Homeಎಕಾನಮಿಇಂದಿನ ಬಜೆಟ್‌ನಲ್ಲಿ ಪ್ರಸ್ತಾಪವಾದ ಡಿಜಿಟಲ್ ರುಪಿ: ಹಾಗೆಂದರೇನು?

ಇಂದಿನ ಬಜೆಟ್‌ನಲ್ಲಿ ಪ್ರಸ್ತಾಪವಾದ ಡಿಜಿಟಲ್ ರುಪಿ: ಹಾಗೆಂದರೇನು?

- Advertisement -
- Advertisement -

ಇಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ರವರು ಡಿಜಿಟಲ್ ರುಪಿ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(CBDC) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದು 2022-23 ರಿಂದ ಚಾಲ್ತಿಗೆ ಬರಲಿದೆ ಎಂದಿದ್ದಾರೆ. ಇದರ ಕುರಿತ ಪ್ರಾಥಮಿಕ ಮಾಹಿತಿಗಳು ಇಲ್ಲಿವೆ.

CBDC ಎಂದರೇನು?

CBDC ಒಂದು ಡಿಜಿಟಲ್ ರೂಪದಲ್ಲಿ ಕೇಂದ್ರ ಬ್ಯಾಂಕ್ ನೀಡಿದ ಕಾನೂನಾತ್ಮಕ ಟೆಂಡರ್ ಆಗಿದೆ. ಇದು ಕಾಗದದಲ್ಲಿ ನೀಡಲಾದ ಫಿಯೆಟ್ ಕರೆನ್ಸಿಯನ್ನು ಹೋಲುತ್ತದೆ ಮತ್ತು ಯಾವುದೇ ಫಿಯೆಟ್ ಕರೆನ್ಸಿಯೊಂದಿಗೆ ಬದಲಾಯಿಸಕೊಳ್ಳಬಹುದು.

CBDC ಯನ್ನು ಯಾರು ಪ್ರಾರಂಭಿಸುತ್ತಾರೆ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ಆರ್ಥಿಕ ವರ್ಷದ ಸಾಲಿನಿಂದ CBDCಯನ್ನು ಪ್ರಾರಂಭಿಸಲ್ಲಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದಿಂದ ಬೆಂಬಲಿತವಾಗಿರುವ CBDCಯನ್ನು ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಬ್ಲಾಕ್‌ಚೈನ್ ಮೂಲತಃ ಡಿಜಿಟಲ್ ಲೆಡ್ಜರ್ ಆಗಿದ್ದು ಅದು  ವಹಿವಾಟುಗಳನ್ನು ಟ್ರ್ಯಾಕ್ ಮಾಡಿ ದಾಖಲಿಸುತ್ತದೆ. ಇದಕ್ಕೆ ಶೇ.1 ರಷ್ಟು ಟಿಡಿಎಸ್ ವಿಧಿಸಲು ಸರ್ಕಾರ ಮುಂದಾಗಿದೆ.

CBDCಯ ಅವಶ್ಯಕತೆ ಏನು?

ಇನ್ವೇಸ್ಟೋಪಿಡೀಯಾದ ಪ್ರಕಾರ, ಡಿಜಿಟಲ್ ಮತ್ತು ನಿಯಂತ್ರಿತ ಅನುಕೂಲತೆ ಮತ್ತು ಭದ್ರತೆಯನ್ನು ಬಳಕೆದಾರರಿಗೆ ಒದಗಿಸುವ ಗುರಿಯನ್ನು ಇದು ಹೊಂದಿದೆ. ಡಿಜಿಟಲ್ ವಹಿವಾಟನ್ನು ಉತ್ತೇಜಿಸುತ್ತದೆ.

ಬಜೆಟ್‌ನಲ್ಲಿ ಘೋಷಣೆಯ ಅರ್ಥವೇನು?

ಬಜೆಟ್‌ನಲ್ಲಿನ ಇದರ ಪ್ರಕಟಣೆಯು ಕ್ರಿಪ್ಟೋಕರೆನ್ಸಿ ಮತ್ತು ಇತರೆ ವರ್ಚುವಲ್ ಕರೆನ್ಸಿ ಮೇಲೆ ಸರ್ಕಾರದ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ಬಿಟ್ ಕಾಯಿನ್ ಇತರೆ ಮುಂತಾದ ಖಾಸಗಿ ಕ್ರಿಪ್ಟೋಕರೆನ್ಸಿಗಳೊಂದಿಗೆ ಮನಿಲಾಂಡರಿಂಗ್, ಭಯೋತ್ಪಾದನೆ ಹಣಕಾಸು ಸಹಾಯದಂತಹ ದೂರುಗಳು ಬಂದಿದೆ. ಅದನ್ನು ಬಗೆಹರಿಸಲು ಆರ್‌ಬಿಐ ತನ್ನದೇ ಆದ CBDCಯನ್ನು ಘೋಷಿಸಲು ಯೋಜಿಸಿದೆ.

ಇದು ನಾಗರಿಕರಿಗೆ ಹೇಗೆ ಸಹಾಯಕ?

ಡಿಜಿಟಲ್ ರುಪಿಯನ್ನು ಹೇಗೆ ವಹಿವಾಟು ಮಾಡಬಹುದು ಎಂಬುದರ ಕುರಿತು ತಂತ್ರಜ್ಞಾನ ತಜ್ಞರು ಪ್ರಸ್ತಾಪಿಸಿದ್ದಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಔಪಚಾರಿಕ ಪ್ರಕಟಣೆ ಇನ್ನಷ್ಟೆ ಹೊರಬರಬೇಕಿದೆ. ಒಂದು ಪ್ರಮುಖ ವ್ಯತ್ಯಾಸವೆಂದರೆ ಪ್ರಸ್ತುತ ಡಿಜಿಟಲ್ ಪಾವತಿ ಅನುಭವಕ್ಕೆ ವಿರುದ್ಧವಾಗಿ ಡಿಜಿಟಲ್ ರುಪಿ ವಹಿವಾಟು ತಕ್ಷಣವೇ ಆಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ; ಜನಸಾಮಾನ್ಯರಿಗೆ ಶೂನ್ಯ ಕೊಡುಗೆಯ ಬಜೆಟ್: ವಿಪಕ್ಷಗಳ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read