Homeಮುಖಪುಟದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿಯವರಿಗೆ ಈಗ ವಯಸ್ಸು 97. ಆದರೆ ಅವರಿಗೆ ಅದೊಂದು ಮಿತಿಯೂ ಅಲ್ಲ ಅಡೆತಡೆಯೂ ಅಲ್ಲ! ಈಗಲೂ ಎಂತಹ ಸಾಹಸಕ್ಕೂ ಜೈ ಎನ್ನುವ ಜಾಯಮಾನ, ಯಾವ ಅಂಶವನ್ನೂ ಮರೆಯದ ಚುರುಕು ಬುದ್ಧಿ ಅವರದ್ದು. ಅವರಿಗಿರುವ ರಾಜಕೀಯ ಸಹೃದಯತೆ, ಪ್ರಾಮಾಣಿಕತೆ, ಚುರುಕುತನ, ಹಾಸ್ಯ ಮನೋವತ್ತಿ ಒಂದಿಷ್ಟೂ ಬೇಸರಪಟ್ಟುಕೊಳ್ಳದ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಮನೋಭಾವವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಈಗಲೂ ಓದಲು ಕನ್ನಡಕ ಬಳಸದೆ, ಕಾಫಿ ಜೊತೆ ಸಕ್ಕರೆ ಬೇಕೇಬೇಕೆನ್ನುವ, ರುಚಿಕರವಾದ ಆಹಾರವನ್ನು ಇಷ್ಟ ಪಡುವ, ಪುಟ್ಟ ಮಕ್ಕಳಂತೆ ಸ್ವೀಟ್ಸ್ ಮತ್ತು ಐಸ್‍ಕ್ರೀಮ್ ಇಷ್ಟ ಪಡುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಂತ ಸುತ್ತಾಡುವ ಅವರ ಜೀವನೋತ್ಸಾಹ ಬೆರಗು ಮೂಡಿಸುವಂತಹವು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ದೊರೆಸ್ವಾಮಿಯವರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರೆ ಅವರಿಗೆ ದಣಿವಾಗಬಹುದು ಎಂಬ ಕಾರಣಕ್ಕೇ ಮೊದಲು ನಾವು ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ಆದರೆ ಅದಕ್ಕೆ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾದಾಗ ಚಿಕ್ಕಮಗಳೂರಿನಲ್ಲಿ ಅದನ್ನು ಏರ್ಪಸುವುದು ಅನಿವಾರ್ಯವಾಯಿತು. ಶಿವಸುಂದರ್ ಅವರು ಹಿಂಜರಿಕೆಯಿಂದಲೇ .

“ಸಾರ್ ಇದಕ್ಕೆ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ” ಎಂದು ದೊರೆಸ್ವಾಮಿಯವರ ಮುಂದೆ ಪ್ರಸ್ತಾಪಿಸಿದಾಗ ಅವರು “ನಡೀರಿ ಹೋಗೋಣ” ಎಂದು ಎಲ್ಲರಿಗಿಂತ ಮೊದಲು ಸಜ್ಜಾದರು!

ದೊರೆಸ್ವಾಮಿಯವರನ್ನು ಆರಾಮಾಗಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲೆಂದು ನನ್ನ ಪುಟ್ಟ ಸ್ಯಾಂಟ್ರೊ ಕಾರ್ ಬದಲಾಗಿ ನನ್ನ ತಂಗಿಯ ಇನ್ನೋವಾ ಕಾರ್ ಪಡೆದೆ. ಅವತ್ತು ಭಾನುವಾರ ಬೆಳಗ್ಗೆ ದೊರೆಸ್ಟಾಮಿಯವರ ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದ್ದರಿಂದ ಅವರು ಬೆಳಗ್ಗೆಯೇ ಮನೆಯಿಂದ ತಮ್ಮ ಬ್ಯಾಗ್ ಹಿಡಿದು ಹೊರಟಿದ್ದರು. ಮಧ್ಯಾಹ್ನ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಆವರಣದಿಂದ ನಾನು ಮತ್ತು ಶಿವಸುಂದರ್ ದೊರೆಸ್ವಾಮಿಯವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು.

