ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಪಿ.ವಿ ಲಕ್ಷ್ಮೀ (33) ತನ್ನ ಪರಿಚಯಸ್ಥರ ಮನೆಗೆ ಊಟಕ್ಕೆಂದು ಹೋಗಿದ್ದ ಸಂದರ್ಭ ಅಸಹಜ ಸಾವಿಗೀಡಾದ ಘಟನೆ ನಡೆಸಿದೆ.
ಪ್ರಸ್ತುತ ಸಿಐಡಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ ಅವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ತನ್ನ ಪರಿಚಯಸ್ಥರ ಮನೆಗೆ ಊಟಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು
2014 ರ ಬ್ಯಾಚ್ನ ಕೆಪಿಎಸ್ಸಿ ಅಧಿಕಾರಿಯಾದ್ದ ಅವರು, 2017 ರಲ್ಲಿ ನೇಮಕವಾಗಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ


