Homeಕರ್ನಾಟಕಹಾಸನ ಚಲೋ| ಪ್ರಜ್ವಲ್ ಅಟ್ಟಹಾಸಕ್ಕೆ ಕೊನೆಯಿದೆ, ಗೆದ್ದರೂ-ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಕೆ. ನೀಲಾ

ಹಾಸನ ಚಲೋ| ಪ್ರಜ್ವಲ್ ಅಟ್ಟಹಾಸಕ್ಕೆ ಕೊನೆಯಿದೆ, ಗೆದ್ದರೂ-ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಕೆ. ನೀಲಾ

- Advertisement -
- Advertisement -

ಬಿಜೆಪಿಯವರು ರಾಮಾಯಣ, ಮಹಾಭಾರತ ನಮ್ಮವು ಅಂತ ಹೇಳಿಕೊಳ್ತಾರೆ. ಇಂತಹ ಸಂದರ್ಭದಲ್ಲಿ ಮಹಾಭಾರತದ ದ್ರೌಪದಿ ಕತೆಯನ್ನ ನೆನಪು ಮಾಡುವೆ. ಆಕೆಯ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರು ಸಹಾಯಕ್ಕೆ ಬರುವುದಿಲ್ಲ. ಆಕೆ ಪ್ರತಿಜ್ಞೆ ಮಾಡಿದಂತೆ ದುಶ್ಯಾಸನನ ತೊಡೆ ಸೀಳಿ ಆ ರಕ್ತದಿಂದ ಮುಡಿಕಟ್ಟಿದಳು. ಹಾಗಾಗಿ ಪ್ರಜ್ವಲ ನೀನು ನನ್ನ ಮೊಮ್ಮಗನ ವಯಸ್ಸಿನವನು. 4ನೇ ತಾರೀಖಿನ ನಂತರ ಗೆದ್ದಬಿಡಬಹುದು ಎಂಬ ಅಹಂಕಾರ ನಿನಗಿದ್ರೆ ಎಚ್ಚರಿಕೆ, ನಿನ್ನ ಅಟ್ಟಹಾಸಕ್ಕೆ ಕೊನೆಯಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಆಕ್ರೋಶ ಹೊರಹಾಕಿದರು.

ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಹಾನಸದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ-ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿಬಿಟ್ಟಿರಿ, ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡೋದಕ್ಕೆ ಕಾರಣವಾಗಿದೆ. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ” ಎಂದು ಹೇಳಿದರು.

ಈ ದೇಶದ ಪ್ರಧಾನಿ ತಾಯಿ ದ್ರೋಹಿ

ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ ವಿಡಿಯೋ ಮಾಡಿ ಅವರ ಘನತೆಯನ್ನು ಉಲ್ಲಂಘಿಸಲಾಗಿದೆ. ಆದರೆ, ಪ್ರಧಾನಿ ನಾನು ಜೈವಿಕವಾಗಿ ತಾಯಿ ಹೊಟ್ಟೆಯಲ್ಲಿ ಹುಟ್ಟಿಬಂದಿಲ್ಲ ಬಂದಿಲ್ಲ, ದೇವರು ಕಳಿಸಿದ್ದಾನೆ ಅಂತಾರೆ. ಆದರೆ, ಈಗ ಹೇಳ್ತಾ ಇದೀನಿ, ಈ ದೇಶದ ಪ್ರಧಾನಿ ತಾಯಿದ್ರೋಹಿ. ರಕ್ತ ಸುರಿಸಿ ನೋವು ತಿಂದು ಜನ್ಮ ಕೊಡುವವಳನ್ನು ಪೆನ್‌ಡ್ರೈವ್‌ನಲ್ಲಿ ನೋಡುದ್ವಿ ಎಂದವರನ್ನು ಶಿಕ್ಷಿಸದಿರುವ ನಿಮಗೆಲ್ಲ ನಾಚಿಕೆಯಾಗಬೇಕು.

ಡಿಸಿ-ಎಸ್‌ಪಿ ಕೂಡ ತಪ್ಪಿತಸ್ಥರು

‘ವಿಡಿಯೋ ಮಾಡಿದ ಪ್ರಜ್ವಲ್, ಪೆನ್‌ಡ್ರೈವ್‌ ಹಂಚಿದವರು ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನಿಸಬೇಕಿದೆ. ಪ್ರಸಾರವಾಗುವುದಕ್ಕೆ ಬಿಡಬೇಡಿ ಅಂತ ಮನವಿ ಮಾಡಿದರೂ ಕ್ರಮವಹಿಸಲಿಲ್ಲ. ಹಾಸನದ ಡಿಸಿ, ಎಸ್‌ಪಿ ನೀವು ಮಹಿಳೆಯಾಗಿದ್ದುಕೊಂಡು ತಪ್ಪು ಮಾಡಿದ್ದೀರಿ, ನೀವು ತಪ್ಪಿತಸ್ಥರೆ… ಆ ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುವುದರಲ್ಲಿ ನೀವುಗಳು ವಿಫಲವಾಗಿದ್ದೀರಿ” ಎಂದು ಬೇಸರ ಹೊರಹಾಕಿದರು.

