Homeಮುಖಪುಟಜನಪ್ರಿಯ ಯೂಟ್ಯೂಬರ್‌ ನಂದಿ ಮೇಲೆ ಬಿಜೆಪಿ ಮುಖಂಡರ ಹಲ್ಲೆ

ಜನಪ್ರಿಯ ಯೂಟ್ಯೂಬರ್‌ ನಂದಿ ಮೇಲೆ ಬಿಜೆಪಿ ಮುಖಂಡರ ಹಲ್ಲೆ

- Advertisement -
- Advertisement -

ತ್ರಿಪುರಾ ವ್ಲಾಗರ್ (ಯೂಟ್ಯೂಬರ್‌) ಬಾಪನ್ ನಂದಿ ಅವರ ಮೇಲೆ ಸ್ಥಳೀಯ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡರು ಏಪ್ರಿಲ್ 22ರಂದು ಹಲ್ಲೆ ಮಾಡಿದ್ದಾರೆ.

“ಬಿಜೆಪಿ ನಾಯಕರೊಬ್ಬರು ಅವರ ಮೇಲಿನ ಹಲ್ಲೆಯನ್ನು ಚಿತ್ರೀಕರಿಸಿದ್ದಾರೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ, ವಿಡಿಯೊ ನಂತರ ವೈರಲ್ ಆಗಿದೆ”.

ಜನಪ್ರಿಯ ವ್ಲಾಗರ್ ಆಗಿರುವ ನಂದಿಯವರು ಉದಯಪುರ ಮೂಲದವರು. ತ್ರಿಪುರಾದ ಖುಪಿಲಾಂಗ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಂದಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ‘ನ್ಯೂಸ್‌ಕ್ಲಿಕ್’ ವರದಿ ಮಾಡಿದೆ. ಇದರ ಬೆನ್ನಲ್ಲೇ ಪೊಲೀಸರು ವ್ಲಾಗರ್‌ನನ್ನು ವಿಚಾರಣೆಗೆ ಕರೆದಿದ್ದಾರೆ.

ಈ ಘಟನೆಯ ಬಳಿಕ ತ್ರಿಪುರಾದ ಅನೇಕ ನಾಗರಿಕರು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ನಂದಿಯವರು ಈದ್‌ನಲ್ಲಿ ವೀಡಿಯೊವನ್ನು ಮಾಡಿದ್ದಾರೆ, ಹಾಡನ್ನು ಸಹ ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ. ಕೋಮುವಾದದ ಆಧಾರದ ಮೇಲೆ ಜನರು ವಿಭಜನೆಯಾಗದಂತೆ ಮತ್ತು ಸಾಮರಸ್ಯದಿಂದ ಈದ್ ಹಬ್ಬವನ್ನು ಆಚರಿಸುವಂತೆ ವೀಡಿಯೊ ಕರೆ ನೀಡಿದೆ.

