ಮುದ್ರಣ ಕಾಗದ ಖಾಲಿಯಾಗಿರುವುದರಿಂದ ಶ್ರೀಲಂಕಾದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪರಿಣಾಮವಾಗಿ ಕಾಗದಗಳನ್ನು ಆಮದು ಮಾಡಲು ಕೂಡಾ ಹಣಕಾಸಿನ ತೊಂದರೆ ಎದುರಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಸೋಮವಾರದಿಂದ ಒಂದು ವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ತೀವ್ರ ಕಾಗದದ ಕೊರತೆಯಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕಾಗದವನ್ನು ಆಮದು ಮಾಡಿಕೊಳ್ಳಲು ಹಣಕಾಸಿನ ಕೊರತೆಯಿದೆ ಎಂದು ಅವರು ಹೇಳಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.
“ಪ್ರಿಂಟರ್‌ಗಳಿಗೆ ಅಗತ್ಯವಾದ ಕಾಗದ ಮತ್ತು ಶಾಯಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಶಾಲಾ ಮುಖ್ಯಸ್ಥರು ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ” ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ಹೇಳಿದೆ.
ಇದನ್ನೂ ಓದಿ: ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆ ಮಾಡಿದ ಪುತ್ರಿ; ಕೋರ್ಟ್‌ನಲ್ಲಿ ಹೇಳಿಕೆ
ದೇಶದ 45 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು ಮೂರನೇ ಎರಡರಷ್ಟು ಅಂದರೆ 15 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಈ ಸಮಸ್ಯೆಯಿಂದಾಗಿ ಪರೀಕ್ಷೆಗಳು ರದ್ದಾಗಿರಬಹುದು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಗಾರ್ಡಿಯನ್ ವರದಿ ಹೇಳಿದೆ. ಈ ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳು ಮುಂದಿನ ದರ್ಜೆಗೆ ಬಡ್ತಿ ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿತ್ತು.
ಅಗತ್ಯ ಆಮದುಗಳಿಗೆ ಹಣಕಾಸು ಒದಗಿಸಲು ವಿದೇಶಿ ವಿನಿಮಯದ ಮೀಸಲು ಹಣಕಾಸಿನ ಕೊರತೆಯಿರುವಷ್ಟು ಆರ್ಥಿಕ ಬಿಕ್ಕಟ್ಟು ಇರುವುದರಿಂದ ಆಹಾರ, ಇಂಧನ ಮತ್ತು ಔಷಧಗಳ ವಿಚಾರದಲ್ಲಿ ದೇಶವು ತತ್ತರಿಸಿದೆ ಎಂದ ವರದಿಯಾಗಿದೆ.
ದೇಶಾದ್ಯಂತ ದಿನಸಿ ಮತ್ತು ಇಂದನಕ್ಕಾಗಿ ಉದ್ದನೆಯ ಸರತಿ ಸಾಲುಗಳು ಕಂಡು ಬರುತ್ತಿದೆ ಎಂದು ವರದಿಯಾಗಿದೆ.
ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ತನ್ನ ಪ್ರಮುಖ ಸಾಲದಾತರಲ್ಲಿ ಒಬ್ಬರಾದ ಚೀನಾವನ್ನು ಸಾಲ ಪಾವತಿಗಳನ್ನು ಮುಂದೂಡಲು ಸಹಾಯ ಮಾಡುವಂತೆ ಕೇಳಿದೆ. ಆದರೆ ಈ ಬಗ್ಗೆ ಚೀನಾದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ವಿಶ್ವ ಹ್ಯಾಪಿನೆಸ್ಸ್ ವರದಿ: ಭಾರತ 136ನೇ ರ್‍ಯಾಂಕ್; ಅಫ್ಘಾನ್ ಕೊನೆಯ 146ನೇ ರ್‍ಯಾಂಕ್!


