Homeಕರ್ನಾಟಕ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

- Advertisement -
- Advertisement -

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ‘ಈದಿನ.ಕಾಂ’ ಸಂಸ್ಥೆಯು ಚುನಾವಣಾಪೂರ್ವ ಮೆಗಾ ಸರ್ವೇಯನ್ನು ನಡೆಸಿದ್ದು, “ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ” ಎಂದು ತಿಳಿಸಿದೆ.

ಈಗಾಗಲೇ ಹಂತಹಂತವಾಗಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುತ್ತಿದ್ದು, “ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂಬ ಮಾಹಿತಿಯನ್ನು ಗುರುವಾರ (ಏಪ್ರಿಲ್ 26) ಪ್ರಕಟಿಸಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ.

ಈ ಕುರಿತು ಸಮೀಕ್ಷೆಯ ಯೋಜನಾ ಮುಖ್ಯಸ್ಥರಾದ ಡಾ.ಎಚ್.ವಿ.ವಾಸು ಮತ್ತು ‘ಈದಿನ’ ಸಂಪಾದಕರಾದ ಬಸವರಾಜು ಮೇಗಲಕೇರಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಚುನಾವಣಾ ವಿವರಗಳೇನು?

“ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು, ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ ವಿಶಿಷ್ಟ ಮಾಧ್ಯಮ ಪ್ರಯತ್ನವೇ ಈದಿನ.ಕಾಮ್. ಕಳೆದ ಒಂದು ವರ್ಷದಿಂದ ಈ ಪ್ರಯೋಗವು ಹಂತಹಂತವಾಗಿ ಅನಾವರಣಗೊಳ್ಳುತ್ತಿವೆ. ಡಿಜಿಟಲ್ ಮಾಧ್ಯಮಗಳು ಪ್ರತ್ಯೇಕ ದ್ವೀಪಗಳಾಗಿ ಕಾರ್ಯನಿರ್ವಹಿಸುವ ಬದಲು, ಪ್ರಜಾತಂತ್ರದ ಹಿತದೃಷ್ಟಿಯಿಂದ ಪರಸ್ಪರ ಪೂರಕವಾಗಿ ಒಂದು ನೆಟ್ವರ್ಕ್ ಆಗಿ ಕೆಲಸ ಮಾಡಬೇಕೆಂದು ಈದಿನ.ಕಾಮ್ ನಂಬುತ್ತದೆ.”

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯ ವಿವರಗಳನ್ನು ಈಗಾಗಲೇ www.eedina.com ವೆಬ್‌ಸೈಟಿನಲ್ಲಿ ಏಪ್ರಿಲ್ 22ರಿಂದ ಪ್ರಕಟಿಸಲಾಗುತ್ತಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಇರುವುದನ್ನು ಈ ಸಮೀಕ್ಷೆ ತೋರಿಸುತ್ತಿದೆ, ನಾಳೆ ಅಂದರೆ ಏಪ್ರಿಲ್ 27ರಂದು ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ ಎಂಬ ವಿವರವನ್ನು ಪ್ರಕಟಿಸಲಿದ್ದೇವೆ.

ಸಮೀಕ್ಷೆಯಲ್ಲಿ ಹೊರಬಂದಿರುವ ಸಂಗತಿಗಳು

1. ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ.

ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ.

May be an image of text that says "ವಿಧಾನಸಭಾ ಚುನಾವಣೆ 2023 ಈದಿನ.ಕಾಮ್ ಮೆಗಾ ಸರ್ವ ಶದಿನ o.com eedino. ನ್ಯಾಯ ಪ್ರೀತಿ ಕರ್ನಾಟಕದಲ್ಲಿ ಆಡಳಿತ ವಿರೋಧ ಅಲೆ ಯಾವ ಸಮುದಾಯಗಳು ಯಾವ ಪ್ರಮಾಣದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬಾರದು ಎಂದಿದ್ದಾರೆ? ಒಟ್ಟು ಬ್ರಾಹ್ಮಣ, 67% ವೈಶ್ಯ ಇತ್ಯಾದಿ 43% 86% ಮುಸ್ಲಿಮರು ಲಿಂಗಾಯತ 47% 78% ಒಕ್ಕಲಿಗ 67% ಪ.ಪಂಗಡ 74% 71% ಪ.ಜಾತಿ ಕುರುಬ Eedina.com Megha Survey ಈದಿನ.ಕಾಂ ಮಾರ್ಚ್ ತರಿಂದ ಏಪ್ರಿಲ್ 21ರವರೆಗೆ ನಡೆಸಿದ ಮೆಗಾಸರ್ವೆ ಫಲಿತಾಂಶ www.eedina.com"

