Homeಮುಖಪುಟತೆಲಂಗಾಣ ಶಾಸಕ ರಮೇಶ್‌ ಚೆನ್ನಮಣೇನಿ ಪೌರತ್ವ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ

ತೆಲಂಗಾಣ ಶಾಸಕ ರಮೇಶ್‌ ಚೆನ್ನಮಣೇನಿ ಪೌರತ್ವ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ

- Advertisement -
- Advertisement -

ತೆಲಂಗಾಣ ಶಾಸಕ ರಮೇಶ್‌ ಚೆನ್ನಮಣೇನಿ ಅವರು ಭಾರತೀಯ ಪ್ರಜೆಯಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಈ ಬಗ್ಗೆ 13 ಪುಟಗಳ ಆದೇಶ ನೀಡಿರುವ ಗೃಹ ಸಚಿವಾಲಯ ರಮೇಶ್‌ ಚೆನ್ನಮಣೇನಿ ಭಾರತದ ಪ್ರಜೆಯಾಗಿ ಮುಂದುವರೆಯುತ್ತಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅನುಕೂಲಕರವಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸದಸ್ಯರಾಗಿರುವ ರಮೇಶ್‌ ಚೆನ್ನಮಣೇನಿ ಜರ್ಮನ್‌ ಪೌರತ್ವ ಹೊಂದಿದ್ದಾರೆ. 2009ರಲ್ಲಿ ಭಾರತೀಯ ಪೌರತ್ವ ಪಡೆಯುವ ಮಾನದಂಡಗಳನ್ನು ಚೆನ್ನಮಣೇನಿ ಪೂರೈಸಿಲ್ಲ. ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಅವರು ಕೈಗೊಂಡಿದ್ದ ವಿದೇಶ ಪ್ರವಾಸಗಳ ಕುರಿತ ಸಂಗತಿಯನ್ನು ಮರೆಮಾಚಿದ್ದರು ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ರಮೇಶ್‌ ಭಾರತ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು, ಸತ್ಯ ಸಂಗತಿಯನ್ನು ಮರೆಮಾಚಿದ್ದಾರೆ. ಅರ್ಜಿ ಸಲ್ಲಿಸುವ ಮೊದಲು ರಮೆಶ್‌ ಒಂದು ವರ್ಷ ಭಾರತದಲ್ಲಿ ನೆಲೆಸಿರಬೇಕಿತ್ತು. ಆದರೆ ಅವರು ಭಾರತದಲ್ಲಿ ನೆಲೆಸಿರಲಿಲ್ಲ. ಈ ಅಂಶವನ್ನು ಅವರು ಭಾರತದ ಪೌರತ್ವ ಪಡೆಯುವ ವೇಳೆ ಬಹಿರಂಗಪಡಿಸಿರಲಿಲ್ಲ. ಒಂದು ವೇಳೆ ಬಹಿರಂಗಪಡಿಸಿದ್ದರೆ ರಮೇಶ್‌ಗೆ ಪೌರತ್ವವನ್ನೇ ನೀಡುತ್ತಿರಲಿಲ್ಲ. ಶಾಸಕಾಂಗ ಸಭೆಯ ಸದಸ್ಯರಾಗಿರುವ ರಮೇಶ್ ಅವರು ಲಕ್ಷಾಂತರ ನಾಗರಿಕರ ಮೇಲೆ ಪರಿಣಾಮ ಬೀರುತ್ತಾರೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ’ಜಾತ್ಯತೀತತೆ ಆಧಾರದ ಮೇಲೆ ಮೂರು ಪಕ್ಷಗಳು ಒಂದುಗೂಡುತ್ತಿವೆ’ : ಸಂಜಯ್‌ ರಾವತ್

ಈ ಬಗ್ಗೆ ರಮೇಶ್‌ ಚೆನ್ನಮಣೇನಿ ಪ್ರತಿಕ್ರಿಯಿಸಿ, 2009 ರಿಂದಲೇ ನಾನು ಶಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಇದನ್ನು ಗೃಹ ಸಚಿವಾಲಯ ಪರಿಗಣಿಸಿಲ್ಲ. ಪೌರತ್ವವನ್ನು ರದ್ದುಗೊಳಿಸಿದೆ. ಆದ್ದರಿಂದ ನನ್ನ ಪೌರತ್ವವನ್ನು ಕಾಪಾಡಿಕೊಳ್ಳಲು ಹೈಕೋರ್ಟ್‌ ಮೊರೆ ಹೋಗುತ್ತೇನೆ ಎಂದು ಹೇಳಿದರು.

ಇನ್ನು ಚೆನ್ನಮಣೇನಿ ಅವರು ಹೈದರಾಬಾದ್‌ನಿಂದ 150 ಕಿ.ಮೀ ದೂರದ ವೇಮುಲವಾಡಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2009 ರಲ್ಲಿ ಟಿಡಿಪಿ ಪಕ್ಷದಿಂದ ರಮೇಶ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಅವರ ಪೌರತ್ವ ಪ್ರಕರಣ ಬಾಕಿಯಿದೆ. ಆಂಧ್ರದ ವಿಭಜನೆಯ ನಂತರ ಟಿಆರ್‌ಎಸ್‌ ಪಕ್ಷಕ್ಕೆ ಸೇರ್ಪಡೆಯಾದರು. 2010 ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೆ ಆಯ್ಕೆಯಾದರು. 2014 ಮತ್ತು 2018 ರಲ್ಲಿ ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...