Homeಮುಖಪುಟಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

ಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

- Advertisement -
- Advertisement -

ಉತ್ತರ ಪ್ರದೇಶ ರಾಜ್ಯದ ರಾಂಪುರನಗರದ ಜ್ವಾಲಾನಗರ ಪ್ರದೇಶದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಸುಮಾರು ಮೂರು ದಶಕಗಳಿಂದ ಜೀವನ ಸಾಗಿಸುತ್ತಿದ್ದ ಬೀದಿ ಬದಿ ಮುಸ್ಲಿಂ ವ್ಯಾಪಾರಿಗಳನ್ನು ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸಲಾಗಿದ್ದು, ಆ ಜಾಗದಲ್ಲಿ ಹಿಂದೂಗಳು ವ್ಯವಹರಿಸಲು ಈ ಕ್ರಮವನ್ನು ಆಡಳಿತ ವರ್ಗ ಜರುಗಿಸಿದೆ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಶಾಸಕರು ನಿರಾಕರಿಸಿದ್ದಾರೆ.

“1984ರಿಂದಲೂ ನಾವು ಇಲ್ಲಿ ಬಟ್ಟೆಗಳನ್ನು ಮಾರಾಟ ಮಾಡಿದ್ದೇವೆ. ಈ ಅಂಗಡಿಗಳು ನಮ್ಮ ಜೀವನಾಧಾರವಾಗಿದೆ. ಈಗ ಅದೂ ಇಲ್ಲವಾಗಿದೆ” ಎಂದು ರಶೀದ್ (ಹೆಸರು ಬದಲಿಸಲಾಗಿದೆ) ‘ದಿ ವೈರ್‌’ ಜಾಲತಾಣಕ್ಕೆ ತಿಳಿಸಿದ್ದಾರೆ.

ರಶೀದ್ ಅವರಂತಹ ಮಾರಾಟಗಾರರು ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

“ರಾಮ್-ರಹೀಮ್ ಸೇತು ಪ್ರದೇಶದಲ್ಲಿ ವ್ಯಾಪಾರ ಮಾಡುವ ನನಗೆ ಮತ್ತು ಇತರ ಬೀದಿ ಬದಿ ವ್ಯಾಪಾರಿಗಳಿಗೆ ಜನವರಿ 13ರಂದು ಪುರಸಭೆ ನೋಟಿಸ್ ಕಳಿಸಿದ್ದು, ನಿಮ್ಮ ಅಂಗಡಿಗಳನ್ನು ಮುಚ್ಚಬೇಕು. ಎರಡು ದಿನ ಅವಕಾಶವಿದೆ” ಎಂದು ತಿಳಿಸಿದ್ದಾಗಿ ರಶೀದ್ ಹೇಳುತ್ತಾರೆ.

ಎರಡು ದಿನಗಳ ನಂತರ ಕೆಲವರು ನೋಟಿಸ್ ಅನ್ವಯ ಜಾಗ ತೆರವು ಮಾಡಿದ್ದರು. ಆದರೆ ಜನವರಿ 15 ರಂದು ನಗರಸಭೆಯ 12 ಅಧಿಕಾರಿಗಳು ಮತ್ತು ಎಂಟು ಜನ ಪೊಲೀಸರು ಆಗಮಿಸಿ ಉಳಿದಿದ್ದ ಅಂಗಡಿಗಳನ್ನು ನಾಶಪಡಿಸಿದರು ಎಂದು ರಶೀದ್ ಮತ್ತು ಇತರ ಮಾರಾಟಗಾರರು ಹೇಳುತ್ತಾರೆ.

