ಅತ್ಯಾಚಾರ ಮತ್ತು ಕೊಲೆ ಅಪರಾಧಿ, ಡೇರಾ ಸಚ್ಚಾ ಸೌಧದ ವಿವಾದಾತ್ಮಕ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್‌ನಲ್ಲಿರುವಾಗ ಆನ್‌ಲೈನ್ ಸತ್ಸಂಗ (ಪ್ರವಚನ) ನಡೆಸಲು ಪ್ರಾರಂಭಿಸಿದ್ದಾರೆ. ಮಂಗಳವಾರ ಬಿಜೆಪಿ ನಾಯಕ ಮತ್ತು ಕರ್ನಾಲ್‌ನ ಮಾಜಿ ಮೇಯರ್ ರೇಣು ಬಾಲ ಗುಪ್ತಾ ಕೂಡ ಅವರ ಆರ್ಶಿವಾದ ಪಡೆದಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಬರ್ಸಾದಿಂದ ನಡೆಸಿದ ಸುಮಾರು ಎರಡು ಗಂಟೆಗಳ ಸತ್ಸಂಗದಲ್ಲಿ ಹಲವಾರು ಇತರ ಸ್ಥಳೀಯ ರಾಜಕಾರಣಿಗಳು ಸಹ ಭಾಗವಹಿಸಿದ್ದರು. ಅಲ್ಲಿ ಗುಪ್ತಾ ಡೇರಾ ಮುಖ್ಯಸ್ಥರನ್ನು “ಪಿತಾಜಿ” ಎಂದು ಸಂಬೋಧಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹರಿಯಾಣದಲ್ಲಿ ಪಂಚಾಯತ್ ಚುನಾವಣೆಗಳು ಮತ್ತು ಆದಂಪುರ ಉಪಚುನಾವಣೆ ಕೆಲವೆ ದಿನಗಳಲ್ಲಿ ನಡೆಯುವ ಸಂದರ್ಭದಲ್ಲಿ ಅತ್ಯಾಚಾರ ಅಪರಾಧಿಗೆ ಪೆರೋಲ್ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ ಕರ್ನಾಲ್ ಕ್ಷೇತ್ರವನ್ನು ಪ್ರತಿನಿಧಿಸುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಕಾರಾಗೃಹಗ ಸಚಿವ ರಂಜಿತ್ ಸಿಂಗ್ ಪೆರೋಲ್ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇದೊಂದು “ವಾಡಿಕೆಯ ಕಾರ್ಯವಿಧಾನ” ಮತ್ತು “ಅಪರಾಧಿಯ ಕಾನೂನುಬದ್ಧ ಹಕ್ಕು” ಎಂದು ಬಣ್ಣಿಸಿದ್ದಾರೆ.
ರೇಪ್ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪೆರೋಲ್ ಮೇಲೆ ಹೊರಬಂದು ಸತ್ಸಂಗ ನಡೆಸುತ್ತಾರೆ. ಸ್ಥಳೀಯ ಚುನಾವಣೆಗಳು ಹತ್ತಿರವಿರುವುದರಿಂದ ಕರ್ನಾಲ್ ಮಾಜಿ ಮೇಯರ್ ಮತ್ತು ಹಿಸ್ಸಾ ಮೇಯರ್ ಅಪರಾಧಿಯ ಆರ್ಶಿವಾದ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದ್ರುವ್ ರಾಠೀ ಟ್ವೀಟ್ ಮಾಡಿದ್ದಾರೆ.
Out on parole, A convicted rapist Gurmeet Ram Rahim holds a satsang.
Karnal Mayor Renu Bala Gupta attended the online Satsang to take his blessings just before panchayat elections. pic.twitter.com/GHvf7fjbY4— Mohammed Zubair (@zoo_bear) October 19, 2022
ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯವು 2017ರಲ್ಲಿ ಆತನನ್ನು ದೋಷಿ ಎಂದು ಪರಿಗಣಿಸಿ 20 ವರ್ಷಗಳ ಶಿಕ್ಷೆ ವಿಧಿಸಿದೆ. ಅಲ್ಲದೆ ಪತ್ರಕರ್ತನ ಹತ್ಯೆ ಮತ್ತು ಮಾಜಿ ಮ್ಯಾನೇಜರ್‌ನ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಗುರ್ಮೀತ್ ರಾಮ್ ರಹೀಮ್‌ನನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಆದರೆ ಈ ಒಂದು ವರ್ಷದಲ್ಲಿ ಚುನಾವಣೆಗಳು ಹತ್ತಿರವಿದ್ದಾಗ ಆತನಿಗೆ ಮೂರು ಬಾರಿ ಪೆರೋಲ್ ನೀಡಲಾಗಿದೆ! ಫೆಬ್ರವರಿಯಲ್ಲಿ ಪಂಜಾಬ್ ಚುನಾವಣೆಗಿದ್ದಾಗ, ಜೂನ್‌ನಲ್ಲಿ ಮತ್ತು ಅಕ್ಟೋಬರ್ 14 ರಂದು ಆತನಿಗೆ ಪೆರೋಲ್ ನೀಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಾನು ಆಶ್ರಮವನ್ನು ತಲುಪಿದ್ದೇನೆ. ದೇವರು ಎಲ್ಲರಿಗೂ ಸಂತೋಷ ನೀಡಲಿ. ಮೊದಲೇ ಹೇಳಿದಂತೆ ನಂಬಿಕೆ ಇರಲಿ. ನನ್ನ ಮಕ್ಕಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಪರಮ ತಂದೆ, ಪರಮಾತ್ಮ, ನಿಮಗೆ ಬಹಳಷ್ಟು ಸಂತೋಷವನ್ನು ನೀಡಲಿ. ಸ್ವಲ್ಪ ಸಮಯದ ಹಿಂದೆ ಇಲ್ಲಿ ಬಂದರು. ನೀವು ಆ ಸಮುದ್ರಗಳನ್ನು ನೆನಪಿಸಿಕೊಳ್ಳುತ್ತೀರಿ. ಸಮುದ್ರಗಳು ಹೆಚ್ಚು ಏರಿವೆ. ನೀವೆಲ್ಲರೂ ಅದನ್ನು ನೋಡುತ್ತಿದ್ದೀರಿ. ನಾನು ನಿಮ್ಮೊಂದಿಗೆ ಮಾತನಾಡುತ್ತಲೇ ಇರುತ್ತೇನೆ. ಮಕ್ಕಳು, ಯುವಕರು ಮತ್ತು ಹಿರಿಯರಿಗೆ ಆಶೀರ್ವಾದ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಇಂದು ಭಾರತದ ಸ್ವಧರ್ಮದ ಮೇಲೆ ಅತ್ಯಂತ ಘೋರ ದಾಳಿಯಾಗುತ್ತಿದೆಯೇ? – ಯೋಗೇಂದ್ರ ಯಾದವ್