ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಡ್ರಗ್ಸ್ ದಂದೆ ನಡೆಯುತ್ತಿದೆ ಎನ್ನಲಾಗಿದ್ದು, ನಟರಿಗಿಂತ ನಟಿಯರಿಂದಲೇ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ಧಾರವಾಹಿ ಕಲಾವಿದೆಯರು ಕೂಡಾ ಇದರ ಗ್ರಾಹಕರು ಎಂದು ತನಿಖೆಯಿಂದ ತಿಳಿದು ಬಂದಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ’ರಾಯಲ್ಸ್ ಸೂಟ್ಸ್ ಹೋಟೆಲ್’ ಅಪಾರ್ಟ್‌ಮೆಂಟ್ ಸಮುಚ್ಚಯದ ಪ್ಲಾಟ್ ಮೇಲೆ ದಾಳಿ ಮಾಡಿ ಡ್ರಗ್ಸ್ ದಂಧೆ ಒಬ್ಬ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನೂ ಬಂಧಿಸಿದ್ದರು. ಬಂಧಿತರನ್ನು ಡಿ ಅನಿಕಾ, ಅನೂಪ್ ಮೊಹಮದ್ ಮತ್ತು ರಾಜೇಶ್ ರವೀಂದ್ರನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹಜ್ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್ ಖಾನ್ ಭೇಟಿಯಾಗಿದ್ದು ನಿಜವೆ?
ತನಿಖೆಯ ವೇಳೆ ಹೆಸರಾಂತ ನಟ-ನಟಿಯರು, ಹಾಗೂ ಸಂಗೀತ ನಿರ್ದೇಶಕರ ಹೆಸರನ್ನು ಬಂಧಿತರು ಬಾಯಿಬಿಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ನಟಿಯರು ಡ್ರಗ್ಸ್‌ನಿಂದ ಸೌಂದರ್ಯ ಹೆಚ್ಚಾಗುತ್ತದೆ ಎಂಬ ಮನೋಭಾವನೆಯಲ್ಲಿ ಇದನ್ನು ಬಳಸುತ್ತಿದ್ದರು ಎನ್ನಲಾಗಿದೆ. ಕಲಾವಿದರು ಮಾಡುತ್ತಿದ್ದ ಪಾರ್ಟಿಗಳೆ ಈ ಡ್ರಗ್ಸ್ ವ್ಯಾಪಾರದ ಕೇಂದ್ರವಾಗಿದ್ದು ಅಲ್ಲಿಂದಲೇ ಆರೋಪಿಗಳು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ‘ಇಂದಿನ ಜನರೇಷನ್‌ನಲ್ಲಿ ಮಾದಕ ವ್ಯಸನದ ಆತಂಕ ಇದ್ದೇ ಇದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದು ನನ್ನ ಗಮನಕ್ಕೆ ಎಲ್ಲಿಯೂ ಬಂದಿಲ್ಲ. ಅದು ನಮ್ಮ ಚಿತ್ರರಂಗಕ್ಕೆ ಬರಬಾರದು ಎಂದು ನಾನು ಆಶಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ’ಜಾಫರ್ ಪನಾಹಿ’ ಸಿನಿಮಾ ಜಗತ್ತಿನ ಬಂಡುಕೋರ: ಕೀಲಾರ ಟೆಂಟ್ ಹೌಸ್-5
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ‘ನನಗೆ ತಿಳಿದಿರುವ ಮಟ್ಟಿಗೆ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಯಾರು ಕೂಡ ಡ್ರಗ್ಸ್ ತೆಗೆದುಕೊಳ್ಳಲ್ಲ. ಬಾಡಿ ಬಿಲ್ಡ್ ಮಾಡಲು ವೈದ್ಯರ ಸಲಹೆ ಪಡೆದು, ಪ್ರೋಟಿನ್ ಮತ್ತಿತ್ತರದ್ದನ್ನು ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ಎದ್ದಕೂಡಲೇ ಡ್ರಗ್ಸ್ ಬೇಕೇಬೇಕು ಎನ್ನುವಂತಹ ಕಲಾವಿದರು ನಮ್ಮ ಇಂಡಸ್ಟ್ರೀಯಲ್ಲಿ ಯಾರೂ ಇಲ್ಲ’ ಎಂದು ಹೇಳಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ನಟ ನಟಿಯರು ಡ್ರಗ್ಸ್ ಮಾಫಿಯಾ ದಲ್ಲಿ ಭಾಗಿಯಾಗಿರುವ ವಿಷಯವನ್ನು ನಮ್ಮ ಸರ್ಕಾರ ಹೊರಹಾಕಿದೆ. ಹಿಂದಿನ ಆಡಳಿತದಲ್ಲಿದ್ದವರು ಡ್ರಗ್ಸ್ ಮಾಫಿಯಾದ ಪರವಾಗಿದ್ದರು, ಮುಖ್ಯಮಂತ್ರಿ ಯಡಿಯೂರಪ್ಪ ಈ ಜಾಲವನ್ನು ಬೇರು ಸಮೇತ ಕಿತ್ತು ಹಾಕುವಲ್ಲಿ ಮುಂದಾಗುತ್ತಿದ್ದಾರೆ ಎಂದು ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ


