Homeಆರೋಗ್ಯಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-18

ಮಾನಸಿಕ ಒತ್ತಡ ಎಂದ ಕೂಡಲೇ ನಮಗೆ ಒಂದು ರೀತಿಯ ಹೆದರಿಕೆ, ಆತಂಕ ಶುರುವಾಗುತ್ತದೆ. ಅದರ ಭಯಾನಕ ಪರಿಣಾಮಗಳ ದೃಶ್ಯ ಕಣ್ಣಮುಂದೆ ಬರುತ್ತವೆ. ಹಾಗಾದರೆ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವುದು ಹೇಗೆ?

ಮಾನಸಿಕ ಒತ್ತಡ (ಸ್ಟ್ರೆಸ್) ಒಂದು ಭಾವನಾತ್ಮಕ ಮಾನಸಿಕ ಉದ್ವೇಗ ಮತ್ತು ದೈಹಿಕ ಬಿಗುಪು. ಯಾವುದೋ ಸನ್ನಿವೇಶ ಅಥವಾ ನಮ್ಮ ನಿಯಂತ್ರಣದಲ್ಲಿರದ ವಿಷಯದ ಬಗ್ಗೆಯ ಯೋಚನೆಯಿಂದಾಗಿ ನಾವು ನಿರಾಶೆ, ಆತಂಕಕ್ಕೆ, ಕೋಪಕ್ಕೆ, ಕ್ಷೋಭೆಗೆ ಒಳಗೊಂಡಾಗ, ಪರೀಕ್ಷೆ, ಸವಾಲನ್ನು ಎದುರಿಸಬೇಕಾದಾಗ ದೈಹಿಕ ಪ್ರತಿಕ್ರಿಯೆಯೇ ಸ್ಟ್ರೆಸ್. ಇದು ಧನಾತ್ಮಕವೂ ಆಗಿರಬಹುದು ಅಥವಾ ಜೀವರಸ ಹಿಂಡುವ ಶಕ್ತಿಯೂ ಆಗಿರಬಹುದು. ಹಲವರು ಇಂತಹ ಒತ್ತಡದಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಾರೆ. ಕೆಲವರು ಕೆಲಸದ ಸಮಯಮಿತಿ (ಡೆಡ್ಲೈನ್)ಯಿಂದಾಗಿ ಹೆದರಿ ಏನೂ ತೋಚದೆ, ಭ್ರಮೆಗೆ ಸಿಲುಕುತ್ತಾರೆ. ಸ್ವಲ್ಪ ಸಮಯದ ಒತ್ತಡ ಪ್ರೇರೇಪಕವೂ ಆಗಬಹುದು ಆದರೆ ದೀರ್ಘ ಸಮಯದ ಒತ್ತಡ ಆಸ್ಪತ್ರೆಗೂ ಸೇರಿಸಬಹುದು, ಆದ್ದರಿಂದ ಅದನ್ನು ನಿಭಾಯಿಸುವುದು ಅತ್ಯಗತ್ಯ.

ಇನ್ನೊಂದು ಒತ್ತಡ ಬರುವುದು ನಮ್ಮ ಸಮಾನಸ್ಕಂಧರಿಂದ (ಪೀರ್ ಪ್ರೆಷರ್). ಈ ಒತ್ತಡ ಅವರಿಂದ ಯಾವುದೋ ದುರಭ್ಯಾಸಕ್ಕೋ, ಕೆಟ್ಟ ಕೆಲಸಕ್ಕೋ ಬರಬಹುದು ಅಥವಾ ನಾವೂ ಮಿಕ್ಕವರಂತೆ ಆಗಬೇಕು ಎನ್ನುವ ನಮ್ಮ ಸ್ವಂತ ಹಂಬಲದಿಂದಲೂ ಬರಬಹುದು. ಉದಾ: ಮಾದಕ ವಸ್ತುಗಳ ಸೇವನ, ಅಸಾಮಾಜಿಕ ನಡವಳಿಕೆ, ಇತ್ಯಾದಿ.