“ಆ ಜಾಗದಲ್ಲಿ ಅಂಗಡಿ ಮುಂಗಟ್ಟು ಮಾಡಿಕೊಂಡಿದ್ದ ನಾನು ಹಾಗೂ ಇತರರು ಬೀದಿಬದಿ ಅಂಗಡಿಗಳನ್ನು ನಡೆಸಲು ನಗರಸಭೆಗೆ ಶುಲ್ಕ ಪಾವತಿಸಿದ್ದರೂ ಈ ಹಠಾತ್ ಕ್ರಮ ಜರುಗಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ಕ್ರಮದಿಂದಾಗಿ 69 ಮಂದಿ ಬೀದಿಬದಿ ವ್ಯಾಪಾರಿಗಳು ತೊಂದರೆಗೀಡಾಗಿದ್ದಾರೆ” ಎಂದು ಅಮರ್ ಉಜಾಲಾ ಪತ್ರಿಕೆಯ ವರದಿ ತಿಳಿಸಿದೆ.

ಹೊರಹಾಕಲ್ಪಟ್ಟವರಲ್ಲಿ ಒಬ್ಬರಾದ ಹಸ್ಮತ್‌ (ಹೆಸರು ಬದಲಿಸಲಾಗಿದೆ) ಪ್ರತಿಕ್ರಿಯಿಸಿದ್ದು, “ಟ್ರಾಲಿಗಳಲ್ಲಿ ಸರಕುಗಳನ್ನು ಮಾರಾಟ ಮಾಡಲು ಹಿಂದೂ ಮಾರಾಟಗಾರರಿಗೆ ಅಂತಿಮವಾಗಿ ಅದೇ ಪ್ರದೇಶದಲ್ಲಿ ಅವಕಾಶ ನೀಡಲಾಯಿತು. ಮುಸ್ಲಿಮರ ಜಾಗವನ್ನು ಹೊಸ ಹಿಂದೂ ಮಾರಾಟಗಾರರಿಗೆ ಹಂಚಲಾಗಿದೆ” ಎಂದು ದೂರಲಾಗಿದೆ.

“ನಮ್ಮ ಜಾಗಗಳನ್ನು ಬೇರೆಯವರಿಗೆ ನೀಡಲಾಗಿದೆ” ಎನ್ನುವ ಹಸ್ಮತ್‌, “ನಮ್ಮ ಅಂಗಡಿಗಳು ಇದ್ದ ಜಾಗದಲ್ಲಿ ಬಜರಂಗದಳದವರು ಟ್ರಾಲಿಗಳನ್ನು ತಂದಿದಟ್ಟಿದ್ದಾರೆ” ಎನ್ನುತ್ತಾರೆ.

“ಕವಾರ್ ಯಾತ್ರೆಯ ಸಮಯದಲ್ಲಿ ನಾವು ನಮ್ಮ ಅಂಗಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದೆವು, ನಾವು ಅವರಿಗಾಗಿ ಬಟ್ಟೆ ಮತ್ತು ಧ್ವಜಗಳನ್ನು ಸಹ ತಯಾರಿಸುತ್ತೇವೆ. ಆದರೆ ನಮ್ಮನ್ನು ಏಕೆ ಹೀಗೆ ಹೊರದೂಡಲಾಯಿತು” ಎಂದು ಪ್ರಶ್ನಿಸುತ್ತಾರೆ.

ಮುಸ್ಲಿಂ ಮಾರಾಟಗಾರರು ಮತ್ತೆ ಈ ಸ್ಥಳಕ್ಕೆ ಹಿಂತಿರುಗದಂತೆ ನೋಡಿಕೊಳ್ಳಲು ಈ ಪ್ರದೇಶಕ್ಕೆ ಬಜರಂಗದಳದವರ ಕಾರುಗಳು ವಾಡಿಕೆಯಂತೆ ಭೇಟಿ ನೀಡುತ್ತಿವೆ ಎಂದು ಹಸ್ಮತ್ ಆತಂಕ ವ್ಯಕ್ತಪಡಿಸಿದ್ದಾರೆ.

