Homeಚಳವಳಿಪ್ರೊ. ಆನಂದ್ ತೇಲ್ತುಂಬ್ಡೆ ಬಂಧನ ವಿರೋಧಿಸಿ ಟ್ವಿಟ್ಟರ್‌ ಅಭಿಯಾನ: #DoNotArrestAnand ಟಾಪ್ ಟ್ರೆಂಡಿಂಗ್

ಪ್ರೊ. ಆನಂದ್ ತೇಲ್ತುಂಬ್ಡೆ ಬಂಧನ ವಿರೋಧಿಸಿ ಟ್ವಿಟ್ಟರ್‌ ಅಭಿಯಾನ: #DoNotArrestAnand ಟಾಪ್ ಟ್ರೆಂಡಿಂಗ್

- Advertisement -
- Advertisement -

ಪ್ರಾಧ್ಯಾಪಕ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಆನಂದ್ ತೇಲ್ತುಂಬ್ಡೆ ಅವರ ಬಂಧನವನ್ನು ವಿರೋಧಿಸಿ ಸಮಾನ ಮನಸ್ಕರು ನೀಡಿದ್ದ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈಗ ಟ್ವಿಟ್ಟರಿನಲ್ಲಿ ವಿವಿದ ಸಂದೇಶದೊಂದಿಗೆ ದೇಶದ ಹಲವಾರು ಗಣ್ಯರು #DoNotArrestAnand ಹ್ಯಾಸ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದು, ಅದೀಗ ಟಾಪ್ ಟ್ರೆಂಡಿಗ್ ಆಗಿದೆ.

ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿತ್ತು. 2018 ರಲ್ಲಿ ಭೀಮಾಕೊರೆಗಾವ್‌ನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಆನಂದ್‌ ತೆಲ್ತುಂಬ್ಡೆಯವರ ಮೇಲೆಯೂ ಸಹ ಪ್ರಕರಣ ದಾಖಲಾಗಿದ್ದು, ಇದು ಪ್ರಭುತ್ವ ಪ್ರಾಯೋಜಿತ ಪಿತೂರಿ ಎಂದು ಆನಂದ್‌ ತೆಲ್ತುಂಬ್ಡೆಯವರು ಆರೋಪಿಸಿದ್ದಾರೆ.

ಟ್ವಿಟ್ಟರಿನಲ್ಲಿ ಹಲವಾರು ಗಣ್ಯರು ಈ ಬಗ್ಗೆ ಬರೆದುಕೊಂಡಿದ್ದು, ಜೆಎನ್ಯೂ ಮಾಜಿ ನಾಯಕ ಉಮರ್ ಖಾಲಿದ್ “ಅವರು ತುಳಿತಕ್ಕೊಳಗಾದ ಜನರ ಹಿತದೃಷ್ಟಿಯಿಂದ ಬರೆಯುವುದನ್ನು ಆಯ್ಕೆ ಮಾಡಿಕೊಂಡರು. ದೇಶದ ಜನರನ್ನು ರಕ್ಷಿಸಲು ಇದನ್ನು ಮಾಡುತ್ತಿದ್ದಾರೆಂದು ನಂಬಿದ್ದರು. ಇದು ಅದಕ್ಕೆ ಪಡೆಯುವ ಪ್ರತಿಫಲವೇ?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಊನಾ ಚಳವಳಿಯ ನೇತಾರ ಹಾಗೂ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ “ಡಾ. ತೇಲ್ತುಂಬ್ಡೆ ಆರೆಸ್ಸಸ್ಸನ್ನು ಮಾತ್ರ ಟೀಕಿಸಲಿಲ್ಲ, ತಪ್ಪು ಮಾಡಿದ ಅಂಬೇಡ್ಕರ್‌ವಾದಿಗಳನ್ನು ಮತ್ತು ಮಾರ್ಕ್ಸ್ವಾದಿಗಳನ್ನು ಕೂಡಾ ಅವರು ಟೀಕಿಸಿದರು. ಇದು ಅವರ ಸೈದ್ಧಾಂತಿಕ ಪ್ರಾಮಾಣಿಕತೆಯನ್ನು ತೋರಿಸುತ್ತದೆ! ಇಂತಹ ಪ್ರಾಮಾಣಿಕ ಚಿಂತಕನನ್ನು ಹೇಗೆ ಬಂಧಿಸಬಹುದು?” ಎಂದು ಟ್ವೀಟಿಸಿದ್ದಾರೆ.

ಮಹಿಳಾ ಹೊರಾಟಗಾರ್ತಿ ಹಾಗೂ ಸಾಮಾಜಿಕ ಕಾರ್ಯರ್ಕೆ ಕವಿತಾ ಕೃಷ್ಣನ್ ಅವರು, ರೋಮಿಳಾ ಥಾಪರ್ ಬರೆದಿರುವ “ವಿಶೇಷ ಅಮಾನವೀಯ” ಲೇಖನವನ್ನು ಟ್ಯಾಗ್‌ ಮಾಡಿ ಬಂಧನವನ್ನು ಖಂಡಿಸಿದ್ದಾರೆ.

