Homeಮುಖಪುಟಪ್ಯಾಲೆಸ್ಟೀನ್‌ನ ವೆಸ್ಟ್‌ಬ್ಯಾಂಕ್‌ ಮೇಲೆ ಇಸ್ರೇಲ್ ದಾಳಿ: 9 ಜನ ಸಾವು, ನಿರಾಶ್ರಿತರ ಶಿಬಿರದಿಂದ 3,000 ಜನ...

ಪ್ಯಾಲೆಸ್ಟೀನ್‌ನ ವೆಸ್ಟ್‌ಬ್ಯಾಂಕ್‌ ಮೇಲೆ ಇಸ್ರೇಲ್ ದಾಳಿ: 9 ಜನ ಸಾವು, ನಿರಾಶ್ರಿತರ ಶಿಬಿರದಿಂದ 3,000 ಜನ ಪರಾರಿ

- Advertisement -
- Advertisement -

ಇಸ್ರೇಲಿ ಸೇನೆಯು ಸೋಮವಾರ ರಾತ್ರಿ ಅಕ್ರಮಿತ ವೆಸ್ಟ್‌ಬ್ಯಾಂಕ್‌ನಲ್ಲಿಯ ಬಂಡುಕೋರರ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿ ಸರಿಸುಮಾರು ಒಂಬತ್ತು ಪ್ಯಾಲೆಸ್ಟೀನ್ ಉಗ್ರವಾದಿಗಳನ್ನು ಕೊಂದಿದೆ. ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ಕೈಗೊಂಡಿರುವ ಅತ್ಯಂತ ದೊಡ್ಡ ಕಾರ್ಯಾಚರಣೆ ಇದಾಗಿದೆ

ಈ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಹೇಳಿದೆ

ಇತ್ತೀಚೆಗೆ ಪ್ಯಾಲೆಸ್ಟೀನ್ ಬಂಡುಕೋರರು ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿದ್ದರು ಮತ್ತು ಕಳೆದ ತಿಂಗಳು ಗುಂಡಿನ ದಾಳಿ ನಡೆಸಿ ನಾಲ್ವರು ಇಸ್ರೇಲಿ ಪ್ರಜೆಗಳನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ದೇಶದೊಳಗೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಈ ದಾಳಿ ನಡೆಸಿದೆ ಎನ್ನಲಾಗಿದೆ.

ನಿನ್ನೆ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಸುಮಾರು 3,000 ಜನರು ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಅಗ್ನಿಶಾಮಕ ಮತ್ತು ಸ್ಫೋಟಗಳು ನಗರ ಮತ್ತು ಪಕ್ಕದ ನಿರಾಶ್ರಿತರ ಶಿಬಿರವನ್ನು ಅಲುಗಾಡಿಸಿದವು. ಸುಮಾರು 18,000 ಜನರು ವಾಸಿಸುವ ಪ್ರದೇಶದಲ್ಲಿ ಉಗ್ರಗಾಮಿ ಭದ್ರಕೋಟೆ ಕಟ್ಟಿಕೊಂಡಿದ್ದಾರೆ.

ಪ್ಯಾಲೇಸ್ಟಿನಿಯನ್ ವಿದೇಶಾಂಗ ಸಚಿವಾಲಯವು ಈ ಉಲ್ಬಣವನ್ನು “ಜೆನಿನ್ ಜನರ ವಿರುದ್ಧ ಮುಕ್ತ ಯುದ್ಧ” ಎಂದು ಕರೆದಿದೆ.

ಜೆನಿನ್ ಶಿಬಿರದಲ್ಲಿರುವ ಮಸೀದಿಯೊಂದರಲ್ಲಿ ಸೈನಿಕರು ಮತ್ತು ಬಂದೂಕುಧಾರಿಗಳು ಗುಂಡಿನ ಚಕಮಕಿ ನಡೆಸಿದರು ಮತ್ತು ನಂತರ ಕಟ್ಟಡದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ ಎಂದು ಸೇನೆ ಹೇಳಿದೆ.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಅವರು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವಂತೆ ಕರೆ ನೀಡಿದರು.

ಇದನ್ನೂ ಓದಿ: ಪ್ಯಾಲೆಸ್ತೀನಿಗಳನ್ನು ಅಕ್ರಮ ಸ್ಥಳಾಂತರ ಮಾಡುವ ಇಸ್ರೇಲ್‌‌ನ ನಡೆ ಹಿಂಸಾಚಾರ ಹೆಚ್ಚಿಸುತ್ತದೆ: ಯುರೋಪಿಯನ್‌ ಯುನಿಯನ್‌

ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ:

1967ರ ಆರು ದಿನಗಳ ಯುದ್ಧದ ನಂತರ ಇಸ್ರೇಲ್ ಪಶ್ಚಿಮ ಗಡಿಯನ್ನು ಆಕ್ರಮಿಸಿಕೊಂಡಿದೆ.

ಸ್ವಾಧೀನಪಡಿಸಿಕೊಂಡ ಪೂರ್ವ ಜೆರುಸಲೆಮ್ ಅನ್ನು ಹೊರತುಪಡಿಸಿ, ಈ ಪ್ರದೇಶವು ಈಗ ಸುಮಾರು 490,000 ಇಸ್ರೇಲಿಗಳಿಗೆ ನೆಲೆಯಾಗಿದೆ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.

ತಮ್ಮದೇ ಆದ ಸ್ವತಂತ್ರ ರಾಜ್ಯವನ್ನು ಬಯಸುವ ಪ್ಯಾಲೆಸ್ಟೀನಿಯಾದವರು, ಇಸ್ರೇಲ್ 1967ರಲ್ಲಿ ವಶಪಡಿಸಿಕೊಂಡ ಎಲ್ಲಾ ಭೂಮಿಯಿಂದ ಹಿಂತೆಗೆದುಕೊಳ್ಳಲು ಮತ್ತು ಎಲ್ಲಾ ಯಹೂದಿ ವಸಾಹತುಗಳನ್ನು ಕೆಡವಲು ಬಯಸುತ್ತಾರೆ. ಆದರೆ, ಇಸ್ರೆಲ್ ಪ್ರಧಾನಿ ನೆತನ್ಯಾಹು ಅವರು “ವಸಾಹತುಗಳನ್ನು ಬಲಪಡಿಸಲು” ಪ್ರತಿಜ್ಞೆ ಮಾಡಿದ್ದಾರೆ ಮತ್ತು 2014ರಿಂದ ಶಾಂತಿ ಮಾತುಕತೆಗಳನ್ನು ಪುನರುಜ್ಜೀವನಗೊಳಿಸುವ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ.

AFP ಸುದ್ದಿ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಈ ವರ್ಷ ಕನಿಷ್ಠ 186 ಪ್ಯಾಲೆಸ್ಟೀನಿಯನ್ನರು, 25 ಇಸ್ರೇಲಿಗಳು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ಇಟಾಲಿಯನ್ ಸಾವಿಗೀಡಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...