Homeಕರ್ನಾಟಕಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಈ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥೆಯೇ ಕಾರಣ. ಒಂದಲ್ಲ ಒಂದು ದಿನ ಜನ ತಿರುಗಿ ಬೀಳ್ತಾರೆ. ಆ ದಿನಕ್ಕೆ ತುಂಬಾ ದೂರವಿಲ್ಲ. ಕೊರೊನಾ ಸಮಯದಲ್ಲಿ ಜನ ಹೆಚ್ಚು ಮಾತಾನಾಡುತ್ತಿದ್ದಾರೆ.

- Advertisement -
- Advertisement -

ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ಎಲ್ಲ ಸರಿ ಇದೆ ಎಂದುಕೊಂಡೆ ಬದುಕಬೇಕೆ…? ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ…? ಮಾತನಾಡಬಾರದೇ…? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿರುವುದು ಕನ್ನಡದ ಖ್ಯಾತ ನಟ ಸತೀಶ್ ನಿನಾಸಂ.

ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರ ಸ್ನೇಹಿತ, ದಿವಂಗತ ನಟ ಸಂಚಾರಿ ವಿಜಯ್ ಬಗ್ಗೆ ಮಾತನಾಡುತ್ತಾ, ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಜಾತಿ ವ್ಯವಸ್ಥೆಯಿಂದ ಮನುಷ್ಯ ಅನುಭವಿಸುವ ನೋವು, ಅವಮಾನಗಳ ಕುರಿತು ಮಾತನಾಡುತ್ತಾ ‘ಇದೇ ಸಮಾಜ ಮಾಡಿದ ಅವಮಾನ, ನೋವಿನಿಂದ ನಟ ಸಂಚಾರಿ ವಿಜಯ್ ಯಾತನೆ ಅನುಭವಿಸಬೇಕಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಸಮಾಜದಲ್ಲಿ ಶಿಕ್ಷಣ ಪಡೆದರೂ ಮನುಷ್ಯನಲ್ಲಿ ಯಾವ ಬದಲಾವಣೆಯಾಗಿದೆ? ಪ್ರಾಣಿಗಳಲ್ಲಿ ಆಗಿರುವ ಬೆಳವಣಿಗೆ ಮನುಷ್ಯನಲ್ಲಿಲ್ಲ. ಸಮಾಜ ಯಾವಾಗ ಬದಲಾಗುತ್ತದೆ…? ಎಲ್ಲ ಸರಿಯಿದೆ ಎಂದು ಮುಚ್ಚಿಟ್ಟುಕೊಳ್ಳುವುದು ಸರಿಯಲ್ಲ. ಈಗ ವಿಜಿಯನ್ನು ಕರ್ನಾಟಕದ ಹೆಮ್ಮೆ ಎನ್ನುವಾಗ, ಆತನಿಗೆ ನಾವು ಕೊಟ್ಟ ಅವಮಾನಗಳನ್ನು, ನೋವನ್ನು ನೆನಪಿಸಿಕೊಳ್ಳಬೇಕು. ಇವತ್ತು ಅವರಿಲ್ಲ ಎಂದು ಕಣ್ಣೀರಿಡುವಾಗ ಅದಕ್ಕೆ ನಾವು ಕೂಡ ಕಾರಣ ಎಂಬುದನ್ನು ತಿಳಿಯಬೇಕು. ಈ ಸಮಾಜ, ವ್ಯವಸ್ಥೆ ಕಾರಣ ಕೂಡ ಆತನಿಲ್ಲದಕ್ಕೆ ಕಾರಣ’ ಎಂದು ನಟ ಸತೀಶ್ ನಿನಾಸಂ ಹೇಳಿದ್ದಾರೆ.

