Homeಮುಖಪುಟದಲಿತ ಎಂಬ ಕಾರಣಕ್ಕೆ ನನಗೆ ತಾರತಮ್ಯ ಮಾಡುತ್ತಿದ್ದಾರೆ: ಹಿರಿಯ ಐಎಎಸ್ ಅಧಿಕಾರಿ ಆರೋಪ

ದಲಿತ ಎಂಬ ಕಾರಣಕ್ಕೆ ನನಗೆ ತಾರತಮ್ಯ ಮಾಡುತ್ತಿದ್ದಾರೆ: ಹಿರಿಯ ಐಎಎಸ್ ಅಧಿಕಾರಿ ಆರೋಪ

- Advertisement -
- Advertisement -

ನಾನೋರ್ವ ದಲಿತ ಎಂಬ ಕಾರಣಕ್ಕೆ ನನಗೆ ತಾರತಮ್ಯ ಮಾಡಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ ಎಂದು ಜಮ್ಮು- ಕಾಶ್ಮೀರದ ಹಿರಿಯ ಐಎಎಸ್ ಅಧಿಕಾರಿಯೋರ್ವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಆಡಳಿತದ ವಿರುದ್ಧ ಆರೋಪವನ್ನು ಮಾಡಿದ್ದಾರೆ.

ಐಎಎಸ್ ಅಧಿಕಾರಿ ಅಶೋಕ್  ಪರ್ಮಾರ್ ಅವರು 1992ರ ಬ್ಯಾಚ್ ನ ಗುಜರಾತ್ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಲ್ಲಿ 5 ಬಾರಿ ವರ್ಗಾವಣೆ ಮಾಡಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

1992ರ ಗುಜರಾತ್ ಮೂಲದ ಐಎಎಸ್ ಅಧಿಕಾರಿ ಅಶೋಕ್ ಪರ್ಮಾರ್ ಅವರು ಜಲ್ ಶಕ್ತಿ ಇಲಾಖೆಯಲ್ಲಿನ ಬೃಹತ್ ಅಕ್ರಮಗಳನ್ನು ಹೊರಗೆಳೆದ ಬಳಿಕ ಅವರಿಗೆ ಜಮ್ಮು-ಕಾಶ್ಮೀರದ ಆಡಳಿತ  ಕಿರುಕುಳ ಮತ್ತು ಬೆದರಿಕೆಯನ್ನು ಹಾಕುತ್ತಿದೆ ಎಂದು ಐಎಎಸ್ ಅಧಿಕಾರಿ  ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಂದೆ ದೂರು ದಾಖಲಿಸಿದ್ದಾರೆ.

ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪರ್ಮಾರ್ ಅವರನ್ನು ಎರಡು ಉನ್ನತ ಮಟ್ಟದ ಸಭೆಗಳಿಂದ ಹೊರಹಾಕಲಾಯಿತು ಮತ್ತು ಇತರ ಅಧಿಕಾರಿಗಳ ಮುಂದೆ ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ನಿಯೋಜನೆಯಲ್ಲಿದ್ದ ಪರ್ಮಾರ್ ಅವರನ್ನು ಮಾರ್ಚ್ 2022ರಲ್ಲಿ AGMUT ಕೇಡರ್‌ಗೆ ನೇಮಿಸಲಾಗಿದೆ. ಬಳಿಕ ಅವರನ್ನು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಲಾಯಿತು.

ಮೇ 5  2022 ರಂದು ಅವರನ್ನು ಮತ್ತೆ ವರ್ಗಾಯಿಸಿ ಜಲ್ ಶಕ್ತಿ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಪರ್ಮಾರ್ ಪ್ರಕಾರ, ಅವರು ಇಲಾಖೆಯಲ್ಲಿನ ಹಗರಣಗಳನ್ನು ಬಯಲಿಗೆಳೆದ ಬಳಿಕ ಅವರನ್ನು ತಿಂಗಳೊಳಗೆ ARI ಮತ್ತು ತರಬೇತಿಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಜುಲೈ 18 ರಂದು ಅವರನ್ನು ಕೌಶಲ್ಯ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಇದಾದ ಎರಡು ವಾರಗಳಲ್ಲಿ, ಆಗಸ್ಟ್ 1 ರಂದು ಅವರನ್ನು ಮತ್ತೆ ಜಮ್ಮು-ಕಾಶ್ಮೀರದ ಬ್ಯೂರೋ ಆಫ್ ಪಬ್ಲಿಕ್ ಎಂಟರ್‌ಪ್ರೈಸಸ್‌ಗೆ  ಅಧ್ಯಕ್ಷರಾಗಿ ನೇಮಿಸಲಾಗಿದೆ.

ಜಲ ಜೀವನ್ ಯೋಜನೆಯಲ್ಲಿ  3,000 ಕೋಟಿ ನುಂಗಿದವರನ್ನು ಶಿಕ್ಷಿಸುವ ಬದಲು ಪ್ರಾಮಾಣಿಕ ಅಧಿಕಾರಿಯನ್ನು ತೊಂದರೆಗೆ ಒಳಪಡಿಸಲಾಗಿದೆ ಎಂದು ಈ ಬಗ್ಗೆ ಮೊಹಬೂಬ್ ಮುಫ್ತಿ ಎಕ್ಸ್‌(ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ  ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

 ಇದನ್ನು ಓದಿ: ಉತ್ತರ ಪ್ರದೇಶ: ದಲಿತ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂದು ತನ್ನ ಅಕ್ಕನನ್ನೇ ಕೊಲೆಗೈದ ಅಪ್ರಾಪ್ತ ಬಾಲಕ

 

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...