದ್ದಾರೆ ಅರವಿಂದ್ ಲಿಂಬಾವಳಿ.
ಇಂತಹ ದರ್ಪ ದೌರ್ಜನ್ಯಕ್ಕೆ, ಕೀಳು ವರ್ತನೆಗೆ ರಾಜ್ಯದ ಜನರು ಪಾಠ ಕಲಿಸುವುದು ನಿಶ್ಚಿತ.@BSBommai ಅವರೇ, ಈ ವರ್ತನೆಗೆ, ಕೀಳು ಮಾತಿಗೆ ನಿಮ್ಮ ಬೆಂಬಲವಿದೆಯೇ? pic.twitter.com/zZCPHSpD5V
— Karnataka Congress (@INCKarnataka) September 3, 2022
ಕಾಂಗ್ರೆಸ್ ನಾಯಕಿ ರಾಧಾ ಅವಿನಾಶ್ ಅವರು,‘‘ಮಿಸ್ಟರ್ ಲಿಂಬಾವಳಿಯವರೇ ಮಹಿಳೆಯರಿಗೆ ಗೌರವ ಕೊಡೋ ಸಂಸ್ಕೃತಿ ಕಳಿಸಿಲ್ಲವ ನಿಮ್ಮ ಬಿಜೆಪಿ. ಇದೇನಾ ನಿಮ್ಮ ಹಿಂದುತ್ವ?” ಎಂದು ಪ್ರಶ್ನಿಸಿದ್ದಾರೆ.
ಮಿಸ್ಟರ್ ಲಿಂಬಾವಳಿ ಯವರೇ ಮಹಿಳೆಯರಿಗೆ ಗೌರವ ಕೊಡೋ ಸಂಸ್ಕೃತಿ ಕಳಿಸಿಲ್ಲವ ನಿಮ್ಮ @BJP4Karnataka ಇದೇನಾ ನಿಮ್ಮ ಹಿಂದುತ್ವ? @ArvindLBJP @siddaramaiah @Dr_Yathindra_S pic.twitter.com/ek1lugSmhO
— Radha Avinash (@RadhaAvinash1) September 3, 2022
ಇದನ್ನೂ ಓದಿ: ‘ಮಹಿಳೆಯ ವಿರುದ್ಧ ಕೂಗಾಡದೆ ಆರತಿ ಎತ್ತಬೇಕಿತ್ತೆ?’: BJP ಶಾಸಕ ಲಿಂಬಾವಳಿ ನಡೆ ಸಮರ್ಥಿಸಿಕೊಂಡ ವೈಟ್‌ಫೀಲ್ಡ್ ಎಸಿಪಿ!
ಅರ್ಜಿಯೊಂದನ್ನು ತಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಪ್ರಯತ್ನಿಸಿದ ಮಹಿಳೆಯಿಂದ ಮಹದೇವಪುರ ಬಿಜೆಪಿ ಶಾಸಕರೂ ಆಗಿರುವ ಲಿಂಬಾವಳಿ ಅವರು ಅರ್ಜಿಯನ್ನು ಕಿತ್ತುಕೊಂಡಿದ್ದಾರೆ. ಮಹಿಳೆಯ ವಿರುದ್ಧ ಆಕ್ರೋಶದಿಂದ ಕಿರುಚಿದ್ದಾರೆ. ನಂತರ ಮಹಿಳೆಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಶಾಸಕರ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ವರ್ತೂರು ಕೆರೆಯ ಕೋಡಿ ಬಿದ್ದು ನೆರೆ ಉಂಟಾಗಿತ್ತು. ಹೀಗಾಗಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಅರವಿಂದ್ ಲಿಂಬಾವಳಿ ಭೇಟಿ ನೀಡಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅರವಿಂದ್ ಲಿಂಬಾವಳಿ ಮುಂದೆ ಅರ್ಜಿ ಹಿಡಿದುಕೊಂಡು ಬರುವ ಮಹಿಳೆ, ತನ್ನ ಮಾತನನ್ನು ಕೇಳುವಂತೆ ವಿನಂತಿಸುತ್ತಾರೆ. ಆದರೆ ಶಾಸಕ ಅದನ್ನು ಹೇಳದೆ ಅರ್ಜಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ರೆ ಮಹಿಳೆ ಪತ್ರ ನೀಡದೇ ತಮ್ಮ ಮಾತು ಕೇಳಿ ಎಂದು ಒತ್ತಾಯಿಸಿದಾಗ ಶಾಸಕ ಕೋಪಗೊಂಡು, “ಏ ಇವರನ್ನು ಕರ್ಕೊಂಡು ಹೋಗಿ. ಪೊಲೀಸ್ ಠಾಣೆಯಲ್ಲಿ ಕೂರಿಸಿ” ಎಂದು ಕೂಗಿ ಹೇಳುತ್ತಾರೆ.
