ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂದ ಅನಂತಕುಮಾರ್‌ ಮಗಳು, ಪಕ್ಷಕ್ಕೆ ಸ್ವಾಗತ ಎಂದ ಎಚ್‌ಡಿಕೆ

ಕರ್ನಾಟಕದಲ್ಲಿ ಜೆಡಿಎಸ್ ಇನ್ನು ಬಲಿಷ್ಠವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತಕುಮಾರ್‌ ಅವರ ಮಗಳು ವಿಜೇತಾ ಅನಂತಕುಮಾರ್‌ ಟ್ವೀಟ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷಕ್ಕೆ ಸ್ವಾಗತ ಕೋರಿದ್ದಾರೆ.

“ಅನಂತಕುಮಾರ್ ಪುತ್ರಿಯವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ವಿಜೇತಾ ನನಗೆ ಸಹೋದರಿ ಸಮಾನ. ಅವರ ಮಾತು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ವಿಜೇತಾ ಮತ್ತು ಅವರ ತಾಯಿ ತೇಜಸ್ವಿನಿ ಅನಂತಕುಮಾರ್‌ ಪಕ್ಷಕ್ಕೆ ಬಂದರೇ ಸ್ವಾಗತ” ಎಂದಿದ್ದಾರೆ.

’ರಾಜ್ಯದಲ್ಲಿ ನಮ್ಮ ಪಕ್ಷ ಇಲ್ಲವೇ ಇಲ್ಲ ಅಂತ ಹೇಳುವವರಿಗೆ ಅವರು ಹೇಳಿರುವುದು ಸರಿಯಾಗಿದೆ. ಅವರಿಗೆ ನನ್ನ ಧನ್ಯವಾದಗಳು. ಬಿಜೆಪಿಯವರಂತೂ ಇಬ್ಬರನ್ನು ಗುರುತಿಸಿಲ್ಲ. ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ರಾಜಕಾರಣದಲ್ಲಿ ಅನೇಕ ಬದಲಾವಣೆಗಳಾಗಲಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಸಚಿವಾಲಯದಿಂದ ಕನ್ನಡ ಕಡೆಗಣನೆ: ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ಎಂದ ಕುಮಾರಸ್ವಾಮಿ

 

ಗುರುವಾರ ಟ್ವೀಟ್ ಮಾಡಿದ್ದ ವಿಜೇತಾ ಅನಂತಕುಮಾರ್‌, ” ಕರ್ನಾಟಕದ ರಾಜಕೀಯ ಕುತೂಹಲಕರವಾಗಿದೆ ಏಕೆ ಗೊತ್ತೆ…? ಜೆಡಿಎಸ್ ಇನ್ನು ಬಲಿಷ್ಠ ರಾಜಕೀಯ ಶಕ್ತಿಯಾಗಿರುವುದರಿಂದ” ಎಂದು ಹೇಳಿದ್ದರು.


ಇದನ್ನೂ ಓದಿ: ಜಿಎಸ್‌ಟಿ ವಿಚಾರದಲ್ಲಿ ರಾಜ್ಯಗಳನ್ನು ವಂಚಿಸಿದ್ದಕ್ಕೆ ಸಂಭ್ರಮಿಸಬೇಕೆ?: ಕುಮಾರಸ್ವಾಮಿ ಆಕ್ರೋಶ

LEAVE A REPLY

Please enter your comment!
Please enter your name here