ತಮಿಳು ಚಿತ್ರನಿರ್ದೇಶಕ ಮತ್ತು ಅಂಬೇಡ್ಕರ್‌ವಾದಿ ಕಲಾವಿದ ಪ.ರಂಜಿತ್‌ ಟ್ವೀಟ್‌ ಮಾಡಿ “ಮಾನವ ಹಕ್ಕು ಹೋರಾಟಗಾರರಾದ ಆನಂದ್‌ ತೇಲ್ತುಂಬ್ಡೆ ಮತ್ತು ಗೌತಮ್‌ ನವಲಖರನ್ನು ಸುಳ್ಳು ಕೇಸುಗಳ ಅಡಿಯಲ್ಲಿ ಬಂಧಿಸಬೇಡಿ. ಪ್ರಪಂಚವೇ ಕೊರೊನಾ ಭೀತಿಯಲ್ಲಿರುವಾಗ ಬಂಧನವಿಲ್ಲದೆಯೇ ವಿಚಾರಣೆ ನಡೆಸಿ. ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾಂಸರನ್ನು ಬಂಧಿಸುವುದು ನಿಜಕ್ಕೂ ದೌರ್ಜನ್ಯ ಮತ್ತು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹಗಾರ್ತಿ ಮೀನಾ ಕಂದಸ್ವಾಮಿ, ದಲಿತರಿಂದ ಸ್ವತಂತ್ರ ಅಭಿವ್ಯಕ್ತಿಯ ಸಣ್ಣದೊಂದು ಚಿಹ್ನೆ ಕಂಡರು ಕೂಡಾ ರಾಜ್ಯವು ಅವರ ಮೇಲೆ ವಿವೇಚನಾರಹಿತವಾದ ಬಲವನ್ನು ಪ್ರಯೋಗಿಸುತ್ತದೆ. ಅವರನ್ನು ನಕ್ಸಲರಂತೆ ದೋಷಾರೋಪಣೆ ಮಾಡುತ್ತದೆ ಹಾಗೂ ಅವರನ್ನು ವರ್ಷಗಳ ಕಾಲ ಸೆರೆಹಿಡಿಯುತ್ತದೆ ಮತ್ತು ನಿರ್ಭಯದಿಂದ ಕೊಲ್ಲುತ್ತದೆ… ಎಂಬ ತೇಲ್ತುಂಬ್ಡೆ ಬರೆದ ಬರಹದ ಸಾಕ್ಷಾತ್ಕಾರ ಈಗ ಆಗುತ್ತಿದೆ ಎಂದು ಬರೆದಿದ್ದಾರೆ.

ಅಲ್ಲದೆ, “1926, ಇಟಾಲಿಯ ಫ್ಯಾಸಿಸಂ, ಆಂಟೋನಿಯೊ ಗ್ರಾಮ್ಸಿಯನ್ನು ಬೆನಿಟೊ ಮುಸೊಲಿನಿಯ ಆಡಳಿತವು ಬಂಧಿಸಿತು. 2020, ಮನುವಾದಿ ಹಿಂದುತ್ವ ಫ್ಯಾಸಿಸಂ ಆನಂದ್ ತೆಲ್ತುಂಬ್ದೆ ಅವರನ್ನು ನರೇಂದ್ರ ಮೋದಿ- ಅಮಿತ್ ಶಾ ಆಡಳಿತ ಬಂಧಿಸಲಿದೆ. ಇತಿಹಾಸವು ಮರುಕಳಿಸುತ್ತಿದೆ. ಬುದ್ಧಿಜೀವಿಗಳ ಬೇಟೆಯನ್ನು ನಿಲ್ಲಿಸಿ.” ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಸಿಂಗ್ ಅವರು “ಅನ್ಯಾಯದ ಹಿನ್ನೆಲೆಯಲ್ಲಿ, ಮೌನವಾಗಿರುವುದು ರಾಜಕೀಯವಾಗಿ ಮಾತನಾಡುವುದು ಅಷ್ಟೇ. ಆನಂದ್ ತೆಲ್ತುಂಬ್ದೆ ಮತ್ತು ಗೌತಮ್ ನವಲಖ ಅವರೊಂದಿಗೆ ನಿಂತುಕೊಳ್ಳಿ. ಆತ್ಮಸಾಕ್ಷಿಯಿರುವವರು ಎಲ್ಲ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ.” ಎಂದು ಒತ್ತಾಯಿಸಿದ್ದಾರೆ.

 

ಪತ್ರಕರ್ತ ನಿಲಂಜಯ್ ತಿವಾರಿ ಡಾ. ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯಂದು “ಡಾ.ಬಿ.ಆರ್ ಅಂಬೇಡ್ಕರ್ ಅವರ ಅಳಿಯನನ್ನು ಬಂಧಿಸುತ್ತಿರುವುದು,  ಸಮಾಜ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಬಗ್ಗೆ ಸಾಕಷ್ಟು ಹೇಳುತ್ತೇವೆ. ನಾವು ಕೊರೊನಾದಿಂದ ಮಾತ್ರವಲ್ಲ, ಜಾತಿ, ಕೋಮುವಾದ ಮತ್ತು ಸರ್ವಾಧಿಕಾರಕ್ಕೆ ಕೂಡಾ ತುತ್ತಾಗಿದ್ದೇವೆ!” ಎಂದು ಬರೆದಿದ್ದಾರೆ.

 

ಹಿರಿಯ ಪ್ರಾದ್ಯಾಪಕರಾಗಿರುವ ಆನಂದ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಜಾತಿ-ವರ್ಗ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂದಿಸಿದಂತೆ ಅತ್ಯಂತ ಮಹತ್ವದ ಚಿಂತಕರಾದ ಆನಂದ ತೇಲ್ತುಂಬ್ಡೆ ಅವರು ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಹಕ್ಕುಗಳ ಪರವಾದ ಹೋರಾಟಗಾರರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...