‘ಸಂತ್ರಸ್ತ ಮಹಿಳೆ ಅನ್ನಬೇಡಿ, ಆ ಪದವನ್ನು ಕಿತ್ತಾಕಿ. ತೊಂದರೆಗೆ ಒಳಗಾದ ಮಹಿಳೆಯರ ಜತೆ ನಾವಿದ್ದೇವೆ ಎಂದು ಹೇಳುವುದಕ್ಕೆ ನಾವಿಲ್ಲಿ ಬಂದಿದ್ದೀವಿ. ಈ ಸರ್ಕಾರ ಮಹಿಳೆಯರನ್ನ ರಕ್ಷಿಸಬೇಕು. ಅವರಿಗೆ ಘಟನೆ ಬದುಕನ್ನು ರಕ್ಷಿಸಲು ಮುಂದಾಗು ಅಂತ ಕೇಳುದ್ರೆ ಸಿದ್ದರಾಮಯ್ಯ ಅವರೇ ನಿಮ್ಮ ಬೇಳೆ ಬೇಯಿಸಿಕೊಂಡ್ರಿ, ಜವಾಬ್ದಾರಿಯಿಂದ ವಂಚಿತರಾದ್ರಿ. ಇನ್ನು ಬಿಜೆಪಿಯವ್ರೇ, ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿರಿ. ಹಾನಸಕ್ಕೆ ಬಂದು ಅತ್ಯಾಚಾರಿ ಪ್ರಜ್ವಲನಿಗೆ ವೋಟಾಕಿ ಅಂತ ಕೇಳಿದ್ರಿ, ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾನಸಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರು ಒಳ್ಳೆದನ್ನ ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ’ ಎಂದರು.

ಪ್ರಜ್ವಲನಿಂದ ಕಾಡುಪ್ರಾಣಿ ಭೇಟೆ

ಪ್ರಜ್ವಲ್ ದೇವಲಾಪುರ ಅರಣ್ಯದಲ್ಲಿ ಜಿಂಕೆ, ಚೀತಾ, ಮೊಲ ಸೇರಿದಂತೆ ಹಲವು ಪ್ರಾಣಿಗಳನ್ನು ಭೇಟೆಯಾಡಲು ಹೋಗುತ್ತಾನೆ. ಅಲ್ಲಿನ ಸ್ಥಳೀಯರು ಅದಕ್ಕೆ ಸಾಕ್ಷಿ ಇದ್ದಾರೆ. ಡಿಸಿ-ಎಸ್‌ಪಿ ತಾಕತ್ತಿದ್ದರೆ ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮಾಡಿ ಎಂದು ಸವಾಲು ಹಾಕಿದರು.

ರೇವಣ್ಣನ ಅಸ್ಪೃಶ್ಯತೆ ಒಪ್ಪಬೇಡಿ

ರೇವಣ್ಣ ನೀವು ನಡೆಸಿರುವ ಅಸ್ಪೃಶ್ಯತೆಯ ಕರಾಳ ಮುಖವನ್ನು ಬಿಚ್ಚಿಡುತ್ತೇವೆ. ಹಾಸನದ ಜನತೆ ಆ ಕುಟುಂಬ ಇದುವರೆಗೂ ನಡೆಸಿರುವ ಅಸ್ಪೃಶ್ಯತೆ, ಜಾತಿ ದೌರ್ಜನ್ಯಗಳನ್ನು ಒಪ್ಪಬೇಡಿ, ತಿರಸ್ಕರಿಸಿ, ಪ್ರತಿಭಟಿಸಿ, ಸೆಟೆದು ನಿಲ್ಲಿ ಎಂದು ನೀಲಾ ಕರೆ ನೀಡಿದರು.

ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಒಡೆದ ಬಿಜೆಪಿ

ಈ ಪ್ರಕರಣದ ಮೂಲಕ ಹಾಸನದ ಗಂಡಸರು ಹೆಣ್ಣನ್ನು ಒಂಟಿಯಾಗಿ ಆಚೆ ಹೋಗದಂತೆ ಕಟ್ಟಿಹಾಕಲು ಬಿಜೆಪಿ ದಾರಿಮಾಡಿಕೊಟ್ಟಿದೆ. ಮನಸ್ಮೃತಿಯ ಅಣತಿಯಂತೆ ಮಹಿಳೆಯರನ್ನು ಕಟ್ಟಿಹಾಕುವ ಕೆಲಸಕ್ಕೆ ಬಿಜೆಪಿ ಈ ಪ್ರಕರಣದ ಮೂಲಕ ಸಂಚು ರೂಪಿಸಿದೆ. ಇನ್ನು ಎರಡನೇಯದಾಗಿ, ಕುಮಾರಸ್ವಾಮಿ, ದೇವೇಗೌಡ ಹಾಗೂ ರೇವಣ್ಣ ನಿಮ್ಮ ಮನೆಯ ಮಗನನ್ನು ಬೆಂಬಲಿಸಿ ಆ ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನು ನಾಶ ಮಾಡಿದ್ದಾರೆ ನಿಮಗೆ ಇದು ಇಂದಿಗೂ ಅರ್ಥವಾಗಿಲ್ಲ ಎಂದರು.

ಹಾಸನದ ಮಹಿಳೆಯರ ಕಣ್ಣೀರ ಹನಿಗಳನ್ನು ಬಾವುಟವಾಗಿಸಿ ರಾಜ್ಯಾದ್ಯಂತ ಹೋರಾಟ ಮಾಡೋಣ. ಸ್ವಾಭಿಮಾನದ, ಮಹಿಳಾ ಅಸ್ಮಿತೆಯ ಚಳುವಳಿಯ ಕಟ್ಟೋಣ ಅಂಜಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ನೊಂದ ಮಹಿಳೆಯರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿ; ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿಸುವ ಯತ್ನಗಳು ನಡೆದವು: ಮಲ್ಲಿಗೆ ಸಿರಿಮನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...