Homeಅಂಕಣಗಳುಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

- Advertisement -
- Advertisement -

 ಎಚ್.ಎಸ್ ದೊರೆಸ್ವಾಮಿ |
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ.ರಂಜನ್‍ಗೊಗಾಯ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದು “ನೀವು ಚುನಾವಣಾ ಆಯೋಗ ಹಲ್ಲಿಲ್ಲದ ಅಧಿಕಾರವಿಲ್ಲದ ಸಂಸ್ಥೆ ಎಂದು ಒಪ್ಪಿಕೊಂಡಂತೆ ಆಯಿತು. ದ್ವೇಷದ ಭಾಷಣಗಳ ವಿರುದ್ಧ ಮೌನ ತಾಳಿದ್ದೀರಿ. ನೀವು ಕೊನೆಯ ಪಕ್ಷ ಆ ರೀತಿ ಮಾತನಾಡುವವರಿಗೆ ಒಂದು ನೋಟಿಸ್ ಕಳುಹಿಸಬಹುದಾಗಿತ್ತು. ಈ ನೋಟಿಸಿಗೆ ಉತ್ತರ ಬಂದರೆ ನೀವು ಅವರಿಗೆ ಸರಿಯಾಗಿ ನಡೆದುಕೊಳ್ಳುವಂತೆ ಸಲಹೆ ನೀಡಬಹುದಾಗಿತ್ತು. ಈ ರೀತಿ ತಿಳಿವಳಿಕೆ ನೀಡಿದ ಮೇಲೂ ಅವರು ಮಾಡಲ್ ಕೋಡ್ ಆಫ್ ಕಂಡಕ್ಟ್ ಮೀರಿ ನಡೆಯುವುದಾದರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬಹುದಾಗಿತ್ತು. ಇದು ನಿಮಗಿರುವ ಅಧಿಕಾರ. ನೀವು ಈ ಅಧಿಕಾರವನ್ನು ಚಲಾಯಿಸಬೇಕಾದದ್ದು ನಿಮ್ಮ ಕರ್ತವ್ಯ. ಚುನಾವಣೆ ದಿನ ಹತ್ತಿರವಾಗುತ್ತಿದೆ. ಕೂಡಲೇ ನೀವು ಕಾರ್ಯೋನ್ಮುಖರಾಗಬೇಕು. ಈ ನಿಮ್ಮ ನಿಲುವು ಫಲಪ್ರದವೋ ಅಲ್ಲವೋ ಅದು ಬೇರೆ ಮಾತು. ನೀವು ಕೂಡಲೇ ಕಾರ್ಯತತ್ಪರರಾಗಬೇಕು.
ಚುನಾವಣಾ ಆಯೋಗಕ್ಕಿರುವ ಅಧಿಕಾರ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಪ್ರಕಟಿಸುವುದು. ಅಭ್ಯರ್ಥಿಗಳು ಕೆಲವು ಮಾರ್ಗದರ್ಶಿ ಸೂಚನೆಗಳನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆಂದು ಚುನಾವಣಾ ಆಯೋಗಕ್ಕೆ ಮನವರಿಕೆಯಾದರೆ ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಅಂತಹವರನ್ನು ಸದಸ್ಯರಾಗಿರುವುದಕ್ಕೆ ಅನರ್ಹರನ್ನಾಗಿ ಪರಿಗಣಿಸಿ ಎಂದು ಶಿಫಾರಸು ಮಾಡಬಹುದು.
ಶೇಷನ್ ಮಾಡಿದ್ದೇನು?
