Homeಮುಖಪುಟರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

- Advertisement -
- Advertisement -

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ. 

ಕಿರುಕುಳದಿಂದ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ನುಸುಳುಕೋರರೊಂದಿಗೆ ಸಮೀಕರಿಸುವುದು ಅನುಚಿತ ಎಂದು ಹೇಳಿರುವ ಅವರು ವ್ಯಕ್ತಿಯ ಮೂಲವನ್ನು ಲೆಕ್ಕಿಸದೆ ಎಲ್ಲರಿಗೂ ಘನತೆ ಮತ್ತು ನ್ಯಾಯದ ಆಧಾರದ ಮೇಲೆ ಸಾಂವಿಧಾನಿಕ ನೈತಿಕತೆಗೆ ಬದ್ಧತೆಯನ್ನು ಪುನರುಚ್ಚರಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ. 

ಕಸ್ಟಡಿಯಲ್ಲಿದ್ದ ಐವರು ರೋಹಿಂಗ್ಯಾಗಳು ದೆಹಲಿಯಿಂದ ನಾಪತ್ತೆಯಾಗಿದ್ದಾರೆ ಎಂಬ ಆರೋಪದ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಸಿಜೆಐ ಸೂರ್ಯಕಾಂತ್ (ಡಿ.2, 2025 ರಂದು) ಅವರು, ‘ನಿರಾಶ್ರಿತರಿಗೆ ಕಾನೂನುಬದ್ಧ ಸ್ಥಾನಮಾನವಿಲ್ಲದಿದ್ದರೆ ಆ ವ್ಯಕ್ತಿಯನ್ನು ಇಲ್ಲಿಯೇ ಇರಿಸಿಕೊಳ್ಳಲು ನಮಗೆ ಬಾಧ್ಯತೆ ಇದೆಯೇ?’ ಎಂದು ಪ್ರಶ್ನಿಸಿದ್ದರು. ಈ ವೇಳೆ ಭಾರತದಲ್ಲಿ ರೋಹಿಂಗ್ಯಾ ವಲಸಿಗರನ್ನು ನಿಭಾಯಿಸುವ ವಿಧಾನದ ಸುತ್ತಲಿನ ಸಾಂವಿಧಾನಿಕ ಮತ್ತು ಮಾನವೀಯ ಉದ್ವಿಗ್ನತೆಯ ತೀಕ್ಷ್ಣ ಚರ್ಚೆಯಲ್ಲಿ, “ಸರ್ಕಾರವು ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಘೋಷಿಸಿದೆಯೇ? ಅಕ್ರಮವಾಗಿ ಗಡಿ ದಾಟಿದ ವ್ಯಕ್ತಿಗಳು ಭಾರತೀಯ ಕಾನೂನಿನಡಿಯಲ್ಲಿ ಸಂಪೂರ್ಣ ಕಾರ್ಯವಿಧಾನದ ರಕ್ಷಣೆಯನ್ನು ಕೋರಬಹುದೇ” ಎಂದು ಪ್ರಶ್ನಿಸಿದ್ದರು.

“ರೋಹಿಂಗ್ಯಾಗಳು ಭಾರತದಲ್ಲಿ ಉಳಿಯಲು ಕಾನೂನು ಸ್ಥಾನಮಾನವಿಲ್ಲದಿದ್ದರೆ, ಅವರು ಅತಿಕ್ರಮಣಕಾರರಾಗಿದ್ದರೆ, ನಮಗೆ ಉತ್ತರ ಭಾರತದ ಭಾಗದಲ್ಲಿ ಬಹಳ ಸೂಕ್ಷ್ಮ ಗಡಿ ಇದೆ. ಯಾರಾದರೂ ಅತಿಕ್ರಮಣಕಾರ ಬಂದರೆ, ‘ನಿಮಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ನಾವು ಬಯಸುತ್ತೇವೆ’ ಎಂದು ಹೇಳುವ ಮೂಲಕ ನಾವು ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆಯೇ?” ಎಂದು ಕೇಳಿದ್ದಲ್ಲದೆ, “ಅವರನ್ನು ವಾಪಸ್ ಕಳುಹಿಸುವುದರಲ್ಲಿ ಸಮಸ್ಯೆ ಏನು?” ಎಂದು ಪ್ರಶ್ನಿಸಿದ್ದರು. ನ್ಯಾಯಮೂರ್ತಿಗಳ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು, ವ್ಯಕ್ತಿಗತ ಘನತೆ ಮತ್ತು ನೈತಿಕತೆಗೆ ತಮ್ಮ ಬದ್ಧತೆ ಪುನರುಚ್ಚರಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದ್ದಾರೆ.

