Homeಮುಖಪುಟಮಣಿಪುರ: ಬೀರೆನ್‌ ಸಿಂಗ್‌‌ರನ್ನು 2ನೇ ಬಾರಿಗೆ ಸಿಎಂ ಆಗಿ ಆಯ್ಕೆ ಮಾಡಿದ BJP

ಮಣಿಪುರ: ಬೀರೆನ್‌ ಸಿಂಗ್‌‌ರನ್ನು 2ನೇ ಬಾರಿಗೆ ಸಿಎಂ ಆಗಿ ಆಯ್ಕೆ ಮಾಡಿದ BJP

- Advertisement -
- Advertisement -

ಚುನಾವಣಾ ಫಲಿತಾಂಶ ಬಂದು ಹತ್ತು ದಿನಗಳ ನಂತರ ಮಣಿಪುರ ಮುಖ್ಯಮಂತ್ರಿ ಆಯ್ಕೆ ಹೊರಬಿದ್ದಿದೆ. ಮಣಿಪುರ ಬಿಜೆಪಿ ನಾಯಕರುಗಳಾದ ಎನ್ ಬೀರೆನ್ ಸಿಂಗ್, ಬಿಸ್ವಜಿತ್‌ ಸಿಂಗ್ ಮತ್ತು ಯುಮ್ನಮ್ ಖೇಮ್ಚಂದ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನೆಡೆದಿತ್ತು. ಈ ಮೂವರು ನಾಯಕರು ನಿನ್ನೆ ದೆಹಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರನ್ನು ಬೇಟಿ ಮಾಡಿ ಚರ್ಚಸಿದ ನಂತರ ಎನ್. ಬೀರೆನ್‌ ಸಿಂಗ್‌ ಅವರನ್ನು ಎರಡನೇ ಬಾರಿ ಸಿಎಂ ಆಗಿ ಆಯ್ಕೆ ಮಾಡಲಾಗಿದೆ.

ಇಂದು ಮಣಿಪುರಕ್ಕೆ ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಒಕ್ಕೂಟ ಸರ್ಕಾರದ ಸಚಿವರಾದ ನಿರ್ಮಲಾ ಸೀತಾರಾಮನ್‌ ಮತ್ತು ಕಿರಣ್‌ ರಿಜಿಜು ಅವರು ಮುಖ್ಯಮಂತ್ರಿ ಘೋಷಣೆ ಮಾಡಲು ರಾಜ್ಯದ ರಾಜಧಾನಿ ಇಂಫಾಲ್‌ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: MANIPUR ELECTION RESULTS | ಸರಳ ಬಹುಮತದ ಮೂಲಕ ಮಣಿಪುರ ಬಿಜೆಪಿಯ ತೆಕ್ಕೆಗೆ; ಕಾಂಗ್ರೆಸ್ ಹೀನಾಯ ಸೋಲು!

ಮಣಿಪುರದಲ್ಲಿ ಮಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಬಿಜೆಪಿ ಪ್ರಚಾರವನ್ನು ಮಾಡಿತ್ತು. ಮಾಜಿ ಫುಟ್ಬಾಲ್ ಆಟಗಾರ ಮತ್ತು ಪತ್ರಕರ್ತ ಬೀರೆನ್ ಸಿಂಗ್ (61) ಮಣಿಪುರದಲ್ಲಿ ಬಿಜೆಪಿಯನ್ನು ಮುನ್ನಡೆಸಿದ್ದರು. ಪಕ್ಷದ ಇನ್ನೊಬ್ಬ ನಾಯಕರಾದ ಬಿಸ್ವಜಿತ್‌ ಸಿಂಗ್‌ ಕೂಡ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದರು ಮತ್ತು ಬಿರೇನ್ ಸಿಂಗ್ ಅವರಿಗಿಂತ ಹೆಚ್ಚು ಕಾಲ ಬಿಜೆಪಿಯಲ್ಲಿ ಕೆಲಸ ಮಾಡಿದ್ದರು. ಆದರೆ 2017 ರ ಚುನಾವಣೆಯ ನಂತರ ಬೀರೆನ್‌‌ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ವಿಧಾನ ಸಭೆಯ 60 ಕ್ಷೇತ್ರಗಳಲ್ಲಿ 32 ಸ್ಥಾನಗಳನ್ನು ಸರಳ ಬಹುಮತದ ಮೂಲಕ ರಾಜ್ಯವನ್ನು ಗೆದ್ದ ಬಿಜೆಪಿ, ವಿರೋಧ ಪಕ್ಷಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಬಹುದೆಂದು ನೀರಿಕ್ಷಿಸಿ ಮುಖ್ಯಮಂತ್ರಿಯ ಆಯ್ಕೆಯನ್ನು ಬಹಳ ಚಾಣಾಕ್ಷತನದಿಂದ ನಿಭಾಯಿಸಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಸ್ ಬೆಂಬಲಿತ ನಾಯಕ, ಈ ಹಿಂದಿನ ಅಸೆಂಬ್ಲಿಯಲ್ಲಿ ಸ್ಪೀಕರ್ ಆಗಿದ್ದ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಸಹ ಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಬಿಜೆಪಿಯ ಕೇಂದ್ರ ನಾಯಕತ್ವ ನಿನ್ನೆ ಅವರನ್ನು ದೆಹಲಿಗೆ ಕರೆಸಿಕೊಂಡಿತ್ತು.