ಟಿ.ಎನ್.ಶೇಷನ್ ಚುನಾವಣಾ ಆಯೋಗದ ಏಕೈಕ ಸದಸ್ಯರಾಗಿ 1990ರಲ್ಲಿ ಆಯ್ಕೆಯಾಗಿ ಅವರು 6 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಭಾರತದ ರಾಜಕಾರಣಿಗಳು ಆಗ ಹೆದರುತ್ತಿದ್ದುದ್ದು ದೇವರು ಮತ್ತು ಶೇಷನ್‍ರವರಿಗೆ ಮಾತ್ರ. ಅವರು ಮುಲಾಜಿಲ್ಲದೇ ತಪ್ಪು ಮಾಡಿದ ಎಲ್ಲರನ್ನು ದಂಡಿಸುತ್ತಿದ್ದರು. ಆ ದಿನಗಳಲ್ಲಿ ಎಲ್ಲ ಪಕ್ಷಗಳವರೂ ಶೇಷನ್ ವಿರುದ್ಧ ದಾಳಿ ಮಾಡಿದರು. ಮಾಡಲ್ ಕೋಡ್ ಆಫ್ ಕಂಡಕ್ಟ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಏಕೈಕ ವ್ಯಕ್ತಿ ಟಿ.ಎನ್.ಶೇಷನ್ ಅವರು ನೀತಿಸಂಹಿತೆಯನ್ನು ಮೀರಿದ ಎಲ್ಲಾ ಅಭ್ಯರ್ಥಿಗಳ ಮೇಲೂ ಕೇಸುಗಳನ್ನು ಹಾಕಿದರು, ಬಂಧಿಸಲು ಸೂಚನೆ ನೀಡಿದರು. ಹಣಬಲ ಮತ್ತು ತೋಳ್ಬಲ ತೋರಿದವರಿಗೆ ಸಿಂಹಸ್ವಪ್ನವಾಗಿದ್ದರು. ಉಮೇದುವಾರರ ಪರ ವಹಿಸಿದ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟರು. ಶೇಷನ್ ಅಧಿಕಾರ ವಹಿಸಿಕೊಳ್ಳುವವರೆಗೂ ಚುನಾವಣಾ ಆಯೋಗದಲ್ಲಿ ಆಯೋಗದ ಮುಖ್ಯಸ್ಥರು ಮಾತ್ರ ಇದ್ದರು. ಶೇಷನ್‍ರವರು ಕಟ್ಟುನಿಟ್ಟಾಗಿ ನೀತಿಸಂಹಿತೆಯನ್ನು ಎತ್ತಿ ಹಿಡಿಯಲು ಹೋದರಾಗಿ ಅವರನ್ನು ಕಟ್ಟಿ ಹಾಕಲು ಇನ್ನಿಬ್ಬರನ್ನು ಆಯೋಗದ ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತು. ಶೇಷನ್ ನಿವೃತ್ತರಾಗಿ ದಶಕಗಳು ಕಳೆದವು. ಅವರ ನಂತರ ಬಂದ ಚುನಾವಣಾ ಕಮಿಷನರುಗಳು ಚುನಾವಣಾ ಆಯೋಗವನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಾ ಹೋಗಿದ್ದಾರೆ. ಆಡಳಿತ ನಡೆಸುವವರ ಆಜ್ಞಾಪಾಲಕರಂತೆ ವರ್ತಿಸುತ್ತಾರೆ. ಚುನಾವಣಾ ಆಯೋಗದ ಬಗೆಗೆ ಜನತೆಗೆ ನಂಬಿಕೆ ಕಳೆದುಹೋಗುತ್ತಿದೆ. ಈ ಕಾರಣಕ್ಕಾಗಿಯೇ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಇಂದಿನ ಚುನಾವಣಾ ಆಯೋಗಕ್ಕೆ ಅವರ ನಿಷ್ಕ್ರಿಯತೆ ಬಗೆಗೆ ಪತ್ರ ಬರೆದು ಎಚ್ಚರಿಸಿರುವುದು. ಪಾರ್ಲಿಮೆಂಟನ್ನು ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ರಚಿಸಿದ್ದರೆ, ಭಾರತದ ಚುನಾವಣಾ ಆಯೋಗವನ್ನು ರಾಜಕೀಯ ನೈತಿಕತೆಯನ್ನು ಎತ್ತಿ ಹಿಡಿಯಲು ರಚಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ನೆನಪು ಮಾಡಿಕೊಟ್ಟಿದ್ದಾರೆ.
ಮೋದಿಯವರನ್ನು ಕುರಿತ ಒಂದು ಚಲನಚಿತ್ರವನ್ನು ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಪ್ರದರ್ಶಿಸುವ ಹುನ್ನಾರ ನಡೆಯಿತು. ನ್ಯಾ.ಗೊಗಾಯಿರವರ ಪತ್ರ ತಲುಪಿದ ಕಾರಣದಿಂದ ಚುನಾವಣಾ ಆಯೋಗ ಈ ಚಿತ್ರವನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಪ್ರದರ್ಶಿಸುವಂತಿಲ್ಲ ಎಂದು ಘೋಷಿಸಿತು. ಈ ಸಾರಿ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಗೆ ಮಿತಿಯೂ ಇಲ್ಲ. ಈ ಪರಿಸ್ಥಿತಿ ಮುಂದುವರೆಯುವುದಾದರೆ ಇದನ್ನು ತಡೆಗಟ್ಟಲು ಇಚ್ಛಾಶಕ್ತಿ ಇಲ್ಲದ ಚುನಾವಣಾ ಆಯೋಗ ಏಕೆ ಬೇಕು ಎಂದು ಕೇಳಬೇಕಾದೀತು. ಮೋದಿ ಸರ್ಕಾರ ಕಪ್ಪು ಹಣದ ಹಾವಳಿಯನ್ನು ತಡೆಗಟ್ಟುವುದಾಗಿ ಘೋಷಣೆ ಮಾಡಿದೆ. ಚುನಾವಣೆ ಸಮಯದಲ್ಲಿ ಕಪ್ಪುಹಣ ಹೇಗೆ ಬಳಸಲಾಗುತ್ತಿದೆ ಎಂಬುದು ಸರ್ವರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಚುನಾವಣೆ ನಡೆಯುತ್ತಿರುವ ಈ ವೇಳೆಯಲ್ಲಿ ಒಂದು ಬಿಲಿಯನ್‍ಗೂ ಮೀರಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ಹಣಕ್ಕೆ ಎರಡರಷ್ಟು 2019ರ ಈ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
ದೊಡ್ಡದಾಗಿ ವ್ಯಾಪಾರ ದಂಧೆ ಮಾಡುವವರು ಎಲ್ಲ ರಾಜಕೀಯ ಪಕ್ಷಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾತೊರೆಯುತ್ತಾರೆ. ಆದರೆ ಆಡಳಿತ ಪಕ್ಷಕ್ಕೆ ಮಿಕ್ಕೆಲ್ಲದ್ದಕ್ಕಿಂತ ಹೆಚ್ಚಿಗೆ ವಂತಿಗೆ ನೀಡುವುದು ಗೋಪ್ಯವಾದ ವಿಷಯವೇನಲ್ಲ. ಆದರೆ ಮೋದಿ ಸರ್ಕಾರ ಜಾರಿಗೆ ತಂದ ಎಲೆಕ್ಷನ್ ಬಾಂಡ್ ಒಂದು ರಹಸ್ಯವನ್ನು ಒಳಗೊಂಡಿದೆ. ಅದರ ಗುಟ್ಟು ಸರ್ಕಾರ ನಡೆಸುವವರಿಗೆ ಮಾತ್ರ ಗೊತ್ತು. ಈ ಬಾಂಡ್ ಕೊಂಡವರು ಯಾವ ಪಾರ್ಟಿಗೆ ಕೊಟ್ಟಿದ್ದಾರೆ ಎಂಬುದು ಬ್ಯಾಂಕ್‍ಗಳಿಗೆ ಮಾತ್ರ ಗೊತ್ತು. ಯಾವ ದೊಡ್ಡ ಉದ್ಯಮಿಯೂ ಅದನ್ನು ಬೇರೆ ಪಕ್ಷಗಳಿಗೆ ಕೊಡುವಷ್ಟು ದಡ್ಡನಲ್ಲ.
