ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯನ್ನು ಇಂದು ಬೆಂಗಳೂರು ಪೊಲೀಸರು ಶೋಧಿಸಿದ್ದಾರೆ. ವಿವೇಕ್ ಒಬೆರಾಯ್ ಅವರ ಸಂಬಂಧಿ ಡ್ರಗ್ ಪೆಡ್ಲರ್ ಆದಿತ್ಯ ಆಳ್ವಾನನ್ನು ಬೆಂಗಳೂರು ಪೊಲೀಸ್ ಹುಡುಕುತ್ತಿದ್ದಾರೆ.
“ಡ್ರಗ್ ಪೆಡ್ಲರ್ ಆದಿತ್ಯ ಆಳ್ವಾ ಪರಾರಿಯಾಗಿದ್ದು, ವಿವೇಕ್ ಒಬೆರಾಯ್ ಅವರ ಮನೆಯಲ್ಲಿ ಆದಿತ್ಯ ಆಳ್ವಾ ಇರುವುದಾಗಿ ನಮಗೆ ಮಾಹಿತಿ ಸಿಕ್ಕಿತು. ಆದ್ದರಿಂದ ನಾವು ಪರಿಶೀಲಿಸಬೇಕಾಗಿತ್ತು. ಇದಕ್ಕಾಗಿ ನ್ಯಾಯಾಲಯದ ವಾರಂಟ್ ಪಡೆಯಲಾಗಿದೆ. ಹಾಗಾಗಿ ಅಪರಾಧ ವಿಭಾಗದ ತಂಡವು ಮುಂಬೈನಲ್ಲಿರುವ ಅವರ ಮನೆಗೆ ಹೋಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಜಾಲ: ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್‌ಗೆ ನೋಟಿಸ್ ಜಾರಿ
ಬೆಂಗಳೂರಿನಲ್ಲಿರುವ ಆದಿತ್ಯ ಆಳ್ವಾ ಮನೆಯನ್ನೂ ಹುಡುಕಲಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕರ್ನಾಟಕದ ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ, ಸ್ಯಾಂಡಲ್‌ವುಡ್ ಚಲನಚಿತ್ರೋದ್ಯಮದ ಗಾಯಕರು ಮತ್ತು ನಟರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಇದನ್ನೂ ಓದಿ: ಬ್ಲೂಫಿಲ್ಮ್ ನೋಡುವುದು ಕೂಡಾ ಡ್ರಗ್ಸ್‌ನಂತೆಯೆ ವ್ಯಸನ: ಡಿಸಿಎಂ ಸವದಿ ಕಾಲೆಳೆದ ಸಾ.ರಾ. ಮಹೇಶ್


