Homeಚಳವಳಿಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?...

ಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?…

- Advertisement -
- Advertisement -

ಪತ್ರಿಕೆಯಲ್ಲಿ ಈ ದಿನ ಅಥವಾ ವಾರ ನೀವು ಯಾವುದರ ಮೇಲೆ ಕೇಂದ್ರೀಕರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸುವುದು ಈ ಕಾಲದಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ನಿಮ್ಮ ಗಮನ ಅಸಲೀ ಸಮಸ್ಯೆಯ ಮೇಲೆ ಹೋಗದಂತೆ ಮಾಡಲೆಂದೇ ಕೆಲವು ವಾಗ್ವಾದಗಳನ್ನು ತೇಲಿಬಿಟ್ಟಿರಬಹುದೆಂಬ ಅನುಮಾನ ಬಂದಿರುತ್ತದೆ. ಕೆಲವೊಮ್ಮೆ ಅವು ಕೇವಲ ವಾಗ್ವಾದಗಳಾಗಿರುವುದಿಲ್ಲ; ಯಾರದ್ದೋ ಬದುಕಿನ ಅತ್ಯಂತ ಜ್ವಲಂತ ಸಮಸ್ಯೆಯಾಗಿರುತ್ತದೆ. ಉದಾಹರಣೆಗೆ ಕಾಶ್ಮೀರ, ಎನ್‍ಆರ್‍ಸಿ ಇತ್ಯಾದಿ. ಕೆಲವು ಸಾರಿ ಅದು ಯಾರ ಬದುಕಿನ ತಕ್ಷಣದ ಕಾಡುವ ಸಮಸ್ಯೆಯೂ ಆಗಿರುವುದಿಲ್ಲ; ಆದರೆ ನಮ್ಮ ಇತಿಹಾಸದಲ್ಲಿ ಅಡಗಿರುವ ಸತ್ಯಗಳನ್ನು ಬುಡಮೇಲು ಮಾಡುವ ಕೆಲಸ ನಡೆದಿರುತ್ತದೆ. ಸಾವರ್ಕರ್‌ಗೆ ಭಾರತರತ್ನ ನೀಡುತ್ತೇವೆನ್ನುವುದನ್ನು ಬಿಜೆಪಿ ಪಕ್ಷವು ಮಹಾರಾಷ್ಟ್ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಅದಕ್ಕೆ ನಿದರ್ಶನ.

ಅಸಲೀ ಸಮಸ್ಯೆ ಮತ್ತು ಹೊಸದಾಗಿ ಸೃಷ್ಟಿಸಿದ ಇಶ್ಯೂ ಎರಡನ್ನೂ ಆಯ್ದುಕೊಂಡು, ಅವುಗಳನ್ನು ಸತ್ಯದ ಮುಖಾಂತರ ಎದುರಿಸಬೇಕಾದ್ದು ನಮ್ಮ ಜವಾಬ್ದಾರಿ. ಆದರೆ, ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವಂತೆ ಪರಿಸ್ಥಿತಿ ದೂಡುತ್ತದೆ. ಇದು ರಾಜಕೀಯ ಕಾರ್ಯಕರ್ತರಿಗೆ ಮಾತ್ರವಲ್ಲದೇ, ನಮ್ಮಂತಹ ಪತ್ರಿಕೆಗಳಿಗೂ ಇರುವ ಸಂದಿಗ್ಧ.

ದೇಶದ ಸಾರ್ವಭೌಮತೆಯನ್ನು ಮತ್ತಷ್ಟು ಕಿತ್ತುಕೊಳ್ಳುವ ಆರ್‍ಸಿಇಪಿ ಒಪ್ಪಂದದ ಕುರಿತು ರೈತಸಂಘಗಳು ಪ್ರತಿಭಟಿಸುತ್ತಿರುವಾಗ ಅದಕ್ಕೆ ಇಂಬು ಕೊಡುವುದು ನಮ್ಮ ಕರ್ತವ್ಯ; ಕರ್ನಾಟಕದ ಬರ-ನೆರೆ ಸಂಕಷ್ಟಕ್ಕೆ ಪರಿಹಾರವಾಗಿ 1 ಲಕ್ಷ ಕೋಟಿ ಪ್ಯಾಕೇಜ್‍ಅನ್ನು ರೈತರು ಕೇಳುತ್ತಿರುವಾಗಲೇ, ಮತ್ತೊಂದು ಮಳೆ ಇಡೀ ರಾಜ್ಯವನ್ನು ಆವರಿಸಿದೆ. ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಅಪ್ಪಳಿಸಿದೆ. ಬಿಎಸ್‍ಎನ್‍ಎಲ್‍ಅನ್ನು ಮುಳುಗಿಸುವ ಕಾಂಗ್ರೆಸ್‍ನ ಹಳೆಯ ಪ್ಲಾನ್‍ಅನ್ನು ಬಿಜೆಪಿ ಯಶಸ್ವಿ ಮಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಹೀಗಿರುವಾಗ ಸಿ.ಟಿ.ರವಿಯ ಮನೆಹಾಳ ಮಾತು, ಸಾವರ್ಕರ್‍ಗೆ ಭಾರತರತ್ನ ಇತ್ಯಾದಿಗಳು ನಮ್ಮನ್ನು ಬೇರೆ ಕಡೆಗೆ ಎಳೆಯುತ್ತವೆ. ಅದನ್ನು ಮುಗಿಸಿ ಬರುವ ಹೊತ್ತಿಗೆ ಬಿಎಸ್‍ಎನ್‍ಎಲ್ ಮುಳುಗಿ ರೈಲ್ವೇ ಖಾಸಗೀಕರಣದ ಮಾತು ನಡೆಯುತ್ತಿರುತ್ತದೆ. ಅದರ ಬಗ್ಗೆ ಮಾತು ಆಡುವುದು ಸಾಧ್ಯವೇ ಆಗದಂತೆ ದೇಶದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿ ‘ಗೋಡ್ಸೆ ದೇಶಭಕ್ತ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ’ ಎಂದು ಹೇಳುವ ಸಾಧ್ಯತೆ ಇರುತ್ತದೆ.

