Homeಅಂಕಣಗಳುಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

ಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ಅವರಿಂದ ಶಿಕ್ಷೆಗೊಳಗಾದ 15 ಶಾಸಕರು ಉಪಚುನಾವಣೆಗೆ ನಿಲ್ಲಬಹುದೆಂದು ತೀರ್ಪು ನೀಡಿದೆ. ಸ್ಪೀಕರ್ ಅವರು ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಅಂಗೀಕರಿಸಿದರಾದರೂ ಶಿಕ್ಷೆಯ ಅವಧಿಯನ್ನು ತೀರ್ಮಾನಿಸುವ ಹಕ್ಕು ಅವರಿಗಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಶಾಸಕರು ಶಿಕ್ಷಾರ್ಹರು ಆದರೆ Technical ground ಮೇಲೆ ಉಪಚುನಾವಣೆಗೆ ನಿಲ್ಲಲು ಅರ್ಹರು ಎಂದು ಹೇಳಿದ ಹಾಗಾಯಿತು. ಅನೇಕ ಸಾರಿ ಕಾನೂನಿಗನುಸಾರ ಸರಿ ಎನಿಸಿದ್ದು ನೈತಿಕವಾಗಿ ತಪ್ಪಾಗಿರುತ್ತದೆ. ಈಗ ಆಗಿರುವುದೂ ಅದೇ. ನ್ಯಾಯಾಧೀಶರು ತೀರ್ಪು ನೀಡುವ ಸಮಯದಲ್ಲಿ `ನೈತಿಕತೆ ಇಲ್ಲದವರನ್ನು ರಾಜಕೀಯ ಪಕ್ಷಗಳು ಪ್ರೋತ್ಸಾಹಿಸುತ್ತಿವೆ, ಅದರ ಫಲವನ್ನು ಅನುಭವಿಸುತ್ತವೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಈ 15 ಶಾಸಕರು ಸಮಯಸಾಧಕರು. ಮಂತ್ರಿ ಪದವಿ ಸಿಗಲಿಲ್ಲವೆಂದು ಗುಂಪುಗಾರಿಕೆ ಮಾಡುವವರು. ಪಿತೂರಿ ಮಾಡುವವರು. ಇವರನ್ನು ಬಳಸಿಕೊಂಡು ಸಮ್ಮಿಶ್ರ ಸರಕಾರವನ್ನು ಕೆಡವಿ ತಾವು ಅಧಿಕಾರಕ್ಕೆ ಬರುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ಹೇಳಿದರೆನ್ನಲಾದ ಮಾತುಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದವರನ್ನು ಬಿಜೆಪಿ ಶಾಸಕರಾದ ಡಾ. ಅಶ್ವತ್‍ನಾರಾಯಣ್ ಅವರ ಉಸ್ತುವಾರಿಯಲ್ಲಿ ಮುಂಬೈನ ಒಂದು ಹೊಟೇಲ್‍ಗೆ ಕರೆದುಕೊಂಡು ಹೋಗಿ ರೆಸಾರ್ಟ್ ರಾಜಕೀಯ ಮಾಡಿಸಿದ್ದು, ಅವರನ್ನು ಪಕ್ಷಾಂತರ ಮಾಡುವಂತೆ ಪ್ರೇರಣೆ ನೀಡಿದ್ದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‍ಷಾರವರು, ಹಾಗಾಗಿ ನಾವು ಅನರ್ಹ ಶಾಸಕರ ತ್ಯಾಗವನ್ನು ಸ್ಮರಿಸಬೇಕು ಎಂಬುದು ಅವರ ಮಾತಿನ ತಾತ್ಪರ್ಯ.

ಯಡಿಯೂರಪ್ಪನವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು. ಈ ಅಶಿಸ್ತಿನ ಶಾಸಕರು ಶಾಸನಸಭೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಶಾಸಕರ ಸಂಖ್ಯಾಬಲ ಹೆಚ್ಚಾಯಿತು. ಈ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಗುವುದು ಅನಿವಾರ್ಯವಾಯ್ತು. ಬಿಜೆಪಿ ಅಧಿಕಾರಕ್ಕೆ ಬಂತು.