ಇದನ್ನೂ ಓದಿ: 2019ರ ಕೊಲ್ಕತ್ತಾ ರ್‍ಯಾಲಿ ವಿಡಿಯೊವನ್ನು ಮಂಗಳೂರಿನ ಕಾರ್ಯಕ್ರಮದೆಂದು ಬಿಂಬಿಸಿದ ಬಿಜೆಪಿ ನಾಯಕರು!
ತುಸು ಮುಂದೆ ಹೋಗಿ ಮತ್ತೆ ವಾಪಾಸು ಬಂದು ಮಹಿಳೆಯ ಕೈಯಲ್ಲಿದ್ದ ಅರ್ಜಿಯನ್ನು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಒತ್ತುವರಿ ಮಾಡ್ಕೊಂಡು ಬರ್ತಿರಾ, ನಾಚಿಕೆ ಆಗುವುದಿಲ್ಲವೆ ಎಂದು ಪ್ರಶ್ನಿಸುತ್ತಾರೆ. “ಏಯ್ ಸುಮ್ನಿರು, ಇಲ್ಲವೆಂದರೆ ಬೇರೆ ಭಾಷೆ ಬರುತ್ತೆ. ಏನ್ ಮಾತನಾಡಬೇಕು, ಸುಮ್ನೆ ಬಿಡಲ್ಲ ನಿನ್ನ. ನ್ಯಾಯ ಕೇಳಲು ಬಂದಿದ್ದೀನಿ ಅಂತ ಹೇಳಲು ನಾಚಿಕೆ ಆಗಲ್ವಾ ನಿನಗೆ?” ಎಂದು ಮಹಿಳೆಯೊಂದಿಗೆ ಏಕವಚನದಲ್ಲೇ ಮಾತನಾಡುತ್ತಾರೆ.
ಈ ವೇಳೆ ಮಹಿಳೆ ಕೂಡಾ ಶಾಸಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಬಳಿ ದಾಖಲೆಗಳಿದ್ದು, ನಾನು ನಮ್ಮ ಶಾಸಕರ ಬಳಿಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. “ಮಹಿಳೆ ಜೊತೆಗೆ ಹೇಗೆ ಮಾತನಾಡುತ್ತಾರೆ, ಮಾನ ಮರ್ಯಾದೆ ಇಲ್ಲವೆ. ನಾನು ನ್ಯಾಯ ಕೇಳಲು ಬಂದಿದ್ದು, ಒಬ್ಬ ಮಹಿಳೆ ಅನ್ನೋದನ್ನು ಕೂಡಾ ನೋಡದೆ ಈ ರೀತಿ ಮಾತನಾಡಿದರೆ ಹೇಗೆ” ಎಂದು ಹೇಳಿದ್ದಾರೆ.
