Homeಕರ್ನಾಟಕ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

- Advertisement -
- Advertisement -

“ಗೆಲುವಿಗೆ ಎಲ್ಲರೂ ಅಪ್ಪ-ಅಮ್ಮ, ಸೋಲು ಅನಾಥ” ಎನ್ನುವ ಮಾತು ಕಟು ವಾಸ್ತವವೇ ಸರಿ. ಆದರೆ ಗೆಲುವನ್ನೂ ಅನಾಥಗೊಳಿಸುವ, ಬಿಜೆಪಿಯನ್ನು ಅಜೇಯಗೊಳಿಸುವ, ನಾಗರಿಕ ಸಮಾಜದ ಪ್ರಯತ್ನವನ್ನು ನಗಣ್ಯಗೊಳಿಸುವ ಕೆಲವು ಬರಹಗಳನ್ನು ನಮ್ಮ ಮಿತ್ರರೇ ಬರೆಯುತ್ತಿರುವುದನ್ನು ಕಂಡು ಸೋಜಿಗವಾಗದಿದ್ದರೂ ‘ಏಕಪ್ಪಾ ಈ ಸ್ಥಿತಿ’ ಎಂದು ಮನಸ್ಸು ಪರಿತಪಿಸಿದ್ದಂತೂ ವಾಸ್ತವ. ನಿಲ್ಲದ ಓಟದಲ್ಲಿದ್ದುದರಿಂದ ಗಮನಿಸಿದರೂ ಯಾವ ಪ್ರತಿಕ್ರಿಯೆಯೆನ್ನೂ ನೀಡಲು ಹೋಗಲಿಲ್ಲ. ಈಗಲೂ ಓಟ ನಿಂತಿಲ್ಲ. ಆದರೆ “ನಿಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ಬರೆಯಲೇಬೇಕು” ಎಂದು ಕೆಲ ಯುವ ಸಂಗಾತಿಗಳು ಬಹಳ ಒತ್ತಡ ಹಾಕಿದ್ದರಿಂದ ನನ್ನ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. (ಒಟ್ಟು ನಾಲ್ಕು ಕಂತುಗಳಲ್ಲಿ ಈ ಅನುಭವ ಮಾಲೆ ಪ್ರಕಟಗೊಳ್ಳುತ್ತಿದೆ.)

ಮೊದಲಿಗೆ: 1. ಈ ಸಕರಾತ್ಮಕ ಫಲಿತಾಂಶಕ್ಕೆ ಎದ್ದೇಳು ಕರ್ನಾಟಕವೇ ಕಾರಣ ಅಥವಾ ಅದೇ ಪ್ರಧಾನ ಕಾರಣ ಎಂದು ನನಗೆ ತಿಳಿದ ಮಟ್ಟಿಗೆ ಯಾರೂ ಮಾತನಾಡಿಲ್ಲ ಅಥವಾ ಅಂದುಕೊಂಡಿಲ್ಲ. 2. ಸಾಮಾಜಿಕ ಶಕ್ತಿಗಳ ಮಧ್ಯಪ್ರವೇಶ ಎಂದರೆ ಎದ್ದೇಳು ಕರ್ನಾಟಕ ಮಾತ್ರವೇ ಎಂಬ ಅಹಂಕಾರವನ್ನೂ ನಾನೆಲ್ಲೂ ಕಂಡಿಲ್ಲ. 3. ಬಿಜೆಪಿ ನೆಲಕಚ್ಚಿದೆ, ಹಿಂದುತ್ವ ಹಿಮ್ಮೆಟ್ಟಿದೆ, ಫ್ಯಾಸಿಸಂ ಅಪಾಯದಿಂದ ಕರ್ನಾಟಕ ಪಾರಾಗಿದೆ ಎಂದು ಅಂದುಕೊಳ್ಳುವಷ್ಟು ಮೂರ್ಖರು ಕರ್ನಾಟಕದ ಸಾಮಾಜಿಕ ಚಳವಳಿಯಲ್ಲೆ ಯಾರೂ ಇಲ್ಲ. 4. ಕಾಂಗ್ರೆಸ್ ಈ ದೇಶಕ್ಕೆ ಪರಿಹಾರ ಅಥವಾ ಪರ್ಯಾಯ ಎಂಬ ಭ್ರಮೆಯಲ್ಲಿ ಎದ್ದೇಳು ಕರ್ನಾಟಕದ ಯಾರೊಬ್ಬರೂ ಇಲ್ಲ.

