Homeಮುಖಪುಟರಾಜ್ಯಸಭಾ ಚುನಾವಣೆ: ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸಿದ ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕ! ಕಾರಣ?

ರಾಜ್ಯಸಭಾ ಚುನಾವಣೆ: ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸಿದ ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕ! ಕಾರಣ?

- Advertisement -
- Advertisement -

ಇಂದು ನಡೆಯುತ್ತಿರುವ 24 ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕರಾದ ಕುನಾಲ್ ಚೌಧರಿಯವರು ಕೊರೊನಾ ಸೋಂಕಿತರಾದ ಕಾರಣದಿಂದ ಭೋಪಾಲ್‌ನಲ್ಲಿ ಪಿಪಿಇ ಕಿಟ್‌ ಧರಿಸಿ ಮತ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ನಡೆದ ಕೊರೊನಾ ಪರೀಕ್ಷೆಯಲ್ಲಿ ಚೌಧರಿಯವರು ಸಾಂಕ್ರಾಮಿಕ COVID-19 ಪಾಸಿಟಿವ್‌ ಆಗಿದ್ದರು.

ಕನಿಷ್ಠ 205 ಶಾಸಕರು ಈಗಾಗಲೇ ಮತ ಚಲಾಯಿಸಿದ ನಂತರ ಅವರ ಮತದಾನದ ಸರದಿ ಬಂದಿತು. ಮುಡಿಯಿಂದ ಅಡಿವರೆಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಸೂಟ್) ತೊಟ್ಟಿದ್ದ ಅವರು ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಮತದಾನದ ಕೋಣೆಗೆ ಕಾಲಿಟ್ಟರು.

ವೈರಸ್ ಉಸಿರಾಟದ ಹನಿಗಳಿಂದ ಹರಡುತ್ತದೆ ಎಂದು ಭಾವಿಸಿರುವ ಹಲವರು ಚೌಧರಿಯವರಿಂದ ಅಂತರ ಕಾಯ್ದುಕೊಂಡಿದ್ದರು.

ಶಾಸಕರು ಜೂನ್ 6 ರಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೂನ್‌ 10ರಂದು ಪರೀಕ್ಷೆಗೆ ಒಳಗಾದರು ಮತ್ತು ಕೊರೊನಾ ಪಾಸಿಟಿವ ವರದಿ ಜೂನ್ 12 ರಂದು ಬಂದಿತು ಎಂದು ವರದಿಯಾಗಿದೆ.

“ಪೂರ್ಣ ಮುನ್ನೆಚ್ಚರಿಕೆಯೊಂದಿಗೆ ಪಿಪಿಇ ಕಿಟ್ ಧರಿಸಿ ನಾನು ಮಧ್ಯಾಹ್ನ 12.45ರ ಸುಮಾರಿಗೆ ಆಂಬ್ಯುಲೆನ್ಸ್‌ನಲ್ಲಿ ವಿಧಾನಸಭೆಯನ್ನು ತಲುಪಿದೆ. ಅಧಿಕಾರಿಗಳು ಸಹ ಪಿಪಿಇ ಕಿಟ್ ಧರಿಸಿದ್ದರು. ಅವರು ಸ್ವಲ್ಪ ಭಯಭೀತರಾಗಿದ್ದಾರೆಂದು ನಾನು ಭಾವಿಸಿದ್ದೆ. ಅದು ಸಹಜ. ನಾನು ನನ್ನ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಮರಳಿ ಬಂದೆ” ಎಂದು ಶಾಸಕರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಹೊರಗೆ ಬಂದು ಮತ ಚಲಾಯಿಸಲು ಚುನಾವಣಾ ಆಯೋಗ ಹೇಗೆ ಅವಕಾಶ ನೀಡಿದೆ ಎಂದು ಬಿಜೆಪಿ ಮುಖಂಡ ಹಿತೇಶ್ ಬಾಜ್ಪೈ ಪ್ರಶ್ನಿಸಿದ್ದಾರೆ. “ಕರೋನಾ ಸೋಂಕು ಇರುವ ಶಾಸಕರಿಗೆ ವಿಧಾನಸಭೆಯ ಆವರಣಕ್ಕೆ ಪ್ರವೇಶಿಸಲು ಚುನಾವಣಾ ಆಯೋಗವು ಅನುಮತಿ ನೀಡುವುದು ಸಾಂಕ್ರಾಮಿಕ ನಿಯಂತ್ರಣ ನಿಯಮಗಳ ಉಲ್ಲಂಘನೆಯಾಗಿದೆ” ಎಂದು ಬಾಜ್ಪೈ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ಶಾಸಕ”ಪಂಚಾಯತ್ ಚುನಾವಣೆಯಲ್ಲಿ ಸಹ ಗೆಲ್ಲಲು ಸಾಧ್ಯವಾಗದ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅವರು ಸರ್ಕಾರವನ್ನು ನಡೆಸುತ್ತಿರುವ ತಮ್ಮ ಪಕ್ಷದ ಮುಖಂಡರಿಗೆ ಪ್ರಶ್ನೆ ಕೇಳಬೇಕು” ಎಂದಿದ್ದಾರೆ.

ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕದಿಂದ ತಲಾ ನಾಲ್ಕು ಸ್ಥಾನಗಳು, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ತಲಾ ಮೂರು, ಜಾರ್ಖಂಡ್‌ನಿಂದ ತಲಾ ಎರಡು ಮತ್ತು ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಿಂದ ತಲಾ ಒಂದು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಾರಂಭವಾಯಿತು. ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದ್ದು ಗುಜರಾತ್‌ನಲ್ಲಿ ಒಂದು ಸ್ಥಾನ, ರಾಜಸ್ಥಾನದಲ್ಲಿ ಒಂದು ಮತ್ತು ಮಧ್ಯಪ್ರದೇಶದ ಒಂದು ಸ್ಥಾನದ ಮೇಲೆ ಕಠಿಣ ಹೋರಾಟ ನಡೆಯುತ್ತಿದೆ.


ಇದನ್ನೂ ಓದಿ: ಎಂಎಲ್‌ಸಿ ಚುನಾವಣೆಗೆ ಆಸ್ತಿವಿವರ ಘೋಷಣೆ: ಎಂಟಿಬಿ ನಾಗರಾಜ್ ಆಸ್ತಿಯಲ್ಲಾದ ಹೆಚ್ಚಳವೆಷ್ಟು ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...