ಇದನ್ನೂ ಓದಿ: 10 ರಲ್ಲಿ8 ಭಾರತೀಯ ಅಮೆರಿಕನ್ನರು ಮೇಲ್ಜಾತಿ ಅಥವಾ ಸಾಮಾನ್ಯ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ – ಸಮೀಕ್ಷೆ

’ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ಎಲ್ಲ ಸರಿ ಇದೆ ಎಂದುಕೊಂಡೆ  ಬದುಕುವುದು ಎಷ್ಟು ದಿನ….? ನನ್ನಿಂದ ತಪ್ಪಾಗಿದೆ..ನಿಮ್ಮಿಂದ ತಪ್ಪಾಗಿದೆ. ಸರಿ ಪಡಿಸಿಕೊಳ್ಳೋಣ’ ಎಂದಿದ್ದಾರೆ.

’ಸಮಾಜದಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕಾ…? ಮಾತನಾಡಬಾರದ…? ನಾವು 21ನೇ ಶತಮಾನದಲ್ಲಿ, ಈ ಕಾಲದಲ್ಲಿಯೂ ಎಲ್ಲಾ ರೀತಿಯಲ್ಲಿ ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದುವರೆದರೂ ಮನುಷ್ಯತ್ವದ ವಿಚಾರದಲ್ಲಿ ಪ್ರಾಣಿಗಳಿಗಿಂತ  ಹಿಂದಿದ್ದೇವೆ. ಮನುಷ್ಯನಲ್ಲಿ ಕೆಟ್ಟ, ಕೊಳಕು, ವಿಷ ತುಂಬಿದ ಮನಸ್ಸು ಇದೆ’ ಎಂದು ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.

’ಜಾತಿ ವಿಷಯದಲ್ಲಿ ಸಂಚಾರಿ ವಿಜಯ್ ತುಂಬಾ ನೋವುಗಳನ್ನು ಅನುಭವಿಸಿದ್ದಾರೆ. ಇದರಲ್ಲಿ ಸುಳ್ಳು ಇಲ್ಲ. ಈ ಬಗ್ಗೆ ವೇದಿಕೆ, ಸಮಯ ಸಿಗಲಿ ಎಳೆ ಎಳೆಯಾಗಿ ಆತನಿಗಾದ ನೋವು, ಅವಮಾನಗಳನ್ನು ತಿಳಿಸುತ್ತೇನೆ. ಆತ ಮಾತನಾಡಲು ಹೆದರುತ್ತಿದ್ದ. ಏಕೆಂದರೆ ಸಮಾಜದಲ್ಲಿ ಅಂತಹ ಪರಿಸ್ಥತಿ ಇದೆ. ಆದರೆ, ನಾನು ಮಾತನಾಡುತ್ತೇನೆ. ಏನಾದರೂ ಆಗಲಿ ಎದುರಿಸುತ್ತೇನೆ’ ಎಂದಿದ್ದಾರೆ.

’ನಮ್ಮ ಸಮಸ್ಯೆಳ ಬಗ್ಗೆ, ನಮಗಾಗಿರುವ ನೋವುಗಳ ಬಗ್ಗೆ ಮಾತನಾಡಿದರೆ, ಒಂದು ವರ್ಗಕ್ಕೆ ನಮ್ಮನ್ನು ಸೀಮಿತಗೊಳಿಸುವುದು, ಇದೊಂದು ಬೇರೆ ವರ್ಗ ಅಂತ ಪಕ್ಕಕ್ಕೆ ಇಡುವುದು ಮಾಡ್ತಾರೆ. ಆತನ ಸಿನಿಮಾಗಳನ್ನು ನೋಡಬೇಡಿ, ಅವನು ಸರಿಯಿಲ್ಲ. ಅವನು ಹೀಗೆಯೇ ಎಂದು ಹೇಳುತ್ತಾರೆ. ನನ್ನ ವಿರುದ್ಧ ಮಾತಾಡುವವರನ್ನು ಮತ್ತೊಂದು ಕೆಟಗರಿ ಮಾಡುತ್ತಾರೆ. ಆದರೆ, ಇವರು ಯಾಕೆ ಮಾತನಾಡುತ್ತಿದ್ದಾರೆ ಎಂಬುದನ್ನು ವಿಚಾರ ಮಾಡುವುದಿಲ್ಲ’ ಎಂದು ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಮನಸ್ಥಿತಿ ಕುರಿತು ಟೀಕಿಸಿದ್ದಾರೆ.