ಎರಡನೆಯದಾಗಿ: ಎದ್ದೇಳು ಕರ್ನಾಟಕದ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಅವಲೋಕನ ಸಭೆ ಇನ್ನು ನಡೆದಿಲ್ಲ. ಹಾಗಾಗಿ ನನ್ನ ಈ ಬರಹ ನನ್ನ ವೈಯಕ್ತಿಕ ಮಧ್ಯಾಂತರಿ ಅಭಿಪ್ರಾಯ.

ಮೂರನೆಯದಾಗಿ: ಈ ಬರಹದ ಉದ್ದೇಶ ಎದ್ದೇಳು ಕರ್ನಾಟಕ ಮಾಡಿದ ಕೆಲಸವನ್ನು ಕೊಂಡಾಡುವುದು ಅಲ್ಲ. ಬದಲಿಗೆ ಈ ಒಂದು ವಿಶಿಷ್ಟ ಅನುಭವ ನೀಡಿರುವ ಕಲಿಕೆಗಳ ಅನುಭವದ ಬುತ್ತಿಯಲ್ಲಿ ಹಂಚಿಕೊಳ್ಳಲಿಕ್ಕಾಗಿ. ಈ ಅಂಧಕಾರದ ದಿನಗಳಲ್ಲಿ, ಹಣ, ಜಾತಿ, ಕೋಮು ರಾಜಕರಣದಲ್ಲಿ ಮುಳುಗಿಗೇಳುತ್ತಿರುವ ಚುನಾವಣೆಗಳಲ್ಲಿ, ಸಾಮಾಜಿಕ ಸಂಘಟನೆಗಳಿಗೆ ಅರ್ಥವತ್ತಾದದ್ದನ್ನು ಮಾಡಲೇನಾದರೂ ಉಂಟೆ? ಎಂಬ ಪ್ರಶ್ನೆಗೆ ನಿಚ್ಚಳ ಉತ್ತರ ಅಲ್ಲವಾದರೂ ದಿಕ್ಸೂಚಿ ಉತ್ತರವನ್ನಂತೂ ಎದ್ದೇಳು ಕರ್ನಾಟಕದ ಅನುಭವ ತೋರಿಸಿಕೊಟ್ಟಿದೆ. ಹಾಗಾಗಿ ದೇಶ ಉಳಿಸಲು ಕೈಕೆಸರು ಮಾಡಿಕೊಳ್ಳಲು ಸಿದ್ಧವಿರುವ ಸಾಮಾಜಿಕ ಕಾರ್ಯಕರ್ತರು ಇದನ್ನು ಗಮನಿಸುವ ಮತ್ತು ಅವಲೋಕಿಸುವ ಅಗತ್ಯವಂತೂ ಇದೆ. ಅದಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಬರಹ ರೂಪದಲ್ಲಿ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಸಂಕ್ಷಿಪ್ತ ಹಿನ್ನೆಲೆ: ಕರ್ನಾಟಕದಲ್ಲಿ ಕೋಮುವಾದ ತಲೆಎತ್ತಿ ಬೆಳೆಯತೊಡಗಿದಾಗನಿಂದ ಅದನ್ನು ಪ್ರತಿರೋಧಿಸುವ ಪರಂಪರೆ ಕರ್ನಾಟಕದಲ್ಲಿ ಬಹಳ ಪ್ರಖರ ರೀತಿಯಲ್ಲೇ ಅಭಿವ್ಯಕ್ತಗೊಂಡಿದೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅದರ ಅತಿ ಹೆಚ್ಚು ಸಂಘಟಿತ ಹಾಗೂ ಅತಿ ಹೆಚ್ಚು ಕಾಲದ ಪ್ರಯತ್ನವಾಗಿತ್ತು. ಇದಲ್ಲದೆ ಸಮಾನ ಮನಸ್ಕರ ವೇದಿಕೆ, ಸಂವಿಧಾನ ಉಳಿವಿಗಾಗಿ ಕರ್ನಾಟಕ, ದೇಶಕ್ಕಾಗಿ ನಾವು, ಸಹಮತ, ಮಾನವ ಬಂಧುತ್ವ ವೇದಿಕೆ, ಬಹುತ್ವ, ಜನಪರ ಸಂಘಟನೆಗಳ ಒಕ್ಕೂಟ, ಸಹಬಾಳ್ವೆ ಮುಂತಾದ ಹತ್ತು ಹಲವು ಪ್ರಯತ್ನಗಳು ಇದರ ಜೊತೆಜೊತೆಗೂ ನಡೆದಿವೆ. ಇದಲ್ಲದೆ ಅನೇಕ ಎಡ, ಪ್ರಜಾತಾಂತ್ರಿಕ, ದಲಿತ, ಅಲ್ಪಸಂಖ್ಯಾತ ಸಂಘಟನೆಗಳು ಫ್ಯಾಸಿಸ್ಟ್ ಶಕ್ತಿಯನ್ನು ತಮ್ಮ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮುಂತಾದ ಬಹುತೇಕ ಸಾಮಾಜಿಕ ಸಂಘಟನೆಗಳು ಈ ಶಕ್ತಿಗಳನ್ನು ವಿರೋಧಿಸುವ ಖಚಿತ ನಿಲುವುಗಳಿಗೆ ತಲುಪಿದ್ದಾರೆ. ಹಾಗಾಗಿ ಬಿಜೆಪಿ ಮತ್ತು ಸಂಘಪರಿವಾರವನ್ನು ಕರ್ನಾಟಕದ ಎಲ್ಲಾ ಸಾಮಾಜಿಕ ಸಂಘಟನೆಗಳೂ ತಮ್ಮ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಿವೆ.