ಈ 15 ಶಾಸಕರು ತಮ್ಮ ಅನರ್ಹತೆ ತೆಗೆದುಹಾಕಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. ಅವರಿಗೆಲ್ಲ ಈಗ ಉಪಚುನಾವಣೆಗೆ ನಿಲ್ಲಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಅವರೆಲ್ಲ ಪಿತೂರಿ ನಡೆಸಿದಾಗಲೇ ತೀರ್ಮಾನವಾಗಿದ್ದಂತೆ ಈಗ ಬಿಜೆಪಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 13 ಮಂದಿಗೆ ಬಿಜೆಪಿ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ.

ಈ 13 ಮಂದಿಯ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಈಗ ಮತದಾರರ ಕೋರ್ಟಿಗೆ ವರ್ಗಾವಣೆಯಾಗಿದೆ.
ಅನೇಕ ಚುನಾವಣೆಗಳನ್ನು ಅರಿತಿರುವ ನನಗೆ ಹೀಗೆನಿಸುತ್ತಿದೆ: ಮತದಾರರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಮಾಡಿಕೊಳ್ಳುತ್ತವೆ. ಹಣ ಹೆಂಡಕೊಟ್ಟು ಅವರ ಮತವನ್ನು ಕೊಳ್ಳುತ್ತವೆ. 5, 10ರೂ.ಗಳಿಂದ ಆರಂಭವಾದ ಮತದಾರರ ಕೊಳ್ಳುವಿಕೆ ಈಗ ಒಂದು ಮತಕ್ಕೆ 500, 1000ಕ್ಕೆ ಏರಿದೆ. ಇಷ್ಟೆಲ್ಲ ಚುನಾವಣಾ ಭ್ರಷ್ಟಾಚಾರ ಇದ್ದಾಗ್ಯೂ ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶ ಹೊರಬರುವುದನ್ನು ನಾನು ಕಂಡಿದ್ದೇನೆ. ಮತದಾರರೆಲ್ಲ ಮಾತನಾಡಿಕೊಂಡಂತೆ ಕಾಣುವ ಈ ಫಲಿತಾಂಶ ನೋಡಿದಾಗ ಮತದಾರರೆಲ್ಲರೂ ಸಾರಾಸಗಟಾಗಿ ಭ್ರಷ್ಟರು ಎಂದು ಹೇಳಲು ಬರುವುದಿಲ್ಲ.