ಇದನ್ನೂ ಓದಿ: ಮಣಿಪುರ: ಚುನಾವಣೆ ವೇಳೆಯ ಹಿಂಸಾಚಾರದಲ್ಲಿ ಇಬ್ಬರು ಸಾವು

ಭಾರತೀಯ ಸೈನ್ಯಕ್ಕೆ ಮಣಿಪುರ ನಾಗರಿಕರ ಮೇಲೆ ವ್ಯಾಪಕ ಅಧಿಕಾರವನ್ನು ನೀಡುವ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (AFSPA)ಯನ್ನು ತೆಗೆದುಹಾಕಲು ಕೆಲಸ ಮಾಡುವುದಾಗಿ ಮಣಿಪುರ ಚುನಾವಣೆಯಲ್ಲಿ ಬಿರೇನ್ ಸಿಂಗ್ ಹೇಳಿದ್ದರು. ಅವರು ರಾಜ್ಯದ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸಮತೋಲನ ವಿಧಾನವನ್ನು ಆಯ್ಕೆ ಮಾಡುವ ಭರವಸೆ ನೀಡಿದ್ದರು.

ಬಿರೇನ್ ಸಿಂಗ್ ಅವರು ತಮ್ಮ ವೃತ್ತಿಜೀವನವನ್ನು ಫುಟ್ಬಾಲ್ ಆಟಗಾರರಾಗಿ ಪ್ರಾರಂಭಿಸಿ ನಂತರ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)ನಲ್ಲಿ ನೇಮಕಗೊಂಡು ಅವಧಿ ಮುಗಿದ ನಂತರ ಬಿಎಸ್‌ಎಫ್ ತೊರೆದು ಪತ್ರಕರ್ತರಾದರು. ಯಾವುದೇ ರೀತಿಯ ತರಬೇತಿ ಮತ್ತು ಅನುಭವವಿಲ್ಲದಿದ್ದರೂ, ಅವರು 1992 ರಲ್ಲಿ ನಹರೋಲ್ಗಿ ತೌಡಂಗ್ ಎಂಬ ಸ್ಥಳೀಯ ದಿನಪತ್ರಿಕೆಯನ್ನು ಪ್ರಾರಂಭಿಸಿ 2001 ರವರೆಗೆ ಅದರ ಸಂಪಾದಕರಾಗಿ ಕೆಲಸ ಮಾಡಿದರು.

2002 ರಲ್ಲಿ ರಾಜಕೀಯಕ್ಕೆ ಸೇರಿ ಮಣಿಪುರದ ಹೀಂಗಾಂಗ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಹಾಗೆಯೇ 2007 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ 2012 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಾಲ್ಕು ವರ್ಷಗಳ ನಂತರ ಅವರು ಬಿಜೆಪಿ ಸೇರಿ, 2017 ರಲ್ಲಿ ಮತ್ತೆ ತಮ್ಮ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು.

ಇದನ್ನೂ ಓದಿ: ಮಣಿಪುರ ಚುನಾವಣೆ: ಬಿಜೆಪಿಯಿಂದ ಸಿಗದ ಟಿಕೆಟ್- ಮೋದಿ, ಬಿಜೆಪಿ ಧ್ವಜಕ್ಕೆ ಬೆಂಕಿ ಹಚ್ಚಿ ಕಾರ್ಯಕರ್ತರ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...