ನೆಲಮಂಗಲ ದಾಟುವ ಹೊತ್ತಿಗೆ ಊಟದ ಸಮಯವಾಗಿತ್ತು. ದುರದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಅಚ್ಚುಕಟ್ಟಾದ ಸಸ್ಕಾಹಾರಿ ಹೋಟೆಲ್‍ಗಳಿಗಿಂತ ಹೆಚ್ಚಾಗಿ ಡಾಬಾಗಳೇ ಇವೆ. ಒಂದು ಡಾಬಾದ ಮುಂದೆ ಕಾರ್ ನಿಲ್ಲಿಸಿ ದೊರೆಸ್ವಾಮಿಯವರಿಗೆ ಅನ್ನ-ಸಾರು, ಮೊಸರನ್ನ ಇದೆಯೇ ಎಂದು ವಿಚಾರಿಸಿದೆವು. ಆಗ ದೊರೆಸ್ವಾಮಿಯವರು “ನನಗೆ ಪರೋಟ, ಮೊಸರನ್ನ ಮತ್ತು ಪುಟ್ಟ ಐಸ್‍ಕ್ರೀಮ್ ಬೇಕು” ಎಂದರು. ಡಾಬಾಗಳಲ್ಲಿ ‘ಗುಂಡು ಮತ್ತು ತುಂಡು’ ಸಾಮಾನ್ಯವಾದ್ದರಿಂದ ಅವರು ಕಾರಿನಲ್ಲೇ ಊಟ ಮಾಡುವುದಾಗಿ ಹೇಳಿದರು. ಒಳಗೆ ಹೋದ ನಾನು ವೈಟರ್ ಒಬ್ಬನಿಗೆ “ಹೊರಗೆ ಕಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ಟಾಮಿಯವರಿದ್ದಾರೆ. ಅವರಿಗೆ ಬೇಕಿದ್ದನ್ನು ಕೊಡು” ಎಂದೆ. ಹೊರಕ್ಕೆ ದೌಡಾಯಿಸಿದ ಆತ ದೊರೆಸ್ವಾಮಿಯವರ ಪಾದಗಳಿಗೆ ನಮಸ್ಕರಿಸಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಇವತ್ತು ನಿಮ್ಮ ದರ್ಶನದ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಏನು ಬೇಕು ಹೇಳಿ ಸಾರ್” ಎಂದು ಅವರ ನೆರವಿಗೆ ನಿಂತ.

ನಾವು ಊಟ ಮುಗಿಸಿ ಹೊರಗೆಬಂದಾಗ ಬಹಳಷ್ಟು ಜನ ದೊರೆಸ್ವಾಮಿಯವರನ್ನು ಮುತ್ತಿಕೊಂಡಿದ್ದರು. ಎಲ್ಲರೂ ಅಭಿಮಾನದಿಂದ, ಗೌರವದಿಂದ ದೊರೆಸ್ವಾಮಿಯವರನ್ನು ಮಾತನಾಡಿಸುತ್ತಿದ್ದರು. “ಬೀಡಾ ಬೇಕಾ ಸಾರ್?” ಎಂದು ಕೇಳಿದೆ. “ಸ್ವೀಟ್ ಬೀಡಾ ಬೇಕು ಆದರೆ ಅದರಲ್ಲಿ ತಂಬಾಕು ಇರಬಾರದು” ಎಂದರು. ಬೀಡಾ ಅಂಗಡಿ ಮುಂದೆ ಇಬ್ಬರು ಯುವಕರು ನಿಂತಿದ್ದರು. “ದೊರೆಸ್ವಾಮಿಯವರ ಬಗ್ಗೆ ಕೇಳಿದ್ದೀರಾ, ಅವರು ಕಾರ್‍ನಲ್ಲಿ ಕೂತಿದ್ದಾರೆ. ಅಂತಹವರನ್ನು ಭೇಟಿ ಆಗುವ ಅವಕಾಶ ನಿಮಗೆ ಮುಂದೆ ಸಿಗಲಾರದು, ಹೋಗಿ ಮಾತನಾಡಿಸಿ” ಎಂದೆ. ಇಬ್ಬರೂ ಮಾತನಾಡಿಸಿ ಬಂದಾಗ “ಇವರೇ ಅಲ್ವಾ ಮೇಡಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿರುವುದು, ಟಿವಿಯಲ್ಲಿ ನೋಡಿದ್ವಿ ಎಂದರು.

