Homeಕರ್ನಾಟಕಲಂಕೇಶರ ಊರಿನಲ್ಲಿ

ಲಂಕೇಶರ ಊರಿನಲ್ಲಿ

- Advertisement -
- Advertisement -

ಮಾರ್ಚ್ 8ನೇ ತಾರೀಖು ಲಂಕೇಶರು ಹುಟ್ಟಿದ ದಿನ. ಅವರಿದ್ದಷ್ಟು ಕಾಲ ಆ ದಿನವನ್ನು ಲಂಕೇಶರ ಆಫೀಸು ಮತ್ತು ತೋಟದ ಮನೆಯಲ್ಲಿ ತುಂಬ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಯ್ತು. ಅವರ ನಿರ್ಗಮನದ ನಂತರ ಅವರ ಅಭಿಮಾನಿಗಳಲ್ಲಿ ಅನೇಕರು ಅಲ್ಲಿಇಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗದಲ್ಲೂ ನಡೆದಿದೆ. ಕಳೆದ ವರ್ಷ ನಾಟಕ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿ(ನಿ)ಗಳನ್ನು ಗುರುತಿಸಿ ಅವರನ್ನ ಕರೆದು ಕಥಾ ಕಮ್ಮಟ ಏರ್ಪಡಿಸಿದ್ದರು ಮತ್ತು ಅವರಿಗೆಲ್ಲಾ ಕಥೆ ಬರೆಯಲು ಪ್ರೇರೇಪಿಸಿದ್ದರು. ಇದರಿಂದ ಹೊಸ ತಲೆಮಾರು ಏನನ್ನ ಬರೆಯಲು ಯೋಚಿಸುತ್ತಿದೆ ಎಂಬುದು ಅರಿವಾಯ್ತು. ಸಂಜೆ ದಿಢೀರನೆ ಪ್ರತ್ಯಕ್ಷವಾದ ನಟರಾಜ್ ಹುಳಿಯಾರ್ ಲಂಕೇಶರನ್ನ ಕುರಿತು ಮಾತನಾಡಿ ಹೊಸ ತಲೆಮಾರಿಗೆ ಲಂಕೇಶ್ ಎಂತಹ ಲೇಖಕ ಎಂಬುದರ ಬಗ್ಗೆ ಒಂದು ಅಪರೂಪದ ವ್ಯಕ್ತಿಚಿತ್ರ ಹಿಡಿದುಕೊಟ್ಟರು. ಸೇರಿದ್ದ 70 ಜನ ವಿದ್ಯಾರ್ಥಿಗಳಿಗೆ ಲಂಕೇಶರ ಒಂದೊಂದು ಕೃತಿಯನ್ನ ಕೊಟ್ಟೆವು. ಅವನ್ನು ಲಂಕೇಶರ ಪತ್ನಿ ಇಂದಿರಮ್ಮ ಒದಗಿಸಿದ್ದರು.

ಸಾಸ್ವೆಹಳ್ಳಿ ಸತೀಶ್

ಈ ವರ್ಷ ಲಂಕೇಶರ ಗದ್ಯ ಸಾಹಿತ್ಯದ ಅಧ್ಯಯನ ಎಂಬ ವಿಷಯವನ್ನಿಟ್ಟುಕೊಂಡು ನಟರಾಜ್ ಹುಳಿಯಾರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮಾಡಲು ಹೊರಟೆವು. ಆದರೆ ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿ ಪರೀಕ್ಷೆ ನಡೆಯುವ ಕಾರಣಕ್ಕೆ ಕೈಬಿಟ್ಟೆವು. ಆದರೆ ಲಂಕೇಶರ ಹುಟ್ಟೂರಾದ ಕೊನಗವಳ್ಳಿಯಲ್ಲಿ ಅವರ ಕುರಿತು ಸಭೆಯಿದೆ ಎಂಬ ಸುದ್ದಿ ಬಂತು. ಕತ್ತಿಗೆ ಚನ್ನಪ್ಪ ಮತ್ತು ಶಂಕರಪ್ಪ ಏರ್ಪಡಿಸಿದ್ದಾರೆ, ಅವರ ಮಗ ಬರುತ್ತಾರೆ ಎಂದು ತಿಳಿದುಬಂತು. ಇನ್ನು ಅಲ್ಲಿ ನಮಗೇನು ಕೆಲಸ ಎಂದು ಸುಮ್ಮನಾದೆ. ಆದರೆ ಲಂಕೇಶರ ಮಗ ಹೈದರಾಬಾದಲ್ಲಿ ಶೂಟಿಂಗ್ ನಡೆಸುತ್ತಿರುವುದರಿಂದ ಬರುವುದಿಲ್ಲವಂತೆ ಎಂಬ ವರ್ತಮಾನ ಬಂತು. ಕೂಡಲೇ ನಾನು ಸಾಸ್ವೆಹಳ್ಳಿ ಸತೀಶ್ ಕೊನಗವಳ್ಳಿಗೆ ಹೊರಟೆವು.