ಆ ವಾರ ನಿಮಗೆ ಲಭ್ಯವಿರುವ ಮೂರು ಪುಟಗಳಲ್ಲಿ ಗೋಡ್ಸೆಯ ಕುರಿತು ಎಷ್ಟು ಮಾತನಾಡುವಿರಿ, ರೈಲ್ವೇ ಖಾಸಗೀಕರಣದ ಕುರಿತು ಏನು ಹೇಳುವಿರಿ ಎಂಬ ಸಂದಿಗ್ಧ ಎದುರಾಗುತ್ತದೆ. ಇಂತಹ ಸಂದಿಗ್ಧದಿಂದ ಹೊರಬರುವುದು ಸಾಧ್ಯವಿಲ್ಲವೇ? ಸಂತ್ರಸ್ತರು, ಕಾಳಜಿಯುಳ್ಳವರು, ಪ್ರಜಾತಂತ್ರವಾದಿಗಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹೇಳಿ, ಟ್ವಿಟ್ಟರ್ ಟ್ರೆಂಡ್ ಮಾಡಿಬಿಟ್ಟರೆ ಸಾಕೇ?

ಖಂಡಿತಾ ಸಾಲದು. ಬೀದಿಯಲ್ಲಿ ಸಂತ್ರಸ್ತರು ಒಟ್ಟುಗೂಡಿ ಶಕ್ತಿಯುತವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಡುವುದು, ಬುದ್ಧಿಜೀವಿಗಳು ಸರಿಯಾದ ಹತಾರಗಳೊಂದಿಗೆ ತಮ್ಮದೇ ಆದ ಮಾಧ್ಯಮಗಳನ್ನು ಹುಡುಕಿಕೊಂಡು ವಾಗ್ವಾದಕ್ಕಿಳಿಯುವುದು ಎರಡೂ ಆಗಬೇಕು. ಮಾಧ್ಯಮವು ಇವೆರಡಕ್ಕೂ ಸೂಕ್ತ ಅವಕಾಶ ಕಲ್ಪಿಸಿ ಅದನ್ನು ವ್ಯಾಪಕಗೊಳಿಸಬೇಕು; ಅಧಿಕಾರಸ್ಥರ ಮೇಲೆ ಒತ್ತಡ ತರಬೇಕು. ಆಗ ಪರಿಣಾಮ ಕಾಣತೊಡಗುತ್ತದೆ. ಆದರೆ, ಇಂದಿನ ಮಾಧ್ಯಮ ಇವೆರಡನ್ನೂ (ಬೀದಿಯಲ್ಲಿನ ಭಿನ್ನಮತ ಮತ್ತು ಬುದ್ಧಿಜೀವಿಗಳ ಅಭಿಮತ) ದಿಕ್ಕೆಡಿಸುವ ಕೆಲಸ ಮಾಡುತ್ತಿದೆ. ಅದರ ಫಲವಾಗಿ ಎಲ್ಲವೂ ದುರ್ಬಲವಾಗಿಬಿಟ್ಟಿವೆ. ಹಾಗಾದರೆ ದಾರಿಯೇನು? ದಾರಿಯಿಷ್ಟೇ; ಇವು ಮೂರೂ ಅಭಿನ್ನವಾಗಿ ಜೊತೆಗೂಡುವುದು. ಜೊತೆಗೂಡಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು. ಮಿಕ್ಕೆರಡು ವಲಯಗಳು ಜೊತೆಗೂಡಿ ಮಾಧ್ಯಮವನ್ನು ಕಟ್ಟಿ ನಿಲ್ಲಿಸಬೇಕು. ಅದು ಮಾತ್ರವೇ ದಾರಿ.

ನ್ಯಾಯಪಥ ಮತ್ತು ನಮ್ಮ ವೆಬ್‍ಸೈಟ್‍ಗಳು ಮಾಡಹೊರಟಿರುವುದು ಅದನ್ನೇ. ಇದನ್ನೇ ಈ ವಾರದಲ್ಲಿ ನಡೆಯಲಿರುವ ಜಿಲ್ಲಾ ಸಭೆಗಳಲ್ಲೂ ಚರ್ಚಿಸಲಾಗುವುದು. ಹೊಸ ರೀತಿಯ ಮಾಧ್ಯಮವು ಬೀದಿಯಲ್ಲಿರುವ ಜನತೆ ಮತ್ತು ಹೊಸಕಾಲದ ಬುದ್ಧಿಜೀವಿಗಳನ್ನು ಬೆಸೆಯುತ್ತಾ, ಅವೆರಡರಿಂದ ಪ್ರತ್ಯೇಕವಾಗುಳಿಯದೇ ತಾನೂ ಜೊತೆಗೂಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...