ಪ್ರತಿ ಚುನಾವಣೆ ಸಂದರ್ಭದಲ್ಲೂ ಸಾಮಾಜಿಕ ಸಂಘಟನೆಗಳು ಸಕ್ರಿಯವಾಗಿ ಮಧ್ಯಪ್ರವೇಶ ಮಾಡುವ ಪ್ರಯತ್ನ ಮಾಡಿವೆ ಮತ್ತು ಇದರ ಪ್ರಮಾಣ ಮತ್ತು ವೇಗ ಬಿರುಸುಪಡೆಯುತ್ತಾ ಬಂದಿದೆ. ಈ ಬಾರಿ ಇದರಲ್ಲೊಂದು ನೆಗೆತ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಶಕ್ತಿಗಳನ್ನು ಎದುರಿಸುವ ನಿಟ್ಟಿನಲ್ಲಿ ನಡೆದ ಸಂಯುಕ್ತ ಪ್ರಯತ್ನಗಳ ಪೈಕಿ ನಾಲ್ಕು ಬಹಳ ಮುಖ್ಯವಾದವು.

1. 2022 ಮೇ ತಿಂಗಳಿನಲ್ಲಿ ನಡೆದ ಉಡುಪಿ ಸಹಬಾಳ್ವೆ ಸಮಾವೇಶದಲ್ಲಿ ಸಮಾಗಮಗೊಂಡ ಜೀವಪರ ಶಕ್ತಿಗಳು “ದ್ವೇಷ ರಾಜಕಾರಣದಿಂದ ಕರ್ನಾಟಕವನ್ನು ಮುಕ್ತಗೊಳಿಸಲು ನಾವು ನಿರಂತರ ಕೆಲಸ ಮಾಡಬೇಕು” ಎಂಬ ತೀರ್ಮಾನಕ್ಕೆ ಬಂದದ್ದು.

2022, ಮೇ 14ರಂದು ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶ
2022, ಮೇ 14ರಂದು ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ

2. ಡಿಸೆಂಬರ್ 6 ರಂದು ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಕೂಡಿ ಬೃಹತ್ ಪ್ರತಿರೋಧ ಸಮಾವೇಶ ನಡೆಸಿ “ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದುದೇ ನಮ್ಮ ಪ್ರಧಾನ ಗುರಿ” ಎಂದು ಘೋಷಿಸಿದ್ದು.

