ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಏರಿಕೆಗೆ ಅನುಗುಣವಾಗಿ ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಮಂಗಳವಾರ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. 14.2 ಕೆಜಿಯ ಸಬ್ಸಿಡಿ ರಹಿತ LPG ಸಿಲಿಂಡರ್ ಈಗ ದೆಹಲಿಯಲ್ಲಿ 949.50 ರೂ.ಗೆ ಏರಿಕೆಯಾಗಿದೆ.
ಕಳೆದ ಅಕ್ಟೋಬರ್ ತಿಂಗಳ ನಂತರ LPG ದರದಲ್ಲಿ ಇದು ಮೊದಲ ಹೆಚ್ಚಳವಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯ ಹೊರತಾಗಿಯೂ ಅಡುಗೆ ಅನಿಲದ ಬೆಲೆ ಏರಿಕೆಯಾಗಿರಲಿಲ್ಲ. ಐದು ರಾಜ್ಯಗಳ ಚುನಾವಣೆಯಿರುವುದರಿಂದ ಬೆಲೆಗಳು ಏರಿಕೆಯಾಗಿರಲಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಯ ಪಟ್ಟಿದ್ದರು.
ನಿರಂತರವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳು ಕೂಡಾ ಚುನಾವಣೆ ಹಿನ್ನಲೆಯಲ್ಲಿ ಏರಿಕೆಯಾಗಿರಲಿಲ್ಲ. ಹಾಗಾಗಿಯೆ ಚುನಾವಣೆಗಳು ಮುಗಿಯುತ್ತಿದ್ದಂತೆ ಪೆಟ್ರೋಲ್ ಬಂಕ್‌ಗಳನ್ನು ವಾಹನಗಳು ಇಂಧನ ತುಂಬಿಸಲು ಸಾಲುಗಟ್ಟಿ ನಿಂತಿದ್ದವು.
ಇಂದಿನ ಬೆಲೆ ಏರಿಕೆಯೊಂದಿಗೆ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂ. ಆಗಿದ್ದು, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂ.ಗೆ ಸಿಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
19 ಕೆಜಿಯ ವಾಣಿಜ್ಯ ಸಿಲಿಂಡರ್ ದರ ಈಗ 2003.50 ರೂ. ಆಗಲಿದೆ.
ಇದನ್ನೂ ಓದಿ: ಎಲ್‌ಪಿಜಿ ಬೆಲೆ ಏರಿಕೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ವಿಶೇಷ ವಿಡಿಯೋ ಬಿಡುಗಡೆ


