Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು.

- Advertisement -
- Advertisement -

ತೆಂಗಿನ ಮರವನ್ನು ಇನ್ನಿತರ ಮರಗಳಿಂದ ಬೇರ್ಪಡಿಸಿ ನೋಡುವಂತೆ ಮಾಡಿರುವುದೇ ಈ ಮರಕ್ಕಿರುವ ರೆಕ್ಕೆಯಂತಾ ಗರಿಗಳು. ಜನರು ಇದನ್ನು ಸರಿಯಾಗಿಯೇ ಗುರ್ತಿಸಿ ತೆಂಗಿನ ಎಲೆ ಎನ್ನದೆ ತೆಂಗಿನ ಗರಿ ಎಂದು ಕರೆದಿರುವುದು. ಗಾಳಿ ಬೀಸುವಾಗ ನೋಡಿದರೆ ಇವು ಎಲ್ಲಿಗೋ ಹಾರಿ ಹೋಗಲು ಸಿದ್ಧವಾಗುತ್ತಿವೆಯೇನೋ ಅನಿಸುತ್ತದೆ. ರೆಂಬೆ ಕೊಂಬೆ ಇಲ್ಲದ ಈ ಮರಕ್ಕೆ ಈ ಗರಿಗಳೇ ರೆಂಬೆಗಳು ಕೊಂಬೆಗಳು.

ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ತೆಂಗು ವಿರಳವಾಗಿದ್ದಾಗಲೂ ಅವುಗಳ ಗರಿಗಳನ್ನು ಮದುವೆ ಚಪ್ಪರಗಳ ರಚನೆಗೆ ಬಳಸುತ್ತಿದ್ದರು. ಅಡಕೆ ಮರ ಅಡಕೆ ದಬ್ಬೆಗಳನ್ನು ಬಳಸಿ ರೂಪಿಸುತ್ತಿದ್ದ ಚಪ್ಪರಕ್ಕೆ ಈ ಕಲಾಕೃತಿಯಂತಾ ಗರಿಗಳನ್ನು ಹೊದಿಸುತ್ತಿದ್ದರು. ಈ ಬಗೆಯ ಚಪ್ಪರವನ್ನು ನೋಡಲೆಂದೆ ಜನ ನಮ್ಮೂರಿನ ಮದುವೆಗಳಿಗೆ ಬರುತ್ತಿದ್ದರು. ನಮ್ಮೂರಿನ ಸಿದ್ದಕ್ಕನವರ ರಾಮಣ್ಣನವರು ಈ ಚಪ್ಪರ ಹಾಕಿಸುವ ಇಂಜಿನಿಯರ್‌ ಆಗಿದ್ದರು. ಒಂದಿಂಚೂ ಆಚೀಚೆ ಆಗದಂತೆ ಗಣಿತ ಶಾಸ್ತ್ರ ಪಂಡಿತರಂತೆ ಮುಂದೆ ನಿಂತು ಚಪ್ಪರ ಹಾಕಿಸುತ್ತಿದ್ದರು. ಇವರಿಗೆ ಸಾತ್‌ ನೀಡುತ್ತಿದ್ದ ನಮ್ಮ ಪೀಳಿಗೆಯ ಜನ ಅವರನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾರೆ.

ತೆಂಗಿನ ಹಸಿ ಗರಿಗಳಿಂದ ಹರಟೆ ಚಾಪೆಯನ್ನೂ, ಸುಳಿಗರಿಗಳಿಂದ ಮಡಕೆ, ವಾಡೆ, ಮೂಡೆಗಳ ತಳಕ್ಕೆ ಬಳಸುತ್ತಿದ್ದ ಸಿಂಬೆಗಳನ್ನು ಸುಂದರವಾಗಿ ಹೆಣೆಯುತ್ತಿದ್ದ ಆನೆಗಾಲು ಸಿದ್ದಪ್ಪ ಒಂದು ಸುಂದರ ನೆನಪು. ನಮ್ಮ ಅಟ್ಟದ ಮೇಲೆ ಹುಡುಕಿದರೆ ಸಿದ್ದಪ್ಪ ಹೆಣೆದ ಸಿಂಬೆಗಳು ಅನಾಥ ಸ್ಥಿತಿಯಲ್ಲಿ ಸಿಕ್ಕಾವು. ಇಂಥಾ ಸಿದ್ದಪ್ಪ ಹೆಣೆದುಕೊಡುತ್ತಿದ್ದ ಹರಟೆ ಚಾಪೆಗಳ ಮೇಲೆ ಕೂರಿಸಿಕೊಂಡು ರಾತ್ರಿ ಆಕಾಶದ ಅಡಿಯಲ್ಲಿ ನಮ್ಮಜ್ಜಿ ಹೇಳುತ್ತಿದ್ದ ಕತೆಗಳ ಮಾಯಕ್ಕೆ ಏನು ಸಮ.

