ಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್‌‌ ನಾಯಕರಿವರು | Naanu gauri

ಭಯೋತ್ಪಾದಕರನ್ನು ಮಟ್ಟ ಹಾಕುತ್ತೇನೆ ಎಂದು ಅಫ್ಘಾನ್‌ಗೆ ತನ್ನ ಪಡೆಯನ್ನು ಇಳಿಸಿದ್ದ ಅಮೆರಿಕಾ, ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ತಾಲಿಬಾನ್‌ ಕೈಯಲ್ಲಿ ಅಧಿಕಾರ ಕೊಟ್ಟು ಹೊರಟು ಹೋಗಿದೆ. 20 ವರ್ಷಗಳ ಹಿಂದೆ ಯಾರ ಕೈಯ್ಯಲ್ಲಿ ಅಫ್ಘಾನ್‌ ಇತ್ತೋ ಅದೇ ತಾಲಿಬಾನ್‌ ಕೈಯ್ಯಲ್ಲಿ ಇವತ್ತು ಅಫ್ಘಾನ್‌ ಇದೆ. ಧರ್ಮದ ಆಧಾರದಲ್ಲಿ ಅಧಿಕಾರ ಹಿಡಿದರೆ ಏನಾಗುತ್ತದೆ ಎಂದು ತಾಲಿಬಾನ್‌ ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿಗೆ ತೋರಿಸಿದೆ.

ಪ್ರಸ್ತುತ ತಾಲಿಬಾನ್‌ ತಾವು ಶತ್ರಗಳಿಗೆ ಕ್ಷಮೆ ನೀಡಿದ್ದೇವೆ, ವಿವಿಧ ಜನಾಂಗಗಳನ್ನು ಒಳಗೊಂಡ ಸರ್ಕಾರವನ್ನು ರಚಿಸುತ್ತೇವೆ, ಅಫ್ಘಾನ್ ನೆಲದಿಂದ ಭಯೋತ್ಪಾದಕ ಗುಂಪುಗಳನ್ನು ದೂರವಿಡುತ್ತೇವೆ ಮತ್ತು ಮಹಿಳೆಯರಿಗೆ ಶರಿಯಾ ಕಾನೂನಿನ ಮಿತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಅಫ್ಘಾನ್ ಸ್ವಾತಂತ್ರ್ಯ ದಿನ ಮೆರವಣಿಗೆ ಹೊರಟವರ ಮೇಲೆ ತಾಲಿಬಾನ್ ಗುಂಡಿನ ದಾಳಿ ಮಾಡಿದೆ ಎಂಬ ವರದಿಗಳು ಬರುತ್ತಿವೆ. ಇನ್ನು ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ತಾಲಿಬಾನ್‌ ಅನ್ನು ಅಫ್ಘಾನಿಸ್ತಾನದ ಕಾನೂನುಬದ್ಧ ಹೊಸ ಆಡಳಿತಗಾರರು ಎಂದು ಗುಂಪನ್ನು ಗುರುತಿಸಲು ಹಲವು ಷರತ್ತುಗಳನ್ನು ವಿಧಿಸಿದೆ.

ಇದನ್ನೂ ಓದಿ: ಅಫ್ಘಾನ್ ತಾಲಿಬಾನ್ ಗೆಲುವು: ಒಂದು ಎಡಪಂಥೀಯ ನೋಟ

ತಾಲಿಬಾನ್‌ನ ಹಿರಿಯ ನಾಯಕತ್ವವು, 1980 ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ಅಮೆರಿಕಾದಿಂದ ತರಬೇತಿ ಪಡೆದ ಮುಜಾಹಿದ್ದೀನ್ ಬಂಡೂಕೋರರನ್ನು ಒಳಗೊಂಡಿದೆ. ತಾಲಿಬಾನ್‌ನಲ್ಲಿ ಬಹುಪಾಲು ಪಶ್ತೂನ್‌‌ ಜನಾಂದವರೆ ಹೆಚ್ಚಿದ್ದು, ಅಘ್ಘಾನ್‌ನ ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಬಲವಾಗಿದೆ.

ತಾಲಿಬಾನ್‌‌ನ ಏಳು ಪ್ರಭಾವಿ ನಾಯಕರ ಪಟ್ಟಿ ಹೀಗಿದೆ

ಹೈಬತುಲ್ಲಾ ಅಖುಂಜದಾ, ಸುಪ್ರೀಂ ಕಮಾಂಡರ್

1961 ರಲ್ಲಿ ಜನಿಸಿದ ಅಖುಂಜದಾ ತಾಲಿಬಾನ್‌ನ ಅತ್ಯುನ್ನತ ನಾಯಕ. 2016 ರಲ್ಲಿ ತಾಲಿಬಾನ್‌‌ನ ಮೂರನೇ ಸುಪ್ರೀಂ ಕಮಾಂಡರ್ ಆದರು. ಅವರ ಪೂರ್ವಾಧಿಕಾರಿಯನ್ನು ಅಮೆರಿಕಾ ಅದೇ ಸಮಯದಲ್ಲಿ ಡ್ರೋನ್‌ ಸ್ಟ್ರೈಕ್‌ ಮೂಲಕ ಕೊಂದು ಹಾಕಿತ್ತು. ಅಖುಂಜದಾ ಮಿಲಿಟರಿ ಕಮಾಂಡರ್‌ಗಿಂತ ಧಾರ್ಮಿಕ ನಾಯಕನಾಗಿ ಹೆಚ್ಚು ಹೆಸರುವಾಸಿಯಾಗಿದ್ದು, ಇವರು ಹೆಚ್ಚಾಗಿ ಪ್ರಚಾರಕ್ಕೆ ಬಂದಿಲ್ಲ.

ಹೈಬತುಲ್ಲಾ ಅಖುಂಜದಾ

ಅಲ್ಲದೆ ತಾಲಿಬಾನ್‌ನ ಅಗ್ರ ನಾಯಕನಾದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಕೆಲವೇ ಕೆಲವು ಫೋಟೋಗಳು ಲಭ್ಯವಿವೆ. ಅಖುಂಜದಾ ತನ್ನ ಕೊನೆಯ ಸಾರ್ವಜನಿಕ ಹೇಳಿಕೆಯನ್ನು ಮೇ ತಿಂಗಳ ಈದ್ ಅಲ್-ಫಿತರ್ ಹಬ್ಬದ ದಿನ ನೀಡಿದ್ದರು.

ಇದನ್ನೂ ಓದಿ: ಅಫ್ಘಾನ್: ಯಾರೊಂದಿಗೂ ದ್ವೇಷವಿಲ್ಲ, ಎಲ್ಲರಿಗೂ ಕ್ಷಮೆ ನೀಡಿದ್ದೇವೆ – ತಾಲಿಬಾನ್‌

ಅಬ್ದುಲ್ ಘನಿ ಬರದಾರ್, ಉಪ ನಾಯಕ

ಅಬ್ದುಲ್ ಘನಿ ಬರದಾರ್‌ ತಾಲಿಬಾನ್‌ನ ಉಪ ನಾಯಕರಾಗಿದ್ದಾರೆ. ಜೊತೆಗೆ ತಾಲಿಬಾನ್‌ನ ಮುಖ್ಯ ಸಾರ್ವಜನಿಕ ಮುಖ ಕೂಡಾ ಆಗಿದ್ದು, ಅಫ್ಘಾನ್‌ನ ಮುಂದಿನ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ಒಸಾಮಾ ಬಿನ್ ಲಾಡೆನ್ ಜೊತೆ ನಿಕಟ ಸಂಬಂಧ ಹೊಂದಿದ್ದವರಲ್ಲಿ ಇವರು ಕೂಡಾ ಒಬ್ಬರು. ತಾಲಿಬಾನ್‌ನ ಮೊದಲ ಸುಪ್ರೀಂ ಕಮಾಂಡರ್‌ ಆಗಿದ್ದ ಮುಲ್ಲಾ ಮೊಹಮ್ಮದ್ ಒಮರ್ ಜೊತೆಗೆ ತಾಲಿಬಾನ್ ಅನ್ನು ಸ್ಥಾಪಿಸಿದವರು.

2010 ರಲ್ಲಿ ಪಾಕಿಸ್ತಾನದ ಬಂದರು ನಗರವಾದ ಕರಾಚಿಯಲ್ಲಿ ಅಮೆರಿಕದ ಗುಪ್ತಚರ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಬರದಾರನ್ನು ಸೆರೆಹಿಡಿಯಲಾಯಿತು. ಅಫ್ಘಾನಿಸ್ತಾನದ ಅಮೆರಿಕಾ ವಿಶೇಷ ಪ್ರತಿನಿಧಿ ಟ್ರಂಪ್ ಆಡಳಿತದೊಂದಿಗೆ ಶಾಂತಿ ಮಾತುಕತೆಗೆ ಮುಂಚಿತವಾಗಿ 2018 ರಲ್ಲಿ ಆತನ ಬಿಡುಗಡೆಗೆ ಸಹಾಯ ಮಾಡಿದರು ಎಂದು ವರದಿಯಾಗಿದೆ.