ಕೊನಗವಳ್ಳಿಯಲ್ಲಿ ಕರಿಯವ್ವನ ಗುಡಿ ನೋಡಿ ಲಂಕೇಶರ ಮನೆ ಹಿಂದಿನ ಉಡೇವು ನೋಡಿ ಕಾರ್ಯಕ್ರಮ ನಡೆಯಲಿರುವ ಲಂಕೇಶ್ ಸಮುದಾಯಕ್ಕೆ ಬಂದೆವು. ಸಭೆ ಆರಂಭವಾಯ್ತು. ನಿರೂಪಕ ಪ್ರಸ್ತಾವನೆಯನ್ನ ದೀರ್ಘವಾಗಿ ಮಾಡಿ ನಮಗೆಲ್ಲಾ ಐದು ನಿಮಿಷ ಸಾಕು ಎಂದರು. ಲಂಕೇಶರ ಸಂಬಂಧಿ ಶಂಕರಪ್ಪ ಸುದೀರ್ಘವಾಗಿ ಮಾತನಾಡಿದರು. ಇವರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಜನಗಳೇ ಇಲ್ಲದ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವುದು, ಪುಸ್ತಕದ ಮಳಿಗೆಗಳಿಲ್ಲದ ಸಾಹಿತ್ಯ ಸಮಾರಂಭ ಮಾಡುವುದರಲ್ಲಿ ಎತ್ತಿದ ಕೈ. ವೇದಿಕೆ ಮೇಲೆ ಎಷ್ಟು ಜನ ಇರುತ್ತಾರೊ ಅಷ್ಟೇ ಜನ ಸಭಾಂಗಣದಲ್ಲಿದ್ದರೆ ಇವರಿಗೇನೂ ಸಮಾಧಾನ. ಕೇಳಿದರೆ “ಜನ ಬರಲಿಲ್ಲ ಅಂದ್ರೆ ನಾನೇಮಾಡಕ್ಯಾತಿ” ಎನ್ನುತ್ತಿದ್ದರು. ಒಳ್ಳೆಯ ವ್ಯಕ್ತಿಯಾದ್ದರಿಂದ ಸಹಿಸಿಕೊಂಡೆವು. ಆದರೆ ಕಳೆದ ಚುನಾವಣೆಯಲ್ಲಿ ಇವರನ್ನ ಕರೆದುಕೊಂಡು ಹೋದ ಆರ್‌ಎಸ್‌ಎಸ್ಸಿಗರು ತಮ್ಮ ನಡುವೆ ಕೂರಿಸಿಕೊಂಡು ನೀವು ಗೆದ್ದಾಯ್ತು ಎಂದು ಉಬ್ಬಿಸಿದರು. ಲೋಕಸಭಾ ಸದಸ್ಯ ರಾಘವೇಂದ್ರ ಶಂಕರಪ್ಪನಿಗೆ ಮತಹಾಕುವಂತೆ ಸ್ವತಃ ಆಜ್ಞಾಪಿಸಿದರು. ಲಿಂಗಾಯಿತ ಉಪ ಜಾತಿಗಳೆಲ್ಲಾ ಒಟ್ಟಾಗಿ ಶಂಕರಪ್ಪನ ಬೆಂಬಲಕ್ಕೆ ನಿಂತರು. ಇದರಿಂದ ಎಚ್ಚೆತ್ತುಕೊಂಡ ಸಾಹಿತ್ಯ ಪರಿಷತ್ ಮತದಾರರು ಒಟ್ಟಾಗಿ ಡಿ. ಮಂಜುನಾಥರನ್ನ ಬೆಂಬಲಿಸಿ ಗೆಲ್ಲಿಸಿದರು. ಆದರೆ ಶಂಕರಪ್ಪನಿಗೆ ಜ್ಞಾನೋದಯವಾದಂತೆ ಕಾಣಲಿಲ್ಲ.