ಆಯ್ಕೆ ಮಾಡಿದ ಒಣ ತೆಂಗಿನ ಗರಿಗಳಿಂದ ಚಾಪೆ ಹೆಣೆದು ಕೃಷಿ ಉತ್ಪನ್ನಗಳನ್ನು ಒಣಗಲು ಹಾಕಲು ಬಳಸುತ್ತಿದ್ದರು. ಟಾರ್ಪಾಲು, ಪ್ಲಾಸ್ಟಿಕ್ ಶೀಟ್‌ ಗಳ ಬಳಕೆ ಇರಲೇ ಇಲ್ಲ. ಇಂಥ ಚಾಪೆಗಳನ್ನು ಹೆಣೆಯುವುದರಲ್ಲಿ ನಮ್ಮವ್ವನ್ನನ್ನು ಮೀರಿಸುವವರು ಇರಲಿಲ್ಲವೆಂದು ಆಗ ನಮ್ಮವ್ವನ ಸಹಚರರು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಮ್ಮವ್ವನ ಈ ಚಾಪೆಗಳ ಹಣಿ ಅಗಲವಾಗಿಯೂ ದೃಢವಾಗಿಯೂ ಇರುತ್ತಿದ್ದವು. ಮಾತು ಮಾತಾಡುತ್ತಲೇ ಚಾಪೆಯ ಹಣಿಯ ಸಿಂಬೆಗಳು ಸುತ್ತಿಕೊಂಡು ದೊಡ್ಡವಾಗುತ್ತಿದ್ದವು. ಈ ಹಣಿಗಳನ್ನು ಸೇರಿಸಿ ಒಟ್ಟಿಗೆ ಚಾಪೆ ಹೊಲಿಯುವುದು ಒಂದು ಕಲೆ. ಈಚಲು ಗರಿಗಳಿಂದ ಚಾಪೆ ಹೆಣಿಯುತ್ತಿದ್ದರು, ನಿಜ ಹೇಳಬೇಕೆಂದರೆ ಇವು ತೆಂಗಿನ ಚಾಪೆಗಳಿಗಿಂತಲೂ ಬಾಳಿಕೆ ಬರುತ್ತಿದ್ದವು. ಇವೆಲ್ಲ ಈಗ ಗ್ರಾಮೀಣ ಚರಿತ್ರೆಯ ಹಳಹಳಿಕೆಗಳಾಗಿ ಮಾತ್ರ ಉಳಿದಿವೆ.

ಈಗ ಈ ಗರಿಗಳನ್ನು ನಾವೀಗ ಮಲ್ಚಿಂಗ್‌ ಮುಚ್ಚಿಕೆಯಾಗಿ ಬಳಸುತ್ತಿದ್ದೇವೆ. ಸ್ವಾಗೆ ಗರಿಗಳಲ್ಲಿರುವ ಕಡ್ಡಿಗೆ ಈಗ ಉತ್ತಮ ಬೆಲೆ ಬಂದಿದೆ, ಉತ್ತರ ಭಾರತದ ಕಸ ಗುಡಿಸುತ್ತಿರುವುದು ಈ ನಮ್ಮ ಭಾಗದ ಸ್ವಾಗೆ ಕಡ್ಡಿ ಪೊರಕೆಗಳೇ. ಆಮ್‌ ಆದ್ಮಿ ಪಕ್ಷದ ಸಿಂಬಲ್ ಮಟ್ಟಕೆ ಅದು ಬೆಳೆದು ನಿಂತಿರುವುದು ಯಾರಿಗೆ ತಾನೆ ಗೊತ್ತಿಲ್ಲ.

ಈ ತೆಂಗಿನ ಗರಿಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದ ರೈತರೀಗ ಅದರ ಲಾಭ ಕಂಡುಕೊಂಡಿದ್ದಾರೆ. ನೆಲದ ಪಸೆ ಆರದಂತೆ ಅವುಗಳನ್ನು ಹರಡಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಗರಿಗಳನ್ನು ಸಣ್ಣಗೆ ಸವರಿ ಹರಡುತ್ತಿದ್ದಾರೆ, ಏನಾದರೂ ಆಗಲಿ ಸುಡದಿದ್ದರೆ ಸಾಕು. ಸುಟ್ಟರೆ ಸುಡುಗಾಡು ಎಂಬುದನ್ನು ಮತ್ತೆ ಮತ್ತೆ ನೆನೆದರೆ ಅದೇ ಪುಣ್ಯ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...