2022, ಡಿಸೆಂಬರ್‌ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕಾರ್ಯಕ್ರಮ
2022, ಡಿಸೆಂಬರ್‌ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸಾಗರ

3. ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆಗಳು ಸೇರಿ ಜನಾಗ್ರಹ ಸಮಾವೇಶ ನಡೆಸಿ “ಜನ ವಿರೋಧಿ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ” ಎಂಬ ನಿರ್ಣಯ ತೆಗೆದುಕೊಂಡದ್ದು.

2023, ಜನವರಿ 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ನಡೆದ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆ ಜನಾಗ್ರಹ ಸಮಾವೇಶದಲ್ಲಿ ರೈತ ನಾಯಕ ಡಾ.ದರ್ಶನ್ ಪಾಲ್ ಪಾಲ್ಗೊಂಡಿದ್ದರು.
2023, ಜನವರಿ 16ರಂದು ಬೆಂಗಳೂರಿನಲ್ಲಿ ನಡೆದ ರೈತ, ಕೃಷಿಕೂಲಿ, ದಲಿತ, ಕಾರ್ಮಿಕ ಸಂಘಟನೆಗಳ ಜನಾಗ್ರಹ ಸಮಾವೇಶ

4. ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡ 20 ಜಿಲ್ಲೆಗಳ, ಹಲವು ಗಟ್ಟಿ ಸಂಘಟನೆಗಳ 150 ಗಟ್ಟಿ ಸಂಘಟಕರುಗಳು ಕೂಡಿ “ಎದ್ದೇಳು ಕರ್ನಾಟಕ”ದ ಹೆಸರಿನಲ್ಲಿ “ಕ್ರಿಟಿಕಲ್ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ತಳಮಟ್ಟಕ್ಕೆ ಇಳಿದು ಕೆಲಸ ಮಾಡೋಣ” ಎಂಬ ತೀರ್ಮಾನಕ್ಕೆ ಬಂದಿದ್ದು ಮತ್ತು ಅದಕ್ಕಾಗಿ ಸ್ಥೂಲ ಯೋಜನೆಯೊಂದನ್ನು ಸಿದ್ಧಗೊಳಿಸಿದ್ದು.

ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರದಲ್ಲಿ ರಾಜಕೀಯ ವಿಶ್ಲೇಷಕ ಎ.ನಾರಾಯಣ ಮಾತನಾಡಿದರು.
ಮಾರ್ಚ್ 5 ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರ

‘ಎದ್ದೇಳು’ ಯೋಜನೆ: ಮೇಲ್ಕಂಡ ಕಾರ್ಯಗಾರದಲ್ಲಿ ತಲುಪಿದ ತೀರ್ಮಾನವೆಂದರೆ “ಕೋಮುವಾದಿ ಶಕ್ತಿಗಳನ್ನು ಸೋಲಿಸಿ” ಎಂಬ ಜನರಲ್ ಪ್ರಚಾರದಿಂದ ಹೆಚ್ಚೇನೂ ಉಪಯೋಗವಿಲ್ಲ. ಬದಲಾಗಿ ಮತದಾನದ ಮೇಲೆ ನೇರ ಪರಿಣಾಮ ಬೀರುವಂತಹ ಕೆಲಸಕ್ಕೆ ಇಳಿಯಲೇಬೇಕು. ಅದಕ್ಕಾಗಿ…