ಲಂಕೇಶರ ಸಭೆಗೆ ಬಂದು ಮಾತನಾಡುತ್ತ “ಲಂಕೇಶ್ ನನ್ನತ್ರ ಏನೇಳಿದ್ರು ಅಂದ್ರೆ ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಕಣಯ್ಯ ಅಂದಿದ್ರು” ಎಂದರು. ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪ ಒಂದು ಸಭೆಯಲ್ಲಿ ಹೇಳಿದ ಸುಳ್ಳಿಗೆ ಬೆಚ್ಚುವಂತಾಯ್ತು. ಮುಂದುವರಿದ ಶಂಕರಪ್ಪ, “ನಾನು ಸಾಹಿತ್ಯ ಸಮ್ಮೇಳನ ಮಾಡ್ತಿನಿ ದುಡ್ಡು ಕೊಡಿ ಅಂತ ಇಪ್ಪತ್ತೈದು ಲಕ್ಷ ಕೇಳಿದ್ರೆ ಐವತ್ತು ಲಕ್ಷ ಕೊಟ್ರು” ಎಂದರು. ಹೀಗೆ ಶಂಕರಪ್ಪ ಲಂಕೇಶರನ್ನ ಸುಳ್ಳುಸುಳ್ಳೇ ಯಡಿಯೂರಪ್ಪನ ಅಭಿಮಾನಿ ಮಾಡಿಬಿಟ್ಟರು. ಇದಕ್ಕಿಂತ ಮೊದಲು “ಲಂಕೇಶರಿಗೆ ನಮ್ಮ ಜನ ಕಂಡ್ರೆ ಭಾಳ ಪ್ರೀತಿ, ನನ್ನ ತಮ್ಮನಿಗೆ ಎಮ್ಮೆಲ್ಲೆ ಟಿಕೆಟ್ ಕೊಡಿಸಿದ್ರು” ಎಂದಿದ್ದರು. “ನನ್ನ ತಮ್ಮನಿಗೆ ಟಿಕೆಟ್ ಕೊಡಿಸಲು ಸಹಾಯ ಮಾಡಲಿಲ್ಲ, ಮೆಚ್ಚಿ ಬರೆಯಲಿಲ್ಲ. ನಮ್ಮ ಏಳಿಗೆನ ಸಹಿಸಲ್ಲ ನೀವು” ಎಂದು ಟೀಕಿಸಿ ಬರೆದ ಪತ್ರ ಲಂಕೇಶರ ಟೇಬಲ್ ಮೇಲಿದ್ದುದನ್ನ ನಾನು ನೋಡಿದ್ದೆ.

ಅದೇನಾದರೂ ಆಗಲಿ, ನಿನ್ನೆ ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪನವರು ಬಿಜೆಪಿ ಸೇರಿದ ಕೂಡಲೇ ಸುಳ್ಳುಬುರುಕನಾಗಿ ಬದಲಾದದ್ದು ನಮಗಂತೂ ಆಶ್ಚರ್ಯ ಹುಟ್ಟಸಲಿಲ್ಲ. ಆದರೆ ಈತ ’ಯಡಿಯೂರಪ್ಪ ಒಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ಲಂಕೇಶ್ ಹೇಳಿದ್ದರು’ ಎಂಬ ಮಾತನ್ನ ಖಂಡಿಸಬೇಕಿದೆ. ಲಂಕೇಶ್ ಎಂದೂ ಯಡಿಯೂರಪ್ಪನ ಪರ ಮಾತನಾಡಿದ್ದಾಗಲಿ, ಒಂದು ಸಾಲನ್ನು ಬರೆದಿದ್ದಾಗಲಿ ಇಲ್ಲ. ಶಂಕರಪ್ಪ ಕನ್ನಡದ ಪ್ರಜ್ಞಾವಂತರ ಮನಸ್ಸಿನ ಒಂದು ಎಚ್ಚರವಾಗಿರುವ ಲಂಕೇಶರ ಬಗ್ಗೆ ಸುಳ್ಳುಗಳನ್ನ ನಿಲ್ಲಿಸುವುದು
ಅವರಿಗೇ ಒಳ್ಳೆಯದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...