ಇದನ್ನೂ ಓದಿ: ಮೇಲ್ಜಾತಿ ಹುಡುಗಿಗೆ ಮೊಬೈಲ್‌ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೋಳಿಸಿ, ಎಂಜಲು ತಿನ್ನಿಸಿದ ಅಮಾವೀಯ ಘಟನೆ

’ಮನುಷ್ಯ ತಾನೇ ಶ್ರೇಷ್ಠ ಎಂಬುದನ್ನು ಎಲ್ಲಿಯವರೆಗೆ ಬಿಡುವುದಿಲ್ಲವೂ ಅಲ್ಲಿಯವರೆಗೆ ಮನುಷ್ಯ ಉದ್ದಾರ ಆಗುವುದಿಲ್ಲ. ಮನುಷ್ಯನ ಕೊಳಕು ಮನಸ್ಥಿತಿ ಬದಲಾಗಲ್ಲ. ಭೂಮಿ ನಾಶವಾಗುತ್ತಿರುವುದು ಮನುಷ್ಯನಿಂದಲೇ, ಮನುಷ್ಯ ನಾಶವಾಗುತ್ತಿರುವುದು ಮನುಷ್ಯನಿಂದಲೇ. ಪ್ರಕೃತಿ, ಪ್ರಾಣಿಗಳಿಂದ ಅಲ್ಲ’ ಎಂದು ಒತ್ತಿ ಹೇಳಿದ್ದಾರೆ.

’ಈ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥೆಯೇ ಕಾರಣ. ಒಂದಲ್ಲ ಒಂದು ದಿನ ಜನ ತಿರುಗಿ ಬೀಳ್ತಾರೆ. ಆ ದಿನಕ್ಕೆ ತುಂಬಾ ದೂರವಿಲ್ಲ. ಕೊರೊನಾ ಸಮಯದಲ್ಲಿ ಜನ ಹೆಚ್ಚು ಮಾತಾನಾಡುತ್ತಿದ್ದಾರೆ. ಈಗಾಗಲೇ ಜನ ತಿರುಗಿ ಬಿದ್ದಿದ್ದಾರೆ. ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರೇ ನನ್ನನ್ನು ನಾಳೆ ಸಾಯಿಸಬಹುದು. ನಿಮ್ಮನ್ನು ನಾಡಿದ್ದು, ಆದರೆ ಮಾತನಾಡುವುದನ್ನು ಮಾತನಾಡಬೇಕು’ ಎಂದು ಸತೀಶ್ ನಿನಾಸಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತೀಶ್ ನಿನಾಸಂ ಅವರ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನಿನಾಸಂ ಅವರ ಅಭಿಪ್ರಾಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ನನ್ನನ್ನು 4 ಗಂಟೆಗಳ ಕಾಲ ಪ್ರಶ್ನಿಸಲಾಯಿತು, ಹೋರಾಟ ಮುಂದುವರಿಯುತ್ತದೆ: ನಟ ಚೇತನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