ಮಾರ್ಗಮಧ್ಯದಲ್ಲಿ ನಾನು ಒಂದಿಷ್ಟು ಹೊತ್ತು ತೂಕಡಿಸಿದರೂ, ದೊರೆಸ್ವಾಮಿಯವರು ಮಾತ್ರ ಎಚ್ಚರವಾಗಿಯೇ ಇದ್ದರು.

ಚಿಕ್ಕಮಗಳೂರಿನಲ್ಲಿ ನಮ್ಮೆಲ್ಲರಿಗೆ ಐಬಿಯಲ್ಲಿ ರೂಮುಗಳನ್ನು ಕಾದಿರಿಸಿದ್ದೆವು. ಆದರೂ ದೊರೆಸ್ವಾಮಿಯವರು ತಮ್ಮ ಅಣ್ಣನ ಅಳಿಯನ ಮನೆಯಲ್ಲಿ ತಂಗುವುದಾಗಿ ಹೇಳಿದರು. ಆ ಅಳಿಯನ ಮನೆ ಶಂಕರಮಠದ ಹತ್ತಿರವಿದೆ ಎಂಬುದು ಅವರಿಗೆ ಗೊತ್ತಿತ್ತೇ ಹೊರತು ಸರಿಯಾದ ಅಡೆಸ್ ಆಗಲಿ, ಫೋನ್ ನಂಬರ್ ಆಗಲಿ ಅವರಿಗೆ ಗೊತ್ತಿರಲಿಲ್ಲಿ ಕಾರ್ ನಿಲ್ಲಿಸಿ ಡೈರೆಕ್ಷನ್ ಕೇಳಿದ ಕಡೆಯೆಲ್ಲ ಜನ ದೊರೆಸ್ವಾಮಿಯವರನ್ನು ಗುರುತಿಸಿ ಮಾತನಾಡಿಸುತ್ತಿದ್ದರು.

ಕೊನೆಗೂ ಆ ಮನೆ ಸಿಕ್ಕಿತು. “ಬೆಳಗ್ಗೆ ಎಲ್ಲರೂ ಇಲ್ಲಿಗೆ ತಿಂಡಿಗೆ ಬನ್ನಿ” ಎಂದ ದೊರೆಸ್ವಾಮಿಯವರು ನಮ್ಮನ್ನು ಬೀಳ್ಕೊಟ್ಟರು: ಅವತ್ತು ಬೆಂಗಳೂರಿನಲ್ಲಿ ಕಾರ್ ಹತ್ತಿದ್ದ ಅವರು ಎಲ್ಲೂ ಇಳಿದಿರಲಿಲ್ಲ. ಆದರೂ ಅವರಿಗೆ ಒಂದಿಷ್ಟೂ ದಣಿವಾಗಿರಲಿಲ್ಲ!

ಮಾರನೆ ದಿನ ಬೆಳಗ್ಗೆ ಒಂಭತ್ತೂವರೆಗೆ ಅವರನ್ನು ಅಲ್ಲಿಂದ ಕರೆದುಕೊಂಡು ಡಿಸಿ ಆಫೀಸಿಗೆ ಹೋದೆವು. ಅಲ್ಲಿ ಡಿಸಿ ಮತ್ತು ಎಸ್‍ಪಿ ಅವರೊಂದಿಗೆ ಚರ್ಚಿಸಿದ ನಂತರ ಐಬಿಗೆ ಬಂದೆವು.