ಉದಾಹರಣೆಗೆ ಮತದಾತ ಒಂದೇ ಪಕ್ಷಕ್ಕೆ ಪದೇಪದೇ ಮತಹಾಕಿ ನೋಡುತ್ತಾನೆ. ಆ ಪಕ್ಷ ತನ್ನ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಆ ಪಕ್ಷದ ಶಾಸಕರು ಅನೀತಿವಂತರು, ಭ್ರಷ್ಟರು, ಸ್ವಾರ್ಥಿಗಳು ಎಂದು ಕಂಡುಬಂದಾಗ ಮತದಾರರೆಲ್ಲ ಮಾತನಾಡಿಕೊಂಡಂತೆ ಆ ಪಕ್ಷಕ್ಕೆ ಸೋಲುಣಿಸುತ್ತಾರೆ. ಮತದಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲೇ ಯಾರೋ ಒಬ್ಬರಿಗೆ ಮಾತ್ರ ಮತ ನೀಡುವ ಅನಿವಾರ್ಯತೆ ಇರುವುದರಿಂದ ಮತದಾರ ಇನ್ನೊಂದು ಭ್ರಷ್ಟ ಪಕ್ಷದ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸುತ್ತಾರೆ. ಕಾಂಗ್ರೆಸ್ 50 ವರ್ಷಕ್ಕೆ ಮೇಲ್ಪಟ್ಟು ಸಕ್ರಿಯ ಚುನಾವಣೆಯಲ್ಲಿ ಗೆದ್ದುಬರುತ್ತಿತ್ತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ನಿಜ ಜನಸೇವಕರು ಹೆಚ್ಚಾಗಿದ್ದರು. ಅವರು ಚಾರಿತ್ರ್ಯವಂತರಾಗಿದ್ದರು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತವರಾಗಿದ್ದರು. ಹಣವಿಲ್ಲದಿದ್ದರೂ ಗುಣವಂತರಾಗಿದ್ದರು. ಎಂತಹ ಲಕ್ಷಾಧಿಪತಿ ಇವರ ವಿರುದ್ಧವಾಗಿ ನಿಂತರೂ ಮತದಾತರು ಈ ಸ್ವಾತಂತ್ರ್ಯ ಹೋರಾಟಗಾರನಿಗೇ ತಮ್ಮ ಮತಹಾಕಿ ಗೆಲ್ಲಿಸತ್ತಿದ್ದರು. ಕಾಲಕ್ರಮದಲ್ಲಿ ಹೊಸ ತಲೆಮಾರಿನ ಜನ ಚುನಾವಣೆಗಳಲ್ಲಿ ಸ್ಪರ್ಧಿಸಲು ತೊಡಗಿದರು. ಅವರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಗೊತ್ತಿಲ್ಲ, ತ್ಯಾಗ-ಬಲಿದಾನಗಳ ಪರಿಚಯವಿಲ್ಲ. ಅಪ್ಪನ ಆಸ್ತಿ ದೊರಕಿದೆ ಅದನ್ನು ಉಡಾಯಿಸುವುದು ನನ್ನ ಹಕ್ಕು ಎಂದು ಭಾವಿಸಿಕೊಂಡವರು. ಇವರ ಜೊತೆಗೆ ಅಧಿಕಾರದ ಅಮಲು ಅವರನ್ನು ಮತ್ತಷ್ಟು ಕೆಡಿಸಿತು. ಈ ಸ್ವಾರ್ಥಿಗಳು ಅಧಿಕಾರದ ಲಾಲಸೆಯಿಂದ ಪಕ್ಷಾಂತರ ಮಾಡುವ ಹವ್ಯಾಸ ಬೆಳೆಸಿಕೊಂಡರು. ಈಗ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಸ್ವಾರ್ಥಿಗಳದೇ ಪಾರುಪತ್ಯ. ಪ್ರಾಮಾಣಿಕರೂ, ನಿಸ್ವಾರ್ಥಿಗಳೂ, ಸಮಾಜಮುಖಿಗಳೂ ಆದ ಸದಸ್ಯರ ಸಂಖ್ಯೆ ಇಳಿಯುತ್ತಾ ಬಂದಿದೆ.

ಈಗ ಕೋಟ್ಯಧಿಪತಿಗಳು ನಮ್ಮ ಪ್ರತಿನಿಧಿಗಳು. ಹಣದ ಮೂಲಕ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿರುವ, ಜಾತಿಯ ಬಲ ಉಳ್ಳ ಇವರು ಮಾತ್ರ ಚುನಾವಣೆಗಳಲ್ಲಿ ಈಗ ಗೆಲ್ಲುವವರು.