ನ್ಯೂಸ್‌ಕ್ಲಿಕ್ ಜಾಲತಾಣವು ವಿಡಿಯೊ ಕುರಿತು ವರದಿ ಮಾಡಿತು. ಬಿಜೆಪಿ ನಾಯಕರು ನಂದಿಯವರನ್ನು ಬರಮಾಡಿಕೊಂಡಿದ್ದರು. ಬಿಜೆಪಿಯ ಮಹಿಳಾ ನಾಯಕಿಯೊಬ್ಬರು ನಂದಿಯವರ ಕೊರಳಪಟ್ಟಿ ಹಿಡಿದು ಥಳಿಸಿದ್ದಾರೆ. ಈದ್ ವಿಡಿಯೋದಲ್ಲಿ ಮುಸ್ಲಿಂ ಯುವಕನಂತೆ ನಟಿಸುವ ಮೂಲಕ ನಂದಿ ತನ್ನ ಹಿಂದೂ ಮೂಲವನ್ನು ಏಕೆ ಕೀಳಾಗಿ ಕಂಡಿದ್ದಾರೆ ಎಂದು ಆಕೆ ಪ್ರಶ್ನಿಸಿದ್ದಾರೆ. ಅವರ ಹಲ್ಲೆಯ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ. ತಮ್ಮನ್ನು ಇತರರು ಸುತ್ತುವರೆದಿದ್ದಾಗ ತಮ್ಮನ್ನು ಬಿಟ್ಟುಬಿಡುವಂತೆ ನಂದಿ ಕೋರುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಈಸ್ಟ್‌ಮೋಜೋ ಜಾಲತಾಣ ನಂದಿಯವರ ಹೇಳಿಕೆಯನ್ನು ಉಲ್ಲೇಖಿಸಿದೆ. “ಪೂರ್ವ ಗೋಕುಲ್ ನಗರ ಪಂಚಾಯತ್‌ನ ಚುನಾಯಿತ ಉಪಮುಖ್ಯಸ್ಥರು ಕೆಲವು ಕೆಲಸದ ನಿಮಿತ್ತ ತಮ್ಮ ಸ್ಥಳಕ್ಕೆ ಭೇಟಿ ನೀಡಲು ನನ್ನನ್ನು ಕರೆದರು. ನಾವು ಒಬ್ಬರಿಗೊಬ್ಬರು ಗೊತ್ತಿದ್ದೆವು. ಸುಮಾರು 30 ರಿಂದ 40 ಯುವಕರು ನನಗಾಗಿ ಕಾಯುತ್ತಿದ್ದಾರೆ ಎಂದು ನಾನು ಅಲ್ಲಿಗೆ ಹೋದೆ” ಎಂದಿದ್ದಾರೆ.

“ಪಂಚಾಯತ್ ನಾಯಕ ನನಗೆ ಕಪಾಳಮೋಕ್ಷ ಮಾಡಿದನು, ಅಲ್ಲಿದ್ದ ಎಲ್ಲರ ಮುಂದೆ ಥಳಿಸಿದನು. ನನ್ನ ತಪ್ಪೇನು ಎಂದು ನಾನು ಕೇಳುತ್ತಲೇ ಇದ್ದೆ. ಆದರೆ ಯಾರೂ ನನ್ನ ಮಾತುಗಳನ್ನು ಆಲಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

ಈದ್ ವಿಡಿಯೋದ ನಿರ್ಮಾಪಕ ನಾನಲ್ಲ ಎಂದೂ ನಂದಿ ಹೇಳಿದ್ದಾರೆ. ಇತರರಂತೆ ನಾನು ಅದರಲ್ಲಿ ಕೇವಲ ನಟಿಸಿದ್ದೇನೆ. ನನ್ನ ಕೆಲಸಕ್ಕಾಗಿ ಹಣ ನೀಡಿದ್ದಾರೆ. ತಮ್ಮ ವಿರುದ್ಧ ಏಕೆ ಪ್ರಕರಣ ದಾಖಲಿಸಲಾಗಿದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

“ವಿಶ್ವ ಹಿಂದೂ ಪರಿಷತ್‌ನ ಆದೇಶದ ಮೇರೆಗೆ ವ್ಲಾಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಈಸ್ಟ್‌ಮೋಜೋ ವರದಿ ಮಾಡಿದೆ.

ಈದ್ ವೀಡಿಯೋದಲ್ಲಿ ನಟಿಸಿದ ಇತರ ಇಬ್ಬರಾದ ಉಮಾ ದೇಬನಾಥ್ ಮತ್ತು ಸ್ನೇಹಾ ಭೌಮಿಕ್ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ವೃತ್ತಿಯ ಭಾಗವಾಗಿ ಆ ವೀಡಿಯೊದಲ್ಲಿ ನಟಿಸುವುದು ಸಮಸ್ಯಾತ್ಮಕ ಎಂದು ನಾವು ಯಾವತ್ತೂ ಭಾವಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಇತರ ನೆಟಿಜನ್‌ಗಳಂತೆ ನಂದಿಯವರಿಗೆ ಬೆಂಬಲವನ್ನು ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...