“ಸಹಾಯಕ್ಕಾಗಿ ರಾಂಪುರ ಶಾಸಕ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಬ್ಬರನ್ನೂ ಸಂಪರ್ಕಿಸಿದ್ದೇವೆ, ಆದರೆ ಇಲ್ಲಿಯವರೆಗೆ ಮನವಿಯನ್ನು ನಿರ್ಲಕ್ಷಿಸಲಾಗಿದೆ” ಎಂದು ಮಾರಾಟಗಾರರು ದೂರಿದ್ದಾರೆ.

ಭಾರತೀಯ ಜನತಾ ಪಕ್ಷದ ಶಾಸಕ ಆಕಾಶ್ ಸಕ್ಸೇನಾ ಅವರು ಮುಸ್ಲಿಂ ಮಾರಾಟಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಹಿಂದೂ ಮಾರಾಟಗಾರರಿಗೆ ಮಾತ್ರ ಅವರ ಜಾಗಗಳನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಕೆಲವು ಮುಸ್ಲಿಂ ಮಾರಾಟಗಾರರು ತಿಳಿಸಿದ್ದಾರೆ.

ತನ್ನ ಸ್ಥಳಕ್ಕೆ ಹಿಂತಿರುಗಲು ಸಾಧ್ಯವಾದ ಮಾರಾಟಗಾರ ದಿಲೀಪ್ ಸಕ್ಸೇನಾ, “ಹಿಂದಿರುಗಿದ ನಂತರ ತಾನು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ಶಾಸಕರು ಶಾಂತಿಯ ಭರವಸೆ ನೀಡಿದ್ದಾರೆ” ಎಂದು ‘ದಿ ವೈರ್‌’ಗೆ ಮಾಹಿತಿ ನೀಡಿದ್ದಾರೆ.

“ಶಾಸಕ ಸಕ್ಸೇನಾ ಅವರು ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ” ಎಂದು ಮುಸ್ಲಿಂ ಮಾರಾಟಗಾರರ ಒಂದು ವಿಭಾಗವು ಆರೋಪಿಸಿದೆ. “ಶುಚಿಗೊಳಿಸುವ ಸಮಯ ಬಂದಿದೆ” ಎಂದು ಶಾಸಕರು ಹೇಳಿರುವುದಾಗಿ ದೂರಲಾಗುತ್ತಿದೆ. ಆದರೆ ಸ್ವತಃ ಶಾಸಕರೇ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲರ ಪರವಾಗಿ ತಾವು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

“ನಾನು ನಗರವನ್ನು ಸುಂದರಗೊಳಿಸಲು ಕೆಲಸ ಮಾಡುತ್ತಿದ್ದೇನೆ ಮತ್ತು ಯಾರನ್ನೂ ಅವರ ಸ್ಥಳದಿಂದ ಸ್ಥಳಾಂತರಿಸುವುದಿಲ್ಲ. ಹೇಗಾದರೂ, ಯಾರಾದರೂ ಹಾಗೆ ಭಾವಿಸಿದರೆ, ಸಹಾಯಕ್ಕಾಗಿ ನನ್ನ ಬಳಿಗೆ ಬರಲು ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡುತ್ತೇನೆ. ರಾಂಪುರದಲ್ಲಿ ರಾಮ್ ಮತ್ತು ರಹೀಮ್ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ನಾನು ಎಲ್ಲರ ಸಮುದಾಯದ ನಾಯಕನಾಗಲು ಬಯಸುತ್ತೇನೆ” ಎಂದಿದ್ದಾರೆ ಸಕ್ಸೇನಾ.

“ನಮ್ಮ ಕ್ಷೇತ್ರದಲ್ಲಿರುವ ಸುಮಾರು 250 ಬೀದಿಬದಿ ವ್ಯಾಪಾರಿಗಳಲ್ಲಿ ಸುಮಾರು 100 ಮಂದಿ ಮುಸ್ಲಿಮರು ಮತ್ತು 150 ಮಂದಿ ಹಿಂದೂಗಳು ಇದ್ದಾರೆ” ಎಂದು ಅವರು ಸಮಜಾಯಿಸಿ ನೀಡಿದ್ದಾರೆ.

ವರದಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...