ನೂರ್ ಮತ್ತು ಸಿರಿಮನೆ ಅವರು ಬರುತಿದ್ದಂತೆ ನೂಕುನುಗ್ಗಲು ಶುರುವಾಯಿತು. ಒಂದೆಡೆ ಎಲ್ಲರಿಗೂ ಅವರನ್ನು ಸ್ವಾಗತಿಸುವ ಆಸೆ, ಇನ್ನೊಂದೆಡೆ ಮಾಧ್ಯಮದವರಿಗೆ ಹತ್ತಿರದಿಂದ ಫೋಟೋ ಮತ್ತು ವೀಡಿಯೋ ಹಿಡಿಯುವ ತವಕ. ಆ ನೂಕಾಟದಲ್ಲಿ ಮಾಧ್ಯಮದವರೇ ಪರಸ್ಪರ ಜಗಳ ಪ್ರಾರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಾಧ್ಯಮದವರನ್ನು ನಿಯಂತ್ರಿಸಲಾಗಲಿಲ್ಲ. ಇದೆಲ್ಲ ನಡೆಯುತ್ತಿದ್ದಾಗ ಒಬ್ಬರು ಬಂದು “ದತ್ತಣ್ಣ (ವೈ.ಎಸ್.ವಿ.ದತ್ತ) ನಿಮಗೆ ಅಭಿನಂದನೆಗಳನ್ನು ಕಳುಹಿಸಿದ್ದಾರೆ” ಎಂದು ನನ್ನ ಕೈಗೆ ಒಂದು ಹೂವಿನಹಾರವನ್ನು ಕೊಟ್ಟರು. ಅದನ್ನು ನೂರ್ ಝುಲ್ಫಿಕರ್ ಅವರಿಗೆ ಕೊಟ್ಟು “ದೊರೆಸ್ವಾಮಿಯವರಿಗೆ ಥ್ಯಾಂಕ್ಸ್ ಹೇಳಿ” ಎಂದೆ. ಅವರು ಹಾರವನ್ನು ದೊರೆಸ್ಟಾಮಿಯವರಿಗೆ ಹಾಕಿ ಥ್ಯಾಂಕ್ಸ್ ಹೇಳಿದರು.

ಆಮೇಲೆ ಎಲ್ಲರೂ ಡಿಸಿ ಕಚೇರಿಗೆ ಹೋಗಿ ನಿಯಮದ ಪ್ರಕಾರ ನೂರ್ ಹಾಗು ಸಿರಿಮನೆಯವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು. ನೂರ್ ಮತ್ತು ಸಿರಿಮನೆಯವರ ಪತ್ರಿಕಾಹೇಳಿಕೆ ಪ್ರಕ್ರಿಯೆಗಳು ಮುಗಿದನಂತರ ನಾನು “ಸರ್, ಒಂದು ಚರ್ಚಾಸಭೆಯನ್ನು ಏರ್ಪಡಿಸಿದ್ದಾರೆ. ಅದನ್ನು ಮುಗಿಸಿದಕೂಡಲೇ ಬೆಂಗಳೂರಿಗೆ ಹೊರಡೋಣ” ಎಂದೆ. ಆಗ ದೊರೆಸ್ವಾಮಿಯವರು ’ಇಲ್ಲ ನಾನು ಬಳ್ಳಾರಿಗೆ ಹೋಗುತ್ತೇನೆ ಎಂದು ಬಾಂಬ್’ ಸಿಡಿಸಿದರು. “ಅಲ್ಲಾ ಸಾರ್, ನೀವು ಹೇಗೆ ಬಳ್ಳಾರಿಗೆ ಹೋಗುತ್ತೀರಿ?” ಎಂದು ಅಚ್ಚರಿಯಿಂದ ಕೇಳಿದೆ. “ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದರು. “ಅವರು ಯಾರು? ಯಾವುದರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದೆಲ್ಲ ಗೊತ್ತಾದ ಮೇಲೇ ನಾನು ನಿಮ್ಮನ್ನು ಅವರ ಜೊತೆ ಕಳಿಸೋದು” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಓಹೋ, ಇವರಿಬ್ಬರನ್ನು ಹಸ್ತಾಂತರಿಸಿದ್ದು ಆಯಿತು. ಈಗ ನನ್ನನ್ನೂ ಹಸ್ತಾಂತರಿಸುತ್ತೀಯಾ!” ಎಂದು ಜೋಕ್ ಮಾಡಿದರು. “ಸರ್, ನೀವು ಇವತ್ತು ನಮ್ಮೊಂದಿಗೆ ಬೆಂಗಳೂರಿಗೆ ವಾಪಾಸ್ ಹೋಗಬೇಕಿತ್ತು ಆದರೆ ನೀವೀಗ ಬೇರೆಲ್ಲಿಗೋ ಹೊರಟಿದ್ದೀರಿ. ಮನೆಯವರು ಏನಂತಾರೆ?” ಅಂದೆ. “ಅವಳು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾಳೆ” ಎಂದ ಅವರು ಜೋರಾಗಿ ನಕ್ಕರು.