May be an image of text that says "ವಿಧಾನಸಭಾ ಚುನಾವಣೆ 2023 ಈದಿನ. ಕಾಮ್ ಮೆಗಾ ಸರ್ವ ೀದಿನ eedina.com ಸತ್ಯ ನ್ಯಾಯ ।ಪ್ರೀತಿ ಕರ್ನಾಟಕದಲ್ಲಿ ಆಡಳಿತರ ವಿರೋಧ ಅಲೆ ಈದಿನ.ಕಾಂ ಮೆಗಾ ಸರ್ವೆಯ ಮೊದಲ ಪ್ರಶ್ನೆ: ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬೇಕೇ? 33% ಈ ಸರ್ಕಾರ ಮುಂದುವರೆಯಲಿ 67 ಈ ಸರ್ಕಾರ ಮುಂದುವರೆಯಬಾರದು *ಶೇ.32ರಷ್ಟು ಜನರು ಯಾವ ಅಭಿಪ್ರಾಯವನ್ನೂ ಹೇಳಿಲ್ಲ. ಅಭಿಪ್ರಾಯ ಹೇಳಿರುವವರ ಪೈಕಿ ಮೇಲಿನ ಪ್ರಮಾಣದಲ್ಲಿ ಹೌದು ಅಥವಾ ಇಲ್ಲ ಎಂದಿದ್ದಾರೆ. ಮಾರ್ಚ್ 3ರಿಂದ ಏಪ್ರಿಲ್ 21ರವರೆಗೆ ನಡೆದ ಸಮೀಕ್ಷೆ www.eedina.com"

2. ಬಸವರಾಜ ಬೊಮ್ಮಾಯಿಯವರ ಸರ್ಕಾರವೇ ಇತ್ತೀಚಿನ ಸರ್ಕಾರಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರವೆಂಬ ಅನಿಸಿಕೆ ಜನರಲ್ಲಿದೆ. 33% ಜನರು ಈ ಸರ್ಕಾರ ಅತ್ಯಂತ ಭ್ರಷ್ಟ ಎಂದರೆ, 14% ಜನರು ಯಡಿಯೂರಪ್ಪನವರ ಸರ್ಕಾರವನ್ನೂ 12% ಜನರು ಸಿದ್ದರಾಮಯ್ಯನವರ ಸರ್ಕಾರವನ್ನೂ, 8% ಜನರು ಕುಮಾರಸ್ವಾಮಿಯವರ ಸರ್ಕಾರವನ್ನು ಅತ್ಯಂತ ಭ್ರಷ್ಟವೆಂದು ಹೇಳಿದ್ದಾರೆ.

3. ಮತದಾನವನ್ನು ಪ್ರಭಾವಿಸುವ ಅಂಶಗಳಾಗಿ ಜನರು ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗಗಳನ್ನು ಮೊದಲ ಮೂರು ಸಂಗತಿಗಳಾಗಿ ಗುರುತಿಸಿದ್ದಾರೆ.

4. ರಾಜ್ಯ ಬಿಜೆಪಿ ಸರ್ಕಾರದ್ದೇ ಆದ ಯಾವ ಯೋಜನೆಗಳೂ ಜನರಿಗೆ ನೆನಪಿಲ್ಲ. ಮೂರನೇ ಒಂದು ಭಾಗ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದೇ ಗೊತ್ತಿಲ್ಲ. ಮೂರನೇ ಒಂದು ಭಾಗ ಜನರಿಗೆ ಕಾಂಗ್ರೆಸ್‌ ಗ್ಯಾರಂಟಿಗಳೂ ಗೊತ್ತಿಲ್ಲ; ಗೊತ್ತಿರುವವರಲ್ಲಿ ಅರ್ಧ ಜನಕ್ಕೆ ಅದನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿಲ್ಲ.

5. ಸರ್ಕಾರಕ್ಕೆ ಇದ್ದಷ್ಟು ಆಡಳಿತ ವಿರೋಧಿ ಅಲೆ ಶಾಸಕರಿಗಿಲ್ಲ. ಆದರೆ ಹಾಲಿ ಶಾಸಕರ ಪೈಕಿ ಹೆಚ್ಚಿನ ವಿರೋಧ ಬಿಜೆಪಿ ಶಾಸಕರಿಗಿದೆ.