ಅಬ್ದುಲ್ ಘನಿ ಬರದಾರ್

ಅವರು ಮಂಗಳವಾರ ತಾಲಿಬಾನ್‌‌ನ ಜನ್ಮಸ್ಥಳವಾದ ಕಂದಹಾರ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲಿವರೆಗೂ ತಾಲಿಬಾನ್‌ಗಳ ರಾಜಕೀಯ ಕಚೇರಿಯಿರುವ ಕತಾರ್‌ನ ದೋಹಾದಲ್ಲಿ ಅವರು ವಾಸುತ್ತಿದ್ದರು. ತಾಲಿಬಾನ್‌ನ ರಾಜತಾಂತ್ರಿಕ ನಾಯಕನಾಗಿರುವ ಅವರು, 2020ರ ಫೆಬ್ರವರಿಯಲ್ಲಿ ಟ್ರಂಪ್ ಆಡಳಿತದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವೆ ಅಫ್ಘಾನಿಸ್ತಾನದಿಂದ ಅಮೆರಿಕಾ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಅಬ್ದುಲ್ ಘನಿ ಬರದಾರ್ ಈ ತಿಂಗಳ ಆರಂಭದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಟಿಯಾಂಜಿನ್‌ನಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಕಾಬೂಲ್‌: ಗುರುದ್ವಾರಕ್ಕೆ ಭೇಟಿ ನೀಡಿ ಸಿಖ್ಖರು, ಹಿಂದೂಗಳೊಂದಿಗೆ ಮಾತನಾಡಿದ ತಾಲಿಬಾನಿಗಳು

ಸಿರಾಜುದ್ದೀನ್ ಹಕ್ಕಾನಿ, ಅಮೆರಿಕಾ ಗುರುತಿಸಿದ ಭಯೋತ್ಪಾದಕ ಗುಂಪಿನ ನಾಯಕ

ಸಿರಾಜುದ್ದೀನ್ ಹಕ್ಕಾನಿ ‘ಹಕ್ಕಾನಿ ನೆಟ್‌ವರ್ಕ್‌’ನ ನಾಯಕ. ಅಮೆರಿಕಾ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. 2016 ರಲ್ಲಿ ಈ ಗುಂಪುಗಳು ತಾಲಿಬಾನ್‌ ಜೊತೆ ವಿಲೀನಗೊಂಡಿತು. ಇದರ ನಂತರ ಹಕ್ಕಾನಿ ತಾಲಿಬಾನ್‌ನ ಎರಡನೆ ಉಪ ನಾಯಕನಾದರು. ಇವರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಓಡಾಡಿಕೊಂಡು ಎರಡು ದೇಶಗಳಾದ್ಯಂತ ಮಿಲಿಟರಿ ಮತ್ತು ಸೈನ್ಯವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಸಿರಾಜುದ್ದೀನ್ ಹಕ್ಕಾನಿ

ತಾಲಿಬಾನ್ ಜೊತೆ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಹಕ್ಕಾನಿ ನೆಟ್ವರ್ಕ್ ಅನ್ನು ಅಮೆರಿಕಾ ಹೇಗೆ ಪರಿಗಣಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅವರ ಸಹೋದರ, ಪ್ರಮುಖ ತಾಲಿಬಾನ್ ನಾಯಕನೂ ಆಗಿದ್ದು, 2014 ರಲ್ಲಿ ಬಹರೈನ್‌ನಲ್ಲಿ ಅಮೆರಿಕಾ ಪಡೆಗಳಿಂದ ಸೆರೆಹಿಡಿಯಲ್ಪಟ್ಟರು. ನಾಲ್ಕು ವರ್ಷಗಳ ನಂತರ ಬಿಡುಗಡೆಯಾದರು.

ಮೊಹಮ್ಮದ್ ಯಾಕೂಬ್, ತಾಲಿಬಾನ್‌ ಸಂಸ್ಥಾಪಕನ ಮಗ

ಮೊಹಮ್ಮದ್ ಯಾಕೂಬ್

ಯಾಕೂಬ್ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್‌ ಪುತ್ರ. ತನ್ನ ತಂದೆಯ ಕಾರಣಕ್ಕೆ ಒಮ್ಮೆ ತಾಲಿಬಾನ್‌ನ ಉನ್ನತ ಹುದ್ದೆಗೆ ಸ್ಪರ್ಧಿಯಾಗಿದ್ದರು. ಯಾಕೂಬ್‌ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ನೆರೆಯ ಪಾಕಿಸ್ತಾನದಲ್ಲಿನ ಸೆಮಿನರಿಯಲ್ಲಿ ಶಿಕ್ಷಣ ಪಡೆದಿದ್ದ ಯಾಕೂಬ್‌, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಸುದ್ದಿಗಳು ಸೂಚಿಸುತ್ತವೆ. ಸಿರಾಜುದ್ದೀನ್ ಹಕ್ಕಾನಿಯೊಂದಿಗೆ ತಾಲಿಬಾನ್‌ನ ಸೇನಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ನಂಬಲಾಗಿದೆ.

ಇದನ್ನೂ ಓದಿ: ಅಫ್ಘಾನ್‌‌ ಪತನ: ‘ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಏನು ಮಾಡಿದ್ದೀರಿ?’ – ಮೋದಿಗೆ ಕಾಂಗ್ರೆಸ್ ಪ್ರಶ್ನೆ

ಅಬ್ದುಲ್ ಹಕೀಂ ಹಕ್ಕಾನಿ, ಪ್ರಮುಖ ಸಂಧಾನಕಾರ

ಅಬ್ದುಲ್ ಹಕೀಂ ಹಕ್ಕಾನಿ

ಸುಪ್ರೀಂ ಕಮಾಂಡರ್ ಅಖುಂಜದಾ ಆಪ್ತನೆಂದು ನಂಬಲಾಗಿರುವ ಹಕೀಂ ಹಕ್ಕಾನಿ, ತಾಲಿಬಾನ್‌ನ ಸಂಧಾನ ತಂಡದ ಮುಖ್ಯಸ್ಥರಾಗಿದ್ದಾರೆ. ಅಫ್ಘಾನ್‌ನ ಹಿಂದಿನ ಅಮೆರಿಕಾ ಬೆಂಬಲಿತ ಸರ್ಕಾರದೊಂದಿಗೆ ಶಾಂತಿ ಮಾತುಕತೆಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಧಾರ್ಮಿಕ ವಿದ್ವಾಂಸರ ಹಿರಿಯ ಮಂಡಳಿಯ ಮುಖ್ಯಸ್ಥರಾಗಿದ್ದಾರೆ.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್, ಪ್ರಮುಖ ರಾಜತಾಂತ್ರಿಕ

ಗುಂಪಿನ ಇತರ ನಾಯಕರಂತಲ್ಲದೆ, ಸ್ಟಾನಿಕ್‌ಜಾಯ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಕಳೆದ ಬಾರಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ಹಿಡಿದಿದ್ದಾಗ ಉಪ ವಿದೇಶಾಂಗ ಮಂತ್ರಿಯಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದರು. 1996 ರಲ್ಲಿ, ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳುವಂತೆ ಕ್ಲಿಂಟನ್ ಆಡಳಿತವನ್ನು ಮನವೊಲಿಸಲು ನಡೆಸಿದ ವಿಫಲವಾದ ಕಾರ್ಯಾಚರಣೆಯಲ್ಲಿ ಸ್ಟಾನಿಕ್‌ಜಾಯ್‌ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್

ರಾಯಿಟರ್ಸ್ ವರದಿಯ ಪ್ರಕಾರ, ಸ್ಟಾನಿಕ್‌ಜಾಯ್‌ ತನ್ನ ನಿಯೋಗಗಳನ್ನು ಚೀನಾದ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ಕರೆದೊಯ್ದಿದ್ದಾರೆ. ಅಫ್ಘಾನ್‌ನ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಅಬ್ದುಲ್ ಹಕೀಮ್ ಹಕ್ಕಾನಿ ಅವರ ಉಪ ಸಮಾಲೋಚಕರಾಗಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತಲೂ ಭಾರತದಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ- ಕಾಬೂಲ್‌ನಿಂದ ಬಂದ ಪತ್ರಕರ್ತೆ

ಜಬಿಹುಲ್ಲಾ ಮುಜಾಹಿದ್, ಮುಖ್ಯ ವಕ್ತಾರ

ಜಬಿಹುಲ್ಲಾ ಮುಜಾಹಿದ್ ಈ ವಾರದ ಆರಂಭದಲ್ಲಿ ಕಾಬೂಲ್‌ನಲ್ಲಿ ನಡೆದ ತಾಲಿಬಾನ್‌ನ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಂತರಾಷ್ಟ್ರೀಯ ಸಮುದಾಯಕ್ಕೆ ತಾಲಿಬಾನ್‌ನ ಸಂದೇಶವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಜಬಿಹುಲ್ಲಾ ಮುಜಾಹಿದ್

20 ವರ್ಷಗಳ ಯುದ್ಧದ ಸಮಯದಲ್ಲಿ, ಅವರು ಪತ್ರಕರ್ತರೊಂದಿಗೆ ದೂರವಾಣಿ ಮೂಲಕ ಅಥವಾ ಪಠ್ಯ ಸಂದೇಶಗಳ ಮೂಲಕ ಮಾತ್ರ ಸಂವಹನ ನಡೆಸಿದ್ದರು. ಆಗಸ್ಟ್ 17 ರಂದು ಪತ್ರಿಕಾಗೋಷ್ಠಿಯ ಸಂವಹನದಲ್ಲಿ ಅವರು ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು.

ಇದನ್ನೂ ಓದಿ: ತಾಲಿಬಾನಿಗಳು ದಾನಿಶ್ ಸಿದ್ದೀಕಿ ಗುರುತು ಪತ್ತೆಯಾದ ನಂತರ, ಕೊಂದಿದ್ದಾರೆ: ವರದಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here