ಈಗ ಈ ಉಪಚುನಾವಣೆಗೆ ನಿಂತಿರುವ ಬಿಜೆಪಿಯ 13 ಉಮೇದುದಾರರೂ ಈ ಕಲ್ಯಾಣ ಗುಣಗಳನ್ನು ಹೊಂದಿದವರು! ನಾಲ್ಕಾರು ತಿಂಗಳಿಂದ ಈ ನೀತಿಗೆಟ್ಟ ಶಾಸಕರ ಹುಚ್ಚಾಟವನ್ನು ಮತದಾತರು ನೋಡುತ್ತಿದ್ದಾರೆ. ಇವರು ಪ್ರಜಾಪ್ರತಿನಿಧಿಗಳಾಗಲು ಯೋಗ್ಯರಲ್ಲ ಎಂಬುದನ್ನು ಗಮನಿಸುತ್ತಾ ಬಂದಿದ್ದಾರೆ. ಈ 13 ಕ್ಷೇತ್ರಗಳ ಮತದಾರ ಅವರಿಗೆಲ್ಲ ಪಾಠ ಕಲಿಸುವರೆಂಬ ನಂಬಿಕೆ ನನ್ನದು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೇರವಾಗಿ ಒಬ್ಬ ಶಾಸಕರನ್ನು ಕೊಳ್ಳುವ ಪ್ರಯತ್ನ ಮಾಡಿದ ಸಿಡಿಯೊಂದಿದೆ. ಅವರ ವಿರುದ್ಧ ಒಂದು ಕಟ್ಳೆಯನ್ನು ಹೂಡಲಾಗಿದೆ.

ಈ 13 ಮಂದಿ ಭ್ರಷ್ಟ ಸ್ವಾರ್ಥಿ ಶಾಸಕರನ್ನು ಬಿಜೆಪಿಗೆ ಎಳೆಯಲು ಅವರನ್ನು ಮುಂಬಯಿನ ಹೊಟೇಲ್ ಒಂದರಲ್ಲಿ ವಾಸ್ತವ್ಯ ಮಾಡಿಸಿದ ಅಮಿತ್ ಷಾ ಅವರ ಗೇಮ್ ಕುರಿತು ಯಡಿಯೂರಪ್ಪನವರು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರೆನ್ನಲಾದ ಧ್ವನಿಮುದ್ರಣವನ್ನು ಲಗತ್ತಿಸಿ ನ್ಯಾಯಾಲಯದಲ್ಲಿ ದೂರನ್ನಿತ್ತಿರುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಮಂತ್ರಿಮಂಡಲದಲ್ಲಿ ಗೃಹಮಂತ್ರಿಯಾಗಿರುವವರು. ಈಗ ಅವರ ಮೇಲೆ 17 ಪ್ರಜಾಪ್ರತಿನಿಧಿಗಳನ್ನು ಭ್ರಷ್ಟರಾಗಿಸಿದ ಆರೋಪ ಕೇಳಿಬಂದಿದೆ. ಮೋದಿಯವರು ಅವರ ಮೇಲೆ ಕ್ರಮಕೈಗೊಳ್ಳುತ್ತಾರಾ? ಅಷ್ಟೊಂದು ಪಾರದರ್ಶಕತೆ, ಪ್ರಾಮಾಣಿಕತೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರೆಸೆಸ್‍ಗಿದೆಯಾ? ಎಲ್ಲವೂ ಈ ಉಪಚುನಾವಣೆಯಲ್ಲಿ ಮತದಾರ ಕೊಡುವ ತೀರ್ಪನ್ನು ಅವಲಂಬಿಸಿದೆ. ಈಗ ನಾವು ಜಾಗೃತಗೊಳ್ಳದಿದ್ದರೆ ಭವಿಷ್ಯದಲ್ಲಿ ಇದಕ್ಕಿಂತಲೂ ಕೆಟ್ಟ ರಾಜಕೀಯ ಪ್ರಹಸನಗಳಿಗೆ ನಾವೇ ಕಾರಣೀಭೂತರಾಗುತ್ತೇವೆ. ಅಷ್ಟೇ ಅಲ್ಲ ಅಂತಹ ಪ್ರಹಸನಗಳ ಹೊರೆ ನಮ್ಮ ಮಕ್ಕಳ ಹೆಗಲೇರಲಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಂದಷ್ಟು ನೈತಿಕ ರಾಜಕಾರಣವನ್ನು ಉಳಿಸುವ ಗುರುತರವಾದ ಜವಾಬ್ಧಾರಿ ನಮ್ಮೆದುರಿಗಿದೆ. ಮತದಾರನ ತೀರ್ಪಿಗಾಗಿ ನಾನು ಆಶಾವಾದಿಯಾಗಿ ಕಾಯುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...