ಚುನಾವಣಾ ಆಯೋಗ ಕೇಂದ್ರದ ಅಧೀನ ಸಂಸ್ಥೆ ಅಲ್ಲ. ಅದು ರಾಜ್ಯಾಂಗದ ಆಶಯಗಳಿಗೆ ಅನುಗುಣವಾಗಿ ರಚಿತವಾದ ಸ್ವಾಯತ್ತ ಸಂಸ್ಥೆ. ಅದು ಕಲ್ಯಾಣ್‍ಸಿಂಗ್ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗಿತ್ತು. ಈ ಕಂಪನಿಗಳಿಂದ ಹಣ ಪಡೆದಿರುವ ಎಲ್ಲಾ ರಾಜಕೀಯ ಪಕ್ಷಗಳೂ ತಮಗೆ ದೇಣಿಗೆ ನೀಡಿದವರ ಪಟ್ಟಿಯನ್ನು, ದೇಣಿಗೆ ಮೊತ್ತವನ್ನು ಒಂದು ಸೀಲಾದ ಕವರಿನಲ್ಲಿಟ್ಟು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಹೇಳಿದೆ. ಈ ವಿಚಾರದಲ್ಲಿ ಅನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಆದರೆ ಆಗಬಾರದ ಅನಾಹುತ ಆಗಿಹೋಗಿದೆ.
ಅದರಂತೆಯೇ, ಮಾದರಿ ಚುನಾವಣಾ ನೀತಿಯನ್ನು ಎಲ್ಲ ಪಕ್ಷಗಳವರೂ ಒಂದಲ್ಲ, ಹತ್ತು ಸಾರಿ ಗಾಳಿಗೆ ತೂರಿದ್ದಾರೆ. ಕಲ್ಯಾಣಸಿಂಗ್ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ನರಸಿಂಹರಾವ್ ಸರ್ಕಾರ, ಪೊಲೀಸ್ ಮತ್ತು ಮಿಲಿಟರಿಯನ್ನು ಮುಖ್ಯಮಂತ್ರಿಗಳ ಆಜ್ಞೆ ಪಾಲಿಸಲು ಹೇಳಿ ಬಾಬ್ರಿ ಮಸೀದಿ ಒಡೆಯುವುದನ್ನು ತಡೆಗಟ್ಟಲು ಕಳಿಸಿಕೊಟ್ಟಿದ್ದರು. ಕಲ್ಯಾಣಸಿಂಗ್ ಅದನ್ನು ಬಳಸಿಕೊಳ್ಳದೇ ತಟಸ್ಥರಾಗಿದ್ದು, ಬಾಬ್ರಿ ಮಸೀದಿ ಒಡೆಯಲು ಸಹಕಾರ ನೀಡಿದರು. ಅವರೀಗ ರಾಜಸ್ತಾನ ರಾಜ್ಯಪಾಲರಾಗಿದ್ದಾರೆ. ಇತ್ತೀಚೆಗೆ ರಾಜಸ್ತಾನ ವಿಧಾನಸಭೆ ಚುನಾವಣೆ ನಡೆದಾಗ ಗೌರ್ನರ್ ಕಲ್ಯಾಣಸಿಂಗ್ ಬಿಜೆಪಿಗೆ ಮತ ನೀಡುವಂತೆ ಹೇಳಿಕೆ ನೀಡಿದ್ದರು. ಮೋದಿ ಸರ್ಕಾರವಾಗಲೀ, ಚುನಾವಣಾ ಆಯೋಗವಾಗಲೀ ಶಿಸ್ತಿನ ಕ್ರಮ ಕೈಗೊಳ್ಳಲಿಲ್ಲ. ರಾಷ್ಟ್ರಾಧ್ಯಕ್ಷರಿಗೆ ಈ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದಾಗ ರಾಷ್ಟ್ರಾಧ್ಯಕ್ಷರು ಆ ಅರ್ಜಿಯನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸಿ ಕೈ ತೊಳೆದುಕೊಂಡರು. ನ್ಯಾಯವಾಗಿ ಚುನಾವಣಾ ಆಯೋಗವು ರಾಷ್ಟ್ರಾಧ್ಯಕ್ಷರಿಗೆ ಕಲ್ಯಾಣ್‍ಸಿಂಗ್ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಬೇಕಾಗಿತ್ತು. ಚುನಾವಣಾ ಆಯೋಗವು ಬೊಗಳುವುದನ್ನು ನಿಲ್ಲಿಸಿ ಕಚ್ಚುವುದನ್ನು ಅಭ್ಯಾಸ ಮಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...