ಐಬಿಗೆ ಹಿಂದಿರುಗಿದಾಗ ದೊರೆಸ್ವಾಮಿಯವರು ಮಂಚದ ಮೇಲೆ ಕಾಲು ಚಾಚಿಕೊಂಡು ಕೂತಿದ್ದಾಗ, ಸುತ್ತುವರಿದಿದ್ದ ಜನರೊಂದಿಗೆ ಮತ್ತೆ ಹರಟಲಾರಂಭಿಸಿದರು. ಆಗ ಶಿವಸುಂದರ್‍ಗೆ ದೊರೆಸ್ವಾಮಿಯವರು ಬಳ್ಳಾರಿಗೆ ಹೊರಟಿದ್ದ ವಿಚಾರ ತಿಳಿಸಿದೆ. “ನನ್ನ ಮನೆಯವರಿಗೆ ಫೋನ್ ಮಾಡಿ ನಾನು ಬಳ್ಳಾರಿಗೆ ಹೋಗಿದ್ದೀನಿ ಅಂತ ತಿಳಿಸಿ ಎಂದರು. ಶಿವಸುಂದರ್ ಅವರು “ಸಾರ್ ಅವರು ಬೈಯಲ್ಲವಾ?” ಎಂದು ಕೇಳಿದರೆ “ಬೈದರೆ ನೀವು ತಾನೆ ಬೈಸಿಕೊಳ್ಳುವುದು, ಬೈಯಿಸಿಕೊಳ್ಳಿ” ಎಂದು ಗಹಗಹಿಸಿ ನಕ್ಕರು.

ದೊರೆಸ್ವಾಮಿಯವರು ಹೊರಡಲು ಸಿದ್ಧರಾಗಿ ನಿಂತಿದರೂ ಸುತ್ತುವರಿದಿದ್ದ ಹಲವಾರು ಅಭಿಮಾನಿಗಳು ಮತ್ತು ಮಾಧ್ಯಮದವರು ಅವರನ್ನು ಮಾತನಾಡಿಸುತ್ತಲೇ ಇದ್ದರು. “ನೀವು ಒಬ್ಬ ರಾಕ್‍ಸ್ಟಾರ್. ನಿಮ್ಮನ್ನ ಜನ ಸುತ್ತುವರಿದೇ ಇರುತ್ತಾರೆ” ಎಂದು ತಮಾಷೆ ಮಾಡುತ್ತಾ ಅವರನ್ನು ಐಬಿಯಿಂದ ಕರೆದುಕೊಂಡು ಹೊರಟೆ.

ಬಳ್ಳಾರಿಯಿಂದ ಬಂದಿದ್ದವರ ಕಾರ್ ಹತ್ತುತ್ತಾ “ನನ್ನ ಜೊತೆ ನನ್ನ ಬ್ಯಾಗನ್ನೂ ಹಸ್ತಾಂತರಿಸಿದ್ದೀ ಏನಮ್ಮ?” ಎಂದು ನಗುನಗುತ್ತಾ ಕೇಳಿದರು. ದೊರೆಸ್ವಾಮಿ ನಿಜಕ್ಕೂ ಅಪರಂಜಿಯಂತಹ ಮನುಷ್ಯ.

ಡಿಸೆಂಬರ್ 24, 2014.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...