Homeಕರ್ನಾಟಕದಿಶಾ ಬಂಧನ ಕನ್ನಡಿಗರಿಗೆ ಮಾಡಿರುವ ಅಪಮಾನ! ಜಗತ್ತಿನ ಮಕ್ಕಳೆದುರು ತಲೆತಗ್ಗಿಸಿದ ಭಾರತ!

ದಿಶಾ ಬಂಧನ ಕನ್ನಡಿಗರಿಗೆ ಮಾಡಿರುವ ಅಪಮಾನ! ಜಗತ್ತಿನ ಮಕ್ಕಳೆದುರು ತಲೆತಗ್ಗಿಸಿದ ಭಾರತ!

- Advertisement -
- Advertisement -

ಟೂಲ್ ಕಿಟ್ ಕೇಸ್‌ನಲ್ಲಿ ದಿಶಾ ರವಿ ಎಂಬ 21 ವರ್ಷ ವಯಸ್ಸಿನ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೆ ಮಾಡಿರುವ ಅವಮಾನವಾಗಿದೆ.

 

ದೆಹಲಿ ಪೊಲೀಸರು ನೇರವಾಗಿ ಬೆಂಗಳೂರಿಗೆ “ದಾಳಿ” ಮಾಡಿ ಕನ್ನಡಿಗ ಹೋರಾಟಗಾರ್ತಿಯನ್ನು ಬಂಧಿಸಿದ್ದು ಕನ್ನಡಿಗರಿಗೆ ಮಾಡಿದ ಅಪಮಾನ. ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿಯನ್ನೇ ನೀಡದೆ ದಿಶಾ ಮನೆಗೆ ದಾಳಿ ಮಾಡಿ, ಗಂಟೆಗಟ್ಟಲೆ ವಿಚಾರಣೆ ನಡೆಸಿ ಬಂಧಿಸಿರೋದು ಒಕ್ಕೂಟ ವ್ಯವಸ್ಥೆಗೆ ಅವಮಾನವಲ್ಲದೆ ಮತ್ತೇನು?
ಪ್ರತೀ ರಾಜ್ಯಗಳು ತನ್ನದೇ ಆದ ಸ್ವತಂತ್ರ ಪೊಲೀಸ್ ಬಲವನ್ನು ಹೊಂದಿದೆ. ರಾಜ್ಯದ ಆಗುಹೋಗುಗಳ ಮೇಲೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ದೆಹಲಿ ಪೊಲೀಸರು ಮಾತ್ರ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿ ಬರುತ್ತದೆ. ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ ಪೊಲೀಸರು ಎಂಬ ಕಾರಣಕ್ಕೆ ಬೇಕುಬೇಕಾದ ರಾಜ್ಯಗಳಲ್ಲಿ ಅವರು ದಾಳಿ ನಡೆಸುವಂತಿಲ್ಲ. ಇಂತಹ ಉದ್ಧಟತನಗಳು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕೇಂದ್ರ ನಡೆಸುವ ದಬ್ಬಾಳಿಕೆಯನ್ನು ಸೂಚಿಸುತ್ತದೆ.

ಜಾಗತಿಕ ತಾಪಮಾನದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ದಿಶಾ ರವಿ ಕನ್ನಡಿಗರ ಹೆಮ್ಮೆ. ಸ್ವೀಡನ್‌ನ ಗ್ರೆಟಾ ಥನ್‌ಬರ್ಗ್ ಮತ್ತು ಬೆಂಗಳೂರಿನ ದಿಶಾ ರವಿ ಹೋರಾಟದ ಸಹಪಯಣಿಗರು. ಆದರೆ ಗ್ರೆಟಾ ಥನ್‌ಬರ್ಗ್ ಅವರನ್ನು ಅಲ್ಲಿನ ಸರ್ಕಾರ ನಡೆಸಿಕೊಂಡ ರೀತಿಗೂ, ದಿಶಾ ರವಿಯವರನ್ನು ಇಲ್ಲಿನ ನಮ್ಮ ಸರ್ಕಾರ ನಡೆಸಿಕೊಂಡ ರೀತಿಯನ್ನೂ ನಾವು ಆತ್ಮವಿಮಶೆ ಮಾಡಿಕೊಳ್ಳಬೇಕಿದೆ. ದಿಶಾ ಮತ್ತು ಗ್ರೆಟಾ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಒಂದೇ ಗುರಿ, ಉದ್ದೇಶ ಹೊಂದಿರುವವರು. ಗ್ರೆಟಾ ಅಲ್ಲಿನ ಸರ್ಕಾರದ ಆತಿಥ್ಯದಲ್ಲಿದ್ದರೆ, ನಮ್ಮ ದಿಶಾ ಪೊಲೀಸ್ ಆತಿಥ್ಯದಲ್ಲಿದ್ದಾರೆ.