ಪತ್ರದಲ್ಲಿ, ಸಿಜೆಐ ಸೂರ್ಯಕಾಂತ್ ಅವರು ಮಾಡಿರುವ ಆರೋಪ ಮತ್ತು ನೀಡಿರುವ ಹೇಳಿಕೆಗಳು ರೋಹಿಂಗ್ಯಾ ಸಮುದಾಯದ ಹಕ್ಕುಗಳಿಗೆ ವಿರೋಧವಾಗಿದೆ. ಇದು ನಮ್ಮಲ್ಲಿ ಅತ್ಯಂತ ದುರ್ಬಲರ ಹಕ್ಕುಗಳನ್ನು ರಕ್ಷಿಸುವ ವಿಷಯದಲ್ಲಿ ನ್ಯಾಯಾಂಗದ ಮೇಲಿನ ಜನತೆಯ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂಬ ಆತಂಕವಿದೆ ಎಂದಿದ್ದಾರೆ. 

ಪತ್ರದಲ್ಲಿ, “ನ್ಯಾಯಾಲಯದಲ್ಲಿ ನೀಡುವ ಹೇಳಿಕೆ ಮತ್ತು ನ್ಯಾಯಾಲಯದ ತೀರ್ಪುಗಳಲ್ಲಿ ಜನರ ‘ಮೂಲ, ಜಾತಿ, ಧರ್ಮ ಯಾವುದೇ ಭೇದವಿಲ್ಲದೇ’ ಎಲ್ಲರಿಗೂ ಮಾನವ ಗೌರವ ಮತ್ತು ನ್ಯಾಯಾಧಾರಿತ ಸಾಂವಿಧಾನಿಕ ನೈತಿಕತೆಗೆ ತಮ್ಮ ಬದ್ಧತೆಯನ್ನು ಪುನಶ್ಚೇತನಗೊಳಿಸಿ, ಅದನ್ನು ಪುನರುಚ್ಚರಿಸಿ ಎಂದು ಕೋರಿಕೊಂಡಿದ್ದಾರೆ. ಜೊತೆಗೆ, “ಸುಪ್ರೀಂ ಕೋರ್ಟ್‌ನ ಮಹತ್ವ ಮತ್ತು ನಿಮ್ಮ ಪದವಿಯ ಮಹತ್ವವನ್ನು ಕೇವಲ ತೀರ್ಪುಗಳ ಸಂಖ್ಯೆಯಿಂದ ಅಥವಾ ಆಡಳಿತಾತ್ಮಕ ಕ್ರಮಗಳಿಂದ ಅಳೆಯಲಾಗುವುದಿಲ್ಲ; ಬದಲಿಗೆ ಆ ತೀರ್ಪುಗಳನ್ನು ನೀಡುವ ಮತ್ತು ಪರಿಗಣಿಸುವ ಮಾನವೀಯತೆಯಿಂದ ಅಳೆಯಲಾಗುತ್ತದೆ” ಎಂದಿದ್ದಾರೆ. 

ರೋಹಿಂಗ್ಯಾ ಜನರನ್ನು ನುಸುಳುಕೋರರು ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ನ್ಯಾಯಾಂಗದ ಅಧಿಕಾರವು ಸಾಂವಿಧಾನಿಕ ನೈತಿಕತೆ, ಕರುಣೆ ಮತ್ತು ಮಾನವ ಗೌರವದ ರಕ್ಷಣೆಯ ತತ್ವಗಳ ಮೇಲೆ ನಿರ್ಮಿತವಾಗಿದೆ. ಹಿಂಸೆ ಮತ್ತು ಆತಂಕದಿಂದ ಬೇರೆ ದೇಶಕ್ಕೆ ಓಡಿಬಂದವರನ್ನು ಅವರ ಗೌರವಕ್ಕೆ ವಿರೋಧವಾಗಿ ಶತ್ರುತ್ವದ ಭಾಷೆಯಲ್ಲಿ ತಿರಸ್ಕರಿಸಿದಾಗ, ಅದು ನಮ್ಮ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ದುರ್ಬಲರಿಗೆ ಆಶ್ರಯವಾಗಿರುವ ನ್ಯಾಯಾಲಯಗಳ ಮೇಲಿನ ಜನತೆಯ ನಂಬಿಕೆಯನ್ನು ಕುಂದಿಸುತ್ತದೆ. ಅಂತಹ ಹೇಳಿಕೆಗಳು ಪೀಠದ ಪೂರ್ವಾಗ್ರಹದ ಸಂದೇಹಕ್ಕೆ ಸಾಕಷ್ಟು ಆಧಾರವನ್ನು ಒದಗಿಸುತ್ತವೆ” ಎಂದಿದ್ದಾರೆ. ಈ ಮುಕ್ತ ಪತ್ರದಲ್ಲಿ 85ಕ್ಕೂ ಹೆಚ್ಚು ಹಿರಿಯ ನ್ಯಾಯವಾದಿಗಳು,  ವಕೀಲರು ಮತ್ತು ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ತಮ್ಮ ಸಹಿ ಮಾಡಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...