Homeಮುಖಪುಟಬಂಗಾಳಕ್ಕೆ ‘ದೀದಿ’, ತಮಿಳುನಾಡಿಗೆ ‘ಸ್ಟಾಲಿನ್’, ಕೇರಳಕ್ಕೆ ‘ವಿಜಯನ್’!

ಬಂಗಾಳಕ್ಕೆ ‘ದೀದಿ’, ತಮಿಳುನಾಡಿಗೆ ‘ಸ್ಟಾಲಿನ್’, ಕೇರಳಕ್ಕೆ ‘ವಿಜಯನ್’!

ಸಂಪೂರ್ಣ ಫಲಿತಾಂಶದ ಪಟ್ಟಿ ಹೀಗಿದೆ

- Advertisement -
- Advertisement -

Election Results 2021 Live Updates | Assembly election 2021 result | latest election results | latest election news | NaanuGauri

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಮುಗಿದಿದೆ. ದೇಶದ ಜನರ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸ್ಪಷ್ಟ ಬಹುಮತ ಪಡೆದಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಒಂದು ಕಾಲದ ಆಪ್ತ, ಬಿಜೆಪಿಯ ಅಭ್ಯರ್ಥಿ ಸುವೆಂಧು ಅಧಿಕಾರಿ ವಿರುದ್ದ ನಂದಿಗ್ರಾಮದಲ್ಲಿ ಸೋಲುಂಡಿದ್ದಾರೆ. ಕೇರಳದಲ್ಲಿ ಸತತವಾಗಿ ಎಡಕ್ಷಗಳು ಗದ್ದುಗೆಗೆ ಏರಿದೆ. ತಮಿಳುನಾಡಿನಲ್ಲಿ ಡಿಎಂಕೆ ದಶಕಗಳ ನಂತರ ರಾಜ್ಯವನ್ನು ಗೆದ್ದುಕೊಂಡಿದೆ. ಅಸ್ಸಾಂ ಮತ್ತೆ ಬಿಜೆಪಿಯ ತೆಕ್ಕೆಗೆ ಬಿದ್ದರೆ, ಪುದುಚೇರಿಯಲ್ಲಿ ಕೂಡಾ ಬಿಜೆಪಿ ಬಹುಮತಕ್ಕೇರಿದೆ.

ತಮ್ಮ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, “ನಂದಿಗ್ರಾಮದ ಜನತೆ ಯಾವುದೇ ತೀರ್ಪು ಕೊಟ್ಟರೂ ಸ್ವೀಕರಿಸುತ್ತೇನೆ. ನಮ್ಮ ಬೃಹತ್ ವಿಜಯದಲ್ಲಿ ನಂದಿಗ್ರಾಮವನ್ನು ತ್ಯಾಗಮಾಡಬೇಕಾಗಿ ಬಂದಿದೆ. ಆದರೆ ನಾವು ಇಡೀ ರಾಜ್ಯವನ್ನು ಗೆದ್ದಿದ್ದೇವೆ. ಇದುವರೆಗೆ ಏನಾಗಿದೆಯೊ ಅದು ನಮಗೆ ಒಳಿತಾಗಿದೆ. ಆದರೆ ನಾನು ನಂದಿಗ್ರಾಮದ ಫಲಿತಾಂಶದ ವಿಚಾರದಲ್ಲಿ ಕೋರ್ಟಿಗೆ ಹೋಗುತ್ತೇನೆ. ಅಲ್ಲಿ ಕೆಲವು ದುಷ್ಕೃತ್ಯಗಳು ನಡೆದಿವೆ ಎಂದು ನಾನು ಕೇಳಿದ್ದೇನೆ” ಎಂದು ತಿಳಿಸಿದ್ದಾರೆ.

ಪಶ್ಚಿಮಬಂಗಾಳ – 292 ಕ್ಷೇತ್ರಗಳು
ಮ್ಯಾಜಿಕ್ ಸಂಖ್ಯೆ- 148

TMC ► 214
BJP ► 76
Cong & Left ► 1
ಇತರೆ ► 1

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್‌


ಕೇರಳ – 140 ಕ್ಷೇತ್ರಗಳು
ಮ್ಯಾಜಿಕ್ ಸಂಖ್ಯೆ- 71

ಕೇರಳದ ರಾಜಕೀಯ ಸಂಪ್ರದಾಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಬದಲಾಯಿಸಿದೆ. ನಾಲ್ಕು ದಶಕಗಳ ನಂತರ ಕೇರಳದಲ್ಲಿ ಸತತವಾಗಿ ಮೈತ್ರಿಕೂಟವೊಂದು ಅಧಿಕಾರ ಹಿಡಿಯಲಿದೆ. ಆದರೆ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಬಿಜೆಪಿ ಕಳೆದುಕೊಂಡಿದೆ.

ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್‌, ನೇಮಂನಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತಾದರೂ ಅಂತಿಮ ಘಟ್ಟದಲ್ಲಿ ಬಿಜೆಪಿ ಮುಗ್ಗರಿಸಿದೆ. ರಾಜ್ಯದಲ್ಲಿ ಬಿಜೆಪಿ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಕಳೆದುಕೊಂಡಿದೆ.

ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು. ಇದೀಗ ಕೇರಳದಲ್ಲಿ ಎಲ್‌ಡಿಎಫ್‌ 99 ಕ್ಷೇತ್ರಗಳೊಂದಿಗೆ ಬಹುಮತ ಪಡೆದಿದೆ.

ಸಿಪಿಎಂ ನೇತೃತ್ವದ LDF ► 99 Wins
ಕಾಂಗ್ರೆಸ್ ನೇತೃತ್ವದ UDF ► 41 
ಬಿಜೆಪಿ ನೇತೃತ್ವದ NDA► 0 Wins


ತಮಿಳುನಾಡು- 234 ಕ್ಷೇತ್ರಗಳು
ಮ್ಯಾಜಿಕ್ ಸಂಖ್ಯೆ- 118 

ತಮಿಳುನಾಡಿನಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿಯಂತೆ ವಿರೋಧ ಪಕ್ಷವಾದ ಡಿಎಂಕೆ ದಶಕಗಳ ನಂತರ ಅಧಿಕಾರ ಹಿಡಿಯುವತ್ತ ಹೊರಟಿದೆ. ಆದರೆ ಡ್ರಾವಿಡನಾಡಿನಲ್ಲಿ ಬಿಜೆಪಿಯು ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ.

DMK ಒಕ್ಕೂಟ ► 160
AIADMK ಒಕ್ಕೂಟ ► 74

ಇದನ್ನೂ ಓದಿ: `ಕೇರಳ 99′ – ಎಡ ಮೈತ್ರಿಯಲ್ಲಿರುವ ಎಲ್ಲಾ ಪಕ್ಷಗಳಿಗೂ ಸ್ಥಾನ


ಅಸ್ಸಾಂ – 126 ಕ್ಷೇತ್ರಗಳು
ಮ್ಯಾಜಿಕ್ ಸಂಖ್ಯೆ- 64 

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಆಡಳಿತ ಪಕ್ಷಗಳ ಮೈತ್ರಿಕೂಟಕ್ಕೆ ಬಹುಮತ ದೊರಕಿದೆ. ಈ ಮೂಲಕ ಆಡಳಿತರೂಢ ಬಿಜೆಪಿ ನೇತೃತ್ವದ ಮೈತ್ರಿ ಮತ್ತೆಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

BJP ಮೈತ್ರಿ ► 75
ಕಾಂಗ್ರೆಸ್ ಮೈತ್ರಿ ► 50
ಇತರೆ ► 1


ಪುದುಚೇರಿ – 30 ಕ್ಷೇತ್ರಗಳು
ಮ್ಯಾಜಿಕ್ ಸಂಖ್ಯೆ- 16

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ದೊರಕಿದೆ. ಇಲ್ಲಿ ಈ ಹಿಂದೆ ಬಿಜೆಪಿಯು ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಕೆಡವಿಹಾಕಿತ್ತು.

BJP ಮೈತ್ರಿ ► 16
ಕಾಂಗ್ರೆಸ್ ಮೈತ್ರಿ ► 9
ಪಕ್ಷೇತರ ► 5


ಇದನ್ನೂ ಓದಿ: ಸುವೆಂದು ಅಧಿಕಾರಿ ವಿರುದ್ಧ ಸೋಲು: ಕೋರ್ಟಿಗೆ ಹೋಗುತ್ತೇನೆಂದ ಮಮತಾ ಬ್ಯಾನರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...