ಇದರ ನಂತರ ಮಹಿಳಾ ಪೊಲೀಸರೊಬ್ಬರು ಬಂದು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ನಂತರ ಪೊಲೀಸರು ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಾರ್ಖಂಡ್: ವಿಮಾನ ನಿಲ್ದಾಣದಲ್ಲಿ ಅತಿಕ್ರಮ ಪ್ರವೇಶ, ಬಲವಂತವಾಗಿ ವಿಮಾನ ಹಾರಿಸಿದ್ದ ಬಿಜೆಪಿ ಸಂಸದನ ವಿರುದ್ಧ ದೂರು
ಕೂಗಾಡದೆ ಆರತಿ ಎತ್ತಬೇಕಿತ್ತೆ?: ಶಾಸಕನ ನಡೆ ಸಮರ್ಥಿಸಿಕೊಂಡ ವೈಟ್‌ಫೀಲ್ಡ್ ಎಸಿಪಿ
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ವೈಟ್‌ಫೀಲ್ಡ್ ಎಸಿಪಿ, “ಮಹಿಳೆಯ ಮೇಲೆ ಎಫ್‌ಐಆರ್ ಆಗಿರುವುದು ನಿಜ. ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಾಂಪೋಂಡ್ ಕಟ್ಟಿದ್ದರಿಂದ ನೀರು ಸರಾಗವಾಗಿ ಹರಿಯದೆ 300 ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತ ಜನರು ಊಟ ತಿಂಡಿಗಾಗಿ ಒದ್ದಾಡ್ತಾ ಇದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ದೂರು ಕೊಟ್ಟಿದ್ದರಿಂದ ಎಫ್‌ಐಆರ್ ದಾಖಲಾಗಿದೆ” ಎಂದು ಹೇಳಿದ್ದಾರೆ.
ಶಾಸಕನ ಜೊತೆಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಎಫ್‌ಐಆರ್ ಆಗಿದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸಿಪಿ,“ಬಿಬಿಎಂಪಿ ಕಂದಾಯ ಅಧಿಕಾರಿಗಳ ದೂರಿನ ಆಧಾರದಲ್ಲಿ ಎಫ್‌ಐಆರ್ ಆಗಿದೆ. ಶಾಸಕರು ಮಾತನಾಡಿರುವುದು ಸಾರ್ವಜನಿಕರ ಪರವಾಗಿ, ಆದರೆ ಅದನ್ನು ಯಾರೂ ಹೇಳುತ್ತಿಲ್ಲ” ಎಂದು ಹೇಳಿದ್ದಾರೆ.
“ಶಾಸಕರು ಕೂಗಾಡದೆ ಏನ್ ಮಾಡಬೇಕಿತ್ತು? ಆರತಿ ಎತ್ತಬೇಕಿತ್ತೆ ಅವರಿಗೆ? ಈ ಮಹಿಳೆ ರಾಜಕಾಲುವೆ ಮೇಲೆ ಕಾಂಪೋಂಡ್ ಹಾಕಿದ್ದರಿಂದ, ಮುನ್ನೂರು ಮನೆಗಳಿಗೆ ಊಟ-ತಿಂಡಿ ಇಲ್ಲದೆ ಒದ್ದಾಡ್ತಾ ಇದ್ದಾರೆ. ಅವರ ವಸ್ತುಗಳೆಲ್ಲವೂ ನೆನೆದು ಹೋಗಿವೆ. ಅಲ್ಲಿ ಆಗಿರುವುದನ್ನು ಬಂದು ನೋಡಿ, ನಂತರ ಮಾತನಾಡಿ. ಬರಿ ಶಾಸಕರು ಕೂಗಾಡಿರುವುದನ್ನು ಹೇಳುವುದಲ್ಲ” ಎಂದು ಎಸಿಪಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಗೆಲುವಿಗೆ ಆರೆಸ್ಸೆಸ್ ಭಾರತದಾದ್ಯಂತ ಬಾಂಬ್ ಸ್ಫೋಟ ನಡೆಸಿದೆ: ಕಾರ್ಯಕರ್ತನ ಸ್ಪೋಟಕ ಹೇಳಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಕಾನೂನು ಬಾಹಿರವಾಗಿ ಕಾಂಪೌಂಡ್ ಕಟ್ಟಿದ್ದರೂ, ಶಾಸಕರು ಈ ರೀತಿ ಕೂಗಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತವಾಗಿದೆ. “ಜನಪ್ರತಿನಿಧಿಯೊಬ್ಬ ತಟಸ್ಥವಾಗಿದ್ದು ಮಹಿಳೆಯ ಅಹವಾಲನ್ನು ಕೂಡಾ ಕೇಳಬೇಕಾತ್ತು. ಮಹಿಳೆ ಕೂಡಾ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ. ಅದನ್ನು ಪರಿಶೀಲಿಸಬೇಕಿತ್ತು” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.