ಗ್ರೆಟಾ ಥನ್‌ಬರ್ಗ್ ತನ್ನ ನೇರ ಮಾತಿನ ವಿಧಾನಕ್ಕೆ ಹೆಸರುವಾಸಿಯಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕವಾಗಿ ಸಭೆಗಳಲ್ಲಿ ಹವಾಮಾನ ಬಿಕ್ಕಟ್ಟು ಕುರಿತು ಅವಳು ವಿವರಿಸಿ, ಪರಿಹಾರ ಕ್ರಮಗಳನ್ನು ಸರ್ಕಾರದ ಮುಂದಿಟ್ಟು ಒತ್ತಾಯಿಸುತ್ತಾಳೆ. ಸರ್ಕಾರ ಕ್ರಮ ಕೈಗೊಳ್ಳದೇ ಹೋದಾಗ ಪ್ರತಿಭಟಿಸಿದ್ದಾಳೆ. ಶಾಲೆಯಲ್ಲೆ ಗ್ರೆಟಾ ಮುಷ್ಕರ ಹೂಡಿದ್ದೂ ಇದೆ, ಸಂಸತ್ತಿಗೆ ಮುತ್ತಿಗೆ ಹಾಕಿದ್ದೂ ಇದೆ. ನಮ್ಮ ದಿಶಾ ಕೂಡ ತಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಗ್ರೆಟಾ ಥನ್‌ಬರ್ಗ್‌ಗೆ ಸ್ವೀಡನ್‌ನಲ್ಲಿ ಗೋಲ್ಡೆನ್ ಕಮೆರಾ ಪ್ರಶಸ್ತಿ (2019); ಫ್ರಿಟ್ ಆರ್ಡ್ ಪ್ರಶಸ್ತಿ (2019); ರಾಚೆಲ್ ಕಾರ್ಸನ್ ಪ್ರಶಸ್ತಿ (2019); ಆತ್ಮಸಾಕ್ಷಿಯ ರಾಯಭಾರಿ ಪ್ರಶಸ್ತಿ (2019); ರಾಯಲ್ ಸ್ಕಾಟಿಷ್ ಜಿಯಾಗ್ರಫಿಕಲ್ ಸೊಸೈಟಿಯ ಫೆಲೋ (FRSGS -Fellow of the Royal Scottish Geographical Society); ಗೆಡ್ಡೆಸ್ ಎನ್ವಿರಾನ್ಮೆಂಟ್ ಮೆಡಲ್ (2019); ಜೀವನೋಪಾಯ ಹಕ್ಕು ಪ್ರಶಸ್ತಿ (2019); ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ (2019); ವರ್ಷದ ವ್ಯಕ್ತಿ (2019) ಹೀಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಆದರೆ ನಾವು ಅದೇ ಆಂದೋಲನದ ಕನ್ನಡಿಗ ಹೋರಾಟಗಾರ್ತಿಯನ್ನು ನಡೆಸಿಕೊಂಡ ರೀತಿ ಯಾವ ಬಗೆಯದು? ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ.

2019 ರ ’ಟೈಮ್ ನಿಯತಕಾಲಿಕೆ’ಯು ಗ್ರೆಟಾ ಥನ್‌ಬರ್ಗ್‌ಅನ್ನು 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೆಸರಿಸಿದೆ. ಆದರೆ ಗ್ರೆಟಾ ಥನ್‌ಬರ್ಗ್‌ಗೆ ಯಾವ ರೀತಿಯಲ್ಲೂ ಕಮ್ಮಿ ಇಲ್ಲದ ಜಾಗತಿಕ ತಾಪಮಾನ ವಿಚಾರದ ಹೋರಾಟಗಾರ್ತಿ ದಿಶಾಳನ್ನು ಇಲ್ಲಿನ ಮಾಧ್ಯಮಗಳು ಭಯೋತ್ಪಾದಕಿಯೆಂದೂ, ದೇಶದ್ರೋಹಿಯೆಂದೂ ಚಿತ್ರಿಸುತ್ತಿದೆ. ರಾಷ್ಟ್ರೀಯ ಮಾಧ್ಯಮಗಳು ಮಣ್ಣು ತಿನ್ನಲಿ. ಕನಿಷ್ಟ ಕನ್ನಡ ಮಾಧ್ಯಮಗಳಾದರೂ ದಿಶಾ ನಮ್ಮ ಸಾಕ್ಷಿ ಪ್ರಜ್ಞೆ ಎಂಬುದನ್ನು ಮನಗಾಣಬೇಕಿತ್ತು. ಪ್ರಶಸ್ತಿ ಘೋಷಣೆ ಬಿಡಿ, ಕನಿಷ್ಟ ಮೌನವಾಗಿದ್ದರೂ ಸಾಕಿತ್ತು. ದಿಶಾಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಧ್ವನಿ ಎಂದು ಹೆಮ್ಮೆಪಟ್ಟುಕೊಳ್ಳುವ ಕನ್ನಡ ಮಾಧ್ಯಮವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.
ದಿಶಾಳ ಸಹವರ್ತಿ ಗ್ರೆಟಾ ಥನ್‌ಬರ್ಗ್ ಅವರನ್ನು 2019ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು. ನಾವು ದಿಶಾಳಿಗೆ ದೇಶದ್ರೋಹಿ ಪಟ್ಟ ಕಟ್ಟಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪಿತೂರಿ ಎಂದು ಸೆಕ್ಷನ್ ಜಡಿದು ಜೈಲಿಗಟ್ಟಿದ್ದೇವೆ.

