Homeಅಂತರಾಷ್ಟ್ರೀಯಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ

ಮಾತುಕತೆ ನಂತರ ಚೀನೀ ಸೈನ್ಯದಿಂದ 4 ಅಧಿಕಾರಿಗಳು ಸೇರಿ 10 ಸೈನಿಕರ ಬಿಡುಗಡೆ

- Advertisement -
- Advertisement -

ಜೂನ್ 15 ರ ಹಿಂಸಾತ್ಮಕ ಘರ್ಷಣೆಯ ನಂತರ ವಶಕ್ಕೆ ತೆಗೆದುಕೊಂಡಿದ್ದ ನಾಲ್ವರು ಅಧಿಕಾರಿಗಳು ಸೇರಿದಂತೆ ಹತ್ತು ಭಾರತೀಯ ಸೈನಿಕರನ್ನು ಮಾತುಕತೆಯ ನಂತರ ಚೀನಾ ಸೇನೆಯು ಬಿಡುಗಡೆ ಮಾಡಿದೆ. ಸೈನ್ಯದ ಮೇಜರ್ ಜನರಲ್ ನೇತೃತ್ವದ ತಂಡವು ಗಾಲ್ವಾನ್ ಕಣಿವೆಯಲ್ಲಿ ಮೂರು ದಿನಗಳ ಮಾತುಕತೆಯ ನಂತರ ಈ ಬಿಡುಗಡೆ ಸಂಭವಿಸಿದೆ.

ಬಿಡುಗಡೆಯ ವಿವರಗಳ ಬಗ್ಗೆ ಸೇನೆಯು ಪ್ರತಿಕ್ರಿಯಿಸದಿದ್ದರೂ, ಚೀನೀಯರೊಂದಿಗಿನ ಘರ್ಷಣೆಯಲ್ಲಿ ಭಾಗಿಯಾಗಿರುವ ಎಲ್ಲ ಸೈನಿಕರನ್ನು ಈಗ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. “ಯಾವುದೇ ಭಾರತೀಯ ಪಡೆಗಳು ಕಾಣೆಯಾಗಿಲ್ಲ ಎಂದು” ಎಂದು ಸೇನೆಯು ಗುರುವಾರ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿತ್ತು.

ಘರ್ಷಣೆಯ ನಂತರ ಎಪ್ಪತ್ತಾರು ಭಾರತೀಯ ಸೈನಿಕರು ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಇವರೆಲ್ಲರೂ 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಉಪಗ್ರಹ ಚಿತ್ರಗಳು ಗಾಲ್ವಾನ್ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬದಿಯಲ್ಲಿ ಚೀನಾವು ಬೃಹತ್ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ನದಿ ಹರಿವನ್ನು ತಡೆಯುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ಲಡಾಖ್‌ ಘರ್ಷಣೆ ಕುರಿತ ಸರ್ವಪಕ್ಷ ಸಭೆಗೆ AAP, RJDಗೆ ಆಹ್ವಾನವಿಲ್ಲ: ಹೊಸ ವಿವಾದ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...