ಒತ್ತಡ ತಡೆದುಕೊಳ್ಳಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಹಗುರವಾಗಿರಬೇಕು. ನಮ್ಮ ಜೀವನದ ಗುರಿ ಸ್ಪಷ್ಟವಾಗಿರಬೇಕು.

ಇದಕ್ಕೆ ಸಹಕಾರಿಯಾಗುವ ಹತ್ತು ನಡೆಗಳು:

1. ಕಾಫಿ, ಸಾರಾಯಿ, ತಂಬಾಕು ಮುಂತಾದ ವ್ಯಸನಗಳನ್ನು ತ್ಯಜಿಸಿ. ಇವು ಸಣ್ಣ ಪ್ರಮಾಣದಲ್ಲಿ ಉತ್ತೇಜನಕಾರಿ ಎಂದು ಎನಿಸಿದರೂ, ಕ್ರಮೇಣ ಅಭ್ಯಾಸ ಹೆಚ್ಚಾಗಿ, ಯಾವಾಗ ವ್ಯಸನಕ್ಕೆ ತಿರುಗುತ್ತದೋ ಹೇಳಲು ಸಾಧ್ಯವಿಲ್ಲ. ಖಂಡಿತಾ ನಿಮ್ಮನ್ನು ಪ್ರಪಾತಕ್ಕೆ ಎಳೆದುಕೊಂಡು ಹೋಗುತ್ತವೆ. ಇದರ ಬದಲಿಗೆ ಎಳನೀರು, ಹರ್ಬಲ್ ಟೀ, ಹಣ್ಣಿನ ರಸ (ಅಧಿಕ ಅಥವಾ ಬಿಳಿ ಸಕ್ಕರೆ ಇಲ್ಲದ), ತಂಪು ಪಾನೀಯಗಳನ್ನು ಕುಡಿಯಿರಿ. ಇದರಿಂದ ದೇಹ ದ್ರವಹೀನಗೊಳ್ಳದೆ ಸ್ಟ್ರೆಸ್ ನಿಂದ ಹೋರಾಡುವಲ್ಲಿ ಸಹಕಾರಿಯಾಗುತ್ತದೆ. ಆಹಾರ ನಿಯಮಿತವಾಗಿ ಸೇವಿಸಿ. ಊಟದಲ್ಲಿ ಸಮತೋಲನೆ ಮತ್ತು ಪೌಷ್ಟಿಕಾಂಶ ಇರಲಿ. ಪಾಚನಕ್ರಿಯೆ ಸುಗಮವಾಗಿರಲಿ. ಇದರಿಂದ ಮನಸ್ಸು ಹಗುರವಾಗಿರುತ್ತದೆ.

2. ವ್ಯಾಯಾಮ ಅಥವಾ ದೈಹಿಕ ಶ್ರಮದಲ್ಲಿ ಭಾಗವಹಿಸಿ. ಒತ್ತಡದಿಂದಾಗಿ ದೇಹದ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ನಮ್ಮ ದೇಹವನ್ನು ರಕ್ಷಿಸುವ ಹಾರ್ಮೋನುಗಳು ಇಂದಿನ ಒತ್ತಡಕ್ಕೆ ಸರಿಹೊಂದುವುದಿಲ್ಲ. ದೈಹಿಕ ವ್ಯಾಯಾಮ, ಹೊರಗಿನ ಮುಕ್ತ ವಾತಾವರಣ ನಮ್ಮ ಬಿಗುಪನ್ನು ಕಡಿಮೆ ಮಾಡಿ, ಮನಸ್ಸಿನ ವ್ಯಾಕುಲತೆಯನ್ನು ಸಡಿಲಗೊಳಿಸುತ್ತದೆ. ನಿದ್ದೆಯೂ ಸರಿಯಾಗಿ ಬರುತ್ತದೆ.