 1. ಜಾತಿ ವ್ಯವಸ್ಥೆ ಒಂದು ಸಮಾಜಕ್ಕೆ ಅಂಟಿಕೊಂಡ ರೋಗ. ನನ್ನ ಜಾತಿಗೆ ಅವಮಾನ ನಿನ್ನ ಜಾತಿಗೆ ಅವಮಾನ ಮತ್ತೊಂದು ಜಾತಿಯ ವ್ಯಕ್ತಿ ಮಾತುಗಳು ಅಡಿದಾಗ ಕೆಲವು ಜನರು ವಿರೊದ ಮಾತುಗಳು ಅಡುತ್ತಾರೆ. ಆದರೆ ತನ್ನ ಜಾತಿಯ ಜನರು ಮತ್ತೊಂದು ಜಾತಿಯ ವ್ಯಕ್ತಿ ಬಗ್ಗೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವ ಬಗ್ಗೆ ಮಾತುಗಳು ಅಡುತ್ತಿಲ್ಲಾ. ಯಾವುದೇ ಜಾತಿಯ ವ್ಯಕ್ತಿ ಜಾತಿವಾದಿ ಮಾಡಿದರು ಅವನು ಕೊಳಕು ಮನಸ್ಸಿನ ವ್ಯಕ್ತಿ . ಆಗುತ್ತಾನೆ ಭಾರತೀಯ ಜಾತಿ ವ್ಯವಸ್ಥೆ ಹೊಗದ ಹೊರತು ಭಾರತ ಎಷ್ಟೇ ಅಭಿವೃದ್ಧಿ ಆದರು ಅದು ವ್ಯರ್ಥ ಅನಿಸುತ್ತದೆ. ದಯವಿಟ್ಟು ಸಮ ಸಮಾಜ ಕಲ್ಯಾಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈ ಜೊಡಿಸೊಣ

 2. ಭಾರತದ ಅಭಿವೃದ್ಧಿ ಅಂದರೆ ಸಮ ಸಮಾಜದ ನಿರ್ಮಾಣ.
  ಬಸವಾದಿ ಶರಣರ ಬಯಸಿದ ಸಮಾಜ.
  ಬುದ್ಧ ಬಯಸಿದ ಸಮಾಜ.
  ಪೆರಿಯಾರ್ ಬಯಸಿದ ಸಮಾಜ.
  ನಾನು ಮಾತ್ರ ಶೈಕ್ಷಣಿಕ ಭಾರತ ಬಯಸುತ್ತೆನೆ.
  ಮಾನವೀಯ ಮೌಲ್ಯಗಳನ್ನು ಹೊಂದಿರುವ ಭಾರತ ಬಯಸುತ್ತೇನೆ.
  ಪ್ರತಿ ವ್ಯಕ್ತಿ ಜಾತಿಯ ಮುಕ್ತಿ ಪಡೆಯಲು ಪ್ರಯತ್ನ ಮಾಡಬೇಕು.
  ಇವನಾರವ ಇವ ನಮ್ಮವ ಅನ್ನುವ ಸಮಾಜ ನಿರ್ಮಾಣ ಮಾಡಬೇಕು.
  ಪ್ರತಿಯೊಂದು ವಿದ್ಯಾವಂತ ವ್ಯಕ್ತಿ ಸಮಾಜದ ಜಾತಿ ವ್ಯವಸ್ಥೆ ನಾಶಕ್ಕೆ ಪ್ರಯತ್ನ ಮಾಡಬೇಕು

 3. ನೀನಾಸಂ ಸತೀಶ್ ರವರ ನಿಲುವು ಸ್ವಾಗತಾರ್ಹ. ನಾವು ಕೊಚ್ಚೆಗುಂಡಿಯಲ್ಲಿ ಬದುಕುತ್ತಿದ್ದರೂ, “ಇದೇ ಸ್ವರ್ಗ” ಎಂದು ಸುಳ್ಳು ಹೇಳಿಕೊಂಡು ಎಷ್ಟು ದಿನ ತಾನೇ ಬದುಕಲು ಸಾದ್ಯ? ಸತ್ಯವನ್ನು ಒಂದಲ್ಲಾ ಒಂದು ದಿನ ಹೇಳಬೇಕಾಗಿದೆ.

 4. ಹನ್ನೆರಡನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಯಾವ ರೀತಿ ಇತ್ತೊ ಇವತ್ತಿಗೂ ಅದೇ ರೀತಿ ಇದೆ. ಯಾವುದೇ ಬದಲಾವಣೆ ಆಗಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...