Homeಮುಖಪುಟನಾನು ಈಗಲೇ ರಾಜಕೀಯ ಸೇರೊಲ್ಲ: ಜೆಡಿಎಸ್‌ ಬಗೆಗಿನ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ವಿಜೇತಾ ಅನಂತ್ ಕುಮಾರ್

ನಾನು ಈಗಲೇ ರಾಜಕೀಯ ಸೇರೊಲ್ಲ: ಜೆಡಿಎಸ್‌ ಬಗೆಗಿನ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ವಿಜೇತಾ ಅನಂತ್ ಕುಮಾರ್

- Advertisement -
- Advertisement -

ಕರ್ನಾಟಕದ ರಾಜಕೀಯ ಕುತೂಹಲಕರವಾಗಿದೆ ಏಕೆ ಗೊತ್ತೆ…? ಜೆಡಿಎಸ್ ಇನ್ನು ಬಲಿಷ್ಠ ರಾಜಕೀಯ ಶಕ್ತಿಯಾಗಿರುವುದರಿಂದ.. ಎಂದು ಟ್ವೀಟ್ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್‌ ಕುಮಾರ್ ರವರ ಮಗಳು ವಿಜೇತಾ ಅನಂತ್ ಕುಮಾರ್ ತಮ್ಮ ಹೇಳಿಕೆ ಕುರಿತು ಇಂದು ಸ್ಪಷ್ಟೀಕರಣ ನೀಡಿದ್ದಾರೆ.

ಒಂದು ಸಿದ್ಧಾಂತ ಮತ್ತು ಒಂದು ರಾಜಕೀಯ ವಿಶ್ಲೇಷಣೆ ಅಥವಾ ಅವಲೋಕನವಿರುತ್ತದೆ. ಇವುಗಳು ಸಾಮಾನ್ಯವಾಗಿ ಒಂದೇ ಆಗಿ ಗೊಂದಲಕ್ಕೊಳಗಾಗುತ್ತವೆ. ಒಬ್ಬ ಉತ್ತಮ ಕಲಿಕಾರ್ಥಿಯಾಗಿ ಇದು ನನ್ನ ರಾಜಕೀಯ ಅವಲೋಕನವೇ ಹೊರತು ನನ್ನ ಸೈದ್ಧಾಂತಿಕ ಅನುಮೋದನೆಯಲ್ಲ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬ ಸದಸ್ಯರ ಅನಿಸಿಕೆಗಳೊಂದಿಗೆ ತಳುಕು ಹಾಕುವುದು ಅನ್ಯಾಯವಾಗಿದೆ ಎಂದು ನಿನ್ನೆ ವಿಜೇತಾ ಬರೆದಿದ್ದಾರೆ.

ಪರಸ್ಪರ ಗೌರವವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲಭೂತವಾದುದು ಎಂದು ಅಪ್ಪ ನನಗೆ ಕಲಿಸಿದ್ದಾರೆ. ನನ್ನ ಗೌರವದ ಅಭಿವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಈಗಲೇ ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಹೆಚ್ಚಿನದನ್ನು ಕಲಿಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನನ್ನ ತಂದೆ ಕರ್ನಾಟಕದಲ್ಲಿ 35 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಕಾರ್ಯಕರ್ತರೊಂದಿಗೆ ಸೇರಿ ಒಂದೊಂದೆ ಇಟ್ಟಿಗೆ ಜೋಡಿಸುವ ಹಾಗೆ ಬಿಜೆಪಿಯನ್ನು ಕಟ್ಟಿದರು. ಅಮ್ಮ ಹಸಿವು, ಪೋಷಣೆ ಮತ್ತು ಪರಿಸರ ಕ್ಷೇತ್ರದಲ್ಲಿ ಮತ್ತು ಪಕ್ಷಕ್ಕಾಗಿ ಅತ್ಯಂತ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಹ ಅವರು ಬರೆದಿದ್ದಾರೆ.

ಒಂದು ಪಕ್ಷಕ್ಕೆ ಸೇವೆ ಸಲ್ಲಿಸುವ ಮೂಲಕ ಮತ್ತು ಕಾರ್ಯಕರ್ತನಾಗಿ ಕೆಲಸ ಮಾಡುವ ಮೂಲಕ ರಾಜಕೀಯ ಆರಂಭವಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಲು ನಾನಿನ್ನು ಕಲಿಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ವಿಜೇತಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ‘ಅನಂತಕುಮಾರ್ ಪುತ್ರಿಯವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ವಿಜೇತಾ ನನಗೆ ಸಹೋದರಿ ಸಮಾನ. ಅವರ ಮಾತು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ವಿಜೇತಾ ಮತ್ತು ಅವರ ತಾಯಿ ತೇಜಸ್ವಿನಿ ಅನಂತಕುಮಾರ್‌ ಪಕ್ಷಕ್ಕೆ ಬಂದರೇ ಸ್ವಾಗತ” ಎಂದಿದ್ದರು.


ಇದನ್ನೂ ಓದಿ; ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂದ ಅನಂತಕುಮಾರ್‌ ಮಗಳು, ಪಕ್ಷಕ್ಕೆ ಸ್ವಾಗತ ಎಂದ ಎಚ್‌ಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...