3. ಸರಿಯಾಗಿ ನಿದ್ರಿಸದಿರುವುದು ಸಹ ವ್ಯಾಕುಲತೆಯ ಲಕ್ಷಣ. ಮನಸ್ಸು ರಿಲಾಕ್ಸ್ ಆಗಿಲ್ಲದಿದ್ದಾಗ ನಿದ್ದೆ ಹಾರಿ ಹೋಗುವುದು ಸಹಜ. ಅಂತಹ ಸಮಯದಲ್ಲಿ ನಿದ್ದೆ ಮಾತ್ರೆ ಅಥವಾ ಇತರ ವ್ಯಸನಗಳಿಗೆ ಮಾರು ಹೋಗದೆ, ಮನಸ್ಸನ್ನು ಹಗುರಗೊಳಿಸುವ ಸಂಗೀತ ಕೇಳಿ. ಪ್ರಯೋಜನಕಾರಿ ಹಗುರವಾದ ಪುಸ್ತಕ ಓದಿ. ನಿಮ್ಮ ಮಲಗುವ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾಗುವಂತಹ ವಾತಾವರಣ ಕಲ್ಪಿಸಿ, ಬೆಳಕು ಜಾಸ್ತಿ ಇಲ್ಲದಿರಲಿ. ಹೆಚ್ಚಿನ ಬುದ್ಧಿಶಕ್ತಿ ಬೇಕಾಗುವ ಕೆಲಸ ಮಲಗುವ ಮುನ್ನ ಮಾಡಬೇಡಿ. ಪ್ರತಿದಿನ (ರಾತ್ರಿ ಮತ್ತು ಬೆಳಿಗ್ಗೆ) ಅದೇ ಸಮಯಕ್ಕೆ, ಬೇಗ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೆಳಿಗ್ಗೆ ಮನಸ್ಸು ಹಗುರವೂ, ಉಲ್ಲಾಸ ಭರಿತವೂ ಆಗಿರುತ್ತದೆ.

4. ಮನಸ್ಸನ್ನು ತಿಳಿಗೊಳಿಸುವ ಕಸರತ್ತು ಮಾಡಿ: ಯೋಗ, ಪ್ರಾಣಾಯಾಮ, ಸ್ವಯಂ-ವಶೀಕರಣ ತಂತ್ರಗಳನ್ನು ಬಳಸಿ, ನಿಮ್ಮನ್ನು ನೀವೇ ಶಾಂತಗೊಳಿಸಲು ಕಲಿಯಿರಿ.

 

5. ಇನ್ನೊಬ್ಬರೊಂದಿಗೆ ಮಾತನಾಡಿ. ಅದು ನಿಮ್ಮ ಸಹೋದ್ಯೋಗಿ/ಸಹಪಾಠಿ, ಪೋಷಕ/ಶಿಕ್ಷಕ/ಗುರು ಅಥವಾ ಸ್ನೇಹಿತರಾಗಿರಬಹುದು. ನಿಮ್ಮ ಬಗ್ಗೆ ತೀರ್ಪು ನೀಡದ, ಕೇವಲ ಸಲಹೆ ನೀಡಬಲ್ಲ ವ್ಯಕ್ತಿಯ ಜೊತೆ ನಿಮ್ಮ ಆತಂಕ ಹಂಚಿಕೊಳ್ಳಿ. ಅಂತಹ ವ್ಯಕ್ತಿ ಇಲ್ಲದಿದ್ದಲ್ಲಿ ಪರಿಣಿತರ (ಕೌನ್ಸೆಲ್ಲಿಂಗ್) ಸಲಹೆ ಪಡೆಯಿರಿ.

