Homeಅಂತರಾಷ್ಟ್ರೀಯ7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

7 ವರ್ಷಗಳಲ್ಲಿ ಭಾರತ ದುಪ್ಪಟ್ಟು ಭೂಪ್ರದೇಶವನ್ನು ಕಳೆದುಕೊಂಡಿತೇ?

- Advertisement -
- Advertisement -

ದಿನ ಬೆಳಗಾದರೆ ನಮ್ಮ ಕನ್ನಡ ಟಿ.ವಿ. ಚಾನೆಲ್‌ಗಳು ನರೇಂದ್ರ ಮೋದಿಯ ಗುಣಗಾನ ಮಾಡುತ್ತ ಚೀನಾವನ್ನು ಬಗ್ಗು ಬಡಿಯುವ ಧೀರ, ಶೂರ ಎಂಬೆಲ್ಲ ಉಪಮೆಗಳನ್ನು ಬಳಸುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಜೂನ್ 21ರ The Week ನಿಯತ ಕಾಲಿಕೆಯ ಒಂದು ಲೇಖನ ಓದುಗರನ್ನು ಬೆಚ್ಚಿಬೀಳುಸುತ್ತಿದೆ. ಗಾಲ್ವಾನ್ ನದಿ ಕಣಿವೆ ಮತ್ತು ಪಾನ್‌ಗಾಂಗ್ ಸರೋವರದ ಪ್ರದೇಶದೊಳಗಡೆಗೆ ಚೀನಾದ PLA (People Libration Army) ನುಗ್ಗಿ ಭಾರತದ ಸುಮಾರು 60 ಚ.ಕಿ.ಮೀ. ಪ್ರದೇಶ ಆಕ್ರಮಿಸಿಕೊಂಡಿದೆ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಹೆಚ್.ಎಸ್. ಪನಾಗ್ ಹೇಳಿರುವರು. ಅಂತೆಯೇ ಮಾಜಿ ವಿದೇಶಾಂಗ ಕಾರ್‍ಯದರ್ಶಿ ಶ್ಯಾಮ್‌ಸರಣ್ ಹೇಳಿಕೆಯಂತೆ 2013ರ ವೇಳೆಗೆ ಭಾರತ, ಚೀನಾಕ್ಕೆ ಕಳೆದುಕೊಂಡ ತನ್ನ ಭೂಪ್ರದೇಶ ಸುಮಾರು 640 ಚ.ಕಿ.ಮೀ. ಈಗಿದು 1300 ಚ.ಕಿ.ಮೀ.ನಷ್ಟಾಗಿದೆ ಎನ್ನುತ್ತಾರೆ ಶ್ಯಾಮ್‌ಸರಣ್.

ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ನಿಬ್ಬೆರಗುಗೊಳಿಸುವ ಸಂಗತಿ. ಉಪಗ್ರಹಗಳ ಮೂಲಕ ಭೂಚಿತ್ರಣದ ದೃಶ್ಯ ನಮ್ಮ ಬೆರಳ ತುದಿಯಲ್ಲೇ ಲಭ್ಯವಿರುವ ಸಂದರ್ಭದಲ್ಲಿ! ಹೀಗೇಕಾಯಿತು ಎಂಬುದೇ ನಿಗೂಢ. ಕನ್ನಡ ಟಿ.ವಿ. ಮಾಧ್ಯಮಗಳ ಬಹು ಆಪ್ತಮಿತ್ರ ನಮ್ಮ ನರೇಂದ್ರ ಮೋದಿಯವರು 2019 ಅಕ್ಟೋಬರ್ 11,12ರಂದು ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಮಮ್ಮಲಪುರಂಗೆ ಆಹ್ವಾನಿಸಿ ಬಹುಪಚಾರದ ಮಾತುಕತೆ ಆಡಿದ ಸಂದರ್ಭದಲ್ಲಿ ಆತ ಭಾರತ ಸದರಿ ಕಣಿವೆಯಲ್ಲಿ ಕೈಗೊಂಡಿದ್ದ ಮೂಲಭೂತ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಓದುಗರಿಗೆ ನೆನಪಿರಬಹುದು. ಸಿಯಾಚಿನ್ ನಿರ್ಗಲ್ಲು ತಲುಪಲು ಸೇನಾ ಸರಬರಾಜಿಗೆ ಅನುಕೂಲವಾಗಲೆಂದು ಭಾರತ, ದೌಲತ್ ಬೇಗ್ ಓಲ್ಡಿ ಮತ್ತು ದುರ್ಬುಕ್‌ಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಶೈಯೋಕ್ ನದಿಗೆ ಸೇತುವೆ ನಿರ್ಮಿಸಿದ್ದು ಚೀನಾದ ಕಣ್ಣು ಕುಕ್ಕಿಸಿತು.

ಈಗೇನು ಚೀನಾ ಬಂದಿಳಿದಿದೆಯೋ ಆ ಪ್ರದೇಶಕ್ಕೆ ಅವರಿಗಿಂತ ಮುಂಚೆ ಪೂರ್ವಭಾವಿಯಾಗಿ ಬೇಸಿಗೆ ಆರಂಭಕ್ಕೂ ಮುನ್ನ ಬೇಕಾದ ಮಿಲಿಟರಿ ಸಲಕರಣೆಗಳೊಂದಿಗೆ ಹೋಗಿ ತಲುಪಲು ಭಾರತಕ್ಕೆ ಆರು ತಿಂಗಳ ಕಾಲಾವಕಾಶ ಲಭ್ಯವಿತ್ತು. ಆದರೆ ಅದು ಆಯಿತೆ? ಚೀನಾದ ಆಕ್ರಮಣಕ್ಕೆ ಎದುರಾಡುವ ಸಾಮರ್ಥ್ಯ ಇಂಡಿಯಾಕ್ಕೆ…?

ಕೇವಲ ಸಹಿಸಿಕೊಂಡು ಹೋಗುವ ಚಿತ್ತವುಳ್ಳ ಭಾರತ ಸರ್ಕಾರ ರಾಜತಾಂತ್ರಿಕತೆಯನ್ನಷ್ಟೇ ನಂಬಿ ಕುಳಿತಿದೆ. ನಮ್ಮ ಸೇನೆಗೆ ಶತೃವಿನ ಮೇಲೆ ಆಕ್ರಮಣವೆಸಗುವ ಮನೋಭಾವವಾಗಲಿ, ಯುದ್ಧೋಪ ಸಾಧನಗಳಾಗಲಿ, ಸಹಿಷ್ಣುತೆಯಾಗಲಿ ಇಲ್ಲ. ಈ ಸ್ಥಿತಿ ಚೀನಿಯರಿಗೆ ವರದಾನವೆನಿಸಿದ್ದು ಅದು ನಿರ್ಧಯತೆಯಿಂದ ವಾಸ್ತವಿಕ ಗಡಿ ರೇಖೆಯನ್ನು ದಿನದಿಂದ ದಿನಕ್ಕೆ ಭಾರತದ ಒಳಕ್ಕೆ ತಳ್ಳುತ್ತ ಬಂದಿದೆ. ಚೀನಾದ ದುರಾಸೆಗೆ, ಅದರ ಹೊಸ ಹೊಸ ವಾಸ್ತವಿಕ ಗಡಿರೇಖೆಗೆ, ಭಾರತ ಆಸ್ಪದವೀಯ್ಯುತ್ತಿದೆ. ಇದು ಚೀನಾದ ರಾಜಕೀಯ ನೀತಿಯೂ ಹೌದು! ತಮ್ಮ ದುರ್ಬುದ್ಧಿ ಸಮರ್ಥಿಸಿಕೊಳ್ಳಲು ಚೀನಾ ಪ್ರತಿಸಲವು ಮಾತುಕತೆಯ ದಿನಾಂಕವನ್ನು ಮುಂದು ಮುಂದಕ್ಕೆ ತಳ್ಳುತ್ತಾ ಮತ್ತಷ್ಟು ಭಾರತ ಭೂಭಾಗಕ್ಕೆ ಬೇಲಿ ಹಾಕುತ್ತ ಬರುತ್ತಿದೆ. ಭಾರತವೂ ಈ ಹಗ್ಗ ಜಗ್ಗಾಟಕ್ಕೆ ಬಲಿಯಾಗುತ್ತಿದ್ದು ಪ್ರತಿ ಮಾತುಕತೆಯ ನಂತರ ‘ಭಾರತ-ಚೀನಾ ಗಡಿ ಮಾತುಕತೆ ಫಲಪ್ರದ’ವೆಂದು ಹೇಳುತ್ತ ತನ್ನ ನೂರಾರು ಚ.ಕಿ.ಮೀ. ಭೂಪ್ರದೇಶವನ್ನು ನಿಷ್ಕರುಣೆ ಚೀನಾಕ್ಕೆ ಬಿಟ್ಟುಕೊಡುತ್ತ ಬಂದಿದೆ. ಈ ವಂಚನೆಯನ್ನು ಆದಷ್ಟು ಬೇಗ ಪ್ರಸ್ತುತ ಮೋದಿ ಸರ್ಕಾರ ಅರ್ಥ ಮಾಡಿಕೊಂಡರೆ ಒಳಿತು. ಈಗಲಾದರೂ ಭಾರತ ಸಕಲ ಯುದ್ಧೋಪಕರಣಗಳನ್ನು ವಾಸ್ತವಿಕ ಗಡಿರೇಖೆಯಲ್ಲಿ ಶಾಶ್ವತವಾಗಿರುವಂತೆ ಸ್ಥಾಪಿಸಿ ಚೀನಾಕ್ಕೆ ಬುದ್ಧಿ ಕಲಿಸುವ ಸದಾವಕಾಶ ಎದುರಾಗಿದೆ.

-ಸೊಂದಲಗೆರೆ ಲಕ್ಷ್ಮೀಪತಿ

(ಲೇಖಕರು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...