Homeಮುಖಪುಟಕ್ರೀಡಾಪಟುಗಳ ಹೋರಾಟ ಬೆಂಬಲಿಸಲು ಪ್ರಿಯಾಂಕಾ ಗಾಂಧಿ ಕರೆ; ಕೇಂದ್ರದ ವಿರುದ್ಧ ವಾಗ್ದಾಳಿ

ಕ್ರೀಡಾಪಟುಗಳ ಹೋರಾಟ ಬೆಂಬಲಿಸಲು ಪ್ರಿಯಾಂಕಾ ಗಾಂಧಿ ಕರೆ; ಕೇಂದ್ರದ ವಿರುದ್ಧ ವಾಗ್ದಾಳಿ

- Advertisement -
- Advertisement -

ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ (ಡಬ್ಲ್ಯುಎಫ್‌ಐ), ಬಿಜೆಪಿಯ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಅವರು ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೇಶದ ಪ್ರಮುಖ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕ್ರೀಡಾಪಟುಗಳು ದೇಶದ ಹೆಮ್ಮೆಯಾಗಿದ್ದು, ನಮ್ಮ ಸಹೋದರಿಯರನ್ನು ಬೆಂಬಲಿಸೋಣ ಎಂದು ಕರೆ ನೀಡಿರುವ ಪ್ರಿಯಾಂಕಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಕ್ರೀಡಾಪಟುಗಳು ದೇಶದ ಮೌಲ್ಯ. ಅವರ ಬಗ್ಗೆ ದೇಶವೇಕೆ ಹೆಮ್ಮೆಪಡುತ್ತಿದೆ ಹೇಳಿ.. ಯಾಕೆಂದರೆ ಎಷ್ಟೇ ಕಷ್ಟಗಳು ಬಂದರೂ ಸಹಿಸಿಕೊಂಡು ದಣಿವರಿಯದೆ ದೇಶಕ್ಕೋಸ್ಕರ ದುಡಿದು ಪದಕಗಳನ್ನು ಗೆಲ್ಲುತ್ತಾರೆ. ಗೆದ್ದಾಗ ಅವರ ಗೆಲುವು ನಮ್ಮ ಗೆಲುವೇ ಎಂದು ದೇಶವೇ ಮುಗುಳ್ನಗುತ್ತದೆ.”

”ಮಹಿಳಾ ಆಟಗಾರತಿಯರ ಗೆಲುವು ದೊಡ್ಡದು. ಆ ಕ್ರೀಡಾಪಟುಗಳು ಈಗ ಸಂಸತ್ತಿನ ಎದುರುಗಡೆಯ ರಸ್ತೆಯಲ್ಲಿ ಕಣ್ಣೀರು ಸುರಿಸುತ್ತ ಕುಳಿತಿದ್ದಾಳೆ. ಈ ಹಿಂದೆಯೂ ಅವರ ಮೇಲೆ ನಡೆಯದ ಶೋಷಣೆ ವಿರುದ್ಧ ಅವರು ಪ್ರತಿಭಟಿಸಿದ್ದರು. ಈಗಲೂ ಪ್ರತಿಭಟಿಸುತ್ತಿದ್ದಾರೆ ಆದರೆ ಅವರ ಅಹವಾಲು ಆಲಿಸುವವರಿಲ್ಲ” ಎಂದಿದ್ದಾರೆ.

”ಸಧೃಡ ದೇಹ ಹೋಂದಿರುವ ಆ ಹೆಣ್ಣು ಮಕ್ಕಳು ಮುಗ್ದರು. ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಿಚಾರಣೆ ನಡೆಸುತ್ತಾರೆ ಎಂದು ಸರ್ಕಾರ ಹೇಳಿದಾಗ ಈ ಹುಡುಗಿಯರು ನಂಬಿದ್ದರು. ಆದರೆ ತನಿಖೆ ನಡೆಯಲಿಲ್ಲ ಇನ್ನು ಶಿಕ್ಷೆಯ ಪ್ರಶ್ನೆಯೇ ಉದ್ಭವಿಸಲಿಲ್ಲ. ಅಪರಾಧಿಗಳನ್ನು ರಕ್ಷಿಸಲು ಸರ್ಕಾರ ಬಯಸುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸಂಸದನ ಮೇಲೆ ಲೈಂಗಿಕ ಕಿರುಕುಳ ಆರೋಪ: #MeToo ಪ್ರತಿಭಟನೆಗೆ ‘ಎಲ್ಲಾ ಪಕ್ಷಗಳಿಗೂ ಸ್ವಾಗತ’ ಎಂದ ಕುಸ್ತಿಪಟುಗಳು

ಭಾರತ್ ಜೋಡೊ ಯಾತ್ರೆಯಲ್ಲಿ ಬಾಲಕಿಯ ನೋವನ್ನು ಆಲಿಸಿದ ವಿಪಕ್ಷ ನಾಯಕರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಅದೇ ಪೊಲೀಸರು ದೇಶದ ಗೌರವ ಹೆಚ್ಚಿಸುವ ಕ್ರೀಡಾಪಟುಗಳ ಬೇಡಿಕೆಯನ್ನು ನಿರ್ಲಕ್ಷಿಸಿದ್ದಾರೆ. ದೆಹಲಿ ಪೊಲೀಸರ ಮೇಲೆ ಯಾರ ಒತ್ತಡವಿದೆ? ಎಂದು ಪ್ರಶ್ನಿಸಿದ್ದಾರೆ.

”ಯಾವಾಗ ಪಕ್ಷ ಹಾಗೂ ಅದರ ನಾಯಕರ ದುರಹಂಕಾರ ಮಿತಿ ಮೀರುತ್ತದೆಯೋ ಆಗ ಅಂತಹ ದನಿಗಳನ್ನು ಹತ್ತಿಕ್ಕಲ್ಪಡುತ್ತವೆ. ಬನ್ನಿ ನಮ್ಮ ಸಹೋದರಿಯರನ್ನು ಬೆಂಬಲಿಸೋಣ. ದೇಶದ ಗೌರವದ ವಿಚಾರ ಇದಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಲು ಎಲ್ಲ ಪಕ್ಷಗಳಿಗೂ ಸ್ವಾಗತ ಎಂದ ಕ್ರೀಡಾಪಟುಗಳು

ಈ ಹಿಂದೆ ಜನವರಿಯಲ್ಲಿ ಇದು ‘ಕ್ರೀಡಾಪಟುಗಳ ಪ್ರತಿಭಟನೆ’ ಎಂದು ಎಡ ನಾಯಕಿ ವೃಂದಾ ಕಾರಟ್ ಅವರನ್ನು ಪ್ರತಿಭಟನಾಕಾರರು ವೇದಿಕೆಗೆ ಬಿಟ್ಟಿರಲಿಲ್ಲ. ಆದರೆ, ಈ ಬಾರಿ ನಾವು ಯಾರನ್ನೂ ತಿರಸ್ಕರಿಸುವುದಿಲ್ಲ, ತಮ್ಮ ಪ್ರತಿಭಟನೆಯನ್ನು ಬೆಂಬಲಿಸಲು ಬಯಸುವವರು ಬಂದು ಸೇರಬಹುದು. ಬಿಜೆಪಿ, ಕಾಂಗ್ರೆಸ್, ಎಎಪಿ, ಅಥವಾ ಯಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಎಲ್ಲಾ ಪಕ್ಷಗಳಿಗೆ ಸ್ವಾಗತವಿದೆ. ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಹೇಳಿದ್ದರು.

ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕ್ರೀಡಾಪಟುಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...