6. ಸ್ಟ್ರೆಸ್ ಡೈರಿ ಬರೆಯಿರಿ. ನಿಮ್ಮ ಆತಂಕದ ಸನ್ನಿವೇಶಗಳು, ಅನುಭವಗಳು, ಪರಿಹಾರಗಳನ್ನು ಒಂದು ದಿನಚರಿ ಪುಸ್ತಕದಲ್ಲಿ ಬರೆದಿಡಿ. ಪ್ರತಿಯೊಂದು ಸನ್ನಿವೇಶಕ್ಕೂ/ಕಾರಣಕ್ಕೂ ಒಂದು ಸೂಚ್ಯಾಂಕ ನೀಡಿ, ಅತ್ಯಂತ ಹೆಚ್ಚಿನ ಒತ್ತಡಕ್ಕೆ 10, ತೀರಾ ಕಡಿಮೆಗೆ 1, ಹೀಗೆ ಅಂಕಗಳನ್ನು ನೀಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ನಿಮ್ಮ ಆತಂಕಕ್ಕೆ ಕಾರಣ ಮತ್ತು ಪರಿಹಾರ ಎರಡೂ ನಿಮ್ಮ ಮುಂದೆ ಇರುತ್ತದೆ. ಇದರಿಂದ ಅಂತಹ ಸನ್ನಿವೇಶದಿಂದ ದೂರವಿರಲು ಮತ್ತು ಧೈರ್ಯದಿಂದ ಸೆಣಸಾಡುವ ಉಪಾಯ ದೊರಕುತ್ತದೆ.

7. ನಿಯಂತ್ರಣ ನಿಮ್ಮ ಕೈಗೆ ತೆಗೆದುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ “ರಿಮೋಟ್” ಬೇರೆಯವರ ಕೈಗೆ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು, ಆದಷ್ಟು ಮಟ್ಟಿಗೆ, ನೀವೇ ಪರಿಹರಿಸಿಕೊಳ್ಳಿ. ಸಣ್ಣ ಪುಟ್ಟ ತೊಂದರೆಗೂ ಇನ್ನೊಬ್ಬರ ಬಳಿ ಓಡಿ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಅವರು ನಿಮ್ಮ ದುರ್ಬಲತೆಯ ದುರುಪಯೋಗ ಮಾಡಿಕೊಳ್ಳಬಹುದು. ಅವಶ್ಯಕತೆ ಎನಿಸಿದಾಗ ಪರಿಣಿತರ ಸಲಹೆ ಪಡೆಯಿರಿ.

8. ಸಮಯ ನಿರ್ವಹಣೆ ಕಲಿಯಿರಿ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕೆಲಸದ, ಆದ್ಯತೆಯ, ಸಮಯದ, ಪಟ್ಟಿ ಮಾಡಿಕೊಂಡು ಅದರಂತೆ ಚಲಿಸಿ. ಯಾವುದು ಮುಖ್ಯ ಮತ್ತು ಅವಸರವೋ ಅದನ್ನು ಮೊದಲು ಮಾಡಿ. ಮುಖ್ಯವಲ್ಲದ, ಅವಸರವಿಲ್ಲದ ಕೆಲಸ ಸಮಯ ಸಿಕ್ಕಾಗ ಮಾಡಿ.

9. ಇಲ್ಲ ಎನ್ನುವುದನ್ನು ಕಲಿಯಿರಿ. ದಾಕ್ಷಿಣ್ಯಕ್ಕೆ ಬಲಿಯಾಗಿ ಕೈಯಲ್ಲಾಗದ/ಮನಸ್ಸು ಒಪ್ಪದ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ. ಇಲ್ಲ ಎನ್ನುವುದನ್ನು ಕಲಿಯಿರಿ. ನೀವು “ಇಲ್ಲ” ಎಂದರೆ “ಇಲ್ಲ” ಎನ್ನುವುದನ್ನು ಬೇರೆಯವರಿಗೆ ಅರ್ಥವಾಗುವಂತೆ, ನಯವಾಗಿ ತಿಳಿಸಿ. ಪ್ರತಿಯೊಂದು “ಇಲ್ಲ”ವೂ ಜಗಳಕ್ಕೆ ಕಾರಣವಾಗುವುದಿಲ್ಲ.

10. ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...