ಭಾರತ ವಿಶ್ವಗುರು ಆಗುತ್ತದೆ ಎಂದು ಬಲಪಂಥೀಯರು ಭಾಷಣ ಮಾಡಿದ್ದನ್ನು ಕೇಳಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಭಾರತವೇ ವಿಶ್ವಗುರುವಾಗಿತ್ತು. ಹಲವು ಭಾಷೆ, ಹಲವು ಚಿಂತನೆ, ಹಲವು ಬಣ್ಣಗಳಿಗೆ ಈ ಹಿಂದೆ ಭಾರತದಲ್ಲಿ ಮುಕ್ತ ಸ್ವಾತಂತ್ರ್ಯ ಇತ್ತು. ಹಾಗಾಗಿಯೇ ವಿಶ್ವದ ಅತ್ಯುನ್ನತ ಪ್ರಜಾಸತ್ತಾತ್ಮಕ ದೇಶಗಳ ಸಾಲಿನಲ್ಲಿ ನಾವೂ ನಿಲ್ಲುತ್ತಿದ್ದೆವು. ಈಗ ಇಡೀ ವಿಶ್ವದಲ್ಲಿ ದಿಶಾಳ ವಿಚಾರ ಚರ್ಚೆಯಾಗುತ್ತಿದೆ. ಸರ್ಕಾರದ ವಿರುದ್ಧದ ಸಾಮಾಜಿಕ ಜಾಲತಾಣದ ಹೋರಾಟವನ್ನು ರೂಪಿಸಿದಳು ಎಂಬ ಆರೋಪ ಹೊರಿಸಿ ಯುವ ಹೋರಾಟಗಾರ್ತಿಯೊಬ್ಬಳನ್ನು ಬಂಧಿಸಿ ವಿಶ್ವದ ಮುಂದೆ ನಮ್ಮ ಸಣ್ಣತನವನ್ನು ತೋರಿಸಿದ್ದೇವೆ.

ದಿಶಾ ಮತ್ತು ಗ್ರೆಟಾ ಒಟ್ಟಾಗಿ “ಭವಿಷ್ಯಕ್ಕಾಗಿ ಶುಕ್ರವಾರ” ಎಂಬ ಹೆಸರಿನಲ್ಲಿ “ಶಾಲಾ ಹವಾಮಾನ ಮುಷ್ಕರ ಆಂದೋಲನವನ್ನು” ಸಂಘಟಿಸುತ್ತಿದ್ದರು. 2019ರಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಹಲವು ಪ್ರತಿಭಟನೆಗಳು ವಿಶ್ವದೆಲ್ಲೆಡೆ ನಡೆದವು. ಜಗತ್ತಿನಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿದ್ದ ಯುವ ಹೋರಾಟಗಾರ್ತಿ ದಿಶಾ ನಮ್ಮವಳು, ನಮ್ಮ ಕನ್ನಡಿಗಳು ಎಂಬುದು ನಮ್ಮ ಹೆಮ್ಮೆ. ಈಗ ನಾವು ದಿಶಾ ಬಿಡುಗಡೆಗೆ ಕನ್ನಡಿಗರಾಗಿ ಹೋರಾಟ ನಡೆಸಬೇಕಿದೆ. ಇಲ್ಲದೇ ಇದ್ದಲ್ಲಿ ಕನ್ನಡಿಗರು ವಿಶ್ವದ ಮಕ್ಕಳ ಎದುರು ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ.

ಹರೀಶ್ ಕುಮಾರ್ ಬಿ
(ಹೋರಾಟಗಾರರು ಮತ್ತು ಕರ್ನಾಟಕ ರಣಧೀರ ಪಡೆ ಸಂಘಟನೆಯ ಮುಖಂಡರು. ನೆಲ, ಭಾಷೆ ಮತ್ತು ಒಕ್ಕೂಟ ವ್ಯವಸ್ಥೆಯ ಉಳಿವಿಗಾಗಿ ಹಲವು ಹೋರಾಟಗಳನ್ನು ರೂಪಿಸಿ ಮುನ್ನಡೆಸುತ್ತಿದ್ದಾರೆ)


ಇದನ್ನೂ ಓದಿ: ದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! – ಲಿಯೋ ಸಾಲ್ಡಾನಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...