ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ ಎಂದು ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಪ್ರಾಮಾಣಿಕತೆಯನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಪ್ರಶ್ನಿಸಿದ್ದಾರೆ. ದೇಶಕ್ಕಾಗಿ ಅಂಬೇಡ್ಕರ್ ನಡೆಸಿದ ಹೋರಾಟವನ್ನು ನಿರ್ಲಕ್ಷಿಸಿ ಅದನ್ನು ದುರ್ಬಲಗೊಳಿಸಿದ ಕಾಂಗ್ರೆಸ್ ಪಕ್ಷವು “ಶುದ್ಧ ವಂಚನೆ ಮತ್ತು ಸ್ವಾರ್ಥದ ರಾಜಕೀಯ” ದಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ. ಅಂಬೇಡ್ಕರ್‌ಗೆ ಅಗೌರವ
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಒಂದೇ ಎಂದು ಅವರು ಆರೋಪಿಸಿದ್ದಾರೆ. ಈ ನಡುವೆ ಕಾಂಗ್ರೆಸ್, ಅಂಬೇಡ್ಕರ್ ಅವರನ್ನು “ಅವಮಾನ” ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವುದಾಗಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ವಾಸ್ತವದಲ್ಲಿ, ಬಾಬಾ ಸಾಹೇಬ್ ಸೇರಿದಂತೆ ಬಹುಜನ ಸಮಾಜದಲ್ಲಿ ಜನಿಸಿದ ಸಂತರು, ಗುರುಗಳು ಮತ್ತು ಮಹಾನ್ ವ್ಯಕ್ತಿಗಳಿಗೆ ಸಂಪೂರ್ಣ ಗೌರವ ಸಿಕ್ಕಿದ್ದ ಬಿಎಸ್‌ಪಿ ಸರ್ಕಾರ ಇದ್ದಾಗ ಮಾತ್ರ. ಇದನ್ನು ಈ ಜಾತಿವಾದಿ ಪಕ್ಷಗಳು ಅರಗಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ಅವರು ಹೇಳಿದ್ದಾರೆ.
ಭಾನುವಾರ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಯಾವತಿ ಅವರು, “ಅತ್ಯಂತ ಪೂಜ್ಯ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ಅಮಿತ್ ಶಾ ಅವರು ಅವಮಾನ ಮಾಡಿದ್ದಕ್ಕಾಗಿ ದೇಶಾದ್ಯಂತ ಜನರಲ್ಲಿ ಭಾರಿ ಆಕ್ರೋಶವಿದೆ. ಆದರೆ ಕಾಂಗ್ರೆಸ್ ಪಕ್ಷದ ದೇಶಕ್ಕಾಗಿ ಹೋರಾಟ ಮಾಡಿದ ಅವನ್ನು ಯಾವಾಗಲೂ ನಿರ್ಲಕ್ಷಿಸಿ ನೋಯಿಸುತ್ತಿದೆ. ಕಾಂಗ್ರೆಸ್‌ನದ್ದು ಶುದ್ಧ ವಂಚನೆ ಮತ್ತು ಸ್ವಾರ್ಥದ ರಾಜಕಾರಣ” ಎಂದು ಹೇಳಿದ್ದಾರೆ. ಅಂಬೇಡ್ಕರ್‌ಗೆ ಅಗೌರವ
“ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಎಂಬ ಎರಡು ದಿನಗಳ ಚರ್ಚೆಯ ಮುಕ್ತಾಯದಲ್ಲಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ” (ಈ ಒಂದು ಫ್ಯಾಶನ್ ಆಗಿ ಹೋಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಇಷ್ಟು ಬಾರಿ ಭಗವಂತನ ಹೆಸರನ್ನು ಹೇಳಿದ್ದರೆ, ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು) ಎಂದು ಅಮಿತ್ ಶಾ ಹೇಳಿದ್ದರು.
ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ| ‘ಅಮಿತ್ ಶಾಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯ ತ್ಯಜಿಸಬೇಕು’ ಎಂದ ಲಾಲು ಪ್ರಸಾದ್
ಅಂಬೇಡ್ಕರ್‌ಗೆ ಅವಮಾನ| ‘ಅಮಿತ್ ಶಾಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯ ತ್ಯಜಿಸಬೇಕು’ ಎಂದ ಲಾಲು ಪ್ರಸಾದ್