ಸಮೀಕ್ಷೆಯ ವಿಶಿಷ್ಟ ಅಂಶಗಳು

1. ಇದು ಈ ಚುನಾವಣೆಗೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ: 41,169 ಮತದಾರರನ್ನು ಇದರಲ್ಲಿ ಮಾತಾಡಿಸಲಾಗಿದೆ (Very big sample size).

2. (Scientific random sampling) ಯಾವುದೇ ಪೂರ್ವಗ್ರಹ ಕೆಲಸ ಮಾಡದ ರೀತಿಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತಗಟ್ಟೆಗಳಲ್ಲಿ ಮತ್ತು ಪ್ರತಿ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತದಾರರ ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

3. ಸಮೀಕ್ಷೆಯನ್ನು ಬಹುತೇಕ ರಾಜ್ಯದಾದ್ಯಂತ ಇರುವ ನಾಗರಿಕ ಪತ್ರಕರ್ತರು (ಮೀಡಿಯಾ ಜರ್ನಲಿಸ್ಟ್) ನಡೆಸಿರುತ್ತಾರೆ.

4. ಇದು ದೂರವಾಣಿ ಮೂಲಕ ನಡೆದ ಸಮೀಕ್ಷೆ ಅಲ್ಲ. ಮತದಾರರನ್ನು ಅವರವರ ಮನೆಗಳಲ್ಲೇ ಮಾತನಾಡಿಸಲಾದ ಮುಖಾಮುಖಿ ಸಮೀಕ್ಷೆ.

5. ನಮ್ಮ ಡೇಟಾ ಪರಿಶೀಲನೆಯ ಪ್ರಕ್ರಿಯೆ ಮುಗಿದ ನಂತರ ಸಂಶೋಧನೆ ಮಾಡಬಯಸುವ ವಿಶ್ವವಿದ್ಯಾಲಯಗಳು ಕೇಳಿದರೆ ಅವರಿಗೆ ಸಂಪೂರ್ಣ ಡೇಟಾ ಕೊಡಲಾಗುವುದು.

6. ಇಂದು (ಏಪ್ರಿಲ್ 26) ನಾವು ವಿವಿಧ ಪಕ್ಷಗಳು, ಸಮುದಾಯಗಳು ಮತ್ತು ಪ್ರದೇಶವಾರು ಪಡೆಯಬಹುದಾದ ಮತಗಳ ಅಂದಾಜು ನೀಡುತ್ತೇವೆ.

7. ನಾಳೆ (ಏಪ್ರಿಲ್ 27) ಸೀಟು ಹಂಚಿಕೆಯ ವಿವರಗಳನ್ನು ನೀಡಲಿದ್ದೇವೆ.

ಇಂತಹ ಸಮೀಕ್ಷೆಗಳ ಅಂತಿಮ ಫಲಿತಾಂಶ ಮತ್ತು ಅಂಕಿ-ಸಂಖ್ಯೆಗಳು ಮಾತ್ರವಲ್ಲದೇ, ಅಳವಡಿಸಿದ ವಿಧಾನ ಹಾಗೂ ಪೂರ್ಣ ದತ್ತಾಂಶಗಳೂ ಸಹಾ ಮುಕ್ತವಾಗಿರಬೇಕು ಎಂದು ಈದಿನ.ಕಾಮ್ ನಂಬುತ್ತದೆ. ಸುಮಾರು 23 ವಿವಿಧ ಅಂಶಗಳನ್ನು (Variable) ಬಳಸಿರುವ ಈ ಸಮೀಕ್ಷೆಯು ಸಂಶೋಧನಾರ್ಥಿಗಳಿಗೆ ಅಪಾರ ಪ್ರಮಾಣದ ವಿವರಗಳನ್ನು ಒದಗಿಸುತ್ತವೆ. ಹಾಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಥವಾ ಇನ್ನಿತರ ವಿಭಾಗಗಳ ಸಂಶೋಧನಾ ಕೇಂದ್ರಗಳಿಗೆ ಅದನ್ನು ನೀಡಲಾಗುತ್ತದೆ.

ಸೀಟು ಹಂಚಿಕೆಯ ವಿವರಗಳನ್ನು ಏಪ್ರಿಲ್ 27 ರಂದು ಪ್ರಸ್ತುತಪಡಿಸಲಾಗುತ್ತದೆ. ಅದೇ ಸಮಯದಲ್ಲಿ ಪ್ರಕಟಿಸಲು ಆಸಕ್ತಿ ತೋರುವ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...