ನಮ್ಮ ಶಕ್ತಿ ಸಾಮರ್ಥ್ಯವನ್ನು ಬಿಜೆಪಿಯ ಜೊತೆ ತೀವ್ರ ಸ್ಪರ್ಧೆ ಇರುವ ವಿಧಾನಸಭಾ ಕ್ಷೇತ್ರಗಳ ಮೇಲೆ ವಿನಿಯೋಗಿಸಬೇಕು. ಬಿಜೆಪಿಗೂ ಇತರೆ ಪಕ್ಷಗಳಿಗೂ ತೀವ್ರ ಹಣಾಹಣಿ ಇರುವ, ಗೆಲುವಿನ ಅಂತರ ಕಡಿಮೆ ಇರುವ, 5-10 ಸಾವಿರ ಓಟುಗಳ ಬದಲಾವಣೆಯಾದರೆ ಫಲಿತಾಂಶದಲ್ಲೇ ಬದಲಾವಣೆ ಬರುವ ಕ್ಷೇತ್ರಗಳನ್ನು ಆಯ್ದುಕೊಂಡು ಕೆಲಸ ಮಾಡಬೇಕು. ನಮ್ಮೆಲ್ಲಾ ಸಮಾಜಿಕ ಸಂಪರ್ಕ ಮತ್ತು ಸಾಮರ್ಥ್ಯ ಬಳಸಿ 5-10 ಸಾವಿರ ಮತಗಳನ್ನು ಪ್ರಭಾವಿಸುವ ಮೂಲಕ ಫಲಿತಾಂಶದ ಮೇಲೆ ಪರಿಣಾಮ ಬೀರಬೇಕು. ಇದಕ್ಕಾಗಿ ಈ ಕ್ಷೇತ್ರಗಳಲ್ಲಿ ವಾಲಂಟೀರ್ಸ್ ತಂಡಗಳನ್ನು ಕಟ್ಟಿ ಯೋಜಿತ ಕೆಲಸ ಮಾಡಬೇಕು.

ಆ ಆಯ್ದ ಕ್ಷೇತ್ರಗಳಲ್ಲಿ ತಳಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ, ಮತ ವಿಭಜನೆಯನ್ನು ತಗ್ಗಿಸುವ, ಬಿಜೆಪಿಯನ್ನು ಏಕೆ ಸೋಲಿಸಲೇಬೇಕು ಎಂಬುದನ್ನು ವಿವಿಧ ಜನವರ್ಗಗಳಿಗೆ ಮನವರಿಕೆ ಮಾಡಿಸುವ ಕೆಲಸ ಮಾಡಬೇಕು.

ವೈಜ್ಞಾನಿಕ ರೀತಿಯಲ್ಲಿ ಸರ್ವೆ ನಡೆಸಿ ಜನರ ನಾಡಿಮಿಡಿತ ಅರಿಯಬೇಕು, ಜನರು ಗಾಢವಾಗಿ ಫೀಲ್ ಮಾಡುತ್ತಿರುವ ಸಮಸ್ಯೆಗಳನ್ನೇ ಫೋಕಸ್ ಮಾಡುತ್ತಾ ನೆರೇಟಿವ್ ರೂಪಿಸಬೇಕು. ಇದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಕೆಲಸ ಮಾಡಬೇಕು ಮತ್ತು ವೈವಿಧ್ಯಮಯ ಸಾಹಿತ್ಯ ಪ್ರಕಟಿಸಬೇಕು.
ಕೊನೆಯದಾಗಿ ಮತ್ತು ಬಹುಮುಖ್ಯವಾಗಿ ಈ ಎಲ್ಲಾ ಕೆಲಸವನ್ನೂ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯಿಂದ ಬಿಡಿಗಾಸು ಹಣವನ್ನೂ ಪಡೆಯದೆ ಮಾಡಬೇಕು. ಇದೊಂದು ಸ್ವತಂತ್ರ ಮತ್ತು ನೀತಿಬದ್ಧ ನಾಗರಿಕ ಅಭಿಯಾನವಾಗಿದ್ದಾಗ ಮಾತ್ರವೇ ಎಲ್ಲರನ್ನೂ ವಿಮರ್ಷಿಸುವ ಮತ್ತು ಜನರ ಬಳಿ ನಿಸ್ವಾರ್ಥ ದನಿಯಲ್ಲಿ ಮಾತನಾಡುವ ನೈತಿಕ ಶಕ್ತಿ ನಮಗಿರುತ್ತದೆ.

(ಮುಂದುವರಿಯುತ್ತದೆ: ಭಾಗ -2 ‘ಎದ್ದೇಳು ಕರ್ನಾಟಕ’ ಮಾಡಿದ ಕೆಲಸ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...